ಹೊಸ ವಾಟ್ಸ್ ಆಪ್ ಫೀಚರ್ ನಿಂದ ಮುಜುಗರವಾಗುವುದನ್ನು ತಪ್ಪಿಸಿಕೊಳ್ಳಿ

By Gizbot Bureau
|

ಇನ್ಸ್ಟೆಂಟ್ ಮೆಸೇಜಿಂಗ್ ಆಪ್ ವಾಟ್ಸ್ ಆಪ್ ಹೊಸ ಫೀಚರ್ ವೊಂದನ್ನು ಬಿಡುಗಡೆಗೊಳಿಸುವುದಕ್ಕೆ ತಯಾರಿ ನಡೆಸಿದೆ. ಇತರೆ ಕಾಂಟ್ಯಾಕ್ಟ್ ಗೆ ಇಮೇಜ್ ಗಳನ್ನು ಕಳುಹಿಸುವ ಸಂದರ್ಬದಲ್ಲಿ ಬಳಕೆದಾರರಿಗೂ ಅದು ವಿಸಿಬಲ್ ಆಗುವ ಫೀಚರ್ ಇದಾಗಿದೆ.ಆ ಮೂಲಕ ಯಾರಿಗೋ ಕಳುಹಿಸಬೇಕಿದ್ದ ಮೆಸೇಜ್ ಮತ್ತ್ಯಾರಿಗೋ ತಲುಪಿ ವಾಟ್ಸ್ ಆಪ್ ನಲ್ಲಿ ಮುಜುಗರಕ್ಕೆ ಒಳಗಾಗುವುದನ್ನು ತಪ್ಪಿಸಿಕೊಳ್ಳುವುದಕ್ಕೆ ನೆರವು ನೀಡುವ ಫೀಚರ್ ನಿಮಗೆ ಲಭ್ಯವಾಗುತ್ತಿದೆ. ಈ ಹೊಸ ಫೀಚರ್ ಈಗಾಗಲೇ ವಾಟ್ಸ್ ಆಪ್ ನ ಬೇಟಾ ವರ್ಷನ್ (v2.19.173) ನಲ್ಲಿ ಲಭ್ಯವಿದೆ.

ಹೇಗೆ ಕೆಲಸ ಮಾಡುತ್ತದೆ?

ಹೇಗೆ ಕೆಲಸ ಮಾಡುತ್ತದೆ?

ಸದ್ಯ ಯಾವುದೇ ಇಮೇಜ್ ನ್ನು ವಾಟ್ಸ್ ಆಪ್ ಕಾಂಟ್ಯಾಕ್ಟ್ ಗೆ ಕಳುಹಿಸುವು ಸಂದರ್ಬದಲ್ಲಿ ರಿಸೀಪಿಯಂಟ್ ಹೆಸರನ್ನು ತೋರಿಸಲಾಗುತ್ತದೆ. ಸದ್ಯ ಇದು ವಯಕ್ತಿಕ ಮತ್ತು ಗ್ರೂಪ್ ಚಾಟ್ ಎರಡರಲ್ಲೂ ಕೂಡ ಲಭ್ಯವಿದೆ- ಅಂತಿಮ ಲುಕ್ ಪಡೆಯುವುದಕ್ಕಾಗಿ ಅಂದರೆ ಯಾರಿಗೆ ಮೆಸೇಜ್ ಅಥವಾ ಇಮೇಜ್ ಕಳುಹಿಸುತ್ತಿದ್ದಾರೋ ಆ ವ್ಯಕ್ತಿಯ ಅಂತಿಮ ಲುಕ್ ಪಡೆಯುವುದಕ್ಕಾಗಿ ಬಳಕೆದಾರರಿಗೆ ಅವಕಾಶ ನೀಡಲಾಗುತ್ತದೆ.ಖಂಡಿತ ಇದು ಸ್ವಾಗತಾರ್ಹ ಸೇರಿಸುವಿಕೆಯಾಗಿದ್ದು ವಾಟ್ಸ್ ಆಪ್ ಈಗಾಗಲೇ ಪ್ರೊಫೈಲ್ ಪಿಕ್ಚರ್ ಅಥವಾ ಗ್ರೂಪ್ ಪ್ರೊಫೈಲ್ ನ್ನು ಕ್ರಮವಾಗಿ ವಯಕ್ತಿಕ ಅಥವಾ ಗ್ರೂಪ್ ಮಾತುಕತೆಯ ಸಂದರ್ಬದಲ್ಲಿ ಮೇಲ್ಬಾಗದ ಎಡ ಕಾರ್ನರ್ ನಲ್ಲಿ ಸೆಂಡರ್ ಬಗ್ಗೆ ಅಂತಿಮವಾಗಿ ಖಾತ್ರಿ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಲಾಗುತ್ತದೆ.

ಯಾವಾಗ ನೆರವು?

ಯಾವಾಗ ನೆರವು?

ಈ ಹೊಸ ಫೀಚರ್ ಬಹಳ ಉಪಯುಕ್ತವಾಗುತ್ತದೆ ಯಾವಾಗೆಂದರೆ ಒಂದು ವೇಳೆ ಕಾಂಟ್ಯಾಕ್ಟ್ ನಲ್ಲಿ ಯಾವುದೇ ಪ್ರೊಫೈಲ್ ಪಿಕ್ಚರ್ ಅಸೈನ್ ಆಗಿಲ್ಲದೇ ಇದ್ದಲ್ಲಿ ಅಥಾ ಗ್ರೂಪ್ ಐಕಾನ್ ನಲ್ಲಿರುವ ಡಿಸ್ಪ್ಲೇ ಪಿಕ್ಚರ್ ಸಾಮಾನ್ಯವಾಗಿದ್ದಲ್ಲಿ ಇದು ಸಹಕಾರಿಯಾಗುತ್ತದೆ.

ಕೆಲವೇ ದಿನಗಳಲ್ಲಿ ಲಭ್ಯ:

ಕೆಲವೇ ದಿನಗಳಲ್ಲಿ ಲಭ್ಯ:

ಪ್ರತಿಯೊಬ್ಬ ವಾಟ್ಸ್ ಆಪ್ ಬಳಕೆದಾರರಿಗೂ ಈ ಫೀಚರ್ ಸದ್ಯದಲ್ಲೇ ಲಭ್ಯವಾಗಲಿದೆ ಯಾಕೆಂದರೆ ವಾಟ್ಸ್ ಆಪ್ ಬೇಟಾ ವರ್ಷನ್ ನಲ್ಲಿ ಈಗಾಗಲೇ ಇದು ಕಾಣಿಸಿಕೊಂಡು ಟೆಸ್ಟಿಂಗ್ ಕೆಲಸವನ್ನು ಅಂತಿಮಗೊಳಿಸುತ್ತಿದೆ.

ಇತರೆ ಎರಡು ಫೀಚರ್ ಗಳು:

ಇತರೆ ಎರಡು ಫೀಚರ್ ಗಳು:

ಇನ್ನುಳಿದಂತೆ ಎರಡು ಫೀಚರ್ ಗಳನ್ನು ಈ ವರ್ಷದ ಆರಂಭದಲ್ಲಿ ಬೇಟಾ ವರ್ಷನ್ ನಲ್ಲಿ ಬಿಡುಗಡೆಗೊಳಿಸಲಾಗಿತ್ತು.ಇತ್ತೀಚೆಗಷ್ಟೇ ಸ್ಟೇಬಲ್ ವರ್ಷನ್ v2.19.150 ನಲ್ಲಿ ಇದನ್ನು ಬಿಡುಗಡೆಗೊಳಿಸಲಾಗಿದ್ದು ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಾಗಿದೆ. ಅದುವೇ ಕಾನ್ಸಗೇಟಿವ್ ವಾಯ್ಸ್ ಮೆಸೇಜ್ ಮತ್ತು ಫಾರ್ವಡಿಂಗ್ ಮಾಹಿತಿಯು ಸದ್ಯ ವಾಟ್ಸ್ ಆಪ್ ನ ಎಲ್ಲಾ ಆಂಡ್ರಾಯ್ಡ್ ಬಳಕೆದಾರರು ಬಳಸುತ್ತಿದ್ದಾರೆ.

ಕಾನ್ಸಗೇಟಿವ್ ವಾಯ್ಸ್ ಮೆಸೇಜ್:

ಕಾನ್ಸಗೇಟಿವ್ ವಾಯ್ಸ್ ಮೆಸೇಜ್:

ಕಾನ್ಸಗೇಟಿವ್ ವಾಯ್ಸ್ ಮೆಸೇಜ್ ನಿಂದಾಗಿ ಆಂಡ್ರಾಯ್ಡ್ ಬಳಕೆದಾರರು ಪ್ರತಿಯೊಂದು ವಾಯ್ಸ್ ಮೆಸೇಜ್ ಗಳನ್ನು ಪದೇ ಪದೇ ಕ್ಲಿಕ್ಕಿಸುವ ಅಗತ್ಯವಿಲ್ಲ. ಒಂದು ವೇಳೆ ಇನ್ ಬಾಕ್ಸ್ ನಲ್ಲಿ ಒಂದಕ್ಕಿಂತ ಹೆಚ್ಚು ವಾಯ್ಸ್ ಮೆಸೇಜ್ ಗಳು ಲಭ್ಯವಿದ್ದಲ್ಲಿ ಸ್ವಯಂಚಾಲಿತವಾಗಿ ಒಂದಾದ ಮೇಲೆ ಒಂದು ವಾಯ್ಸ್ ಮೆಸೇಜ್ ಗಳು ಪ್ಲೇ ಆಗುತ್ತಾ ಸಾಗುತ್ತದೆ. ಆದರೆ ಈ ವಾಯ್ಸ್ ಮೆಸೇಜ್ ಫೀಚರ್ ಒಂದಕ್ಕಿಂತ ಹೆಚ್ಚು ವಾಯ್ಸ್ ಮೆಸೇಜ್ ಗಳು ಇನ್ ಬಾಕ್ಸ್ ನಲ್ಲಿ ಇದ್ದಾಗ ಮಾತ್ರವೇ ಅಪ್ಲಿಕೇಬಲ್ ಆಗುತ್ತದೆ.

ಫಾರ್ವಡಿಂಗ್ ಲೇಬಲ್:

ಫಾರ್ವಡಿಂಗ್ ಲೇಬಲ್:

ಎರಡನೆಯದಾಗಿ ಫಾರ್ವಡಿಂಗ್ ಲೇಬಲ್ ಮಾಹಿತಿ ಫೀಚರ್ ಬಳಕೆದಾರರಿಗೆ ಎಷ್ಟು ಬಾರಿ ಈ ಮೆಸೇಜ್ ಫಾರ್ವಡ್ ಆಗಿದೆ ಎಂಬ ಮಾಹಿತಿಯನ್ನು ನೀಡುತ್ತದೆ. ಬಳಕೆದಾರರು ಮೆಸೇಜ್ ನ್ನು ಸೆಲೆಕ್ಟ್ ಮಾಡಿ ಮತ್ತು ಬಲಭಾಗದದಲ್ಲಿ ಮೂರು ಚುಕ್ಕಿಗಳ ಐಕಾನ್ ನ್ನು ಟ್ಯಾಪ್ ಮಾಡಿ, ಇನ್ಫೋ ಸೆಲೆಕ್ಟ್ ಮಾಡಿದರೆ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ.

ಮಾಹಿತಿಗಾಗಿ ನೀವೂ ಫಾರ್ವರ್ಡ್ ಮಾಡಬೇಕು:

ಮಾಹಿತಿಗಾಗಿ ನೀವೂ ಫಾರ್ವರ್ಡ್ ಮಾಡಬೇಕು:

ಆದರೆ ಈ ಮಾಹಿತಿಯು ಸೆಂಟ್ ಮೆಸೇಜ್ ನಲ್ಲಿ ಮಾತ್ರವೇ ಲಭ್ಯವಾಗುತ್ತದೆ. ಅಂದರೆ ಯಾವುದೇ ಮೆಸೇಜ್ ಎಷ್ಟು ಬಾರಿ ಫಾರ್ವರ್ಡ್ ಆಗಿದೆ ಎಂದು ತಿಳಿಯಬೇಕಾದರೆ ನೀವು ಮೆಸೇಜ್ ನ್ನು ಫಾರ್ವಡ್ ಮಾಡಿ ಮೆಸೇಜ್ ಇನ್ಫೋಗೆ ತೆರಳಬೇಕಾಗುತ್ತದೆ.

Best Mobiles in India

Read more about:
English summary
New WhatsApp Feature Might Save You From Online Embarrassment

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X