ಮಧುಮೇಹಿಗಳಿಗೆ ಸಹಾಯಕಾರಿ ಈ ಆಪ್..!!

Written By: Lekhaka

ಮಧುಮೇಹಿಗಳ ಸಂಖ್ಯೆಯೂ ದಿನೇ ದಿನೇ ಭಾರತದಲ್ಲಿ ಇಂದು ಹೆಚ್ಚಾಗುತ್ತಿದ್ದು, ಇದೇ ಹಿನ್ನಲೆಯಲ್ಲಿ ಮಧುಮೇಹಿಗಳ ಸಹಾಯಕ್ಕಾಗಿ ಹೊಸ ಹೊಸ ಸಂಶೋಧನೆಗಳು ನಡೆಯುತ್ತಿದೆ. ಇದೇ ಮಾದರಿಯಲ್ಲಿ ಮಧುಮೇಹವನ್ನು ಪರೀಕ್ಷೆಯನ್ನು ಮಾಡಿಕೊಳ್ಳಲು ಹೊಸ ಮಾದರಿಯ ಆಪ್ ಅನ್ನು ಬಿಡುಗಡೆ ಮಾಡಲಾಗಿದೆ.

ಮಧುಮೇಹಿಗಳಿಗೆ ಸಹಾಯಕಾರಿ ಈ ಆಪ್..!!

ಈ ಹೊಸ ಮಾದರಿಯ ಆಪ್ ಅನ್ನು ಬ್ರಿಟಿಷ್ ಸಂಶೋಧಕರು ಅಭಿವೃದ್ಧಿಪಡಿಸಿದ್ದು, ಇದು ರಕ್ತದ ಒಂದು ಹನಿಯ ರಕ್ತವನ್ನು ಬಳಸಿಕೊಳ್ಳದೆ ರಕ್ತದ ಮಾದರಿ ಮತ್ತು ಶೂಗರ್ ಲೆವಲ್ ಚೆಕ್ ಮಾಡಲಿದೆ ಎನ್ನಲಾಗಿದೆ.

ಈ ಆಪ್ ಗೆ ಎಪಿಕ್ ಹೆಲ್ತ್ ಎಂದು ಹೆಸರಿಡಲಾಗಿದೆ. ಇದು ಟೈಪ್ 2 ಮತ್ತು ಟೈಪ್ 1 ಮಧುಮೇಹಿಗಳಿಗೆ ವರದಾನವಾಗಲಿದೆ. ಈ ಆಪ್ ಬಳಸಿಕೊಂಡು ಸ್ಮಾರ್ಟ್ ಫೋನಿನ ಕ್ಯಾಮೆರಾದಲ್ಲಿ ಫಿಂಗರ್ ಟಿಪ್ ಚಿತ್ರವನ್ನು ತೆಗೆಯುವ ಮಾಲಕ ರಕ್ತ ಪರೀಕ್ಷೆ ಮಾಡಿಕೊಳ್ಳಬಹುದು.

ಇದು ಬಳಕೆದಾರರ ಹೃದಯ ಬಡಿತ, ರಕ್ತದ ಒತ್ತಡ ಮುಂತಾದ ಮಾಹಿತಿಗಳನ್ನು ನೀಡಲಿದೆ. ಈಗಾಗಲೇ ಮಧುಮೇಹಿಗಳಿಗೆ ರಕ್ತದಲ್ಲಿರುವ ಶೂಗರ್ ಪ್ರಮಾಣವನ್ನು ಅಳೆಯಲು ಇದ್ದಂತಹ ಸಾಧನಗಳಿಗೆ ಈ ಆಪ್ ಪರ್ಯಯವಾಗಲಿದೆ.

ಈಗಾಗಲೇ ಈ ಆಪ್ ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುವುದೇ ಇಲ್ಲವೇ ಎಂಬುದನ್ನು ಸುಮಾರು ಮಾರು ವರ್ಷಗಳ ಕಾಲ ಪರೀಕ್ಷೆ ನಡೆಸಲಾಗಿದೆ. ಈಗಾಗಲೇ ಆಪ್ ಅನ್ನು ಬಳಕೆಗೆ ಮುಕ್ತಗೊಳಿಸುವ ಕಾರ್ಯ ನಡೆಯುತ್ತಿದ್ದು, ವರ್ಷದ ಅಂತ್ಯದ ವೇಳೆಗೆ ಉಚಿತವಾಗಿ ಬಳಕೆಗೆ ದೊರೆಯಲಿದೆ.

Read more about:
English summary
British scientists have developed a new app that can help measure and monitor blood glucose levels without using a drop of blood.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot