ವಾಟ್ಸ್ ಆಪ್ ನಲ್ಲಿ ಹೊಸ ಬಗ್ – ಪರಿಹಾರ ಹೇಗಿದೆ ಗೊತ್ತೆ?

By Gizbot Bureau
|

ವಾಟ್ಸ್ ಆಪ್ ಅತೀ ಹೆಚ್ಚು ಬಳಕೆಯಲ್ಲಿರುವ ಚಾಟ್ ಆಪ್ ಆಗಿದೆ. ಆದರೆ ಈ ಪ್ರಸಿದ್ಧತೆಯು ಬಗ್ ಗಳಿಂದ ಈ ಫ್ಲ್ಯಾಟ್ ಫಾರ್ಮ್ ನ್ನು ದೂರವಿಟ್ಟಿಲ್ಲ ಮತ್ತು ಭದ್ರತೆಗೆ ಸಂಬಂಧಿಸಿದ ಸಮಸ್ಯೆಗಳು ಇತ್ತೀಚೆಗಿನ ದಿನಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ಆಂಡ್ರಾಯ್ಡ್ ಫ್ಲ್ಯಾಟ್ ಫಾರ್ಮ್ ನಲ್ಲಿ ಅತೀ ಹೆಚ್ಚಾಗಿದೆ.

ಸೈಬರ್ ಸೆಕ್ಯುರಿಟಿ ಅಧ್ಯಯನಕಾರರಿಂದ ಪತ್ತೆ:

ಸೈಬರ್ ಸೆಕ್ಯುರಿಟಿ ಅಧ್ಯಯನಕಾರರಿಂದ ಪತ್ತೆ:

ಸೈಬರ್ ಸೆಕ್ಯುರಿಟಿಯ ಅಧ್ಯಯನಕಾರರು ಚೆಕ್ ಪಾಯಿಂಟ್ ನಲ್ಲಿ ಕೆಲವು ದುರ್ಬಲತೆಗಳನ್ನು ಆಪ್ ನಲ್ಲಿ ಗುರುತಿಸಿದ್ದಾರೆ. ಹಂಚಿಕೆಯಾಗಿರುವ ಗ್ರೂಪಿನಲ್ಲಿ ಹಲವು ಫೋನ್ ಗಳಲ್ಲಿ ಆಪ್ ಕ್ರ್ಯಾಷ್ ಮಾಡುವ ಸಾಧ್ಯತೆಯ ಬಗ್ಗೆ ತಿಳಿಸಿದ್ದಾರೆ.

ಅನ್ ಇನ್ಸ್ಟಾಲ್ ಮಾಡಿ ಇನ್ಸ್ಟಾಲ್ ಮಾಡಬೇಕು:

ಅನ್ ಇನ್ಸ್ಟಾಲ್ ಮಾಡಿ ಇನ್ಸ್ಟಾಲ್ ಮಾಡಬೇಕು:

ಅಧ್ಯಯನಕಾರರು ಪತ್ತೆ ಹಚ್ಚಿರುವಂತೆ ಈ ದುರ್ಬಲತೆಯು ಲೂಪ್ ನಲ್ಲಿ ಆಪ್ ನ ಕ್ರ್ಯಾಷ್ ಗೆ ಕಾರಣವಾಗಬಹುದು ಮತ್ತು ಆಪ್ ನ್ನು ಪುನಃ ಇನ್ಸ್ಟಾಲ್ ಮಾಡುವುದಕ್ಕೆ ಒತ್ತಾಯಿಸಬಹುದು ಆದರೆ ಚಾಟ್ ಹಿಸ್ಟರಿಯು ಶಾಶ್ವತವಾಗಿ ಡಿಲೀಟ್ ಆಗಿರುತ್ತದೆ.ವಾಟ್ಸ್ ಆಪ್ ಗರಿಷ್ಟ 256 ಸದಸ್ಯರನ್ನು ಒಂದು ಗುಂಪಿನಲ್ಲಿ ಸೇರಿಸುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಈ ದೊಡ್ಡ ಸಂಖ್ಯೆಯ ಗುಂಪಿನ ಸದಸ್ಯರನ್ನು ಸ್ಲೈಡ್ ಮಾಡುವುದು ಕಷ್ಟದ ಕೆಲಸವೇನಲ್ಲ.

ಸದ್ಯ ಚಾಟ್ ಕಂಪೆನಿಯಿಂದ ಫಿಕ್ಸ್ ಮಾಡಲಾಗಿರುವ ದುರ್ಬಲತೆಯು ದುರುದ್ದೇಶಪೂರಿತ ಹ್ಯಾಕರ್ ಗಳಿಂದ ವಾಟ್ಸ್ ಆಪ್ ವೆಬ್ ಮತ್ತು ಡೀಬಗ್ಗಿಂಗ್ ಟೂಲ್ ಗಳಾಗಿರುವ ಉದಾಹರಣೆಗೆ ಕ್ರೋಮ್ ನ ಡೆವ್ ಟೂಲ್ ನಿಂದ ನಿರ್ಧಿಷ್ಟ ಮೆಸೇಜ್ ನ ಪ್ಯಾರಾಮೀಟರ್ ಗೆ ಪ್ರವೇಶ ಪಡೆಯಲು ಮತ್ತು ಲೂಪ್ ನಲ್ಲಿ ಆಪ್ ನ್ನು ಕ್ರ್ಯಾಷ್ ಮಾಡಲು ಬಳಕೆ ಮಾಡುವ ಸಾಧ್ಯತೆ ಇದೆ.

ಗ್ರೂಪ್ ಕ್ರ್ಯಾಷ್ ಮತ್ತು ಎಲ್ಲಾ ಮೆಸೇಜ್ ಗಳು ಡಿಲೀಟ್:

ಗ್ರೂಪ್ ಕ್ರ್ಯಾಷ್ ಮತ್ತು ಎಲ್ಲಾ ಮೆಸೇಜ್ ಗಳು ಡಿಲೀಟ್:

" ವಾಟ್ಸ್ ಆಪ್ ನಲ್ಲಿ ಹಲವು ಪ್ರಮುಖವಾಗ ಗುಂಪುಗಳಿದ್ದು ಅದರಲ್ಲಿ ಮಹತ್ವಪೂರ್ಣವಾದ ಅಂಶಗಳು ಇರಬಹುದು.ಒಂದು ವೇಳೆ ಅಟ್ಯಾಕ್ ಮಾಡುವವರು ಇದೇ ಟೆಕ್ನಿಕ್ ನ್ನು ಬಳಸಿಕೊಂಡು ಮತ್ತು ಯಾವುದೇ ಒಂದು ಗ್ರೂಪ್ ನ್ನು ಕ್ರ್ಯಾಷ್ ಮಾಡಿದರೂ ಕೂಡ ಎಲ್ಲಾ ಚಾಟ್ ಹಿಸ್ಟರಿಗಳು ಕೂಡ ಕಳೆದುಹೋಗುತ್ತವೆ ಮತ್ತು ಮುಂದಿನ ಸಂವಹನ ಅಸಾಧ್ಯವಾಗುತ್ತದೆ. ಈ ದುರ್ಬಲತೆಯು ಬಹಳ ಪ್ರಮುಖ ವಿಚಾರವಾಗಿದೆ ಯಾಕೆಂದರೆ ವಾಟ್ಸ್ ಆಪೇ ಹೆಚ್ಚಿನ ಮಂದಿನ ಪ್ರಮುಖ ಸಂವಹನ ಸೇವೆಗಳಲ್ಲಿ ಇದೀಗ ಒಂದೆನಿಸಿದೆ. ನಮ್ಮ ದೈನಂದಿನ ಚಟುವಟಿಕೆಯ ಮೇಲೆ ಈ ಬಗ್ ಬಹಳ ಪ್ರಮುಖವಾದ ಪರಿಣಾಮವನ್ನು ಉಂಟು ಮಾಡುತ್ತದೆ.

ಈ ಸಮಸ್ಯೆಯಿಂದ ಹೊರಬರಬೇಕಾದಲ್ಲಿ ವಾಟ್ಸ್ ಆಪ್ ನ್ನು ಬಳಕೆದಾರರು ಅನ್ ಇನ್ಸ್ಟಾಲ್ ಮಾಡಬೇಕಾಗುತ್ತದೆ ಮತ್ತು ಪುನಃ ಇನ್ಸ್ಟಾ ಮಾಡಬೇಕಾಗುತ್ತದೆ ಮತ್ತು ಈ ರೀತಿ ದುರುದ್ದೇಶಪೂರಿತವಾಗಿರುವ ಗುಂಪಿನ್ನು ರಿಮೂವ್ ಮಾಡಬೇಕಾಗುತ್ತದೆ ಎಂದು ಸೆಕ್ಯುರಿಟಿ ಅಧ್ಯಯನಕಾರರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.

ಸಮಸ್ಯೆಗೆ ಪರಿಹಾರ:

ಸಮಸ್ಯೆಗೆ ಪರಿಹಾರ:

ವಾಟ್ಸ್ ಆಪ್ ಈ ಬಗ್ ನ್ನು ಆಂಡ್ರಾಯ್ಡ್ ವರ್ಷನ್ ನಂಬರ್ 2.19.58 ರಿಂದಲೇ ಪರಿಹರಿಸಿದೆ. "ಚೆಕ್ ಪಾಯಿಂಟ್ ನಿಂದ ಜವಾಬ್ದಾರಿಯುತವಾಗಿ ಸಲ್ಲಿಸಲಾಗಿರುವ ನಮ್ಮ ಬಗ್ ಬೌಂಟಿ ಪ್ರೋಗ್ರಾಮ್ ಗೆ ಧನ್ಯವಾದಗಳು. ಸೆಪ್ಟೆಂಬರ್ ಮಧ್ಯದಲ್ಲೇ ನಮ್ಮ ಎಲ್ಲಾ ವಾಟ್ಸ್ ಆಪ್ ಬಳಕೆದಾರರಿಗೆ ನಾವು ಬಹಳ ಬೇಗನೆ ಈ ಸಮಸ್ಯೆಯನ್ನು ನಿವಾರಿಸಿದ್ದೇವೆ.

ಅನಗತ್ಯ ಗುಂಪುಗಳಿಗೆ ಜನರನ್ನು ಸೇವಿಸುವುದನ್ನು ತಪ್ಪಿಸುವುದಕ್ಕಾಗಿ ಜೊತೆಗೆ ನಂಬಿಕೆಗೆ ಅರ್ಹವಲ್ಲದ ಪಕ್ಷಗಳ ಜೊತೆಗೆ ಸಂವಹನ ನಡೆಸುವುದನ್ನು ತಪ್ಪಿಸುವ ಉದ್ದೇಶದಿಂದ ಜನರಿಗೆ ಅನುಕೂಲವಾಗುವಂತಹ ಕಂಟ್ರೋಲ್ ಗಳನ್ನು ನಾವು ವಾಟ್ಸ್ ಆಪ್ ಗೆ ಸೇರಿಸಿದ್ದೇವೆ" ಎಂದು ವಾಟ್ಸ್ ಆಪ್ ನ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಎಹ್ರೆನ್ ಕ್ರೆಟ್ ಹೇಳಿದ್ದಾರೆ.

ಸೆಪ್ಟೆಂಬರ್ ನಂತರ ಯಾರು ತಮ್ಮ ವಾಟ್ಸ್ ಆಪ್ ನ್ನು ಅಪ್ ಡೇಟ್ ಮಾಡಿಲ್ಲವೋ ಅವರು ತಮ್ಮ ವಾಟ್ಸ್ ಆಪ್ ನ್ನು ಅಪ್ ಡೇಟ್ ಮಾಡಿಕೊಳ್ಳಲು ಸೂಚಿಸಲಾಗಿದ್ದು ಆ ಮೂಲಕ ಹ್ಯಾಕರ್ ಗಳಿಂದ ತೊಂದರೆಗೆ ಸಿಲುಕುವುದನ್ನು ತಪ್ಪಿಸಿಕೊಳ್ಳಲು ಹೇಳಲಾಗಿದೆ. ಚಾಟ್ ಪ್ರೈವೆಸಿ ಡಾಟ್ ಮತ್ತು ಆಪ್ ಕ್ರ್ಯಾಷ್ ಆಗುವಿಕೆಯನ್ನು ಆಪ್ ಅಪ್ ಡೇಟ್ ಮಾಡಿಕೊಳ್ಳುವ ಮೂಲಕ ತಡೆಯಬಹುದು.

Most Read Articles
Best Mobiles in India

English summary
New Bug On WhatsApp Might Crash Group Chats And Delete Chat History

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X