KYC ಕಂಪ್ಲಯೆನ್ಸ್ ಗೆ ರೂ 400 ಕೋಟಿ ಹೂಡಲಿರುವ ಮೊಬಿಕ್ವಿಕ್

By Tejaswini P G

  ಮುಂದಿನ 5 ವರ್ಷಗಳಲ್ಲಿ ಮೊಬೈಲ್ ವಾಲೆಟ್ ದಿಗ್ಗಜ ಮೊಬಿಕ್ವಿಕ್ Know Your Client(KYC) ಕಂಪ್ಲಯೆನ್ಸ್ ಮೇಲೆ ರೂ 400 ಕೊಟಿ ಹೂಡುವ ಯೋಜನೆ ಹೊಂದಿದೆ.

  KYC ಕಂಪ್ಲಯೆನ್ಸ್ ಗೆ ರೂ 400 ಕೋಟಿ ಹೂಡಲಿರುವ ಮೊಬಿಕ್ವಿಕ್

  ಮೊದಲ ವರ್ಷದಲ್ಲಿ ಮೊಬಿಕ್ವಿಕ್ ತನ್ನ 2 ಕೋಟಿ ಗ್ರಾಹಕರ KYC ಪೂರೈಸಲು ರೂ 100 ಕೋಟಿ ವ್ಯಯಿಸಲಿದೆ.

  "ಮುಂದಿನ ಒಂದು ವರ್ಷದಲ್ಲಿ 2 ಕೋಟಿ ಸಂಪೂರ್ಣ KYC ವಾಲೆಟ್ಗಳನ್ನು ಹೊಂದುವ ಗುರಿ ನಮ್ಮದು, ಹಾಗೂ ಇದನ್ನು ಸಾಧಿಸಲು ಪ್ರತಿ ಗ್ರಾಹಕರಿಗೆ ರೂ 50 ರಂತೆ ಖರ್ಚು ಆಗಬಹುದೆಂಬ ಅಂದಾಜು ನಮ್ಮದು " ಎಂದು ಬಿಪಿನ್ ಪ್ರೀತ್ ಸಿಂಗ್, ಮೊಬಿಕ್ವಿಕ್ ನ ಸ್ಥಾಪಕ ಹೇಳಿದ್ದಾರೆ.

  ಪ್ರೀಪೇಯ್ಡ್ ಪೇಯ್ಮೆಂಟ್ ಇನ್ಸ್ಟ್ರುಮೆಂಟ್(ಪಿಪಿಐ) ಪರವಾನಗಿಯನ್ನು ಹೊಂದಿರುವ ಮೊಬಿಕ್ವಿಕ್ ನಂತಹ ಸಂಸ್ಥೆಗಳಿಗೆ ಕಟ್ಟುನಿಟ್ಟಾದ KYC ನಿಯಮಗಳನ್ನು ಪಾಲಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್(RBI) ಇಂಟರ್-ಆಪರೆಬಿಲಿಟಿ ಕುರಿತು ತನ್ನ ನೂತನ ಪರಿಷ್ಕರಿಸಿದ ಮಾರ್ಗದರ್ಶನದಲ್ಲಿ ತಿಳಿಸಿದೆ.ಸಂಪೂರ್ಣ KYC ವಾಲೆಟ್ಗಳು ಯಾವುದೇ ಸಂಧರ್ಭದಲ್ಲಿ ರೂ 1 ಲಕ್ಷದಷ್ಟು ಬ್ಯಾಲೆನ್ಸ್ ಹೊಂದಿರಲು ಅವಕಾಶವಿದೆ.

  ನೋಕಿಯಾದ ಅತ್ಯಂತ ಕಡಿಮೆ ಬೆಲೆಯ ನೋಕಿಯಾ 2 ಇಂದು ಲಾಂಚ್!..4000mAh ಬ್ಯಾಟರಿ ಫೋನ್ ಬೆಲೆ!?

  "ವಾಲೆಟ್ಗಳು ಆರ್ಥಿಕ ತಂತ್ರಜ್ಞಾನದ ಹೊಸ ದೊರೆಯೆನಿಸಿದೆ.ಭಾರತೀಯ ಅರ್ಥ ವ್ಯವಸ್ಥೆಯಲ್ಲಿ ಡಿಜಿಟಲ್ ವಾಲೆಟ್ಗಳ ಬೆಳೆಯುತ್ತಿರುವ ಪ್ರಭಾವಕ್ಕೆ RBI ನ ಹೊಸ ಮಾರ್ಗದರ್ಶನಗಳೇ ಸಾಕ್ಷಿ . RBI ನ ನೂತನ ಮಾರ್ಗದರ್ಶನಗಳು ಪಿಪಿಐಗಳಿಗೆ ಹೆಚ್ಚಿನ ಶಕ್ತಿ ನೀಡಿದ್ದು, ಡಿಜಿಟಲ್ ಪಾವತಿಗಳತ್ತ ಸರ್ಕಾರದ ನಿಷ್ಠೆ ಮತ್ತು ಈ ಉದ್ಯಮದ ಬೆಳವಣಿಗೆಗೆ ಅವರ ಬದ್ಧತೆಗೆ ಸಾಕ್ಷಿಯಾಗಿದೆ" ಎಂದು ಬಿಪಿನ್ ಪ್ರೀತ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  "ಸಂಪೂರ್ಣ KYC ವಾಲೆಟ್ ಹೊಂದಿರುವ ಗ್ರಾಹಕರು ತಮ್ಮ ವಾಲೆಟ್ ಮೂಲಕ ಪೂರ್ತಿ ಆರ್ಥಿಕ ವ್ಯವಸ್ಥೆಗೆ ಪ್ರವೇಶ ಪಡೆಯಬಹುದು. ಹಾಗಾಗಿ ಈ ಉದ್ಯಮಕ್ಕೆ ಒಳ್ಳೆ ಭವಿಷ್ಯವಿದೆ. ಸಹಯೋಗಗಳು ಮತ್ತು ಸ್ಪರ್ಧಾತ್ಮಕ ಪರಿಸರ ಡಿಜಿಟಲ್ ಪೇಯ್ಮೆಂಟ್ ಉದ್ಯಮವನ್ನು ಮುಂದಿನ ಹಂತಕ್ಕೆ ಕರೆದೊಯ್ಯಲಿದೆ" ಎಂದು ಅವರು ಹೇಳಿದ್ದಾರೆ.

  KYC ತನ್ನ ಗ್ರಾಹಕರ ಕುರಿತು ಮಾಹಿತಿ ಪಡೆದು ಅವರ ಗುರುತನ್ನು ಪರಿಶೀಲಿಸುವತ್ತ ಒಂದು ಹೆಜ್ಜೆಯಾಗಿದೆ. ಈ ಮೂಲಕ ಸುರಕ್ಷಿತ ಆರ್ಥಿಕ ವ್ಯವಹಾರಗಳು ನಡೆಯುತ್ತವೆ ಎಂದು ಖಚಿತಪಡಿಸಿಕೊಳ್ಳಬಹುದು.ಮೊಬಿಕ್ವಿಕ್ ಆಧಾರ್ ಆಧಾರಿತ e-KYC ನಡೆಸುವ ಯೋಜನೆ ಹೊಂದಿದ್ದು ಇದಕ್ಕಾಗಿ 7000 ಫೀಲ್ಡ್ ಸ್ಟಾಫ್ ಅನ್ನು ನೇಮಕ ಮಾಡಿಕೊಳ್ಳಲಿದ್ದಾರೆ.

  ಈ ಮಧ್ಯೆ ಮೊಬಿಕ್ವಿಕ್ ಖಾಸಗಿ ವಲಯದ ಸಾಲದಾತರಾದ ಇಂಡಸ್ಇಂಡ್ ಜೊತೆ ಕೈಜೋಡಿಸಿದ್ದು 'ಇಂಡಸ್ಇಂಡ್ ಮೊಬಿಕ್ವಿಕ್' ಎಂಬ ಸಹ-ಬ್ರ್ಯಾಂಡ್ ನ ವಾಲೆಟ್ ಒಂದನ್ನು ಕೂಡ ಲಾಂಚ್ ಮಾಡಲಿದ್ದಾರೆ.

  ಈ ಹೊಸ ಸಹಯೋಗದ ಮೂಲಕ ಇಂಡಸ್ ಇಂಡ್ ನ ಗ್ರಾಹಕರು 2 ಮಿಲಿಯನ್ ಮೊಬಿಕ್ವಿಕ್ ಮರ್ಚಂಟ್ ಗಳಿಗೆ 'ಡೈರೆಕ್ಟ್ ಡೆಬಿಟ್’ ಫೀಚರ್ ಬಳಸಿ ತಮ್ಮ ಇಂಡಸ್ಇಂಡ್ ಖಾತೆಯಿಂದ ಹಣ ಪಾವತಿಸಬಹುದಾಗಿದೆ.

  Read more about:
  English summary
  The company will be investing Rs 100 crores in doing KYC for 2 crore users within the next 12 months.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more