IRCTC ಜೊತೆ ಕೈ ಜೋಡಿಸಿದ ಮೊಬಿಕ್ವಿಕ್

ಮೊಬಿಕ್ವಿಕ್ ಸಂಸ್ಥೆಯು IRCTC ಜೊತೆ ಕೈಜೋಡಿಸಿದ್ದು, ಈ ಹೊಸ ಕನೆಕ್ಟಿಂಗ್ ಆಪ್ ಮೂಲಕ ಜನರು ಮೊಬಿಕ್ವಿಕ್ ನ ಪೇಯ್ಮೆಂಟ್ ಗೇಟ್ವೇ ಬಳಸಿ ರೈಲ್ವೇ ಟಿಕೆಟ್ ಕಾದಿರಿಸಬಹುದಾಗಿದೆ.

By Tejaswini P G
|

ಡಿಜಿಟಲ್ ಪಾವತಿಯ ಸಂಸ್ಥೆಯಾದ ಮೊಬಿಕ್ವಿಕ್ ಭಾರತೀಯ ರೈಲ್ವೇ ಸಂಸ್ಥೆ IRCTC ಜೊತೆ ಹೊಸದೊಂದು ಸಹಯೋಗವನ್ನು ಘೋಷಿಸಿದೆ. IRCTC ಜೊತೆ ಕೈಜೋಡಿಸಿರುವ ಮೊಬಿಕ್ವಿಕ್ , IRCTCಗಾಗಿ ಕನೆಕ್ಟಿಂಗ್ ಆಪ್ ಒಂದನ್ನು ಅಭಿವೃದ್ಧಿಪಡಿಸಿದೆ. ಈ ಆಪ್ ಮೂಲಕ ಜನರು ಮೊಬಿಕ್ವಿಕ್ ನ ಪೇಯ್ಮೆಂಟ್ ಗೇಟ್ವೇ ಬಳಸಿ ರೈಲ್ವೇ ಟಿಕೆಟ್ ಕಾದಿರಿಸಬಹುದಾಗಿದೆ.

IRCTC ಜೊತೆ ಕೈ ಜೋಡಿಸಿದ ಮೊಬಿಕ್ವಿಕ್

ಈ ಸಹಯೋಗವನ್ನು ಘೋಷಿಸುವ ಸಂದರ್ಭದಲ್ಲಿ ಮಾತನಾಡಿದ ಮೊಬಿಕ್ವಿಕ್ ನ ಚೀಫ್ ಬಿಸ್ನೆಸ್ ಆಫೀಸರ್,ವಿನೀತ್ ಸಿಂಗ್, "ಮೊಬಿಕ್ವಿಕ್ ಸಂಸ್ಥೆಯು ಕ್ಯಾಶ್ಲೆಸ್ ಭಾರತದ ಕನಸನ್ನು ಸಾಕಾರಗಳಿಸಲು ಸಂಪೂರ್ಣ ಬೆಂಬಲ ನೀಡುತ್ತಿರುವುದು ನಮಗೆ ಹೆಮ್ಮೆಯೆನಿಸುತ್ತದೆ. ಜನರು ಆದಷ್ಟು ಇ-ವಾಲೆಟ್ ಅಥವಾ ಡಿಜಿಟಲ್ ಕ್ಯಾಶ್ ಬಳಸಬೇಕೆಂಬುದು ನಮ್ಮ ಆಶಯ. IRCTC ಯೊಂದಿಗಿನ ನಮ್ಮ ಈ ಸಹಯೋಗ ರಾಷ್ಟ್ರವನ್ನು ಡಿಜಿಟಲೀಕರಣ ಮಾಡುವ ನಮ್ಮ ಗುರಿಯತ್ತ ಮತ್ತೊಂದು ಹೆಜ್ಜೆಯಾಗಿದೆ" ಎಂದು ಹೇಳಿದರು.

"ಅಲ್ಲದೆ ಈ ಸಹಯೋಗದಿಂದ ಜನರು ತಮ್ಮ ರೈಲ್ವೇ ಟಿಕೆಟ್ ಕಾಯ್ದಿರಿಸಲು ಯಾವುದೇ ಅಡತಡೆಯಿಲ್ಲದೆ ಸುರಕ್ಷಿತವಾಗಿ ಕೆಲವೇ ಕ್ಷಣಗಳಲ್ಲಿ ಹಣ ಪಾವತಿಸಬಹುದು" ಎಂದು ಸಿಂಗ್ ತಿಳಿಸಿದ್ದಾರೆ.

ಆಪ್‌ನಲ್ಲಿ ಕರೆಂಟ್ ಬಿಲ್ ಕಟ್ಟಿ ಪ್ರತಿ ತಿಂಗಳು ರೂ. 300 ಕ್ಯಾಷ್ ಬ್ಯಾಕ್ ಪಡೆಯಿರಿ.!!ಆಪ್‌ನಲ್ಲಿ ಕರೆಂಟ್ ಬಿಲ್ ಕಟ್ಟಿ ಪ್ರತಿ ತಿಂಗಳು ರೂ. 300 ಕ್ಯಾಷ್ ಬ್ಯಾಕ್ ಪಡೆಯಿರಿ.!!

ಡಿಮಾನಿಟೈಸೇಷನ್ ನಂತರದ ದಿನಗಳಲ್ಲಿ ಭಾರತದಲ್ಲಿ ಕ್ಯಾಶ್ ಲೆಸ್ ವ್ಯವಹಾರಗಳ ಸಂಖ್ಯೆ ಹೆಚ್ಚಿದ್ದು, ಈ ಹಿನ್ನಲೆಯಲ್ಲಿ ಮೊಬಿಕ್ವಿಕ್ IRCTCಯೊಂದಿಗೆ ಕೈಜೋಡಿಸಿದೆ. ಈ ಆರ್ಥಿಕ ವರ್ಷವೊಂದರಲ್ಲೇ ಶೇಕಡ 17% ರಷ್ಟು ರಿಸರ್ವಡ್ ಮತ್ತು ಅನ್ರಿಸರ್ವ್ಡ್ ಟಿಕೆಟ್ಗಳನ್ನು ವಿವಿಧ ಕ್ಯಾಶ್ ಲೆಸ್ ಪಾವತಿಯ ಮಾಧ್ಯಮಗಳ ಮೂಲಕ ಖರೀದಿಸಲಾಗಿದೆ.

ಮೊಬಿಕ್ವಿಕ್ ನ ಪಾಯ್ಮೆಂಟ್ ಗೇಟ್ವೇ ಮೂಲಕ ಪ್ರಸ್ತುತ 3000ಕ್ಕೂ ಆಧಿಕ ಇ-ಕಾಮರ್ಸ್ ವೆಬ್ಸೈಟ್ ಮತ್ತು ಆಪ್ಗಳಿಗೆ ಹಣ ಪಾವತಿಸಬಹುದಾಗಿದೆ.ಮೊಬಿಕ್ವಿಕ್ ನ ಪೇಯ್ಮೆಂಟ್ ಗೇಟ್ವೇ ಮೂಲಕ ತಿಂಗಳಿಗೆ 100 ಮಿಲಿಯನ್ಗೂ ಅಧಿಕ ಟ್ರ್ಯಾನ್ಸಾಕ್ಶನ್ಗಳು ನಡೆಯುತ್ತವೆ. ಇದೊಂದು ಸುರಕ್ಷಿತ ಮಾಧ್ಯಮವಾಗಿದ್ದು ವಿವಿಧ ಸ್ತರಗಳ ಸುರಕ್ಷತಾ ಕ್ರಮಗಳನ್ನು ಹೊಂದಿದೆ. ಎಲ್ಲಾ ಟ್ರ್ಯಾನ್ಸಾಕ್ಶನ್ಗಳ ಎನ್ಕರಿಪ್ಶನ್, ಅನೇಕ ಸ್ತರಗಳ ಎನ್ಕರಿಪ್ಶನ್ ಮೂಲಕ ಜನರ ಮಾಹಿತಿಯ ಸಂರಕ್ಷಣೆ ಮತ್ತು ಎಪಿಐ ಮಟ್ಟದ ಭದ್ರತೆಗೆ ಇಲ್ಲಿ ಒತ್ತು ನೀಡಲಾಗಿದೆ.

ಅನೇಕ ಬ್ಯಾಂಕ್ ಖಾತೆಗಳನ್ನು ಒಂದು ಮೊಬೈಲ್ ಅಪ್ಲಿಕೇಶನ್ ನಲ್ಲಿ ಒಂದಾಗಿಸುವ ಮೂಲಕ ಹಲವಾರು ಬ್ಯಾಂಕಿಂಗ್ ಫೀಚರ್ಗಳನ್ನು ಮತ್ತು ವಿವಧ ಮರ್ಚಂಟ್ಗಳಿಗೆ ತಡೆರಹಿತ ಹಣ ಪಾವತಿ ಎಲ್ಲವನ್ನೂ ಒಂದೇ ಸೂರಿನಡಿ ತಂದಿರುವುದೇ ಮೊಬಿಕ್ವಿಕ್ ನ ವೈಶಿಷ್ಟ್ಯ. ಅಲ್ಲದೆ ಮಂದಗತಿಯ ನೆಟ್ವರ್ಕ್ ಮತ್ತು 2ಜಿ ನೆಟ್ವರ್ಕ್ ನಲ್ಲೂ ಉತ್ತಮ ಪ್ರದರ್ಶನ ನೀಡುವುದಲ್ಲದೇ ಮೊಬೈಲ್ ಸ್ನೇಹಿ ಚೆಕ್-ಔಟ್ ಪೇಜ್ಗಳನ್ನು ಹೊಂದಿದೆ.

Best Mobiles in India

Read more about:
English summary
Mobikwik's Payment Gateway currently powers payments for more than 3000 e-commerce websites and apps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X