Just In
- 8 min ago
ಶೀಘ್ರದಲ್ಲೇ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ವಿವೋ S7t ಸ್ಮಾರ್ಟ್ಫೋನ್! ವಿಶೇಷತೆ ಏನು?
- 1 day ago
ಒನ್ಪ್ಲಸ್ ಬ್ಯಾಂಡ್ ವಿಮರ್ಶೆ: ಮಿ ಬ್ಯಾಂಡ್ಗೆ ಟಾಂಗ್ ಕೊಡುವಂತಿದೆ ಈ ಬ್ಯಾಂಡ್!
- 1 day ago
ಅಗ್ಗದ ದರದಲ್ಲಿ ರಿಯಲ್ಮಿ C20 ಸ್ಮಾರ್ಟ್ಫೋನ್ ಅನಾವರಣ: ಫೀಚರ್ಸ್ ಏನು?
- 1 day ago
ಏರ್ಟೆಲ್ 449ರೂ. ಮತ್ತು ವಿ 449ರೂ. ಪ್ಲ್ಯಾನ್: ರೀಚಾರ್ಜ್ಗೆ ಯಾವುದು ಓಕೆ!
Don't Miss
- News
ಬಜೆಟ್ 2021: ಮೂಲ ಸೌಕರ್ಯ ಯೋಜನೆಗಾಗಿ ರಾಷ್ಟ್ರೀಯ ಬ್ಯಾಂಕ್ ಸ್ಥಾಪನೆ?
- Sports
ಚೇತೇಶ್ವರ ಪೂಜಾರ ಹುಟ್ಟುಹಬ್ಬ, 'ವಾಲ್2'ಗೆ ಶುಭಾಶಯಗಳ ಮಹಾಪೂರ
- Movies
ಇವತ್ತಾದರೂ ಜೈಲಿನಿಂದ ಹೊರಬರ್ತಾರಾ ನಟಿ ರಾಗಿಣಿ?
- Finance
ಬಜೆಟ್ 2021: ವಿತ್ತೀಯ ಕೊರತೆ ಜಿಡಿಪಿಯ 5ರಿಂದ 5.5 ಪರ್ಸೆಂಟ್ ಸಾಧ್ಯತೆ
- Automobiles
ಅನಾವರಣಕ್ಕೂ ಮುನ್ನ ಡೀಲರ್ಸ್ ಯಾರ್ಡ್ ತಲುಪಿದ ಟಾಟಾ ನ್ಯೂ ಜನರೇಷನ್ ಸಫಾರಿ
- Lifestyle
ಮಸಾಲೆ ಇರುವ ಆಹಾರ ತಿಂದರೆ ದೊರೆಯುವ ಪ್ರಯೋಜನಗಳಿವು
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಾಟ್ಸ್ ಆಪ್ ಗುಂಪಿಗೆ ಸೇರಿಸುವ ಮುನ್ನ ನಿಮ್ಮ ಅನುಮತಿ ಪಡೆಯುವಂತೆ ಮಾಡುವುದು ಹೇಗೆ?
ಈ ವರ್ಷ ವಾಟ್ಸ್ ಆಪ್ ಸಾಕಷ್ಟು ಹೊಸ ಹೊಸ ಫೀಚರ್ ಗಳನ್ನು ಬಿಡುಗಡೆಗೊಳಿಸಿದೆ. ಅದರಲ್ಲೂ ಪ್ರಮುಖವಾಗಿ ಬಳಕೆದಾರರ ವಯಕ್ತಿಕ ಭದ್ರತೆ ಮತ್ತು ಗೌಪ್ಯತೆಗೆ ಹೆಚ್ಚಿನ ಒತ್ತು ನೀಡಿದೆ.ಇದೀಗ ಮತ್ತೊಂದು ಬಹಳ ಪ್ರಯೋಜನಕಾರಿಯಾಗಿರುವ ಗ್ರೂಪ್ ಪ್ರೈವೆಸಿ ಫೀಚರ್ ನ್ನು ವಾಟ್ಸ್ ಆಪ್ ಹೊಸದಾಗಿ ಸೇರಿಸಿದೆ.

ಇನ್ನು ಮುಂದೆ ವಾಟ್ಸ್ ಆಪ್ ನಲ್ಲಿ ಬಳಕೆದಾರರು ತಾವು ಯಾವ ಗ್ರೂಪಿಗೆ ಸೇರಬೇಕು ಅಥವಾ ಸೇರಬಾರದು ಎಂಬುದನ್ನು ಸ್ವಯಂ ನಿರ್ಧರಿಸುವುದಕ್ಕೆ ಅವಕಾಶವಿರುತ್ತದೆ. ಕಂಡಕಂಡವರೆಲ್ಲ ನಿಮ್ಮನ್ನ ಯಾವುದೋ ವಾಟ್ಸ್ ಆಪ್ ಗ್ರೂಪಿಗೆ ಸೇರಿಸುವುದಕ್ಕೆ ಅವಕಾಶವಿರುವುದಿಲ್ಲ. ನೀವು ಯಾರಿಗೆ ಪರ್ಮಿಷನ್ ನೀಡುತ್ತೀರೋ ಅವರು ಮಾತ್ರವೇ ನಿಮ್ಮನ್ನ ಗ್ರೂಪಿಗೆ ಸೇರಿಸುವುದಕ್ಕೆ ಅರ್ಹರಾಗಿರುತ್ತದೆ.

ಇದುವರೆಗೂ ಯಾರು ಬೇಕಿದ್ದರೂ ಕಾಂಟ್ಯಾಕ್ಟ್ ನಲ್ಲಿದ್ದವರನ್ನು ವಾಟ್ಸ್ ಆಪ್ ಗುಂಪೊಂದಕ್ಕೆ ಸೇರಿಸುವುದಕ್ಕೆ ಅವಕಾಶವಿರುತ್ತಿತ್ತು. ಗ್ರೂಪಿಗೆ ಸೇರಿಸಿದ ನಂತರ ನಿಮಗೆ ಆ ಗ್ರೂಪಿನಲ್ಲಿ ಇರುವುದಕ್ಕೆ ಇಷ್ಟವಿಲ್ಲದೆ ಇದ್ದರೆ ಗ್ರೂಪಿನಿಂದ ಹೊರಬರುವುದಕ್ಕೆ ಅವಕಾಶವಿರುತ್ತಿತ್ತು. ಆದರೆ ಇನ್ನು ಮುಂದೆ ಹಾಗಲ್ಲ. ಗ್ರೂಪಿಗೆ ಸೇರಿಸುವುದಕ್ಕೆ ಮುನ್ನವೇ ನಿಮ್ಮ ಅನುಮತಿಯನ್ನು ಪಡೆಯಬೇಕಾಗುತ್ತದೆ.

ಇತ್ತೀಚೆಗಷ್ಟೇ ವಾಟ್ಸ್ ಆಪ್ ತನ್ನ ವಾಟ್ಸ್ ಆಪ್ ಗ್ರೂಪಿಗೆ ಹೆಚ್ಚಿನ ಕಂಟ್ರೋಲ್ ನೀಡುವ ಬಗ್ಗೆ ಪ್ರಕಟಿಸಿತ್ತು. ಅದೇ ರೀತಿಯಾಗಿ ಇದೀಗ ಗುಂಪಿನ ಸದಸ್ಯರನ್ನು ಆಯ್ಕೆ ಮಾಡುವಾಗ ಸದಸ್ಯರ ಅನುಮತಿ ಪಡೆದೇ ಸೇರಿಸಬೇಕಾದ ಕಡ್ಡಾಯವನ್ನು ಮಾಡುವ ವಿಶಿಷ್ಟ ಫೀಚರ್ ನ್ನು ಬಿಡುಗಡೆಗೊಳಿಸಿದೆ.
ಈ ಫೀಚರ್ ನಿಮಗೆ ವಾಟ್ಸ್ ಆಪ್ ನಲ್ಲಿ ಲಭ್ಯವಾಗಬೇಕು ಎಂದರೆ ವಾಟ್ಸ್ ಆಪ್ ನ ನೂತನ ವರ್ಷನ್ ನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಕು. ಆಂಡ್ರಾಯ್ಡ್ ನಲ್ಲಿ ವರ್ಷನ್ 2.19.308 ನಲ್ಲಿ ಮತ್ತು ಐಫೋನ್ ನಲ್ಲಿ 2.19.112 ವರ್ಷನ್ ನಲ್ಲಿ ಇದು ಲಭ್ಯವಾಗುತ್ತದೆ. ಹೊಸ ಅಪ್ ಡೇಟ್ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್ ಎರಡರಲ್ಲೂ ಕೂಡ ಲಭ್ಯವಿದೆ.

ಬಳಕೆ ಮಾಡುವುದು ಹೇಗೆ?
ಒಂದು ವೇಳೆ ನೀವು ಈ ಹೊಸ ಫೀಚರ್ ನ್ನು ಆಕ್ಟಿವೇಟ್ ಮಾಡಬೇಕು ಎಂದು ಬಯಸುತ್ತಿದ್ದರೆ ವಾಟ್ಸ್ ಆಪ್ ನಲ್ಲಿ ಗ್ರೂಪ್ ಪ್ರೈವೆಸಿ ಸೆಟ್ಟಿಂಗ್ ಕಂಟ್ರೋಲ್ ಆಯ್ಕೆಯನ್ನು ಅನೇಬಲ್ ಮಾಡಿಕೊಳ್ಳಬೇಕು,
ಮೊದಲನೆಯದಾಗಿ ಸೆಟ್ಟಿಂಗ್ಸ್ ಆಯ್ಕೆಗೆ ತೆರಳಿ ಮತ್ತು ಅಕೌಂಟ್ ನ್ನು ಟ್ಯಾಪ್ ಮಾಡಿ. ನಂತರ ಪ್ರೈವೆಸಿಯನ್ನು ಕ್ಲಿಕ್ಕಿಸಿ. ಗ್ರೂಪ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ. ಅಲ್ಲಿ ಮೂರು ಆಯ್ಕೆಗಳಿರುತ್ತದೆ "Everyone","My Contacts" ಅಥವಾ "My Contacts Except".

ನಿಮ್ಮ ಆದ್ಯತೆಯ ಅನುಸಾರ ನೀವು ಆಯ್ಕೆಯನ್ನು ಮಾಡಬಹುದು."My Contact" ಆಯ್ಕೆಯನ್ನು ಒಂದು ವೇಳೆ ನೀವು ಸೆಲೆಕ್ಟ್ ಮಾಡಿದ್ದರೆ ಕೇವಲ ನಿಮ್ಮ ಕಾಂಟ್ಯಾಕ್ಟ್ ನಲ್ಲಿ ಸೇವ್ ಆಗಿರುವ ಮಂದಿ ಮಾತ್ರವೇ ನಿಮ್ಮನ್ನ ಯಾವುದಾದರೂ ವಾಟ್ಸ್ ಆಪ್ ಗುಂಪಿಗೆ ಸೇರಿಸುವುದಕ್ಕೆ ಅವಕಾಶವಿರುತ್ತದೆ."My Contacts Except" ಎಂದರೆ ಯಾವುದೇ ಗ್ರೂಪಿಗೆ ಸೇರಿಸುವ ಮುನ್ನ ನಿಮ್ಮ ಅನುಮತಿಯನ್ನು ಪಡೆಯಬೇಕಾಗುತ್ತದೆ.
ಒಂದು ವೇಳೆ ನೀವು ಈ ಆಯ್ಕೆಯನ್ನು ಆರಿಸಿದ್ದರೆ ಯಾವುದೇ ವಾಟ್ಸ್ ಆಪ್ ನ ರ್ಯಾಂಡಮ್ ಗ್ರೂಪಿಗೆ ಒಬ್ಬ ಅಡ್ಮಿನ್ ಸುಖಾಸುಮ್ಮನೆ ನಿಮ್ಮನ್ನ ಅವರ ಗುಂಪಿಗೆ ಸೇರಿಸುವುದಕ್ಕೆ ಅವಕಾಶವಿರುವುದಿಲ್ಲ.ಅಡ್ಮಿನ್ ಆಗಿರುವ ವ್ಯಕ್ತಿ ಮೊದಲು ನಿಮಗೆ ವಯಕ್ತಿಕ ಚಾಟ್ ಮೆಸೇಜ್ ಕಳುಹಿಸಿ ಗ್ರೂಪಿಗೆ ಸೇರಿಕೊಳ್ಳುವುದಕ್ಕೆ ಬೇಡಿಕೆ ಇಡಬೇಕಾಗುತ್ತದೆ. ನಿಮಗೆ ಇಷ್ಟವಿದ್ದರೆ ಮಾತ್ರವೇ ನೀವು ಆ ಗುಂಪಿಗೆ ಸೇರಿಕೊಳ್ಳಬಹುದು. ನಿಮಗೆ ಗುಂಪಿಗೆ ಸೇರುವುದಕ್ಕೆ ಮೂರು ದಿನಗಳ ಅವಕಾಶವಿರುತ್ತದೆ. ನಂತರ ಆ ಆಮಂತ್ರಣದ ಅವಧಿ ಮುಗಿಯುತ್ತದೆ ಎಂದು ತಿಳಿಸಿದೆ ವಾಟ್ಸ್ ಆಪ್ ನ ಮಾಧ್ಯಮ ವಿವರ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190