ಮುಖ ಗುರುತಿಸುವ ಹೊಸ ತಂತ್ರಜ್ಞಾನ: 4 ದಿನದಲ್ಲಿ 3000 ಮಕ್ಕಳ ರಕ್ಷಣೆ..!

|

ಕಳೆದ ಹೋಗಿದ್ದ ಮಕ್ಕಳ ಸುಮಾರು 60000 ಫೋಟೋಗಳ ಡಾಟಾಬೇಸನ್ನು ಇಟ್ಟುಕೊಂಡು, ಸುಮಾರು 45000 ಅನಾಥ ಮಕ್ಕಳ ಫೋಟೋಗಳೊಂದಿಗೆ ಹೋಲಿಸಿ ನೋಡಲಾಯಿತು. ಇದರ ಪರಿಣಾಮವಾಗಿ ಒಂದೇ ಒಂದು ಸಿಟಿಯಲ್ಲಿ ಕೇವಲ ನಾಲ್ಕೇ ದಿನದಲ್ಲಿ ಸುಮಾರು 2930 ಮಕ್ಕಳನ್ನು ಗುರುತಿಸಿ ಅವರ ಪೋಷಕರಿಗೆ ಒಪ್ಪಿಸುವ ಕಾರ್ಯ ನೆರವೇರಿದೆ.

ಮುಖ ಗುರುತಿಸುವ ಹೊಸ ತಂತ್ರಜ್ಞಾನ: 4 ದಿನದಲ್ಲಿ 3000 ಮಕ್ಕಳ ರಕ್ಷಣೆ..!

ಒಂದು ಬಿಲಿಯನ್ ಜನಸಂಖ್ಯೆ ಹೊಂದಿರುವ ಭಾರತವು ಪ್ರಪಂಚದಲ್ಲೇ ಜನಸಂಖ್ಯೆಯಲ್ಲಿ ಅತೀ ಹೆಚ್ಚಿರುವ ದ್ವಿತೀಯ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ಹಾಗಾಗಿ ಹಲವಾರು ಸಾಮಾಜಿಕ ಸಮಸ್ಯೆಗಳನ್ನೂ ತನ್ನೊಡಲೊಳಗೆ ಇಟ್ಟುಕೊಂಡಿದೆ. ಅದರಲ್ಲೊಂದು ಮಕ್ಕಳು ಕಾಣೆಯಾಗುವುದು. ಸಿಟಿ, ಪಟ್ಟಣ, ಗಲ್ಲಿ, ಹಳ್ಳಿ, ಸ್ಲಂ ಗಳು ಸೇರಿದಂತೆ ಹಲವಾರು ಪ್ರದೇಶದಿಂದ ಮಕ್ಕಳು ಕಾಣೆಯಾಗುತ್ತಾರೆ. ಆದರೆ ಈ ಬಂದಿರುವ ಹೊಸ ತಂತ್ರಜ್ಞಾನವು ಮಕ್ಕಳ ಮುಖವನ್ನು ಹೋಲಿಸಿ ನೋಡುವುದರ ಮೂಲಕ ಸುಮಾರು,3000 ಕಳೆದು ಹೋದ ಮಕ್ಕಳನ್ನು ಹುಡುಕುವಂತೆ ಮಾಡಿದೆ.

ಸದ್ಯ ಭಾರತದಲ್ಲಿ 200,000 ಮಕ್ಕಳು ಕಳೆದು ಹೋಗಿರುವ ದಾಖಲಾತಿ ಇದ್ದು, ಸುಮಾರು 90000ಮಕ್ಕಳು ಬೇರೆಬೇರೆ ಅನಾಥಾಶ್ರಮಗಳಲ್ಲಿ ಆಶ್ರಯ ಪಡೆದಿರುತ್ತಾರೆ. ಬಚ್ ಪನ್ ಬಚಾವೋ ಆಂದೋಲನದ ಪ್ರಮುಖರಾಗಿರುವ ಭುವನ್ ರಿಬು ಸಹಾಯ ಹಸ್ತದಿಂದಾಗಿ ಈ ತಂತ್ರಜ್ಞಾನವನ್ನು ಕಂಡುಹಿಡಿಯಲಾಗಿದೆ.

ಕೈಯಾರೆ ಹೀಗೆ ಅಷ್ಟೊಂದು ಫೋಟೋಗಳನ್ನು ಹೊಂದಿಸಿ ನೋಡುವುದು ಅಸಾಧ್ಯದ ಕೆಲಸ. ರಿಬು ಅವರ ಸಂಸ್ಥೆಯು ಈ ನಿಟ್ಟಿನಲ್ಲಿ ಸಾಕಷ್ಟು ಪರಿಶ್ರಮ ಪಟ್ಟಿದ್ದು, ಕಳೆದು ಹೋಗಿರುವ ಮಕ್ಕಳ ಬಗ್ಗೆ ಇಂಡಿಯನ್ ನ್ಯಾಷನಲ್ ಡಾಟಾಬೇಸ್ ಬಳಸಿ, ಎಲ್ಲಾ ರೆಕಾರ್ಡ್ ಗಳನ್ನು ಶೋಧಿಸಿ ಇಂತದ್ದೊಂದು ಟೆಕ್ನಾಲಜಿಯನ್ನು ಶೋಧಿಸಲಾಗಿದೆ.

ಈ ಫೇಶಿಯಲ್ ರೆಕಗ್ನಿಷನ್ ಸಾಫ್ಟವೇರ್ ಅಥವಾ ಮುಖವನ್ನು ಗುರುತಿಸುವ ತಂತ್ರಜ್ಞಾನದ ಸದ್ಭಳಕೆಯನ್ನು ಅರಿತ ನಂತರ ರಿಬು ಅವರ ಸಂಸ್ಥೆ ಪೋಲೀಸರಿಗೆ ಈ ಸಾಫ್ಟವೇರ್ ಬಳಸಲು ಅವಕಾಶ ನೀಡಬೇಕು ಎಂದು ದೆಹಲಿ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಾಡಿತ್ತು. ಸಾವಿರಕ್ಕೂ ಹೆಚ್ಚು ಫೋಟೋಗಳನ್ನು ಆ ಮೂಲಕ ಕಂಪ್ಯಾರ್ ಮಾಡಿ ನೋಡಲು ಸಾಧ್ಯವಾಗುತ್ತದೆ.

ಇಂತಹ ಪ್ರಯತ್ನಗಳು ಭಾರತಕ್ಕೆ ಅಗತ್ಯವಾಗಿ ಬೇಕಾಗಿದೆ. ಆದರೆ ಇಂತಹ ಸಣ್ಣ ಪ್ರಯತ್ನವೊಂದು ದೇಶದ ದೊಡ್ಡ ಸಮಸ್ಯೆಯೊಂದನ್ನು ಸಂಪೂರ್ಣವಾಗಿ ಬಗೆಹರಿಸಲಾರದು ಅನ್ನುವುದು ನಿಜವೇ. ಯಾಕೆಂದರೆ ಮಕ್ಕಳು ಕಾಣೆಯಾಗುವುದರ ಹಿಂದೆ ಕಾಣದ ಕೈಗಳ ಕೈವಾಡವೂ ಇರಬಹುದು ಮತ್ತು ಅದೊಂದು ಜಠಿಲ ಸಮಸ್ಯೆಯೂ ಹೌದು. ಅಷ್ಟೇ ಅಲ್ಲ,ಪ್ರತಿ ಮಗುವಿನ ಕಾಣೆಯಾಗುವಿಕೆಯ ಹಿಂದೆ ಬೇರೆಬೇರೆ ಕಾರಣಗಳಿರುತ್ತವೆ. ಕೆಲವು ಮಕ್ಕಳು ಬಾಲಕಾರ್ಮಿಕ ವ್ಯವಸ್ಥೆಗೆ ತಳ್ಳಲ್ಪಟ್ಟರೆ, ಮತ್ತೆ ಕೆಲವು ಮಕ್ಕಳು ವೇಶ್ಯಾವಾಟಿಕೆಗೆ ತಳ್ಳಲ್ಪಡುತ್ತಿದ್ದಾರೆ. ಕೆಲವು ಮಕ್ಕಳ ಮನೆಯ ಒಳಗಿನ ಸಮಸ್ಯೆಯಿಂದಾಗಿ ಓಡಿ ಬಂದಿರುತ್ತಾರೆ. ಅಷ್ಟೇ ಕುಟುಂಬದವರೇ ಮಕ್ಕಳನ್ನು ಮಾರಾಟ ಮಾಡಿರುವ ದಾಖಲಾತಿಗಳೂ ಇವೆ., ಆದರೆ ಕೆಲವೇ ಕೆಲವು ಸಂದರ್ಬದಲ್ಲಿ ಅಸಾಧಾರಣವಾದ ಘಟನೆಗಳೂ ನಡೆಯಬಹುದು. ಸಾರೋ ಬ್ರಾರಲಿ (Saroo Brierley ) ಬದುಕು “Lion – The Long Road for Home”, ಅನ್ನೋ ಚಲನಚಿತ್ರವಾಗಿ 2016ರಲ್ಲಿ ತೆರೆಗೆ ಬಂದಿತ್ತು. ಆದರೆ ಇಂತಹ ಸಂದರ್ಬದಲ್ಲಿ ಮಕ್ಕಳು ತಮ್ಮನ್ನು ತಾವು ಕಳೆದುಕೊಂಡಿರುತ್ತಾರೆ ಅನ್ನೋದು ಮಾತ್ರ ದುರದೃಷ್ಟಕರ.

ಆದರೆ ನವದೆಹಲಿಯಲ್ಲಿ ಪೋಲೀಸರು ಈ ತಂತ್ರಜ್ಞಾನದ ಮೂಲಕ ಯಶಸ್ಸು ಗಳಿಸಿದ ನಂತರ ಉಳಿದ ಭಾಗದ ಪೋಲೀಸರು ಕೂಡ ಇದನ್ನೇ ಬಳಸಿ ಕಳೆದು ಹೋಗಿರುವ ಮಕ್ಕಳನ್ನು ಹುಡುಕುವ ಪ್ರಯತ್ನ ನಡೆಸಬಹುದು. ಅಷ್ಟೇ ಅಲ್ಲ, ಆ ಮೂಲಕ ಈ ತಂತ್ರಜ್ಞಾನವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ನೆರವಾಗುತ್ತೆ.


ಸಾರೋ ಕಥೆಯೇನೆಂದರೆ ಆತ ಚಿಕ್ಕವನಿದ್ದಾಗಲೇ ತನ್ನ ಅಣ್ಣನನ್ನು ಒಂದು ರೈಲ್ವೇ ಸ್ಟೇಷನ್ನಿನಲ್ಲಿ ಕಳೆದುಕೊಂಡು ಬಿಡುತ್ತಾನೆ. ಸಣ್ಣ ವಯಸ್ಸಲ್ಲಿ ಆತ ತನ್ನೂರಿನ ಹೆಸರನ್ನು ಹೇಳಲು ಇಲ್ಲವೇ ತನ್ನವರ ಬಗ್ಗೆ ಹೇಳಲು ಶಕ್ತನಾಗಿರುವುದಿಲ್ಲ ಮತ್ತು ಮತ್ತೆ ತನ್ನ ಮನೆಯನ್ನು ಹುಡುಕಿಕೊಂಡು ಹೋಗಲು ಆತನಿಗೆ ತಿಳಿದಿರುವುದಿಲ್ಲ.

ಸುಮಾರು 25 ವರ್ಷದ ನಂತರ ಆತ ತನ್ನ ತಾಯಿಯ ಬಗ್ಗೆ ತಿಳಿದುಕೊಳ್ಳುತ್ತಾನೆ. ಸಂತೋಷದಿಂದಲೇ ಕಥೆ ಪೂರ್ಣಗೊಳ್ಳುತ್ತದೆ ಆದರೆ, ಇದೊಂದು ಸಾಮಾನ್ಯ ಸಮಸ್ಯೆಯಾಗಿ ಭಾರತದಲ್ಲಿ ಕಾಣಿಸಿಕೊಂಡಿದೆ.

ಈ ನಿಟ್ಟಿನಲ್ಲಿ ಈ ಹೊಸ ತಂತ್ರಜ್ಞಾನವು ಮುಖವನ್ನು ಹೋಲಿಸಿ ಪತ್ತೆ ಹಚ್ಚುವುದರಿಂದ, ಇಂತಹ ಅಪರಾಧಗಳನ್ನು ತಡೆಯುವಲ್ಲಿ ಸಾಕಷ್ಟು ನೆರವಾಗುವ ನಿರೀಕ್ಷೆ ಇದೆ. ಆ ನಿಟ್ಟಿನಲ್ಲ ಟ್ರ್ಯಾಕ್ ರೆಕಾರ್ಡ್ ಗಳು, ಮತ್ತು ಪೋಲೀಸರ ಶ್ರಮವು ಸಹಾಯಕ್ಕೆ ಬರಲಿ ಅನ್ನುವುದೇ ಆಶಯ.

ಈ ಬಗ್ಗೆ ನಿಮ್ಮ ಅಭಿಪ್ರಾಯಗಳೇನು ಅನ್ನುವುದನ್ನು ತಿಳಿಸಲು ಮರೆಯಬೇಡಿ.

Best Mobiles in India

English summary
New Facial Recognition System Helps Trace 3000 Missing Children In Just 4 Days. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X