Subscribe to Gizbot

ನೆಟ್‌ವರ್ಕ್ ಇಲ್ಲದೆಯೂ ಸಂಪರ್ಕ ಸಾಧಿಸಲಿದೆ ಈ 'ಆಪ್!!

Posted By:

ಮೊಬೈಲ್ ನೆಟ್‌ವರ್ಕ್ ಇಲ್ಲದೆಯೂ ಸಂಪರ್ಕ ಸಾಧಿಸಬಹುದಾದ ಹೊಸ ಆಪ್‌ ಅನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.! ನೆಟ್‌ವರ್ಕ್ ಇಲ್ಲದ ಸಂದರ್ಭದಲ್ಲಿ ತುರ್ತು ಸಂದೇಶ ಕಳುಹಿಸಲು ಈ ಆಪ್‌ ನೆರವಾಗಲಿದ್ದು, ವಿಜ್ಞಾನ ಪ್ರಪಂಚದಲ್ಲಿ ಮತ್ತೊಮದು ಮೈಲಿಗಲ್ಲು ಇದಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.!!

ನೆಟ್‌ವರ್ಕ್ ಇರದ ಸ್ಥಳಗಳಲ್ಲಿ ದಾರಿ ತಪ್ಪುವ, ಅಪಘಾತ ಮತ್ತು ನೈಸರ್ಗಿಕ ವಿಕೋಪದಂತಹ ಘಟನೆಗಳು ಜರುಗಿದಾಗ ತುರ್ತು ಸಂದೇಶ ಕಳುಹಿಸಲು ಈ ಆಪ್‌ ಸಹಕಾರಿಯಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.! ಹಾಗಾದರೆ, ಆಪ್‌ನಲ್ಲಿರುವ ತಂತ್ರಜ್ಞಾನ ಏನು? ಆಪ್ ರೂಪಿಸಿದ ವಿಜ್ಞಾನಿಗಳು ಯಾರು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಲವು ಕಿ.ಮೀಟರ್ ಸಿಗ್ನಲ್‌!!

ಹಲವು ಕಿ.ಮೀಟರ್ ಸಿಗ್ನಲ್‌!!

ಮೊಬೈಲ್‌ ನೆಟ್‌ವರ್ಕ್‌ ಇಲ್ಲದ ಪ್ರದೇಶದಲ್ಲಿ ಸಂಪರ್ಕ ಸಾಧಿಸಲು ಅಭಿವೃದ್ಧಿಪಡಿಸಿರುವ ಈ ಆಪ್ ಹಲವು ಕಿಲೋ ಮೀಟರ್‌ಗಳ ದೂರದವರೆಗೂ ವೈ-ಫೈ ಸಿಗ್ನಲ್‌ ಹೊರಸೂಸುತ್ತದೆ. ಹಾಗಾಗಿ, ಯಾವುದೇ ಆಪ್‌ ಅನ್ನು ನೆಟ್‌ವರ್ಕ್ ಇಲ್ಲದೆಯೂ ಸಂಪರ್ಕ ಸಾಧಿಸಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.!!

ಆಪ್ ರೂಪಿಸಿದ ವಿಜ್ಞಾನಿಗಳು?

ಆಪ್ ರೂಪಿಸಿದ ವಿಜ್ಞಾನಿಗಳು?

ನೆಟ್‌ವರ್ಕ್‌ ಇಲ್ಲದ ಪ್ರದೇಶದಲ್ಲಿ ಸಂಪರ್ಕ ಸಾಧಿಸುವ ಈ ಆಪ್‌ ಅನ್ನು ಸ್ಪೇನ್‌ನ ಯುನಿವರ್ಸಿಡಾಡ್ ಡೆ ಅಲಿಕೇಂಟ್‌ನ (ಯುಎ) ವಿಜ್ಞಾನಿಗಳು ರೂಪಿಸಿದ್ದಾರೆ. ತೊಂದರೆ ಉಂಟಾದ ಸಂದರ್ಭದಲ್ಲಿ ಸಹಾಯ ಪಡೆಯಲು ಈ ಆಪ್ ಅತ್ಯಂತ ಅನುಕೂಲವಾಗುತ್ತದೆ ಎಂದು ಆಪ್‌ ರೂಪಿಸಿರುವ ಏಂಜೆಲ್‌ ಬರ್ನಾ ತಿಳಿಸಿದ್ದಾರೆ.!!

ಆಪ್ ಹೇಗೆ ಕಾರ್ಯನಿರ್ವಹಿಸುತ್ತದೆ?

ಆಪ್ ಹೇಗೆ ಕಾರ್ಯನಿರ್ವಹಿಸುತ್ತದೆ?

ಅಪಾಯದಲ್ಲಿರುವ ವ್ಯಕ್ತಿಯ ಸ್ಮಾರ್ಟ್‌ಫೋನ್‌ಗೆ ಸಂಪರ್ಕ ಕಲ್ಪಿಸುವ ಆಂಟೆನಾ ಹೊಂದಿರುವ ಉಪಕರಣ ಒಂದು ರಕ್ಷಣಾ ತಂಡದ ಬಳಿ ಇರುತ್ತದೆ. ಈ ಆಪ್‌ ಅನ್ನು ಯಾವುದೇ ಸ್ಮಾರ್ಟ್‌ಫೋನ್‌ಗೆ ಡೌನ್‌ಲೋಡ್ ಮಾಡಿಕೊಂಡು ಆಪ್ ಚಾಲನೆ ಮಾಡಿದ್ದರೆ. ಆ ಉಪಕರಣ ಆಪ್‌ ಸ್ಥಾನವನ್ನು ಗುರುತಿಸುತ್ತದೆ.!!

ನಿಖರ ಮಾಹಿತಿ ಸಿಗುತ್ತದೆ.!!

ನಿಖರ ಮಾಹಿತಿ ಸಿಗುತ್ತದೆ.!!

ನೆಟ್‌ವರ್ಕ್‌ ಇಲ್ಲದೆ ತೊಂದರೆಯಲ್ಲಿ ಸಿಲುಕಿರುವ ವ್ಯಕ್ತಿಯ ಸ್ಥಳದ ನಿಖರ ಮಾಹಿತಿ ಈ ಆಪ್‌ನಿಂದ ದೊರೆಯುತ್ತದೆ. ಸಂಪರ್ಕ ಸಾಧ್ಯವಾದ ನಂತರ 'ನನಗೆ ಸಹಾಯ ಬೇಕಿದೆ' ಎನ್ನುವ ಸಂದರ್ಭಾನುಸಾರ ಸಂದೇಶ ಕಳುಹಿಸಿದರೆ ರಕ್ಷಣೆಯವರನ್ನು ನಿಖರವಾಗಿ ಆಪ್ ಗುರುತ್ತನ್ನು ತಲುಪುತ್ತಾರೆ.!!

ಆಪ್‌ ಬಿಡುಗಡೆ ಯಾವಾಗ?

ಆಪ್‌ ಬಿಡುಗಡೆ ಯಾವಾಗ?

ಪ್ರಾಯೋಗಿಕ ಪರೀಕ್ಷೆಯಲ್ಲಿ ಇದರ ವ್ಯಾಪ್ತಿ 2-3 ಕಿಲೋ ಮೀಟರ್‌ ಇದ್ದು, ಇದನ್ನು ಇನ್ನಷ್ಟು ವಿಸ್ತರಿಸಬಹುದು. ಜತೆಗೆ ಕಡಿಮೆ ದರದಲ್ಲೂ ಇದು ಲಭ್ಯವಾಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಆದರೆ, ಈ ಆಪ್‌ ಹೆಸರೇನು ಮತ್ತು ಬಿಡುಗಡೆ ಯಾವಾಗ ಎಂಬುದನ್ನು ಮಾತ್ರ ಬಹಿರಂಗಪಡಿಸಿಲ್ಲ.!!

ಓದಿರಿ:ಬಿಟ್‌ಕಾಯಿನ್ ಖರೀದಿಸದಿರಿ ಎಂದು ಎಚ್ಚರಿಸಿದ ಕೇಂದ್ರ ಸರ್ಕಾರ!!..ಏನೆಲ್ಲಾ ಕಾರಣಕ್ಕಾಗಿ ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Researchers in Spain have developed a new smartphone app, that lets one detect location of their loved ones during calamities, even if mobile networks are down.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot