ಮೈಕ್ರೋಸಾಫ್ಟ್‌ನಿಂದ ಮಾರ್ಗದರ್ಶಿ ಪಾತ್ ಗೈಡ್ ಅಪ್ಲಿಕೇಶನ್ ಬಿಡುಗಡೆ

ಮೈಕ್ರೋಸಾಫ್ಟ್‌ ದಾರಿ ತೋರಿಸುವ ಮಾರ್ಗದರ್ಶಿ ಅಪ್ಲಿಕೇಶನ್ ಪಾತ್ ಗೈಡ್ ಅನ್ನು ಲಾಂಚ್ ಮಾಡಿದ್ದು, ಇದು ಜನಜಂಗುಳಿ ಇರುವ ಪ್ರದೇಶದಲ್ಲಿ ದಾರಿ ಮಾಡಿಕೊಡುವ ವ್ಯವಸ್ಥೆಯನ್ನು ಹೊಂದಿದೆ.

By Shwetha Ps
|

ಇಂದಿನ ಮೊಬೈಲ್ ಜಗತ್ತಿನಲ್ಲಿ ದಿನನಿತ್ಯವೂ ಏನಾದರೂ ಹೊಸತು ಅನ್ವೇಷಣೆಯಾಗುತ್ತಲೇ ಇರುತ್ತದೆ. ಮೊಬೈಲ್ ಬಳಕೆದಾರರಿಗೆ ಉಪಯೋಗವಾಗಲಿ ಎಂಬ ಉದ್ದೇಶದಿಂದ ತಯಾರಕರು ಹೊಸ ಹೊಸ ಅಪ್ಲಿಕೇಶನ್‌ಗಳನ್ನು ರಚಿಸುತ್ತಿದ್ದು ಇದೇ ಸಾಲಿಗೆ ಮೈಕ್ರೋಸಾಫ್ಟ್‌ನ ಹೊಸ ನ್ಯಾವಿಗೇಶನ್ ಅಪ್ಲಿಕೇಶನ್ ರೂಪುಗೊಂಡಿದೆ.

ಮೈಕ್ರೋಸಾಫ್ಟ್‌ನಿಂದ ಮಾರ್ಗದರ್ಶಿ ಪಾತ್ ಗೈಡ್ ಅಪ್ಲಿಕೇಶನ್ ಬಿಡುಗಡೆ

ಈ ಅಪ್ಲಿಕೇಶನ್ ಬಳಸಿಕೊಂಡು ನೀವು ದಾರಿಯನ್ನು ಕಂಡುಕೊಳ್ಳಬಹುದಾಗಿದೆ. ನೂಕು ನುಗ್ಗಲಿನ ಮಾಲ್‌ಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಹೊರಹೋಗಬೇಕು ಎಂದಾದಲ್ಲಿ ಈ ಅಪ್ಲಿಕೇಶನ್ ಬಳಸಿಕೊಂಡು ನೀವು ದಾರಿ ಮಾಡಿಕೊಂಡು ಮುಂದುವರಿಯಬಹುದಾಗಿದೆ. ಇದರ ಹೆಸರು ಪಾತ್ ಗೈಡ್ ಎಂದಾಗಿದ್ದು ದಾರಿ ಮಾರ್ಗದರ್ಶಕ ಎಂದಾಗಿ ನಾವು ಕರೆಯಬಹುದಾಗಿದೆ. ಇದನ್ನು ಬಳಸಲು ನೀವು ಯಾವುದೇ ವೈ-ಫೈ, ಜಿಪಿಎಸ್ ಅಥವಾ ಇನ್ನಿತರ ರೇಡಿಯೊ ಸಿಗ್ನಲ್‌ಗಳ ಮೊರೆ ಹೋಗಬೇಕಾಗಿಲ್ಲ. ಜಿಪಿಎಸ್ ಕಾರ್ಯನಿರ್ವಹಿಸದೇ ಇರುವ ಸ್ಥಳಗಳಲ್ಲಿ ಈ ಅಪ್ಲಿಕೇಶನ್ ವರದಾನ ಎಂದೆನಿಸಿದೆ.

ಮೈಕ್ರೋಸಾಫ್ಟ್‌ನಿಂದ ಮಾರ್ಗದರ್ಶಿ ಪಾತ್ ಗೈಡ್ ಅಪ್ಲಿಕೇಶನ್ ಬಿಡುಗಡೆ

ಸತತ ಎರಡು ವರ್ಷಗಳಿಂದ ಮೈಕ್ರೋಸಾಫ್ಟ್ ಈ ಅಪ್ಲಿಕೇಶನ್‌ನ ರಚನೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ಇದೀಗ ಅಪ್ಲಿಕೇಶನ್ ಸಿದ್ಧಗೊಂಡಿದೆ. ರೆಫರೆನ್ಸ್ ಟ್ರೇಸ್ ನಿರ್ಮಿಸಿದ ನಂತರ ಪಾತ್ ಕ್ರಿಯೇಟರ್ ಚಿತ್ರ ಸೂಚನೆಗಳು, ಧ್ವನಿ ಮತ್ತು ಪಠ್ಯವನ್ನು ತೋರಿಸಿ ಬಳಕೆದಾರರಿಗೆ ಮುಂದುವರಿಯಲು ಸಹಾಯ ಮಾಡುತ್ತದೆ.

ಒಮ್ಮೆ ನೀವು ದಾರಿ ಮಾಡಿಕೊಂಡ ನಂತರ ಇದನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಬಹುದಾಗಿದೆ. ಇದರಿಂದ ಇತರರೂ ಡೌನ್‌ಲೋಡ್ ಮಾಡಿಕೊಂಡು ನೀವು ತಲುಪಿರುವ ಸ್ಥಳವನ್ನು ತಲುಪಬಹುದು. ರೆಫರೆನ್ಸ್ ಅನ್ನು ಒಮ್ಮೆ ಬಳಕೆದಾರರು ಡೌನ್‌ಲೋಡ್ ಮಾಡಿಕೊಂಡ ನಂತರ, ಪ್ರಸ್ತುತ ಸೆನ್ಸಾರ್ ರೀಡಿಂಗ್‌ಗಳನ್ನು ಅಪ್ಲಿಕೇಶನ್ ಸಿಂಕ್ ಮಾಡುತ್ತದೆ ಇದಕ್ಕಾಗಿ ಹಿಂದೆ ರೆಕಾರ್ಡ್ ಮಾಡಿರುವುದನ್ನು ಬಳಸಿಕೊಳ್ಳುತ್ತದೆ. ಹೀಗಾಗಿ ಸರಿಯಾದ ಸಮಯದಲ್ಲಿ ಅವರ ದಾರಿಯನ್ನು ಬಳಕೆದಾರರು ಕಂಡುಕೊಳ್ಳಬಹುದಾಗಿದೆ.

ಕ್ಲಿಷ್ಟಕರ ಪರಿಸ್ಥಿತಿಗಳಲ್ಲಿ ಅಪ್ಲಿಕೇಶನ್ ನಿಜಕ್ಕೂ ಸಹಾಯ ಮಾಡಲಿದೆ. ಉದಾಹರಣೆಗೆ, ನೀವು ಒಂದು ಕಟ್ಟಡಕ್ಕೆ ಮೊದಲ ಬಾರಿ ಭೇಟಿ ನೀಡಿದ್ದೀರಿ ಮತ್ತು ಈ ಸಮಯದಲ್ಲಿ ಪಾತ್ ಗೈಡ್ ಬಳಸಿಕೊಂಡು ನೀವು ಕಾರು ನಿಲ್ಲಿಸಿರುವ ಸ್ಥಳವನ್ನು ಹುಡುಕಬಹುದು.

ವಿಶ್ವದ ಎಲ್ಲಾ ಬಳಕೆದಾರರ ಗಮನವನ್ನು ಈ ಅಪ್ಲಿಕೇಶನ್ ಸೆಳೆಯಬಹುದೇ ಎಂಬುದು ಪ್ರಶ್ನೆಯಾಗಿದೆ. ಪ್ರಸ್ತುತ ಅಪ್ಲಿಕೇಶನ್ ಆಂಡ್ರಾಯ್ಡ್ ಓಎಸ್‌ಗೆ ಮಾತ್ರ ಲಭ್ಯವಿದೆ ಮತ್ತು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಐಓಎಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಇದನ್ನು ಬಿಡುಗಡೆ ಮಾಡುವುದರ ಕುರಿತು ಮೈಕ್ರೋಸಾಫ್ಟ್ ಇನ್ನೂ ಮಾಹಿತಿ ನೀಡಿಲ್ಲ.

Best Mobiles in India

Read more about:
English summary
Named Path Guide, this app will help you navigate through large shopping malls, hospitals, colleges/schools, office buildings and parking lots.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X