ಸರ್ಕಾರಿ ಸೇವೆಗಳನ್ನು ಪಡೆಯಲು ಈ 5 ಮೊಬೈಲ್ ಆ್ಯಪ್ ನಿಮ್ಮ ಬಳಿ ಇರಲಿ

By Lekhaka
|

ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಹಾಗು ತಿಳಿದುಕೊಳ್ಳಲು ಅನೇಕ ಆ್ಯಪ್‌ ಗಳು ಸಹಾಯಕವಾಗಿವೆ. ಈ ಆಪ್ ಗಳ ಮೂಲಕ ನೂರಾರು ಸರ್ಕಾರಿ ಸೇವೆಗಳನ್ನು ಪಡೆಯಬಹುದು. ಇಲ್ಲಿ ಪ್ರಮುಖ 5 ಮೊಬೈಲ್ ಆಪ್ ಗಳ ಮಾಹಿತಿ ನೀಡಲಾಗಿದೆ.

ಉಮಂಗ್ (UMANG)

ಉಮಂಗ್ (UMANG)

ಈ ಆ್ಯಪ್ ನ ದೀರ್ಘರೂಪ -Unified mobile Application for New-Age Governance (UMANG) ಎಂದಾಗಿದ್ದು ಹಲವಾರು ಸರ್ಕಾರಿ ಸೇವೆಗಳನ್ನು ಒದಗಿಸುತ್ತದೆ. ಪ್ರಮುಖವಾಗಿ ಸರ್ಕಾರಿ ನೌಕರರ ಪ್ರಾವಿಡೆಂಟ್ ಫಂಡ್, ನಿವೃತ್ತಿ ಪಿಂಚಣಿ ಯೋಜನೆ, ಮೈ ಪ್ಯಾನ್ ಅಥವಾ ಹೊಸ ಪ್ಯಾನ್ ಕಾರ್ಡ್ ಗೆ ಅರ್ಜಿ ಹಾಕಲು, ಡಿಜಿಲಾಕರ್, ಪಿಂಚಣಿದಾರರಿಗೆ ನೆರವಾಗುವ ಪೆನ್ಷನರ್ಸ್ ಪೋರ್ಟಲ್ ಹಾಗೂ ಸರ್ಕಾರಿ ನೌಕರಿಗಳ ಬಗ್ಗೆ ವಿವರ ನೀಡುವ ಡಿಜಿ ಸೇವಕ್ ಎಲ್ಲವೂ ಈ ಆಪ್ ನಲ್ಲಿ ಅಡಕಗೊಂಡಿವೆ.

ಸಿಬೆಕ್ ಜಿಎಸ್ಟಿ (CBEC GST)

ಸಿಬೆಕ್ ಜಿಎಸ್ಟಿ (CBEC GST)

ಸರಕು ಮತ್ತು ಸೇವಾ ತೆರಿಗೆ Goods and Services Tax (GST) ಯನ್ನು ತೆರಿಗೆದಾರರು ಅರಿತುಕೊಳ್ಳಲು ಹಾಗೂ ಈ ಪಾವತಿಗಳು ಸುಲಭವಾಗಿ ಹಾಗೂ ಸುಲಲಿತವಾಗಿ ನಡೆಯಲು ಭಾರತೀಯ ವಿತ್ತ ಸಚಿವಾಲಯ, ಕೇಂದ್ರ ಅಬಕಾರಿ ಹಾಗೂ ಸುಂಕ ಬೋರ್ಡ್ ವಿಭಾಗಗಳು ಈ ಆಪ್ ಅನ್ನು ನಿರ್ಮಿಸಿವೆ.

ಈ ಆಪ್ ಮೂಲಕ ತೆರಿಗೆಯನ್ನು ಪಾವತಿಸಲು ಹಾಗೂ ಜಿಎಸ್ಟಿ ಬಗ್ಗೆ ಲಭ್ಯವಿರುವ ಮಾಹಿತಿಯನ್ನು ಸುಲಭವಾಗಿ ಪಡೆಯಲು, ಈಗಿನ ವ್ಯವಸ್ಥೆಯಿಂದ ಜಿಎಸ್ಟಿಗೆ ಬದಲಾವಣೆಗೊಳಿಸಲು, ಈ ಬಗ್ಗೆ ಇರುವ ಕಾನೂನು ಹಾಗೂ ಇತರ ಮಾಹಿತಿಗಳನ್ನು ಪಡೆಯಲು, ಪ್ರಸ್ತುತ ಆಗಿರುವ ಪರಿಷ್ಕರಣೆಗಳು, ಪದೇ ಪದೇ ಕೇಳಲಾಗುವ ಪ್ರಶ್ನೆಗಳು ಮೊದಲಾದವುಗಳನ್ನು ಆಪ್ ನೆರವಾಗುತ್ತದೆ. ಅಲ್ಲದೇ ಸಿಬೆಕ್ ಸಹಾಯವಾಣಿಯ ಮೂಲಕ ಹೆಚ್ಚಿನ ಸಹಾಯವನ್ನೂ ಪಡೆಯಬಹುದು.

ಆಯಕರ್ ಸೇತು (AAYKAR SETU)

ಆಯಕರ್ ಸೇತು (AAYKAR SETU)

ತೆರಿಗೆದಾರರು ಆದಾಯ ತೆರಿಗೆ ಇಲಾಖೆಯ ಬಗ್ಗೆ ಇರುವ ಪ್ರಶ್ನೆಗಳನ್ನು ಉತ್ತರಿಸಲೆಂದೆ ಈ ಆ್ಯಪ್ ಅನ್ನು ಆದಾಯ ತೆರಿಗೆ ಇಲಾಖೆ (Income Tax Department (ITD) ನಿರ್ಮಿಸಿದೆ. ತೆರಿಗೆದಾರದ ತೆರಿಗೆ ಹಾಗೂ ಇತರ ಸಂಬಂಧಿತ ಮಾಹಿತಿಗಳ ಬಗ್ಗೆ ನೇರವಾಗಿ ಸಂಬಂಧಪಟ್ಟವರನ್ನು ಸಂದರ್ಶಿಸಲು ಈ ಆ್ಯಪ್ ಅವಕಾಶ ಮಾಡಿಕೊಡುತ್ತದೆ. ಅಲ್ಲದೇ ಇಲಾಖೆಯ ಇತರ ಸೇವೆಗಳನ್ನು ಪಡೆಯಲು ಸಹಾ ಈ ಆಪ್ ನೆರವಾಗುತ್ತದೆ.

ಉದಾಹರಣೆಗೆ ಆದಾಯ ತೆರಿಗೆ ರಿಟರ್ನ್ಸ್ ಹಾಗೂ ಟ್ಯಾಕ್ಸ್ ರಿಟರ್ನ್ ಪ್ರಿಪೇರರ್ ಅಥವಾ ತೆರಿಗೆ ಪಟ್ಟಿಯನ್ನು ಸಿದ್ಧಗೊಳಿಸಲು ನೆರವಾಗುತ್ತದೆ. ಆಪ್ ನಲ್ಲಿರುವ ಇತರ ಸೌಲಭ್ಯಗಳ ಮೂಲಕ ಮೂಲದಲ್ಲಿಯೇ ಮುರಿಯುವ ತೆರಿಗೆ ಅಥವಾ ಟಿಡಿಎಸ್ ಮೊತ್ತವನ್ನೂ ಲೆಕ್ಕಾಚಾರ ಹಾಕಬಹುದು. ಗ್ರಾಹಕನ ನೆರವಿಗೆ ಸುಲಭವಾಗಿ ಎಟಕುವಂತೆ ಕ್ಯಾಲ್ಕುಲೇಟರ್ ಮೂಲಕ ಮನೆ ಬಾಡಿಗೆ ಭತ್ಯೆ, ಆದಾಯ ತೆರಿಗೆಗೆ ಒಳಗಾಗಲು ಬೇಕಾಗಿರುವ ಅರ್ಹತೆ, ಮುಂಗಡ ತೆರಿಗೆ ಮೊದಲಾದ ವಿವರಗಳನ್ನೂ ಪಡೆಯಬಹುದು.

ಡಿಜಿಟಲ್‌ ಪಾವತಿಗೆ ಹೆಚ್ಚು ಒಲವು!..ಸುಲಭವಾದ ಕಾರ್ಯ ಕಷ್ಟವೂ ಕೂಡ!!ಡಿಜಿಟಲ್‌ ಪಾವತಿಗೆ ಹೆಚ್ಚು ಒಲವು!..ಸುಲಭವಾದ ಕಾರ್ಯ ಕಷ್ಟವೂ ಕೂಡ!!

ಎಂ ಕವಚ್ (M-KAVACH)

ಎಂ ಕವಚ್ (M-KAVACH)

ಇದೊಂದು ಮೊಬೈಲ್ ಸುರಕ್ಷತೆಯ ಪರಿಪೂರ್ಣ ಆ್ಯಪ್‌ ಆಗಿದೆ. ಮೊಬೈಲಿನಲ್ಲಿರುವ ಖಾಸಗಿ ವಿವರಗಳನ್ನು ಕನ್ನ ಹಾಕಲು ಸಾಧ್ಯವಾಗದಂತೆ ರಕ್ಷಣೆ ಒದಗಿಸುವ ವ್ಯವಸ್ಥೆಗಳನ್ನು ಈ ಆಪ್ ಮೂಲಕ ಒದಗಿಸಲಾಗಿದೆ. ಅಲ್ಲದೇ ಮೊಬೈಲಿನ ಸಂಪರ್ಕ ಪಡೆಯುವ ವೈ-ಫೈ, ಬ್ಲೂಟೂಥ್, ಕ್ಯಾಮೆರಾ ಹಾಗೂ ಮೊಬೈಲ್ ಡೇಟಾಗಳಿಗೆ ಅನಧಿಕೃತವಾಗಿ ದಾಖಲು ಪಡೆಯುವ ಪ್ರಯತ್ನಗಳನ್ನೂ ತಡೆಯಬಹುದು. ಒಂದು ವೇಳೆ ನಿಮ್ಮ ಮೊಬೈಲ್ ಕಳೆದು ಹೋದರೆ ಈ ಆಪ್ ಮೂಲಕ ಆ ಸಿಮ್ ನಲ್ಲಿರುವ ಎಲ್ಲಾ ಸಂಪರ್ಕ ವಿವರಗಳು ಹಾಗೂ ಇತರ ಅಮೂಲ್ಯ ದಾಖಲೆಗಳನ್ನು ಅಳಿಸಿ ಫಾಕ್ಟರಿ ಸೆಟ್ಟಿಂಗ್ ಗೆ ಮರಳುವಂತೆಯೂ ಮಾಡಬಹುದು.

ಈ ಆಪ್ ಅನ್ನು ಸಿಡಿಎಸಿ (Centre for Development of Advanced Computing (CDAC) ನಿರ್ಮಿಸಿದೆ. ಈ ಆಪ್ ಡೌನ್ಲೋಡ್ ಮಾಡಿಕೊಳ್ಳುವ ಮೊದಲು ನೀವು ಸರಿಯಾದ ಆ್ಯಪ್‌ ನ್ನೇ ಡೌನ್ಲೋಡ್ ಮಾಡಿದ್ದಿರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಏಕೆಂದರೆ ಇದೇ ಹೆಸರಿನ ಕುತಂತ್ರಾಂಶಗಳು ಪ್ಲೇ ಸ್ಟೋರ್ ಗೆ ಲಗ್ಗೆಯಿಟ್ಟಿದ್ದು ಇದು ಬೇಲಿಯೇ ಎದ್ದು ಹೊಲ ಮೇದಂತಾಗಬಹುದು.

ಭೀಮ್ (BHIM)

ಭೀಮ್ (BHIM)

ನಗದು ರಹಿತ ವಹಿವಾಟನ್ನು ಸುಲಭಗೊಳಿಸಲೆಂದೇ ಈ ಆ್ಯಪ್‌ ಅನ್ನು ನಿರ್ಮಿಸಲಾಗಿದ್ದು, ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. Bharat Interface for Money (BHIM) ಎಂಬ ಈ ಆಪ್ Unified Payment Interface (UPI) ಅಥವಾ ಏಕೀಕೃತ ಪಾವತಿ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತದೆ. ತನ್ಮೂಲಕ ಮೊಬೈಲ್ ಫೋನ್ ಮೂಲಕವೇ ನಗದು ರೂಪದಲ್ಲಿ ಮಾಡಬಹುದಾಗಿರುವ ವ್ಯವಹಾರವನ್ನೆಲ್ಲಾ ನಗದು ರಹಿತವಾಗಿ ಇನ್ನಷ್ಟು ಸುಲಭವಾಗಿ ನೆರವೇರಿಸಲು ಸಾಧ್ಯವಾಗುತ್ತದೆ.

ಬಳಕೆದಾರರು ಹಣವನ್ನು ಪಾವತಿಸಬಹುದು. UPI payment addresse, ಅಥವಾ ಮೊಬೈಲ್ ಸಂಖ್ಯೆ, ಅಥವಾ ಕ್ಯೂ ಆರ್ ಕೋಡ್ ಗಳ ಮೂಲಕ ಹಣ ಸ್ವೀಕರಿಸಬಹುದು. ಇದರ ಹೊರತಾಗಿ ಈ ಆ್ಯಪ್‌ ನ ಅತಿ ಮುಖ್ಯ ಅಂಶವೆಂದರೆ ಈ ಆ್ಯಪ್‌ ಅನ್ನು ಭಾರತದ ಎಲ್ಲಾ ಪ್ರಮುಖ ಬ್ಯಾಂಕ್ ಗಳೊಂದಿಗೆ ಸಂಪರ್ಕಿಸಲಾಗಿರುವ ಕಾರಣ ಈ ಎಲ್ಲಾ ಬ್ಯಾಂಕುಗಳೊಂದಿಗೆ ನಡೆಸುವ ವ್ಯವಹಾರವನ್ನು ಸುಲಭವಾಗಿ ಆಪ್ ಮೂಲಕವೇ ನಡೆಸಬಹುದು. ಇದು ಭಾರತ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯ ಒಂದು ಭಾಗವೂ ಆಗಿದೆ. ಆದರೆ ಈ ಆ್ಯಪ್‌ ನ ಒಂದು ಪ್ರಮುಖ ಕೊರತೆ ಎಂದರೆ ಈ ಆ್ಯಪ್‌ ಮೂಲಕ ಹಣವನ್ನು ಪಾವತಿಸುವಂತೆ ಬೇಡಿಕೊಂಡು ಬರುವ ಅನಾಮಧೇಯ ಮನವಿಗಳನ್ನು ಮಾತ್ರ ತಡೆಯಲು ಸಾಧ್ಯವಿಲ್ಲ. ಇದು ಹೆಚ್ಚಿನವರಿಗೆ ಕಿರಿಕಿರಿಯಾಗುತ್ತದೆ.

Best Mobiles in India

Read more about:
English summary
Our PM's Digital India push is trying to change that. Believe it or not, there are quite some departments and ministries that have their own mobile app.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X