ಹೊಸ ಫೀಚರ್ ಗಳು ವಾಟ್ಸ್ ಆಪ್ ಗ್ರೂಪ್ ನ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ

By Gizbot Bureau
|

ಭಾರತದ ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ವಾರಗಳು ಮಾತ್ರವೇ ಬಾಕಿ ಉಳಿದಿದೆ ಮತ್ತು ಫೇಸ್ ಬುಕ್ ಮಾಲೀಕತ್ವದ ವಾಟ್ಸ್ ಆಪ್ ಬಳಕೆದಾರರಿಂದ ಹರಿಯಲ್ಪಡುವ ಫೇಕ್ ನ್ಯೂಸ್ ಗಳ ಹಾವಳಿಯಿಂದ ತನಗೆ ಕೆಟ್ಟ ಹೆಸರು ಬರುವುದನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಲ್ಲಾ ಕ್ರಮಗಳನ್ನು ಕೂಡ ಕೈಗೊಂಡಿದೆ.

ಚೆಕ್ ಪಾಯಿಂಟ್ ಟಿಪ್:

ಚೆಕ್ ಪಾಯಿಂಟ್ ಟಿಪ್:

ಇತ್ತೀಚೆಗೆ ಕಂಪೆನಿಯು ಹೊಸದಾಗಿ ಚೆಕ್ ಪಾಯಿಂಟ್ ಟಿಪ್ ಲೈನ್ ಫೀಚರ್ ನ್ನು ಬಿಡಗಡೆಗೊಳಿಸಿದೆ.ಇದು ಫೇಕ್ ನ್ಯೂಸ್ ಗಳನ್ನು ಪುನಃ ಪರಿಶೀಲಿಸುವುದಕ್ಕೆ ನೆರವು ನೀಡುತ್ತದೆ. ಇದೀಗ ವಾಟ್ಸ್ ಆಪ್ ಗುಂಪುಗಳಿಗೆ ಮತ್ತೊಂದು ಫೀಚರ್ ಬಿಡುಗಡೆಗೊಳಿಸಿರುವ ವಾಟ್ಸ್ ಆಪ್ ಹೊಸ ಪ್ರೈವೆಸಿ ಸೆಟ್ಟಿಂಗ್ ಗೆ ಅವಕಾಶ ನೀಡುತ್ತಿದೆ.

ನಿಮ್ಮದೇ ನಿರ್ಧಾರ:

ನಿಮ್ಮದೇ ನಿರ್ಧಾರ:

ಹೊಸ ರೀತಿಯ ಇನ್ವೈಟ್ ಸಿಸ್ಟಮ್ ನ್ನು ಪರಿಚಯಿಸಿದ್ದು ಯಾರು ನಿಮ್ಮನ್ನ ಹೊಸ ಗ್ರೂಪಿಗೆ ಸೇರಿಸುವುದಕ್ಕೆ ಅವಕಾಶ ಹೊಂದಿರುತ್ತಾರೆ ಎಂಬುದನ್ನು ನೀವೇ ನಿರ್ಧರಿಸುವುದಕ್ಕೆ ಇದರಿಂದ ಸಾಧ್ಯವಾಗುತ್ತದೆ.

ಫೀಚರ್ ಅನೇಬಲ್ ಮಾಡುವಿಕೆ:

ಫೀಚರ್ ಅನೇಬಲ್ ಮಾಡುವಿಕೆ:

ಹೊಸ ಪ್ರೈವೆಸಿ ಸೆಟ್ಟಿಂಗ್ ಫೀಚರ್ ನ್ನು ಅನೇಬಲ್ ಮಾಡುವುದಕ್ಕಾಗಿ ನೀವೇನು ಮಾಡಬೇಕು ಗೊತ್ತಾ? ಮೊದಲಿಗೆ ಆಂಡ್ರಾಯ್ಡ್ / ಐಓಎಸ್ ನ ಸೆಟ್ಟಿಂಗ್ಸ್ ಪೇಜ್ ಗೆ ತೆರಳಿ ಮತ್ತು ಅಕೌಂಟ್> ಪ್ರೆವೆಸಿ> ಗ್ರೂಪ್ಸ್ ನ್ನು ನೇವಿಗೇಟ್ ಮಾಡಿ ಮತ್ತು ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದು ಆಯ್ಕೆಯನ್ನು ಸೆಲೆಕ್ಟ್ ಮಾಡಿ- ನೋಬಡಿ, ಮೈ ಕಾಂಟ್ಯಾಕ್ಟ್ಸ್ ಅಥವಾ ಎವರಿವನ್. ಇದರ ಅರ್ಥ ಏನು ಇಲ್ಲಿದೆ ನೋಡಿ.

ಮೂರು ಆಯ್ಕೆಗಳ ವಿವರ:

ಮೂರು ಆಯ್ಕೆಗಳ ವಿವರ:

ನೋಬಡಿ(ಯಾರೂ ಅಲ್ಲ): ನಿಮಗೆ ಆಮಂತ್ರಿಸಲ್ಪಡುವ ಎಲ್ಲಾ ಗ್ರೂಪಿಗೂ ಕೂ ನಿಮ್ಮ ಅಪ್ರೂವಲ್ ಬೇಕಾಗುತ್ತದೆ.

ಮೈ ಕಾಂಟ್ಯಾಕ್ಟ್ಸ್: ನಿಮ್ಮ ವಾಟ್ಸ್ ಆಪ್ ಕಾಂಟ್ಯಾಕ್ಟ್ ಪಟ್ಟಿಯಲ್ಲಿರುವ ವ್ಯಕ್ತಿಗಳು ಮಾತ್ರ ನಿಮ್ಮನ್ನ ಗ್ರೂಪಿಗೆ ಸೇರಿಸುವುದಕ್ಕೆ ಅವಕಾಶ ಹೊಂದಿರುತ್ತಾರೆ.

ಎವರಿಬಡಿ(ಎಲ್ಲರೂ):ವಾಟ್ಸ್ ಆಪ್ ನಂಬರ್ ನಲ್ಲಿ ಇರುವ ಯಾರು ಬೇಕಿದ್ದರೂ ಕೂಡ ನಿಮ್ಮನ್ನ ಗ್ರೂಪಿಗೆ ಸೇರಿಸುವುದಕ್ಕೆ ಅನುಮತಿ ಹೊಂದಿರುತ್ತಾರೆ.

ಮೂರು ದಿನಗಳ ಅವಕಾಶ:

ಮೂರು ದಿನಗಳ ಅವಕಾಶ:

ಮೊದಲನೇ ಕೇಸ್ ನಲ್ಲಿ ಯಾವುದೇ ವ್ಯಕ್ತಿ ಒಂದು ಗ್ರೂಪಿಗೆ ನಿಮ್ಮನ್ನ ಸೇರಿಸುವುದಾದರೆ ಮೊದಲು ಅವರು ಪ್ರೈವೇಟ್ ಮೆಸೇಜ್ ನ್ನು ಇಂಡಿಯ್ಯೂಜಲ್ (ವಯಕ್ತಿಕ) ಚಾಟ್ ನಲ್ಲಿ ನಿಮಗೆ ಕಳುಹಿಸಬೇಕಾಗುತ್ತದೆ. ನಿಮ್ಮ ಅನುಮತಿಯ ನಂತರ ಮಾತ್ರವೇ ನೀವು ಗುಂಪಿಗೆ ಸೇರಿಸಲ್ಪಡುತ್ತೀರಿ. ಈ ಆಮಂತ್ರಣವನ್ನು ಒಪ್ಪಿಕೊಳ್ಳುವುದಕ್ಕೆ ನಿಮಗೆ ಮೂರು ದಿನಗಳ ಸಮಯಾವಕಾಶವಿರುತ್ತದೆ. ಒಂದು ವೇಳೆ ಮೂರು ದಿನಗಳ ಒಳಗೆ ನೀವು ಒಪ್ಪದೇ ಇದ್ದರೆ ಆ ಆಮಂತ್ರಣವು ಎಕ್ಸ್ಪೈರ್(ಅವಧಿ ಮುಗಿಯುತ್ತದೆ) ಆಗುತ್ತದೆ.

ಉದ್ದೇಶ:

ಗ್ರೂಪ್ ಮೆಸೇಜ್ ಗಳಲ್ಲಿ ಹೆಚ್ಚಿನ ಕಂಟ್ರೋಲ್ ನ್ನು ಬಳಕೆದಾರರಿಗೆ ನೀಡುವ ಉದ್ದೇಶದಿಂದ ಈ ವೈಶಿಷ್ಟ್ಯತೆಯನ್ನು ಜಾರಿಗೆ ತರಲಾಗಿದೆ ಎಂದು ಕಂಪೆನಿಯು ಹೇಳಿದೆ.ಇಂದಿನಿಂದಲೇ ಈ ವೈಶಿಷ್ಟ್ಯತೆಯು ಜಾರಿಗೆ ಬರುತ್ತದೆ ಅಪ್ ಡೇಟ್ ನ ಅಂಗವಾಗಿ ವಿಶ್ವದಾದ್ಯಂತ ಈ ಫೀಚರ್ ನ್ನು ಎಲ್ಲಾ ವಾಟ್ಸ್ ಆಪ್ ಬಳಕೆದಾರರಿಗೆ ಬಿಡುಗಡೆಗೊಳಿಸಲಾಗುತ್ತದೆ.

ಫೇಕ್ ನ್ಯೂಸ್ ಗೆ ತಡೆ:

ಫೇಕ್ ನ್ಯೂಸ್ ಗಳ ತಡೆಗಾಗಿ ಮತ್ತು ಗ್ರೂಪ್ ನಲ್ಲಿ ಕಳುಹಿಸಲಾಗಿರುವ ಸುಳ್ಳು ಸುದ್ದಿಯ ಅಥವಾ ಸ್ಪ್ಯಾಮ್ ನ ಭಾಗವಾಗುವುದನ್ನು ತಡೆಯುವುದಕ್ಕಾಗಿ ವಾಟ್ಸ್ ಆಪ್ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅದರಲ್ಲಿ ಪ್ರಮುಖವಾಗಿರುವ ಹಂತ 5 ಚಾಟ್ ಗಳಿಗೆ ಮಾತ್ರವೇ ಒಮ್ಮೆಲೆ ಫಾರ್ವರ್ಡ್ ಮೆಸೇಜ್ ನ್ನು ಕಳುಹಿಸುವುದಕ್ಕೆ ಅವಕಾಶ ನೀಡಿರುವುದಾಗಿದೆ.

Best Mobiles in India

Read more about:
English summary
New feature makes WhatsApp Groups less annoying, here's how it works

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X