ಆಂಡ್ರಾಯ್ಡ್ ಬಳಕೆದಾರರಿಗೂ ಲಭ್ಯ ಮೊಜಿಲ್ಲಾ ಫೈರ್ ಫಾಕ್ಸ್ ಬ್ರೌಸರ್: ವಿಶೇಷತೆ ಏನು..?

By: Precilla Dias

ಮೊಜಿಲ್ಲಾ ಕೊನೆಗೂ ತನ್ನ ಫೈರ್ ಫಾಕ್ಸ್ ಪೋಕಸ್ ಗೂಗಲ್ ಪ್ಲೇ ಸ್ಟೋರಿನಲ್ಲಿ ಬಿಡುಗಡೆ ಮಾಡಿದೆ. ಈ ಹಿಂದೆ ಕೇವಲ ಐಎಸ್ಓ ಬಳಕೆದಾರರಿಗೆ ಮಾತ್ರವೇ ಲಭ್ಯವಿತ್ತು. ಮೊಜಿಲ್ಲಾದ ಫೈರ್ ಫಾಕ್ಸ್ ಇಂಟರ್ನೆಟ್ ಬ್ರೌಸರ್ ಆಪ್ ಈಗ ಆಂಡ್ರಾಯ್ಡ್ ಬಳಕೆದಾರರಿಗೂ ದೊರೆಯಲಿದೆ. ಈ ಹಿನ್ನಲೆಯಲ್ಲಿ ಮೊಜಿಲ್ಲಾ ಫೈರ್ ಫಾಕ್ಸ್ ಪೋಕಸ್ ಬ್ರೌಸರ್ ಹೇಗಿದೆ ಎಂಬುದರ ವಿವರ ಇಲ್ಲಿದೆ.

ಆಂಡ್ರಾಯ್ಡ್ ಬಳಕೆದಾರರಿಗೂ ಲಭ್ಯ ಮೊಜಿಲ್ಲಾ ಫೈರ್ ಫಾಕ್ಸ್ ಬ್ರೌಸರ್

ಸದ್ಯ ಪ್ಲೇ ಸ್ಟೋರಿನಲ್ಲಿ ಲಭ್ಯವಿರುವ ಬ್ರೌಸಿಂಗ್ ಆಪ್ ಗಳಲ್ಲಿ ಮೊಜಿಲ್ಲಾ ಫೈರ್ ಫಾಕ್ಸ್ ಬ್ರೌಸರ್ ವಿಭಿನ್ನವಾಗಿದೆ. ಇದರಲ್ಲಿ ಪ್ರೈವೆಟ್ ಬ್ರೌಸಿಂಗ್ ಮೊಡ್ ನೀಡಿದ್ದು, ಇದು ನೀವು ಬ್ರೌಸ್ ಮಾಡುವ ಎಲ್ಲಾ ಮಾಹಿತಿಯನ್ನು ಸೇಪ್ ಆಗಿಡಲಿದೆ. ಇದು ನಿಮ್ಮನು ಬಿಟ್ಟು ನಿನ್ಯಾರಿಗೂ ತೋರಿಸುವುದಿಲ್ಲ ಎನ್ನಲಾಗಿದೆ.

ಇದಲ್ಲದೇ ಒಮ್ಮೆ ನೀವು ಬೌಸಿಂಗ್ ಮಾಡಿದ ನಂತರ ಟ್ರಾಷ್ ಬಟನ್ ಬಳಕೆ ಮಾಡಿಕೊಳ್ಳುವ ಮೂಲಕ ಬ್ರೌಸರ್ ಕ್ಲಿನ್ ಆಪ್ ಮಾಡಲಿದೆ. ಇದಲ್ಲದೇ ಬ್ರೌಸರ್ ನಲ್ಲಿ ನಿಮ್ಮ ಯಾವುದೇ ಡೇಟಾಗಳು ಉಳಿಯುವುದಿಲ್ಲ. ಬೇರೆಯವರು ನೋಡುತ್ತಾರೆ ಎನ್ನುವ ಭಯ ಇರಬೇಕಾಗಿಲ್ಲ.

ಇದಲ್ಲದೇ ಈ ಬ್ರೌಸರ್ ನಲ್ಲಿ ನೀವು ಆಡ್ ಗಳನ್ನು ಬ್ಲಾಕ್ ಮಾಡಲು ಸಹಾಯಕಾರಿಯಾಗಿದ್ದು, ಇದರಿಂದ ನೀವು ಬ್ರೌಸಿಂಗ್ ಮಾಡುವ ವಿಧಾನವನ್ನು ಬದಲಾಯಿಸಿಕೊಳ್ಳಬಹುದಾಗಿದೆ. ಇದರಿಂದ ನೀವು ಆರಾಮವಾಗಿ ಬೇಕಾದದನ್ನು ಬ್ರೌಸ್ ಮಾಡಬಹುದಾಗಿದೆ.

ಮೊಜಿಲ್ಲಾ ಫೈರ್ ಫಾಕ್ಸ್ ಬ್ರೌಸರ್ ಆಪ್ ಬಳಕೆ ಮಾಡಲು ಸುಲಭ ಮತ್ತು ಸರಳವಾಗಿದೆ. ಇದು ಬಳಕೆದಾರಿಗೆ ಹೆಚ್ಚಿನ ಸ್ವಾತಂತ್ರ ಮತ್ತು ಸರಳವಾಗಿ ಮಾಡಲು ಅನುಕೂಲ ಮಾಡಿಕೊಡಲಿದೆ. ಬೇರೆ ಆಪ್ ಗಳಿಗೆ ಹೋಲಿಸಿಕೊಂಡರೆ ಇದು ಸರಳವಾಗಿದೆ.English summary
Mozilla has launched Firefox Focus for Android users six months after it was launched for iOS.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot