ವಾಟ್ಸ್ಆಪ್ ಬಳಕೆದಾರರೇ ಎಚ್ಚರ!..ಈ ಒಂದು ತಪ್ಪು ಮಾಡಿದರೂ ಜೈಲು ಗ್ಯಾರಂಟಿ!!

|

ಭಾರತದಲ್ಲಿ ವಾಟ್ಸ್ಆಪ್ ಏಕೆ ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ ಎಂಬುದು ಹಲವರ ಪ್ರಶ್ನೆಯಾಗಿದ್ದರೆ, ಭಾರತೀಯರು ಏಕೆ ವಾಟ್ಸ್ಆಪ್ ಅನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಟೆಕ್ ತಜ್ಞರು ಪ್ರಶ್ನಿಸುತ್ತಾರೆ. ಆದರೆ, ಇಲ್ಲಿ ಯಾರದ್ದು ಸರಿ? ಯಾರದ್ದು ತಪ್ಪು ಎನ್ನುವುದಕ್ಕಿಂತಲೂ ಮುಖ್ಯವಾಗಿ ವಾಟ್ಸ್ಆಪ್‌ನಿಂದ ಯಾರಿಗೂ ಯಾವ ಅಪಾಯ ಕೂಡ ಎದುರಾಗದೇ ಇದ್ದರೆ ಸಾಕು ಎನ್ನುತ್ತಿದ್ದಾರೆ ಸಾರ್ವಜನಿಕರು.

ಇಂದಿನ ಯುಗದಲ್ಲಿ ವಾಟ್ಸ್ಆಪ್ ಜನರ ಸಂವಹನವನ್ನು ಸರಳಗೊಳಿಸಿದೆಯಾದರೂ, ಇತ್ತೀಚಿಗೆ ತಪ್ಪು ಸಂದೇಶಗಳು, ಸುಳ್ಳು ಸುದ್ದಿಗಳನ್ನು ಹರಡುವಿಕೆ ಸಮಸ್ಯೆ ವಾಟ್ಸ್‌ಆಪ್‌ನಲ್ಲಿ ಅಧಿಕಗೊಂಡಿದೆ. ಇದರಿಂದ ಹಲವು ಸಮಸ್ಯೆಗಳು ಎದುರಾಗಿವೆ. ಹಾಗಾಗಿಯೇ, ವಾಟ್ಸ್ಆಪ್ ಮೂಲಕ ತಪ್ಪು ಮಾಹಿತಿ ಅಥವಾ ಕೆಟ್ಟ ಸಂದೇಶ ಇತ್ಯಾದಿಗಳ ವಿರುದ್ಧ ವಾಟ್ಸ್ಆಪ್ ಸಂಸ್ಥೆ ಮತ್ತು ಭಾರತ ಸರ್ಕಾರಗಳು ಸೇರಿ ಸಮರವನ್ನು ಸಾರಿವೆ.

ವಾಟ್ಸ್ಆಪ್ ಬಳಕೆದಾರರೇ ಎಚ್ಚರ!..ಈ ಒಂದು ತಪ್ಪು ಮಾಡಿದರೂ ಜೈಲು ಗ್ಯಾರಂಟಿ!!

ನಾವು ಬಳಸುವ ವಾಟ್ಸ್ಆಪ್‌ನಲ್ಲಿನ ಎಲ್ಲಾ ಮೆಸೇಜ್‌ಗಳು ಎನ್ಕ್ರಿಪ್ಟ್ ಆಗಿರುತ್ತದೆ ನಿಜ. ಆದರೆ, ಒಂದು ವೇಳೆ ಪೋಲೀಸರಿಗೆ ಇದರ ಅಗತ್ಯತೆ ಬಿದ್ದರೆ ಅದನ್ನು ಕಾನೂನಿಗೆ ತೋರಿಸಲು ಕೂಡ ವಾಟ್ಸ್ ಆಪ್ ಮುಂದಾಗುತ್ತದೆ ಎಂಬ ವಿಚಾರ ಹೆಚ್ಚಿನ ವಾಟ್ಸ್ ಆಪ್ ಬಳಕೆದಾರರಿಗೆ ತಿಳಿದಿರಲಿಕ್ಕಿಲ್ಲ. ಹಾಗಾಗಿ, ಇಂದಿನ ಲೇಖನದಲ್ಲಿ ವಾಟ್ಸ್ಆಪ್‌ನಲ್ಲಿ ಯಾವೆಲ್ಲ ಕೃತ್ಯಗಳನ್ನು ನಡೆಸುವಂತಿಲ್ಲ ಎಂಬ ಮುಖ್ಯ ಅಂಶಗಳನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಯಾವುದೇ ನಿರ್ದಿಷ್ಟ ಕಾನೂನುಗಳಿಲ್ಲ.

ಯಾವುದೇ ನಿರ್ದಿಷ್ಟ ಕಾನೂನುಗಳಿಲ್ಲ.

ವಾಟ್ಸ್ಆಪ್‌ಗಾಗಿ ದೇಶದಲ್ಲಿ ಯಾವುದೇ ನಿರ್ದಿಷ್ಟ ಕಾನೂನುಗಳಿಲ್ಲ. ಆದರೆ, ಇನ್ಫರ್ಮೇಷನ್ ಟೆಕ್ನಾಲಜಿ ಆಕ್ಟ್-200 ದ ಪ್ರಕಾರ ಈ ಕೆಳಗೆ ತಿಳಿಸಿರುವ ಯಾವುದೇ ಕೃತ್ಯದಲ್ಲಿ ವಾಟ್ಸ್ ಆಪ್ ಬಳಕೆದಾರ ತೊಡಗಿದ್ದರೆ ಅಂತಹವರನ್ನು ಅರೆಸ್ಟ್ ಮಾಡುವುದಕ್ಕೆ ಪೋಲೀಸರಿಗೆ ಅವಕಾಶವಿರುತ್ತದೆ. ಇದಕ್ಕೆ ವಾಟ್ಸ್ಆಪ್ ಕೂಡ ಸಹಕರಿಸುತ್ತದೆ ಎಂಬುದು ನಿಮಗೆ ತಿಳಿದಿರಲಿ.

ಅಗತ್ಯತೆ ಬಿದ್ದರೆ ನಿಮ್ಮೆಲ್ಲಾ ಮಾಹಿತಿ!

ಅಗತ್ಯತೆ ಬಿದ್ದರೆ ನಿಮ್ಮೆಲ್ಲಾ ಮಾಹಿತಿ!

ಪ್ರತಿ ಬಳಕೆದಾರರ ಮೆಟಾ ಡಾಟಾವನ್ನು ಕಂಪೆನಿಯು ಕಲೆಕ್ಟ್ ಮಾಡುತ್ತದೆ ಮತ್ತು ಇದನ್ನು ಕಾನೂನು ಅಗತ್ಯತೆ ಬಿದ್ದಾಗ ಕಾನೂನಿಗೆ ತೋರಿಸಲು ಕೂಡ ವಾಟ್ಸ್ ಆಪ್ ಮುಂದಾಗುತ್ತದೆ. ನಿಮ್ಮ ಹೆಸರು, ಐಪಿ ಅಡ್ರೆಸ್, ಮೊಬೈಲ್ ನಂಬರ್, ಸ್ಥಳ, ಮೊಬೈಲ್ ನೆಟ್‌ವರ್ಕ್, ಮೊಬೈಲ್ ಹ್ಯಾಂಡ್ ಸೆಟ್ ಟೈಪ್ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ವಾಟ್ಸ್ಆಪ್ ಪೊಲೀಸರಿಗೆ ನೀಡುತ್ತದೆ.

ಹಿಂಸಾಚಾರಕ್ಕೆ ಪ್ರೇರಣೆ ನೀಡುವಂತಿಲ್ಲ

ಹಿಂಸಾಚಾರಕ್ಕೆ ಪ್ರೇರಣೆ ನೀಡುವಂತಿಲ್ಲ

ವಾಟ್ಸ್ಆಪ್‌ನಲ್ಲಿ ಸುಳ್ಳು ಸುದ್ದಿಗಳನ್ನು ಹರಡುವುದು ಅಥವಾ ಹಿಂಸಾಚಾರ, ಗಲಭೆಗೆ ಕಾರಣವಾಗುವ ಸೂಕ್ಷ್ಮ ವಿಷಯಗಳ ಬಗ್ಗೆ ನಕಲಿ ಸುದ್ದಿಗಳನ್ನು ಅಥವಾ ವದಂತಿಗಳನ್ನು ಹರಡುವಂತಿಲ್ಲ. ಮತ್ತು ವಾಟ್ಸ್ಆಪ್ ಗ್ರೂಪ್ ನಲ್ಲಿ ಗ್ರೂಪಿನ ಯಾವುದೇ ಸದಸ್ಯ ಬೇಜವಾಬ್ದಾರಿಯುತವಾಗಿ ವರ್ತಿಸಿದರೆ ಗ್ರೂಪ್ ಅಡ್ಮಿನ್ ಅನ್ನು ಬಂಧಿಸಬಹುದು ಎಂಬುದನ್ನು ನೀವು ತಿಳಿದಿದ್ದರೆ ಒಳಿತು.

ವೇಶ್ಯಾವಾಟಿಕೆ ಮತ್ತು ದೌರ್ಜನ್ಯಕ್ಕೆ ಅವಕಾಶವಿಲ್ಲ

ವೇಶ್ಯಾವಾಟಿಕೆ ಮತ್ತು ದೌರ್ಜನ್ಯಕ್ಕೆ ಅವಕಾಶವಿಲ್ಲ

ವಾಟ್ಸ್ ಆಪ್ ನಲ್ಲಿ ಯಾವುದೇ ರೀತಿಯ ದೇಹದ ವ್ಯಾಪಾರ ಮತ್ತು ವೇಶ್ಯಾವಾಟಿಕೆಯನ್ನು ಉತ್ತೇಜಿಸುವ ಕೆಲಸ ಮಾಡುವಂತಿಲ್ಲ.ಮಾರ್ಫಿಡ್ ಮಾಡಿರುವ ಯಾವುದೇ ಪ್ರಮುಖ ವ್ಯಕ್ತಿಯ ಫೋಟೋವನ್ನು ವಾಟ್ಸ್ಆಪ್ ನಲ್ಲಿ ಹಂಚುವಂತಿಲ್ಲ. ವಾಟ್ಸ್ಆಪ್ ನಲ್ಲಿ ಮಹಿಳಾ ದೌರ್ಜನ್ಯ ನಡೆಸುವಂತಿಲ್ಲ. ಹೀಗೆ ಮಾಡಿದರೆ ನೇರವಾಗಿ ನಿಮ್ಮನ್ನು ಪೊಲೀಸರು ಬಂಧಿಸಬಹುದು.

ದ್ವೇಷ ಪೂರಿತ ಸಂದೇಶಕ್ಕೆ ಬೆಲೆ ತೆರಬೇಕು!

ದ್ವೇಷ ಪೂರಿತ ಸಂದೇಶಕ್ಕೆ ಬೆಲೆ ತೆರಬೇಕು!

ಅವಮಾನ ಮಾಡುವ ಉದ್ದೇಶದಿಂದ ಯಾವುದೇ ಧರ್ಮ ಅಥವಾ ಪೂಜಾ ಸ್ಥಳಕ್ಕೆ ಸಂಬಂಧಿಸಿದ ದ್ವೇಷ ಪೂರಿತ ಸಂದೇಶಗಳನ್ನು ಕಳುಹಿಸುವಂತಿಲ್ಲ. ಜನರ ಭಾವನೆಗಳನ್ನು ಕೆರಳಿಸುವಂತಹ ಅಕ್ರಮವಾಗಿ ಚಿತ್ರಿಸಿದ ಯಾವುದೇ ಜನರ ವೀಡಿಯೋವನ್ನು ಹಂಚುವಂತಿಲ್ಲ. ಇತರರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಕಂಟೆಂಟ್ ಅನ್ನು ಯಾರೂ ಶೇರ್ ಕೂಡ ಮಾಡುವಂತಿಲ್ಲ.

ಫೇಕ್ ಅಕೌಂಟ್ ತೆರೆಯುವಂತಿಲ್ಲ!

ಫೇಕ್ ಅಕೌಂಟ್ ತೆರೆಯುವಂತಿಲ್ಲ!

ಬೇರೆ ಯಾವುದೋ ವ್ಯಕ್ತಿಯ ಹೆಸರಿನಲ್ಲಿ ವಾಟ್ಸ್ಆಪ್ ಅಕೌಂಟ್ ಅನ್ನು ತೆರೆದು ಬಳಸುವಂತಿಲ್ಲ. ವಾಟ್ಸ್ ಆಪ್ ಮೂಲಕ ಬ್ಯಾನ್ ಆಗಿರುವ ಯಾವುದೇ ವಸ್ತು ಅಥವಾ ಔಷಧವನ್ನು ಪ್ರಮೋಟ್ ಮಾಡುವುದು ಅಥವಾ ಮಾರಾಟ ಮಾಡುವಂತಿಲ್ಲ. ಇತರರ ಹೆಸರನ್ನು ಲಾಭಕ್ಕಾದರೂ ಉಪಯೋಗಿಸಿಕೊಂಡರೂ ಸಹ ಅದನ್ನು ಕ್ರಿಮಿನಲ್ ಪ್ರಕರಣ ಎಂದು ಪರಿಗಣಿಸಲಾಗುತ್ತದೆ.

Best Mobiles in India

English summary
Social messaging platform WhatsApp announced new rules in India to counter the rise of lynchings tied to messaged rumors. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X