Subscribe to Gizbot

ವೈದ್ಯ ಲೋಕದ ಸಾಧನೆ: ಆಪ್‌ನಲ್ಲಿಯೇ BP (ಬ್ಲಡ್ ಪ್ರಷರ್) ಚೆಕ್ ಮಾಡಬಹುದು..!

Written By:

ವೈದ್ಯಕೀಯ ಕ್ಷೇತ್ರವೂ ತಂತ್ರಜ್ಞಾನದ ಸಹಾಯವನ್ನು ಪಡೆದುಕೊಂಡು ಮಾನವ ಜೀವನ ಕ್ರಮವನ್ನು ಮತ್ತು ಆತನ ಆರೋಗ್ಯವನ್ನು ಉತ್ತಮ ಪಡಿಸಲು ಪ್ರಯತ್ನಿಸುತ್ತಿದೆ. ವೈದ್ಯಕೀಯ ಲೋಕದ ಸಂಶೋಧಕರು ಹೊಸದೊಂದು ಪ್ರಯತ್ನದಲ್ಲಿ ಯಶಸ್ವಿಯಾಗಿದ್ದು, ಇದು ಮನಕುಲ ಒಳಿತಿಗೆ ಭಾರಿ ಕೊಡುಗೆಯನ್ನು ನೀಡುವ ಸಾಧ್ಯತೆ ಇದೆ.

ವೈದ್ಯ ಲೋಕದ ಸಾಧನೆ: ಆಪ್‌ನಲ್ಲಿಯೇ BP (ಬ್ಲಡ್ ಪ್ರಷರ್) ಚೆಕ್ ಮಾಡಬಹುದು..!

ಭಾರತೀಯ ಮೂಲದ ಸಂಶೋಧಕರನ್ನು ಒಳಗೊಂಡ ಅಮೆರಿಕಾದ ಸ್ಟೇಟ್ ವಿಶ್ವವಿದ್ಯಾಲಯದ ಸಂಶೋಧಕರ ತಂಡವೂ ಸ್ಮಾರ್ಟ್‌ಫೋನ್ ಆಪ್ ಮೂಲಕವೇ BP (ಬ್ಲಡ್ ಪ್ರಷರ್) ಅಳತೆ ಮಾಡುವ ತಂತ್ರಜ್ಞಾನವೊಂದನ್ನು ಅಭಿವೃದ್ಧಿ ಮಾಡಿದ್ದಾರೆ. ಈಗಾಗಲೇ ಜಗತ್ತಿನಲ್ಲಿ ಅತೀ ಹೆಚ್ಚು ಮಂದಿ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿದ್ದು, ಅವರಿಗೆ ಈ ಆಪ್ ವರದಾನವಾಗುವ ಲಕ್ಷಣಗಳು ಕಾಣುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಪ್:

ಆಪ್:

ಸದ್ಯ BP (ಬ್ಲಡ್ ಪ್ರಷರ್) ನೋಡಲು ಇರುವ ಸಾಧನಕ್ಕೆ ಬದಲಾಗಿ, ಸ್ಮಾರ್ಟ್‌ಫೋನಿನಲ್ಲಿರುವ ಆಪ್ ಮೂಲಕವೇ BP (ಬ್ಲಡ್ ಪ್ರಷರ್) ನೋಡಿಕೊಳ್ಳುವ ವ್ಯವಸ್ಥೆಯೂ ಜಾರಿಯಾಗಲಿದ್ದು, ಇದು ಅತೀ ಸರಳ ಮತ್ತು ಸುರಕ್ಷಿತ ವಿಧಾನವಾಗಲಿದ್ದು, BP (ಬ್ಲಡ್ ಪ್ರಷರ್) ಸಮಸ್ಯೆಯಿಂದ ಹೊರ ಬರಲು ಸಹಾಯ ಮಾಡುತ್ತದೆ.

ಪೋರ್ಸ್ ಸೆನ್ಸಾರ್:

ಪೋರ್ಸ್ ಸೆನ್ಸಾರ್:

ಸ್ಮಾರ್ಟ್‌ಫೋನಿನಲ್ಲಿ ಅಳವಡಿಸುವ ಪೋರ್ಸ್ ಸೆನ್ಸಾರ್ ಬಳಕೆ ಮಾಡಿಕೊಂಡು ಕಾರ್ಯನಿರ್ವಹಿಸುವಂತೆ ಈ ಆಪ್ ಅನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದು, ಹೊಸದಾಗಿ ನಿರ್ಮಾಣಗೊಂಡಿರುವ ಆಪ್‌ನಲ್ಲಿ ಹೃದಯದ ಬಡಿತ ಮತ್ತು ರಕ್ತದ ಒತ್ತಡವನ್ನು ಸುಲಭವಾಗಿ ಅಳತೆ ಮಾಡಬಹುದಾಗಿದೆ.

ಪರೀಕ್ಷೆ ಯಶಸ್ವಿ:

ಪರೀಕ್ಷೆ ಯಶಸ್ವಿ:

ಈಗಾಗಲೇ BP (ಬ್ಲಡ್ ಪ್ರಷರ್) ಅಳತೆ ಮಾಡುವ ಆಪ್ ಅನ್ನು ಅಭಿವೃದ್ಧಿ ಪಡಿಸಿರುವ ತಂಡವು, ಅದನ್ನು ಸುರಕ್ಷಿತವಾಗಿ ಪರೀಕ್ಷೆಯನ್ನು ನಡೆಸಿದ್ದು, ಇದು ಯಶಸ್ವಿಯಾಗಿದೆ. ಶೀಘ್ರವೇ ಈ ಆಪ್ ಅನ್ನು ಜನ ಸಾಮಾನ್ಯರಿಗೆ ಬಳಕೆಗೆ ಮುಕ್ತವಾಗಿಸುವ ಸಾಧ್ಯತೆ ಇದೆ.

How to Check Your Voter ID Card Status (KANNADA)
 BP (ಬ್ಲಡ್ ಪ್ರಷರ್) ನಿಯಂತ್ರಣ ಸಾಧ್ಯ:

BP (ಬ್ಲಡ್ ಪ್ರಷರ್) ನಿಯಂತ್ರಣ ಸಾಧ್ಯ:

ಯಾವ ಸಂದರ್ಭದಲ್ಲಿ BP (ಬ್ಲಡ್ ಪ್ರಷರ್) ಹೆಚ್ಚಾಗುತ್ತದೆ ಮತ್ತು ಕಡಿಮೆಯಾಗುತ್ತದೆ ಎಂಬುದನ್ನು ಅಳತೆ ಮಾಡಲು ಈ ಆಪ್ ನೆರವಾಗುವುದರಿಂದಾಗಿ BP (ಬ್ಲಡ್ ಪ್ರಷರ್) ನಿಯಂತ್ರಣ ಮಾಡಲು ಸಾಧ್ಯವಾಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Now, you can monitor your blood pressure with this smartphone app. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot