Subscribe to Gizbot

ಮೊಟೊ E5 ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ ಡ್ಯುಯಲ್ ಕ್ಯಾಮೆರಾ, ಬಿಗ್ ಸ್ಕ್ರಿನ್...!

Posted By: -

ಮಾರುಕಟ್ಟೆಯಲ್ಲಿ ಮೊಟೊ ಸ್ಮಾರ್ಟ್ ಫೋನ್ ಗಳು ಹೆಚ್ಚಿನ ಸದ್ದು ಮಾಡುತ್ತಿವೆ, ಈ ಹಿನ್ನಲೆಯಲ್ಲಿ ಇನ್ನಷ್ಟು ಸ್ಮಾರ್ಟ್ ಪೋನ್ ಗಳನ್ನು ಬಳಕೆದಾರರಿಗೆ ನೀಡಲು ಮೊಟೊರೊಲಾ ಮುಂದಾಗಿದ್ದು, ಮೊಟೊ E5, E5 ಪ್ಲಸ್ ಮತ್ತು E5 ಪ್ಲೇ ಸ್ಮಾರ್ಟ್ ಫೋನ್ ನೊಂದಿಗೆ ಮೊಟೊ G6, G6 ಪ್ಲಸ್ ಮತ್ತು G6 ಪ್ಲೇ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಲಿದೆ. ಇದಲ್ಲದೇ ಮೊಟೊ X5 ಸ್ಮಾರ್ಟ್ ಪೋನ್ ಸಹ ಲಾಂಚ್ ಆಗಲಿದೆ.

ಮೊಟೊ E5 ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ ಡ್ಯುಯಲ್ ಕ್ಯಾಮೆರಾ, ಬಿಗ್ ಸ್ಕ್ರಿನ್...!

ಈಗಾಗಲೇ ಲೀಕ್ ಆಗಿರುವ ಮಾಹಿತಿಯ ಪ್ರಕಾರ ಮೊಟೊ E5 ಪ್ಲಸ್ ಸ್ಮಾರ್ಟ್ ಫೋನಿನ ಹಿಂಭಾಗದಲ್ಲಿ ಮೊಟೊ ಡ್ಯುಯಲ್ ಕ್ಯಾಮೆರಾವನ್ನು ಅಳವಡಿಸಿದೆ, ಜೊತೆಗೆ LED ಫ್ಲಾಷ್ ಲೈಟ್ ಅನ್ನು ನೀಡಿದೆ ಎನ್ನಲಾಗಿದೆ. ಅಲ್ಲದೇ ಇದು 18:9 ಅನುಪಾತದ ದೊಡ್ಡ ಡಿಸ್ ಪ್ಲೇಯನ್ನು ಒಳಗೊಂಡಿದೆ. ಫಿಂಗರ್ ಪ್ರಿಂಟ್ ಸ್ಕ್ಯಾನರ್ ಫೋನಿನ ಹಿಂಭಾಗದಲ್ಲಿ ಕಾಣಿಸಿಕೊಂಡಿದೆ.

ಇದಲ್ಲದೇ ಮುಂಭಾಗದ ಸೆಲ್ಫಿಗಾಗಿಯೂ LED ಫ್ಲಾಷ್ ಲೈಟ್ ನೀಡಿರುವುದನ್ನು ನಾವಿಲ್ಲಿ ಕಾಣಬಹುದಾಗಿದೆ. ಇದಲ್ಲದೇ ಈ ಸ್ಮಾರ್ಟ್ ಫೋನಿನಲ್ಲಿ USB ಟೈಪ್ C ಪೋರ್ಟ್ ನೀಡಲಾಗಿದ್ದು, 3.5 mm ಇಯರ್ ಫೋನ್ ಜಾಕ್ ಇದೆ. ಕರೆ ಮಾಡುವ ಸಂದರ್ಭದಲ್ಲಿ ಉತ್ತಮ ಸೇವೆಯನ್ನು ಪಡೆಯುವುದಕ್ಕಾಗಿ ಹೆಚ್ಚಿನ ಮೈಕ್ರೋಫೋನ್ ಗಳನ್ನು ಇದರಲ್ಲಿ ಅಳವಡಿಸಲಾಗಿದೆ.

ಮೊಟೊ E5 ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ ಡ್ಯುಯಲ್ ಕ್ಯಾಮೆರಾ, ಬಿಗ್ ಸ್ಕ್ರಿನ್...!

ಮೊಟೊ E5 ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿ ಶೀಘ್ರವೇ ಕಾಣಿಸಿಕೊಳ್ಳಲಿದ್ದು, 4000mAh ಬ್ಯಾಟರಿಯನ್ನು ಇವುಗಳಲ್ಲಿ ಕಾಣಹುದಾಗಿದೆ. ಅಲ್ಲದೇ ಈಗಾಗಲೇ ಅಮೆರಿಕಾದಲ್ಲಿ ಮಾರಾಟಕ್ಕೆ ಪ್ರಮಾಣಪತ್ರವನ್ನು ಪಡೆದುಕೊಂಡಿವೆ ಎನ್ನಲಾಗಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿರುವ ಮೊಟೊರೊಲಾ ಈ ಸ್ಮಾರ್ಟ್ ಪೋನ್ ನಿಂದಾಗಿ ಮಾರುಕಟ್ಟೆಯ ಟ್ರೆಂಡ್ ಬದಲಾಯಿಸಲಿದ್ದು, ಶೀಘ್ರವೇ ಹೊಸ ಭಾಷ್ಯ ಬರೆಯಲಿದೆ. ನೂತನ ಸ್ಮಾರ್ಟ್ ಪೋನ್ ಕೊಳ್ಳಬೇಕು ಎಂದು ಪ್ಲಾನ್ ಮಾಡುತ್ತಿರುವವರು ಈ ಸ್ಮಾರ್ಟ್ ಪೋನ್ ಗಾಗಿ ಕಾಯುವುದು ಉತ್ತಮ.

English summary
Moto E5 Plus render hints at dual cameras at the front and rear. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot