ಆನ್‌ಲೈನ್ ಕ್ರೆಡಿಟ್ ಲೈನ್ 'ಮನಿಟ್ಯಾಪ್ ಆಪ್‌' ಇದೀಗ ಕನ್ನಡದಲ್ಲಿ!!

Written By:

ಭಾರತದ ಮೊದಲ ಆಪ್ ಮೂಲದ ಕ್ರೆಡಿಟ್ ಲೈನ್ ಕಂಪೆನಿ ಮನಿಟ್ಯಾಪ್ ಆಪ್‌ ಇದೀಗ ಕನ್ನಡದಲ್ಲಿಯೂ ಲಭ್ಯವಿದೆ.! ಹೌದು, ಆನ್​ಲೈನ್ ಮೂಲಕ ಸಾಲಗಳನ್ನು ನೀಡುವಂತಹ ಮನಿಟ್ಯಾಪ್ ಉದ್ಯಮದ ಆಪ್ ಇದೀಗ ಕನ್ನಡ ಮತ್ತು ಇಂಗ್ಲೀಷ್‌ ಎರಡರಲ್ಲಿಯೂ ಲಭ್ಯವಿದೆ.!

ಆನ್‌ಲೈನ್ ಮೂಲಕ ಬಹುಬೇಗ ಸಾಲ ಸೌಲಭ್ಯ ಒದಗಿಸುವಂತಹ ಆಪ್ ಬೇಸಡ್ ಉದ್ಯಮ ಮನಿಟ್ಯಾಪ್ ಕನ್ನಡದಲ್ಲಿಯೇ ಮಾಹಿತಿಯನ್ನು ನೀಡಲು ಮುಂದಾಗಿದ್ದು, ಇಂಗ್ಲೀಷ್ ನಂತರ ಮೊದಲ ಭಾರಿಗೆ ಪ್ರಾದೇಶಿಕ ಭಾಷೆಯಲ್ಲಿ ಅದೂ ಮೊದಲಾಗಿ ಕನ್ನಡದಲ್ಲಿ ಸೇವೆಯನ್ನು ನೀಡಲು ಮುಂದಾಗಿದೆ.!!

ಈ ಬಗ್ಗೆ ಮಾತನಾಡಿರುವ ಅನೂಜ್ ಕಾಕೆರ್, ಬೆಂಗಳೂರಿನಲ್ಲಿ ಮನಿಟ್ಯಾಪ್ ಉದ್ಯಮ ಬಹುಬೇಗ ವಿಸ್ತರಣೆಗೆಯಾಗುತ್ತಿದ್ದು, ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಬೆಂಗಳೂರಿನಲ್ಲಿ ಶೇ.70 ಕ್ಕಿಂತ ಹೆಚ್ಚು ಕನ್ನಡಿಗರಿದ್ದಾರೆ. ಹಾಗಾಗಿ, ನಾವು ಕನ್ನಡದಲ್ಲಿಯೇ ಮನಿಟ್ಯಾಪ್ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.!! ಹಾಗಾದರೆ, ಏನಿದು ಮನಿಟ್ಯಾಪ್ ಆಪ್? ಆನ್‌ಲೈನ್ ಮೂಲಕ ಬಹುಬೇಗ ಹೇಗೆ ಸಾಲಸೌಲಭ್ಯಗಳನ್ನು ಒದಗಿಸುತ್ತದೆ? ಇದರ ಕಾರ್ಯನಿರ್ವಹಣೆ ಹೇಗಿರುತ್ತದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏನಿದು ಮನಿಟ್ಯಾಪ್ ಆಪ್?

ಏನಿದು ಮನಿಟ್ಯಾಪ್ ಆಪ್?

ಮನಿಟ್ಯಾಪ್ ಆಪ್ ಅನ್ನು ನೀವು ಯಾರು ಸಹ ಬಹುಶಃ ಬಳಸಿರುವುದಿಲ್ಲ ಎಂದು ಅಂದುಕೊಳ್ಳುತ್ತೇನೆ.! ಮಧ್ಯಮ ವರ್ಗದ ಜನರಿಗೆ ಸಾಲ ಸೌಲಭ್ಯವನ್ನು ಕಡಿಮೆ ಬಡ್ಡಿದರದಲ್ಲಿ ಒದಗಿಸಲು ಹುಟ್ಟಿಕೊಂಡಿರುವ ಆಪ್ ಬೇಸ್‌ ಉದ್ಯಮವೇ ಈ ಮನಿಟ್ಯಾಪ್!!

5 ಲಕ್ಷದವರೆಗೂ ಸಾಲ!!

5 ಲಕ್ಷದವರೆಗೂ ಸಾಲ!!

ಮನಿಟ್ಯಾಪ್ ಆಪ್ ಡೌನ್‌ಲೋಡ್ ಮಾಡಿ ಆಪ್ ಮೂಲಕ 5 ಲಕ್ಷದವರೆಗೂ ಸಾಲ ಸಾಲ ಪಡೆಯಬಹುದಾಗಿದೆ.! ಪ್ರೈವೇಟ್ ಅಥವಾ ಸರ್ಕಾರಿ ಯಾವುದೇ ಕೆಲಸದಲ್ಲಿದ್ದರೂ ಸಹ ಮನಿಟ್ಯಾಪ್ ಮುಲಕ ಸಾಲ ಪಡೆಯಬಹುದು. 20000 ಕ್ಕಿಂತ ಹೆಚ್ಚು ಆದಾಯ ಇದ್ದರೆ ಸಾಲಸೌಭ್ಯ ದೊರೆಯುತ್ತದೆ.!!

 ಕ್ರೆಡಿಟ್ ಕಾರ್ಡ್!..ಆದರೂ ಉತ್ತಮ!!

ಕ್ರೆಡಿಟ್ ಕಾರ್ಡ್!..ಆದರೂ ಉತ್ತಮ!!

ಒಮ್ಮೆ ಕ್ರೆಡಿಟ್ ಕಾರ್ಡ್ ಮಾಡಿಸಿದ್ದರೆ ಅವರು ಹಾಕುವ ಸೇವಾ ತೆರಿಗೆ, ಬಡ್ಡಿ ಹಣ ಇವೆಲ್ಲವೂ ನಮ್ಮಮೆಲೆಯೇ ಬರುತ್ತದೆ. ಆದರೆ ಮನಿಟ್ಯಾಪ್‌ನಲ್ಲಿ ಇಂತರ ತೊಂದರೆ ಇಲ್ಲ.! ನೀವು ಎಷ್ಟು ಹಣ ಬಳಕೆ ಮಾಡಿರುತ್ತೀರಾ ಅಷ್ಟೇ ಹಣಕ್ಕೆ ಬಡ್ಡಿಇರುತ್ತದೆ.! ಇನ್ನೊಂದು ವಿಷಯ ಎಂದರೆ ಇಲ್ಲಿ ನೀವು ಹಣ ವಿತ್‌ಡ್ರಾ ಮಾಡಲು ಹೆಚ್ಚು ಚಾರ್ಜಸ್ ಪಾವತಿಮಾಡಬೇಕಿಲ್ಲಾ.!!

ಕ್ಯಾಶ್‌ಬ್ಯಾಕ್ ಆಫರ್ಸ್!!

ಕ್ಯಾಶ್‌ಬ್ಯಾಕ್ ಆಫರ್ಸ್!!

ಮನಿಟ್ಯಾಪ್ ಬೆಂಗಳೂರಿನಲ್ಲಿಯೇ ಈಗಾಗಲೇ 20ಕೋಟಿಗೂ ಹೆಚ್ಚು ಕ್ರೆಡಿಟ್ ನೀಡಿದ್ದು, ಇದರ ಜೊತೆಯಲ್ಲಿಯೇ ಕ್ಯಾಶ್‌ಬ್ಯಾಕ್ ಆಫರ್‌ ಮೂಲಕ ಗ್ರಾಹಕರ ಹಣವನ್ನು ಉಳಿತಾಯ ಮಾಡುತ್ತದೆ.! ಹಾಗಾಗಿ, ಸಣ್ಣ ಉದ್ಯಮಿಗಳಿಗೆ ಇದೊಂದು ಉತ್ತಮ ಆನ್‌ಲೈನ್ ಕ್ರೆಡಿಟ್ ಲೈನ್ ಎನ್ನಬಹುದು.!!

ಓದಿರಿ:ವಿಡಿಯೊ ಗೇಮ್‌ನಲ್ಲಿ ಗೆಲ್ಲಲು ಬಾಲಕ ಆತ್ಮಹತ್ಯೆ..ಪೋಷಕರೆ ಏನಿದು ಗೊತ್ತಾ?..ಎಚ್ಚರ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Largely focusing on the vastly untapped Kannada speaking users.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot