ಖಂಡಿತ ಇವು 2019 ರ ಸ್ಟುಪಿಡ್ ಗೆಡ್ಜೆಟ್ ಗಳು ಅನ್ನಿಸಿಕೊಳ್ಳುತ್ತವೆ!

|

ಈ ವರ್ಷದ ಕನ್ಸ್ಯೂಮರ್ ಎಲೆಕ್ಟ್ರಾನಿಕ್ ಶೋಗಾಗಿ ಗ್ರಾಹಕರು ಕಾತರರಾಗಿದ್ದಾರೆ. ಏಕೆಂದರೆ ವಿಶ್ವದ ದೊಡ್ಡ ದೊಡ್ಡ ಬ್ರ್ಯಾಂಡ್ ಸಂಸ್ಥೆಗಳೆಲ್ಲವೂ ಯಾವ ಹೊಸ ಉತ್ಪನ್ನಗಳನ್ನು ಮೇಳದಲ್ಲಿ ಬಿತ್ತರಿಸುತ್ತವೆ ಎಂಬ ಬಗ್ಗೆ ಕುತೂಹಲವಿದೆ. ಸೆನ್ಸಿಬಲ್ ವಸ್ತುಗಳಿಗಿಂತ ಹೆಚ್ಚಾಗಿ ಯಾವ ಕಂಪೆನಿಯು ಸ್ಟುಪಿಡ್ ಆಗಿರುವ ಅಂದರೆ ವಿಚಿತ್ರವೆನ್ನಿಸುವ ಗೆಜ್ಜೆಟ್ ವಸ್ತುಗಳನ್ನು ಪ್ರದರ್ಶಿಸುತ್ತವೆ ಎಂಬದು ಕುತೂಹಲಕ್ಕೆ ಕಾರಣವಾಗಿದೆ.

ಖಂಡಿತ ಇವು 2019 ರ ಸ್ಟುಪಿಡ್ ಗೆಡ್ಜೆಟ್ ಗಳು ಅನ್ನಿಸಿಕೊಳ್ಳುತ್ತವೆ!

ಜಗತ್ತು ಸ್ಮಾರ್ಟ್‌ ಆಗುತ್ತಿದೆ ಹಾಗಾಗಿ ಸ್ಮಾರ್ಟ್ ಬೆಲ್ಟ್‌ಗಳು, ಸ್ಮಾರ್ಟ್ ಫ್ಲಿಪ್ ಫ್ಲಾಪ್‌ಗಳು ಮತ್ತು ಬ್ಲೂಟೂತ್ ನಿಂದ ಕನೆಕ್ಟ್ ಆಗಿ ಕೆಲಸ ಮಾಡುವ ಸ್ಮಾರ್ಟ್‌ ಐರನ್ ಬಾಕ್ಸ್‌ಗಳಷ್ಟಕ್ಕೇ ಕಂಪನಿಗಳ ಆವಿಷ್ಕಾರಗಳು ಮುಗಿದಿವೆ ಎಂದುಕೊಳ್ಳಬೇಡಿ. ಇದೀಗ ಈ ಹಿಂದೆಂದಿಗಿಂತಲೂ ಹುಚ್ಚೆಬ್ಬಿಸುವಂತಹ, ವಿಚಿತ್ರವೆನ್ನಿಸುವ ಕೆಲಸ ಆವಿಷ್ಕಾರಗಳಿಗೆ ವೇದಿಕೆ ಸಿದ್ದವಾಗುತ್ತಿದೆ. ಹಾಗಾದರೇ ಆ ಹೊಸ ಉತ್ಪನ್ನಗಳು ಯಾವವು ಎಂಬ ಬಗ್ಗೆ ಈ ಕೆಳಗೆ ಓದಿ.

 ವೋಲೋ ಇನ್ಫ್ರಾರೆಡ್ ಹೇರ್ ಡ್ರೈಯರ್

ವೋಲೋ ಇನ್ಫ್ರಾರೆಡ್ ಹೇರ್ ಡ್ರೈಯರ್

ಈ ಹೇರ್ ಡ್ರೈಯರ್ ಕೇವಲ ವಿಚಿತ್ರ ಅಷ್ಟೇ ಅಲ್ಲ ಸ್ವಲ್ಪ ಡೇಂಜರಸ್ ಆಗಿರುವ ಹೇರ್ ಡ್ರೈಯರ್ ಪ್ರೊಡಕ್ಟ್ ಆಗಲಿದೆ. ವೊಲೋ ಇನ್ಫ್ರಾರೆಡ್ ತಯಾರಿಸುತ್ತಿರುವ ಈ ಹೇರ್ ಡ್ರೈಯರ್ ಆರೋಗ್ಯಕಾರಿ ಹೀಟ್ ಸ್ಟೈಲಿಂಗ್ ಟೂಲ್ ಎಂದು ಕಂಪೆನಿ ತಿಳಿಸುತ್ತದೆ. ಇನ್ಫ್ರಾರೆಡ್ ಕಿರಣಗಳು ನಿಮ್ಮ ಕೂದಲಿನ ಕಾರ್ಟೆಕ್ಸ್ ಅನ್ನು ಒಳಗೆ ಹಾಕುವ ಮೂಲಕ ಕೂದಲನ್ನು ಒಣಗಿಸುತ್ತದೆ ಎನ್ನುತ್ತಿದೆ ಕಂಪನಿ. ಇಲ್ಲದೇ ವೊಲೋ ಸಂಸ್ಥೆ ಮೆಡಿಕಲ್ ಸರ್ಟಿಫಿಕೇಟ್ ಸಹ ಮಾಡಿಸುವುದಂತೆ ಮತ್ತು ದೇಹಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ಭರವಸೆ ಕೊಡುವುದು ಎನ್ನಲಾಗುತ್ತಿದೆ.

ಸ್ಮಾರ್ಟ್‌ ಟಾಯ್ಲೆಟ್!.

ಸ್ಮಾರ್ಟ್‌ ಟಾಯ್ಲೆಟ್!.

ಸ್ಮಾರ್ಟ್‌ ಟಾಯ್ಲೆಟ್‌ಗಳು ಬರುತ್ತವೇ ಎಂದು ನೀವೆಂದಾದರು ಊಹಿಸಿದ್ದಾರಾ? ಆದರೆ ಇದೀಗ ಅಮೇರಿಕನ್ ಬ್ರ್ಯಾಂಡ್ ಆಗಿರುವ 'ಕೊಹ್ಲರ್ ನುಮಿ 2.0 ಇಂಟೆಲಿಜೆಂಟ್' ಸ್ಮಾರ್ಟ್‌ ಟಾಯ್ಲೆಟ್ ಅನ್ನು ಪರಿಚಯಿಸುತ್ತಿದೆ. ಬಿಲ್ಟ್ ಇನ್ ಸ್ಪೀಕರ್ ಜೊತೆಗೆ ಬರುತ್ತಿರುವ ಈ ಟಾಯ್ಲೆಟ್ ವೈಸ್ ರಿಕಗೈಸ್ ಮಾಡಲಿದೆಯಂತೆ. ಈ ಫ್ಲ್ಯಾಗ್ ಶಿಪ್ ಟಾಯ್ಲೆಟ್ ನಲ್ಲಿ ಮಲ್ಟಿ ಕಲರ್ ಆಂಬಿಯಂಟ್ ಲೈಟಿಂಗ್ ಕೂಡಾ ಇದೆ. ಹೀಟೆಡ್ ಸೀಟ್ ಅನ್ನು ಹೊಂದಿರುವ ಇದು ಡ್ರೈಯರ್ ಫಂಕ್ಷನ್ ಸಹ ಒಳಗೊಂಡಿರುತ್ತದೆ. ನೀವು ನೂಮಿ 2.0 ಇಂಟೆಲಿಜೆಂಟ್ ಟಾಯ್ಲೆಟ್ ಅನ್ನು ಟ್ರಾಯ್ ಮಾಡಬೇಕಾದರೇ ದುವಾರಿ ಬೆಲೆ ತೆರಬೇಕು. ವೈಟ್ ವೇರಿಯಂಟ್ ಬೆಲೆ $7,000 (ಅಂದಾಜು 488,000ರೂ.ಗಳು) ಮತ್ತು ಬ್ಲಾಕ್ ವೇರಿಯಂಟ್ ನ ಬೆಲೆ $8,000.(5,66,840.00 ರೂ.ಗಳು).

ಸ್ಮಾರ್ಟ್ ಟೂತ್ ಬ್ರಷ್ !.

ಸ್ಮಾರ್ಟ್ ಟೂತ್ ಬ್ರಷ್ !.

ಮಕ್ಕಳು ಬೆಳಿಗ್ಗೆ ಎದ್ದ ಕೂಡಲೇ ಬ್ರಷ್ ಮಾಡುವುದಿಲ್ಲ ಎಂಬುದು ಎಲ್ಲರ ಮನೆಯಲ್ಲಿರುವ ಸಮಸ್ಯೆ. ಭಾರತದಂತ ದೇಶದಲ್ಲಿ ಈ ಸಮಸ್ಯೆ ಅಮ್ಮನ ಒಂದು ಏಟಿನಿಂದ ನಿವಾರಣೆಯಾಗಿಬಿಡುತ್ತದೆ. ಆದರೆ ಸೂಪರ್ ಸೆನ್ಸಿಟೀವ್ ದೇಶದ ಪೋಷಕರಿಗಾಗಿ ಸ್ಮಾರ್ಟ್ ಟೂತ್ ಬ್ರಷ್ ಬರುತ್ತಿದೆ. ಅದರ ಹೆಸರು 'ಮ್ಯಾಜಿಕ್ ಸ್ಮಾರ್ಟ್ ಟೂತ್ ಬ್ರಷ್'. ಇದು ಸ್ಮಾರ್ಟ್ ಫೋನ್ ಕಂಪ್ಯಾನಿಯನ್ ಆಪ್ ನಿಂದ ತಯಾರಿಸಲಾಗಿದೆ. AR (Augmented Reality) ಗೇಮ್ ನಿಂದ ಡಿಸೈನ್ ಆಗಿರುತ್ತದೆ. ಫ್ರಂಟ್ ಫೇಸಿಂಗ್ ಕ್ಯಾಮರಾದ ಮೋಷನ್ ಟ್ರ್ಯಾಕಿಂಗ್ ತಂತ್ರಜ್ಞಾನದಿಂದಾಗಿ ಇದು ನಿಮ್ಮ ಹಲ್ಲುಗಳನ್ನು ಉಜ್ಜುತ್ತದೆ. ಆದರೆ ದುರಂತವೆಂದರೆ ಹಲ್ಲುಜ್ಜಬೇಕಾದಾಗ ಬರೀ ಬ್ರಷ್ ಮಾತ್ರ ಹಿಡಿದ್ರೆ ಸಾಲದು, ಮೊಬೈಲ್ ಕೂಡ ಹತ್ತಿರವೇ ಇರಬೇಕು.

 ನಿದ್ರೆಗಾಗಿ ಉರ್ಗೋ ನೈಟ್!

ನಿದ್ರೆಗಾಗಿ ಉರ್ಗೋ ನೈಟ್!

ನಿದ್ರೆಗಾಗಿ ಉರ್ಗೋ ನೈಟ್ ಸಾಕಷ್ಟು ಟೆಕ್ನಾಲಜಿ ಮತ್ತು ಗೆಜ್ಜೆಟ್‌ಗಳು ನಿದ್ರಾಹಿನತೆ ತೊಂದರೆ ಇದೇಯಾ? ಇದೀಗ ಈ ಸಮಸ್ಯೆ ನಿವಾರಣೆಗೂ ಒಂದು ಗೆಜ್ಜೆಟ್ ಬಂದಿದೆ. ಮುಳ್ಳನ್ನು ಮುಳ್ಳಿಂದಲೇ ತೆಗೆಯಬೇಕು ಎಂಬಂತಿದೆ ಇದರ ಸ್ವಾರಸ್ಯ. ಉರ್ಗೋ ನೈಟ್ ಧನಾತ್ಮಕ ಫೀಡ್ ಬ್ಯಾಕ್ ಅನ್ನು ನಿಮ್ಮ ಮೆದುಳಿನ ಪ್ರಕ್ರಿಯೆಗೆ ಮತ್ತು ಮಾನಸಿಕ ಆಕ್ಟಿವಿಟಿಗೆ ನೀಡುತ್ತದೆ. ಆ ಮೂಲಕ ನೀವು ಹಾಸಿಗೆಯಲ್ಲಿ ಉತ್ತಮ ನಿದ್ದೆಯನ್ನು ಪಡೆಯಲು ಸಾಧ್ಯವಾಗುತ್ತದೆಯಂತೆ ಎಂದು ಕಂಪನಿ ತಿಳಿಸಿದೆ. ಆದರೆ ಸ್ಮಾರ್ಟ್ ಫೋನ್ ಸ್ಕ್ರೀನಿ ನಿಂದ ಅದ್ಹೇಗೆ ನಿದ್ದೆ ಬರೋ ಹಾಗೆ ಮಾಡ್ತೋರೋ ಆ ದೇವರೇ ಬಲ್ಲ!

Best Mobiles in India

English summary
Most ridiculous gadgets unveiled at CES 2019: Infrared hair dryer, really? to know more visit kannad.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X