Home
Apps

ಮೈ ಜಿಯೋ ಆಪ್ ಆಪ್ ಡೇಟ್: ಗ್ರಾಹಕರಿಗೆ ಹೊಸ ಆಯ್ಕೆಗಳು

By Lekhaka

ರಿಲಯನ್ಸ್ ಮಾಲೀಕತ್ವದ ಜಿಯೋ ಮೈ ಜಿಯೋ ಆಪ್ ಅನ್ನು ಅಪ್ ಡೇಟ್ ಮಾಡಿದ್ದು, ಇದರಲ್ಲಿ ಗ್ರಾಹಕರಿಗೆ ಹಲವಾರು ಹೊಸ ಫೀಚರ್ ಗಳನ್ನು ಬಳಕೆಗೆ ನೀಡಲು ಮುಂದಾಗಿದೆ. ಈ ಹೊಸ ಆಪ್ ನಲ್ಲಿ ಜಿಯೋ ಬಳಕೆದಾರರು ಹೊಸದಾಗಿ ಜಿಯೋ ಮನಿ ಇಲ್ಲವೇ ಪೇಟಿಎಂ ಮೂಲಕ ನೇರವಾಗಿ ಪೇಮೆಂಟ್ ಮಾಡಬಹುದಾಗಿದೆ. ಇದರಿಂದಾಗಿ ಜಿಯೋ ಬಳಕೆದಾರರು ಬೇರೆ ಬೇರೆ ಪೇಮೆಂಟ್ ಆಪ್ ಬಳಕೆ ಮಾಡಿಕೊಳ್ಳುವುದು ತಪ್ಪುತ್ತದೆ.

ಮೈ ಜಿಯೋ ಆಪ್ ಆಪ್ ಡೇಟ್: ಗ್ರಾಹಕರಿಗೆ ಹೊಸ ಆಯ್ಕೆಗಳು

ಹೊಸದಾಗಿ ನೀಡಿರುವ ಆಪ್ ಡೇಟ್ ನಲ್ಲಿ ಮೈ ಜಿಯೋ ಬಳಕೆದಾರರು ಪೇಟಿಎಂ ಮತ್ತು ಜಿಯೋ ಮನಿಯನ್ನು ಲಿಂಕ್ ಮಾಡಿಕೊಳ್ಳಬಹುದಾಗಿದ್ದು, ಇದರ ಮೂಲಕ ಬಳಕೆದಾರರು ತಮ್ಮ ಪ್ರೀಪೇಯ್ಡ್ ಆಕೌಂಟ್ ಅನ್ನು ರಿಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಪೋಸ್ಟ್ ಪೇಯ್ಡ್ ಬಿಲ್ ಗಳನ್ನು ನೇರವಾಗಿ ಕಟ್ಟಬಹುದಾಗಿದೆ.

ಈ ಹೊಸ ಆಪ್ ಡೇಟ್ ಅನ್ನು ಜಿಯೋ ತನ್ನ ಪ್ರೀಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಬಳಕೆದಾರರಿಗೆ ಮತ್ತು ಆಂಡ್ರಾಯ್ಡ್ ಮತ್ತು ಆಪಲ್ ಬಳಕೆದಾರರಿಗೆ ನೀಡಿದೆ ಎನ್ನಲಾಗಿದೆ. ಅಲ್ಲದೇ ಈ ಹೊಸ ಆಪ್ ಜಿಯೋ ಫೈ, ಜಿಯೋ ಫೈಬರ್ ಮತ್ತು ಜಿಯೋ ನೆಟ್ವರ್ಕ್ ಗಳಲ್ಲಿ ಕಾರ್ಯನಿರ್ವಹಿಸುವಂತೆ ವಿನ್ಯಾಸವನ್ನು ಮಾಡಲಾಗಿದೆ.

ಇದಲ್ಲದೇ ಆಂಡ್ರಾಯ್ಡ್ ಬಳಕೆದಾರರು ಮೈ ಜಿಯೋ ಆಪ್ ನಲ್ಲಿ ಹಲೋ ಜಿಯೋ ವಾಯ್ಸ್ ಅಸಿಸ್ಟೆಂಟ್ ಅನ್ನು ಪಡೆದುಕೊಂಡಿದ್ದು, ಈ ಮೂಲಕ ವಾಯ್ಸ್ ಕಮೆಂಡಿಂಗ್ ನಲ್ಲಿ ಆಪ್ ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದಲ್ಲದೇ ಜಿಯೋ ಆಫರ್ ಗಳನ್ನು ಇಲ್ಲಿಯೇ ತಿಳಿಯಬಹುದಾಗಿದೆ.

ಈಗಾಗಲೇ ಹೆಚ್ಚು ಮಂದಿ ಬಳಕೆ ಮಾಡುತ್ತಿರುವ ಆಪ್ ಗಳಲ್ಲಿ ಮೈ ಜಿಯೋ ಆಪ್ ಸ್ಥಾನವನ್ನು ಪಡೆದುಕೊಂಡಿದ್ದು, ಈ ಹೊಸ ಆಯ್ಕೆಯಿಂದಾಗಿ ಇನಷ್ಟು ಜನರು ಜಿಯೋ ಸೇವೆಯನ್ನು ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

Best Mobiles in India

English summary
The latest version of the MyJio app on iOS devices will let users make payments right from their Paytm or JioMoney wallet accounts. Besides this, there are a slew of performance improvements and bug fixes as well. The MyJio app with the version number 4.0.04 lets Reliance Jio users to avail the Jio offers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+