Home
Apps

ಹೊಸ ಆಧಾರ್ ಮೊಬೈಲ್ ಆ್ಯಪ್‌ ಬಿಡುಗಡೆ: ಇನ್ನು ಭೌತಿಕ ಕಾರ್ಡ್, ಫೋಟೋಕಾಪಿ ಬೇಕಿಲ್ಲ!

ಏಪ್ರಿಲ್ 8 ರಂದು ದೆಹಲಿಯಲ್ಲಿ ನಡೆದ ಆಧಾರ್ ಸಂವಾದದ ಮೂರನೇ ಆವೃತ್ತಿಯು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ದಿಂದ ಮಹತ್ವದ ಘೋಷಣೆಗೆ ಸಾಕ್ಷಿಯಾಯಿತು. ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು ಆಧಾರ್ ಬಳಕೆದಾರರ ಗೌಪ್ಯತೆ, ಡಿಜಿಟಲ್ ಅನುಕೂಲತೆ ಮತ್ತು ವೈಯಕ್ತಿಕ ಡೇಟಾದ ಮೇಲಿನ ನಿಯಂತ್ರಣವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಹೊಚ್ಚ ಹೊಸ ಆಧಾರ್ ಮೊಬೈಲ್ ಅಪ್ಲಿಕೇಶನ್ ಅನ್ನು ಅನಾವರಣಗೊಳಿಸಿದ್ದು, ಈ ಹೊಸ ಆಧಾರ್ ಮೊಬೈಲ್ ಅಪ್ಲಿಕೇಶನ್ ಡಿಜಿಟಲ್ ಅನುಕೂಲತೆ ಮತ್ತು ಬಳಕೆದಾರರ ನಿಯಂತ್ರಣಕ್ಕೆ ಹೊಸ ಹೆಜ್ಜೆಯಾಗಲಿದೆ ಎಂದು ತಿಳಿಸಿದೆ.

ಹೊಸದಾಗಿ ಬಿಡುಗಡೆಯಾದ ಆಧಾರ್ ಅಪ್ಲಿಕೇಶನ್ ಬಳಕೆದಾರರಿಗೆ ತಮ್ಮ ಆಧಾರ್ ವಿವರಗಳನ್ನು ಡಿಜಿಟಲ್ ರೂಪದಲ್ಲಿ ಸುಲಭವಾಗಿ ಪರಿಶೀಲಿಸಲು ಮತ್ತು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದರರ್ಥ ಇನ್ನು ಮುಂದೆ ಭೌತಿಕ ಆಧಾರ್ ಕಾರ್ಡ್‌ಗಳನ್ನು ಕೊಂಡೊಯ್ಯುವ ಅಥವಾ ಅವುಗಳ ನಕಲು ಪ್ರತಿಗಳನ್ನು ನೀಡುವ ಅಗತ್ಯವಿರುವುದಿಲ್ಲ. ಈ ಅಪ್ಲಿಕೇಶನ್‌ನ ಪ್ರಮುಖ ವೈಶಿಷ್ಟ್ಯವೆಂದರೆ, ಆಧಾರ್ ಸಂಖ್ಯೆ ಹೊಂದಿರುವ ವ್ಯಕ್ತಿಗಳು ವಿವಿಧ ಸೇವೆಗಳನ್ನು ಬಳಸುವಾಗ ತಾವು ಎಷ್ಟು ಮಾಹಿತಿಯನ್ನು ಹಂಚಿಕೊಳ್ಳಲು ಬಯಸುತ್ತಾರೆ ಎಂಬುದನ್ನು ನಿಖರವಾಗಿ ಆಯ್ಕೆ ಮಾಡುವ ಸಾಮರ್ಥ್ಯವನ್ನು ಒದಗಿಸುತ್ತದೆ.

ನೀವು ಪ್ರಯಾಣಿಸುತ್ತಿರುವಾಗ ಅಥವಾ ಆಕಸ್ಮಿಕವಾಗಿ ನಿಮ್ಮ ಆಧಾರ್ ಕಾರ್ಡ್ ಅನ್ನು ಮನೆಯಲ್ಲಿ ಮರೆತುಬಿಟ್ಟರೆ, ಈ ಹೊಸ ಅಪ್ಲಿಕೇಶನ್ ನಿಮಗೆ ನೆರವಾಗಲಿದೆ. ಇದು ಮುಖ ಗುರುತಿಸುವಿಕೆ ಆಧಾರಿತ ದೃಢೀಕರಣ ವ್ಯವಸ್ಥೆಯನ್ನು ಒಳಗೊಂಡಿದೆ. ಇದರ ಮೂಲಕ ಬಳಕೆದಾರರು ತಮ್ಮ ಮೊಬೈಲ್ ಫೋನ್ ಅನ್ನು ಬಳಸಿಕೊಂಡು ತಮ್ಮ ಗುರುತನ್ನು ಸುರಕ್ಷಿತವಾಗಿ ದೃಢೀಕರಿಸಬಹುದು. ಇಷ್ಟೇ ಅಲ್ಲದೆ, ಇದು ಬಳಕೆದಾರರಿಗೆ ತಾವು ಎಷ್ಟು ಮಾಹಿತಿಯನ್ನು ಹಂಚಿಕೊಳ್ಳಲು ಬಯಸುತ್ತಾರೆ ಎಂಬುದನ್ನು ನಿಯಂತ್ರಿಸಲು ಅನುಮತಿಸುವುದರಿಂದ, ಬಳಕೆದಾರರು ತಮ್ಮ ವೈಯಕ್ತಿಕ ಡೇಟಾದ ಮೇಲೆ ಹೆಚ್ಚಿನ ನಿಯಂತ್ರಣವನ್ನು ನೀಡುತ್ತದೆ.

ಇಷ್ಟೇ ಅಲ್ಲದೆ, ಯುಐಡಿಎಐನ ತಂತ್ರಜ್ಞಾನ ಕೇಂದ್ರವು ಈ ಅಪ್ಲಿಕೇಶನ್‌ನ ಇತರ ಪ್ರಮುಖ ವೈಶಿಷ್ಟ್ಯಗಳನ್ನು ಸಹ ಪ್ರದರ್ಶಿಸಿತು. ಅವುಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಅಥವಾ ವಿನಂತಿಸುವ ಅಪ್ಲಿಕೇಶನ್ ಮೂಲಕ ಸುರಕ್ಷಿತ ಡಿಜಿಟಲ್ ಪರಿಶೀಲನೆಯು ಗಮನಾರ್ಹವಾಗಿದೆ. ಈ ವೈಶಿಷ್ಟ್ಯಗಳು ಭೌತಿಕ ದಾಖಲೆಗಳನ್ನು ಸಲ್ಲಿಸುವ ತೊಂದರೆಗಳನ್ನು ತಪ್ಪಿಸುವುದರ ಜೊತೆಗೆ ಡೇಟಾ ಗೌಪ್ಯತೆಯನ್ನು ಖಚಿತಪಡಿಸುತ್ತವೆ. ಪ್ರಸ್ತುತ, ಈ ಅಪ್ಲಿಕೇಶನ್‌ನ ಆರಂಭಿಕ ಆವೃತ್ತಿಯನ್ನು ಆಧಾರ್ ಸಂವಾದ್ ಕಾರ್ಯಕ್ರಮದಲ್ಲಿ ನೋಂದಾಯಿಸಿಕೊಂಡ ಎಲ್ಲಾ ಆಯ್ದ ಬಳಕೆದಾರರ ಗುಂಪಿಗೆ ಮಾತ್ರ ಬಿಡುಗಡೆ ಮಾಡಲಾಗಿದೆ.

ಹೊಸ ಆಧಾರ್ ಮೊಬೈಲ್ ಆ್ಯಪ್‌ ಬಿಡುಗಡೆ: ಇನ್ನು ಭೌತಿಕ ಕಾರ್ಡ್, ಫೋಟೋಕಾಪಿ ಬೇಕಿಲ್ಲ!

ಈ ಆರಂಭಿಕ ಹಂತವು ಬಳಕೆದಾರರು ಮತ್ತು ಪರಿಸರ ವ್ಯವಸ್ಥೆಯ ಪಾಲುದಾರರಿಂದ ಪ್ರತಿಕ್ರಿಯೆಯನ್ನು ಪಡೆಯಲು ಸಹಾಯ ಮಾಡುತ್ತದೆ. ಈ ಪ್ರತಿಕ್ರಿಯೆಯ ಆಧಾರದ ಮೇಲೆ ಅಪ್ಲಿಕೇಶನ್ ಅನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು ಮತ್ತು ಪರಿಷ್ಕರಿಸಲಾಗುವುದು. ಮುಂಬರುವ ದಿನಗಳಲ್ಲಿ ಈ ಉಪಯುಕ್ತ ಅಪ್ಲಿಕೇಶನ್ ಅನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲು ಯುಐಡಿಎಐ ಯೋಜಿಸಿದೆ. ಈ ಹೊಸ ಆಧಾರ್ ಮೊಬೈಲ್ ಅಪ್ಲಿಕೇಶನ್ ಡಿಜಿಟಲ್ ಇಂಡಿಯಾದ ಕಡೆಗೆ ಒಂದು ಮಹತ್ವದ ಹೆಜ್ಜೆಯಾಗಿದ್ದು, ನಾಗರಿಕರಿಗೆ ಅನುಕೂಲತೆ ಮತ್ತು ಭದ್ರತೆಯನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಆಧಾರ್ ಸಂವಾದದ ಮೂರನೇ ಆವೃತ್ತಿಯ ಕಾರ್ಯಕ್ರಮವು,ನಾವೀನ್ಯತೆ, ಸೇರ್ಪಡೆ ಮತ್ತು ಏಕೀಕರಣದ ಧ್ಯೇಯವಾಕ್ಯದೊಂದಿಗೆ ಉತ್ತಮ ಆಡಳಿತ ಮತ್ತು ನಾಗರಿಕರಿಗೆ ಪ್ರಯೋಜನಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ತಲುಪಿಸಲು ಆಧಾರ್ ಹೇಗೆ ಪ್ರಮುಖ ಸಾಧನವಾಗಿ ಬೆಳೆಯುತ್ತಿದೆ ಎಂಬುದನ್ನು ಸ್ಪಷ್ಟಪಡಿಸಿತು. ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಈ ನವೀನ ವೈಶಿಷ್ಟ್ಯದ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಹೀಗೆ ಹೇಳಿದ್ದಾರೆ, "ಹೊಸ ಆಧಾರ್ ಅಪ್ಲಿಕೇಶನ್, ಮೊಬೈಲ್ ಅಪ್ಲಿಕೇಶನ್ ಮೂಲಕ ಫೇಸ್ ಐಡಿ ದೃಢೀಕರಣ. ಭೌತಿಕ ಕಾರ್ಡ್ ಇಲ್ಲ, ಫೋಟೋಕಾಪಿಗಳಿಲ್ಲ."!

Best Mobiles in India

English summary
Union IT Minister Ashwini Vaishnaw announced on the social media platform X that the new Aadhaar app features Face ID authentication through a mobile app, eliminating the need for a physical card or photocopies.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+