ಫ್ಲಿಪ್‌ಕಾರ್ಟ್‌ನಲ್ಲಿ ಮೋಟೋ X4, E4ಪ್ಲಸ್ ಮತ್ತು ಜೆಡ್2 ಪ್ಲೇ ಫೋನ್‌ಗಳ ಮೇಲೆ ರಿಯಾಯಿತಿ!!

By Tejaswini P G

  ಮೋಟೊರೋಲಾ ಫೋನ್ಗಳು ಕೈಗೆಟಕುವ ಬೆಲೆಯಲ್ಲ ಉತ್ತಮ ಫೀಚರ್ಗಳು ಮತ್ತು ಆಕರ್ಷಕ ವಿನ್ಯಾಸ ನೀಡುತ್ತದೆ. ನೀವು ಒಳ್ಳೆಯ ಮೋಟೋ ಫೋನ್ ಖರೀದಿಸುವ ಇರಾದೆ ಹೊಂದಿದ್ದಲ್ಲಿ ಇದು ಅದಕ್ಕೆ ಸರಿಯಾದ ಸಮಯ. ಖ್ಯಾತ ಇ-ಕಾಮರ್ಸ್ ಪ್ಲ್ಯಾಟ್ಫಾರ್ಮ್ ಆದ ಫ್ಲಿಪ್ಕಾರ್ಟ್ ನಲ್ಲಿ ನಡೆಯುತ್ತಿದೆ 'ಮೋಟೋ ಡೇಸ್' ಸೇಲ್! ಈ ಮಾರಾಟ ಫೆಬ್ರವರಿ 24ರ ವರೆಗೆ ಮುಂದುವರೆಲಿದೆ.

  ಮೋಟೋ X4, E4ಪ್ಲಸ್ ಮತ್ತು ಜೆಡ್2 ಪ್ಲೇ ಫೋನ್‌ಗಳ ಮೇಲೆ ರಿಯಾಯಿತಿ!!

  ಈ ಸೇಲ್ ನ ಹಿನ್ನಲೆಯಲ್ಲಿ 3 ಮೋಟೊರೋಲಾ ಸ್ಮಾರ್ಟ್ಫೋನ್ಗಳು ರಿಯಾಯಿತಿ ದರದಲ್ಲಿ ದೊರೆಯಲಿದೆ. ಮೋಟೋ X4, ಮೋಟೋ E4 ಪ್ಲಸ್ ಮತ್ತು ಮೋಟೋ Z2 ಪ್ಲೇ ರಿಯಾಯತಿ ದರದಲ್ಲಿ ದೊರೆಯುತ್ತಿರುವ ಫೋನ್ಗಳಾಗಿವೆ. ಅಷ್ಟೇ ಅಲ್ಲದೆ ಗ್ರಾಹಕರು ಎಕ್ಸ್ಚೇಂಜ್ ಆಫರ್ ನಲ್ಲಿ ರೂ 2000 ದಷ್ಟು ರಿಯಾಯಿತಿ ಪಡೆಯಬಹುದಾಗಿದೆ.ಆದರೆ ಎಕ್ಸ್ಚೇಂಜ್ ಆಫರ್ ಗೆ ಕೆಲವು ನಿಯಮಗಳು ಮತ್ತು ಷರತ್ತುಗಳು ಅನ್ವಯವಾಗುತ್ತದೆ. ಈ 'ಮೋಟೋ ಡೇಸ್' ಸೇಲ್ ನ ಕುರಿತು ಹೆಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

  ಮೋಟೋ X4

  ಮೋಟೋ X4 ನ ನಿಜವಾದ ಬೆಲೆ ರೂ 20,999 ಆಗಿದ್ದು ಈ ಸೇಲ್ ನಲ್ಲಿ ರೂ 18,999 ಕ್ಕೆ ಖರೀದಿಸಬಹುದಾಗಿದೆ. ನಿಮ್ಮ ಹಳೆಯ ಫೋನ್ ಅನ್ನು ಎಕ್ಸ್ಚೇಂಜ್ ಮಾಡುವ ಮೂಲಕ ರೂ 2000 ದಷ್ಟು ಹೆಚ್ಚಿನ ರಿಯಾಯಿತಿ ಪಡೆಯಬಹುದಾಗಿದೆ. ಈ ಎಕ್ಸ್ಚೇಂಜ್ ಆಫರ್ ಕೇವಲ 4GB RAM ಮತ್ತು 64 GB ಸ್ಟೋರೇಜ್ ಆವೃತ್ತಿ ಮೇಲೆ ಮಾತ್ರ ಅನ್ವಯವಾಗುತ್ತದೆ.

  ಮೋಟೋ X4, E4ಪ್ಲಸ್ ಮತ್ತು ಜೆಡ್2 ಪ್ಲೇ ಫೋನ್‌ಗಳ ಮೇಲೆ ರಿಯಾಯಿತಿ!!

  ಇದರ ಸ್ಪೆಸಿಫಿಕೇಶನ್ಗಳ ಕುರಿತು ಹೇಳುವುದಾದರೆ ಮೋಟೋ X4 ನಲ್ಲಿದೆ 5.2 ಇಂಚ್ FHD ಡಿಸ್ಪ್ಲೇ 1080p ರೆಸೊಲ್ಯೂಶನ್ ನೊಂದಿಗೆ. ಅಲ್ಲದೆ ಇದು 2.2GHz ಒಕ್ಟಾಕೋರ್ ಸ್ನ್ಯಾಪ್ಡ್ರಾಗನ್ 630 SoC ಹೊಂದಿದ್ದು ಜೊತೆಗೆ 4GB/6GB RAM ಮತ್ತು 64GB ಆಂತರಿಕ ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. ಅಲ್ಲದೆ ಸ್ಟೋರೇಜ್ ಸಾಮರ್ಥ್ಯವನ್ನು 2TB ವರೆಗೆ ವಿಸ್ತರಿಸಬಹುದಾಗಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ 3000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ.

  ಮೋಟೋ X4 ಡ್ಯುಯಲ್ ರೇರ್ ಕ್ಯಾಮೆರಾ ಸೆಟಪ್ ಹೊಂದಿದ್ದು, 12MP ಪ್ರೈಮರಿ ಸೆನ್ಸರ್ ಮತ್ತು 8MP ಸೆಕೆಂಡರಿ ಸೆನ್ಸರ್ ಹೊಂದಿದೆ. ಈ ರೇರ್ ಕ್ಯಾಮೆರಾ ಬೋಕೇ ಇಫೆಕ್ಟ್, ಲ್ಯಾಂಡ್ಮಾರ್ಕ್ ರೆಕಗ್ನಿಶನ್, ಆಬ್ಜೆಕ್ಟ್ ರೆಕಗ್ನಿಶನ್, ಬಾರ್ಕೋಡ್ ರೆಕಗ್ನಿಶನ್ ಮೊದಲಾದ ಫೀಚರ್ಗಳನ್ನು ಹೊಂದಿದೆ.

  ಅಲ್ಲದೆ ಇದರ 16MP ಫ್ರಂಟ್ ಕ್ಯಾಮೆರಾ LED ಫ್ಲ್ಯಾಶ್ ಮತ್ತು f/2.0 ಅಪರ್ಚರ್ ಹೊಂದಿದೆ.

  ಮೋಟೋ X4 ಆಂಡ್ರಾಯ್ಡ್ 7.1.2 ನುಗಾಟ್ ಓಎಸ್ ಹೊಂದಿದ್ದು 4G LTE, ಬ್ಲೂಟೂತ್ 5.0, ವೈಫೈ, NFC, USB ಟೈಪ್ C ಪೋರ್ಟ್ ಮತ್ತು 3.5mm ಆಡಿಯೋ ಜ್ಯಾಕ್ ಮೊದಲಾದ ಕನೆಕ್ಟಿವಿಟಿ ಫೀಚರ್ ಹೊಂದಿದೆ.

  ಮೋಟೋ X4, E4ಪ್ಲಸ್ ಮತ್ತು ಜೆಡ್2 ಪ್ಲೇ ಫೋನ್‌ಗಳ ಮೇಲೆ ರಿಯಾಯಿತಿ!!

  ಮೋಟೋ E4 ಪ್ಲಸ್

  ಮೋಟೋ E4 ಪ್ಲಸ್ ನ ನಿಜವಾದ ಬೆಲೆ ರೂ 9,999 ಆಗಿದ್ದು ಮೋಟೋ ಡೇಸ್ ಸೇಲ್ ನ ಸಂದರ್ಭದಲ್ಲಿ ಫ್ಲಿಪ್ಕಾರ್ಟ್ನಲ್ಲಿ ರೂ 9,499 ರಿಯಾಯಿತಿ ದರದಲ್ಲಿ ಮಾರಾಟಮಾಡಲಾಗುತ್ತಿದೆ. ಮೋಟೋ E4 ಎಕ್ಸ್ಚೇಂಜ್ ಆಫರ್ ನಲ್ಲೂ ಲಭ್ಯವಿದೆ. ಕೆಲವು ಆಯ್ದ ಫೋನ್ಗಳನ್ನು ಎಕ್ಸ್ಚೇಂಜ್ ಮಾಡುವ ಮೂಲಕ ರೂ 2000 ದಷ್ಟು ರಿಯಾಯಿತಿ ಪಡೆಯಬಹುದಾಗಿದೆ

  ಮೋಟೋ E4 ಪ್ಲಸ್ ಆಂಡ್ರಾಯ್ಡ್ 7.1.1 ನುಗಾಟ್ ಓಎಸ್ ಹೊಂದಿದ್ದು ಮುಂಭಾಗದಲ್ಲಿ ಫಿಂಗರ್ಪ್ರಿಂಟ್ ಸೆನ್ಸರ್ ಹೊಂದಿದೆ. 5.5 ಇಂಚ್ HD 720p ಡಿಸ್ಪ್ಲೇ ಹೊಂದಿದ್ದು ಜೊತೆಗೆ 2.5D ಕರ್ವ್ಡ್ ಗ್ಲಾಸ್ ಇದೆ. 1.3GHz ಕ್ವಾಡ್-ಕೋರ್ ಮೀಡಿಯಾಟೆಕ್ MT6737 SoC ಹೊಂದಿದ್ದು ಜೊತೆಗೆ 3GB RAM ಮತ್ತು 32GB ಸ್ಟೋರೇಜ್ ಸಾಮರ್ಥ್ಯ ಹೊಂದಿದೆ.

  ಇನ್ನು ಮೋಟೋ E4 ಪ್ಲಸ್ ನ ಕ್ಯಾಮೆರಾ ಕುರಿತು ಹೇಳುವುದಾದದರೆ ಇದರಲ್ಲಿದೆ 13MP ರೇರ್ ಕ್ಯಾಮೆರಾ ಆಟೋ ಫೋಕಸ್, LED ಫ್ಲ್ಯಾಶ್, f/2.0 ಅಪರ್ಚರ್ ಮತ್ತು 78 ಡಿಗ್ರೀ ಲೆನ್ಸ್ ಜೊತೆಗೆ. ಅಲ್ಲದೆ ಮುಂಭಾಗದಲ್ಲಿ 5MP ಸೆಲ್ಫೀ ಕ್ಯಾಮೆರಾ ಹೊಂದಿದ್ದು LED ಫ್ಲ್ಯಾಶ್, 74 ಡಿಗ್ರೀ ಲೆನ್ಸ್ ಮತ್ತು f/2.2 ಅಪರ್ಚರ್ ಇದೆ.

  4G VoLTE, ವೈಫೈ, ಬ್ಲೂಟೂತ್ 4.1 LE ಮತ್ತು GPS ಮೊದಲಾದ ಕನೆಕ್ಟಿವಿಟಿ ಫೀಚರ್ಗಳಿದ್ದು, 10W ರ್ಯಾಪಿಡ್ ಚಾರ್ಜಿಂಗ್ ಸಾಮರ್ಥ್ಯವುಳ್ಳ 5000mAh ಸಾಮರ್ಥ್ಯದ ಬ್ಯಾಟರಿ ಮೋಟೋ E4 ಪ್ಲಸ್ ನ ವಿಶೇಷತೆಯಾಗಿದೆ.

  ಮೋಟೋ X4, E4ಪ್ಲಸ್ ಮತ್ತು ಜೆಡ್2 ಪ್ಲೇ ಫೋನ್‌ಗಳ ಮೇಲೆ ರಿಯಾಯಿತಿ!!

  ಮೋಟೋ Z2 ಪ್ಲೇ

  ರೂ 27,999 ಮೌಲ್ಯದ ಮೋಟೋ Z2 ಪ್ಲೇ ಕೂಡ ಸೇಲ್ ನಲ್ಲಿ ರಿಯಾಯಿತಿ ಬೆಲೆಗೆ ಲಭ್ಯವಿದ್ದು, ರೂ 22,999 ಕ್ಕೆ ಖರೀದಿಸಬಹುದಾಗಿದೆ. ಮೋಟೋ Z2 ಪ್ಲೇ ನ 4GB RAM ಮತ್ತು 64GB ಸ್ಟೋರೇಜ್ ನ ಆವೃತ್ತಿ ಎಕ್ಸ್ಚೇಂಜ್ ಆಫರ್ ಗೆ ಲಭ್ಯವಿದ್ದು ಗ್ರಾಹಕರು ರೂ 2000 ದಷ್ಟು ಹೆಚ್ಚಿನ ರಿಯಾಯಿತಿ ಪಡೆಯಬಹುದಾಗಿದೆ.

  ಇದರ ಸ್ಪೆಸಿಫಿಕೇಶನ್ ಗಳ ಕುರಿತು ಹೇಳುವುದಾದರೆ ಇದರಲ್ಲಿ 5.5 ಇಂಚ್ ಫುಲ್ HD ಸುಪರ್ AMOLED ಡಿಸ್ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣಾ ಕವಚದೊಂದಿಗೆ. ಅಲ್ಲದೆ ಇದರಲ್ಲಿದೆ 2.2GHz ಸ್ನ್ಯಾಪ್ಡ್ರಾಗನ್ 626 ಒಕ್ಟಾ-ಕೋರ್ ಪ್ರಾಸೆಸರ್.

  ಮೋಟೋ Z2 ಪ್ಲೇ 12MP ರೇರ್ ಕ್ಯಾಮೆರಾ ಹೊಂದಿದ್ದು, 1.4 ಮೈಕ್ರಾನ್ ಪಿಕ್ಸೆಲ್ ಸೆನ್ಸರ್, f/1.7 ಅಪರ್ಚರ್, ಡ್ಯುಯಲ್ LED ಫ್ಲ್ಯಾಶ್ , ಲೇಸರ್ ಮತ್ತು ಡ್ಯುಯಲ್ ಆಟೋ ಫೋಕಸ್ ಲೆನ್ಸ್ ಹೊಂದಿದೆ. ಮುಂಭಾಗದಲ್ಲಿ 5MP ಸೆಲ್ಫೀ ಕ್ಯಾಮೆರಾ ಇದ್ದು f/2.2 ಅಪರ್ಚರ್ , ವೈಡ್-ಆಂಗಲ್ ಲೆನ್ಸ್ ಮತ್ತು ಡ್ಯುಯಲ್ LED ಫ್ಲ್ಯಾಶ್ ಹೊಂದಿದೆ.

  ಈ ಮೋಟೊರೋಲಾ ಫೋನ್ ಆಂಡ್ರಾಯ್ಡ್ 7.1.1 ನುಗಾಟ್ ಓಸ್ ಹೊಂದಿದ್ದು, ಟರ್ಬೋಪವರ್ ಚಾರ್ಜಿಂಗ್ ಸಾಮರ್ಥ್ಯ ಹೊಂದಿರುವ 3000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ.

  ಮೋಟೋ Z2 ಪ್ಲೇ 4G VoLTE, ವೈಫೈ 802.11 a/b/g/n(2.4GHz ಮತ್ತು 5 Ghz) , ಬ್ಲೂಟೂತ್ 4.2, USB ಟೈಪ್ C(3.1) ಮತ್ತು 3.5mm ಹೆಡ್ಫೋನ್ ಜ್ಯಾಕ್, NFC, FM ರೇಡಿಯೋ ಮತ್ತು GPS/ A-GPS ಮೊದಲಾದ ಕನೆಕ್ಟಿವಿಟಿ ಆಯ್ಕೆಗಳನ್ನು ಹೊಂದಿದೆ.

  English summary
  Motorola phones have always been a good bargain with decent specs, familiar design, and affordable pricing.to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more