ವೃತ್ತಿಪರ ಸಂಪರ್ಕಕ್ಕಾಗಿ ಹುಟ್ಟಿಕೊಂಡಿದೆ ಹೊಸ ‘ಬ್ಲೂಟೈ’ ಆಪ್!!
ವೈಯಕ್ತಿಕ ಜಾಲದ ಹೊರತಾಗಿ ಸೂಕ್ತ ವೃತ್ತಿಪರರನ್ನು ಹುಡುಕಿಕೊಲ್ಳುವ ಸಲುವಾಗಿ, ಮುಂಬೈನ ಬ್ಲೂ ಟೈ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು 'ಬ್ಲೂಟೈ' ಎಂಬ ವೃತ್ತಿಪರ ಸಂಪರ್ಕಗಳ ಜಾಲದ ಅಪ್ಲಿಕೇಷನ್ ಬಿಡುಗಡೆ ಮಾಡಿದೆ. ಹೊಸದಾಗಿ ಬಿಡುಗಡೆಯಾಗಿರುವ ಈ ವೃತ್ತಿಪರರ ಸಂಪರ್ಕ ಆಪ್ ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳಿಗೆ ಲಭ್ಯವಿದೆ.
ಈಗಿರುವ ಸಾಧನಗಳ ಮೂಲಕ ವೈಯಕ್ತಿಕ ಸಂಪರ್ಕ ಜಾಲವನ್ನು ಬೆಳೆಸಿಕೊಂಡು, ನಿರ್ವಹಿಸಬಹುದು. ಆದರೆ ಅದರಿಂದ ತಮ್ಮ ಸಮಸ್ಯೆಗಳಿಗೆ ಬೇಕಾದ ಪರಿಹಾರ ದೊರೆಯುವುದಿಲ್ಲ. ಹಾಗಾಗಿ, ಈ ವೇದಿಕೆಯ ಮೂಲಕ ಬಳಕೆದಾರರು ತಮ್ಮ ವೈಯಕ್ತಿಕ ಜಾಲದ ಹೊರತಾಗಿ ಸೂಕ್ತ ವೃತ್ತಿಪರರನ್ನು ಹುಡುಕಿಕೊಳ್ಳಬಹುದು ಎಂದು ಸಂಸ್ಥೆ ಹೇಳಿಕೊಂಡಿದೆ.

ಇಂದಿನ ವೃತ್ತಿಪರರಿಗೆ ಈ ಆಪ್ ಅತ್ಯವಶ್ಯಕವಾಗಿದ್ದು, ಬ್ಲೂಟೈ ಆಪ್ ಮೂಲಕ ವೃತ್ತಿಪರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದರ ಜತೆಗೆ, ಹೊಸ ವ್ಯವಹಾರಗಳ, ಉದ್ಯಮಗಳಿಗೆ ಸಂಬಂಧಿಸಿ ಮಾರ್ಗದರ್ಶವನ್ನೂ ಪಡೆಯಬಹುದು. ಸಮಾನ ಆಸಕ್ತಿ ಉಳ್ಳವರ ಮಧ್ಯೆ ಸಂಪರ್ಕ ಏರ್ಪಟ್ಟು ವೃತ್ತಿಯ ಅಭಿವೃದ್ಧಿಗೆ ಇದು ಸಹಕಾರಿ ಎಂದು ಬ್ಲೂ ಟೈ ಗ್ಲೋಬಲ್ ತಿಳಿಸಿದೆ.

ನಿರ್ದಿಷ್ಟ ಕೌಶಲ, ಸಾಫ್ಟ್‌ವೇರ್ ಜ್ಞಾನ ಮತ್ತು ವೃತ್ತಿಪರತೆ ಸರ್ಟಿಫಿಕೇಟ್ ಉಳ್ಳವರು ಇಲ್ಲಿ ಉದ್ಯೋಗ ಹುಡುಕಿಕೊಳ್ಳಬಹುದು ಅಥವಾ ಉದ್ಯೋಗದಾತರು ಕುಶಲ ತಂತ್ರಜ್ಞರನ್ನು ಹುಡುಕಿಕೊಳ್ಳಬಹುದು. ಉದ್ಯಮಗಳಿಗೆ ಸಂಬಂಧಿಸಿದಂತೆ ಎಲ್ಲವೂ ಒಂದೇ ವೇದಿಕೆಯಲ್ಲಿ ನಿರ್ದಿಷ್ಟ ಕೌಶಲತೆಯನ್ನು ತೋರ್ಪಡಿಸಿಕೊಳ್ಳಲು ಈ ವೇದಿಕೆಯಲ್ಲಿ ಸಾಧ್ಯವಾಗಿದೆ.

ಇನ್ನು ಬ್ಲೂ ಟೈ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು, 'ಟೆಸ್ಟ್ ಟಿ ವಿನ್' ಸ್ಪರ್ಧೆಯಲ್ಲಿ ಭಾಗವಹಿಸಿ 1 ಲಕ್ಷ ಮೌಲ್ಯದ ಸ್ಮಾರ್ಟ್‌ಫೋನ್ ಅನ್ದನು ಗೆಲ್ಲುವ ಅವಕಾಶವನ್ನು ಸಂಸ್ಥೆ ಒದಗಿಸಿದೆ. ಇದರ ಜತೆಗೆ, 'ಗೆಟ್ ಎ ಸೀಡ್ ಇನ್ವೆಸ್ಟ್‌ಮೆಂಟ್' ಮತ್ತು 'ಗೆಟ್ ಮೆಂಟರ್ಡ್' ಎಂಬ ಸ್ಪರ್ಧೆಗಳೂ ಇದರಲ್ಲಿದ್ದು, ಹೆಚ್ಚಿನ ವಿವರಗಳಿಗೆ http://www.bluetieglobal.comಗೆ ಭೇಟಿ ಕೊಡಬಹುದು


Click it and Unblock the Notifications




