ನಿಮ್ಮ ಶೂ ಸೈಜ್ ತಿಳಿದುಕೊಳ್ಳಲು ಆಪ್ ಬಿಡುಗಡೆಗೊಳಿಸಿದ ನೈಕ್

By Gizbot Bureau
|

ಶೂಗಳು ಅಂದರೆ ಕೇವಲ ಪಾದಕ್ಕೆ ರಕ್ಷಣೆ ನೀಡುವ ವಸ್ತುವಾಗಿ ಉಳಿದಿಲ್ಲ. ಅದೊಂದು ಸ್ಟೈಲ್ ಸ್ಟೇಟ್ ಮೆಂಟ್. ಕೆಲವು ಕಂಪೆನಿ ಶೂಗಳು ಪ್ರತಿಷ್ಟೆಯ ಸಂಕೇತದಂತೆಯೂ ಕೂಡ ಬಿಂಬಿತವಾಗಿವೆ. ಅದರಲ್ಲೂ ನೈಕ್ ಸಂಸ್ಥೆಯ ಶೂಗಳು ಅಂದರೆ ಹೆಚ್ಚಿನವರಿಗೆ ಬಲು ಪ್ರೀತಿ.

ನಿಮ್ಮ ಶೂ ಸೈಜ್ ತಿಳಿದುಕೊಳ್ಳಲು ಆಪ್ ಬಿಡುಗಡೆಗೊಳಿಸಿದ ನೈಕ್

ನೈಕ್ ಕಂಪೆನಿಯ ಶೂ ಯಾವಾಗಲೂ ಫೇಮಸ್ ಕೂಡ ಹೌದು. ಅದಕ್ಕೆ ಕಾರಣ ಒಂದಿಲ್ಲೊಂದು ಹೊಸ ಅನ್ವೇಷಣೆಯನ್ನು ಈ ಸಂಸ್ಥೆ ನಡೆಸುತ್ತಲೇ ಇರುತ್ತದೆ. ಇತ್ತೀಚೆಗೆ ಸೆಲ್ಫ್ ಟೈ ಮಾಡುವ ಬಿಬಿ ಸ್ನೀಕ್ಕರ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದ ನೈಕ್ ಸಂಸ್ಥೆ ಇದೀಗ ಹೊಸದಾಗಿ ಏಆರ್ ಫೀಚರ್ ನ್ನು ಒಳಗೊಂಡಿರುವ ನಿಮ್ಮ ಕಾಲಿನ ಸೈಜಿಗೆ ಸರಿಹೊಂದುವ ಶೂಗಳನ್ನು ಪರಿಚಯಿಸುತ್ತಿದೆ. ನೈಕ್ ಆಪ್ ಮೂಲಕ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಫೀಚರ್ ಲಭ್ಯವಿದೆ ಎಂದು ಕಂಪೆನಿಯು ತಿಳಿಸಿದೆ.

ನೈಕ್ ಫಿಟ್

ನೈಕ್ ಫಿಟ್

"ನೈಕ್ ಫಿಟ್ ಹೊಸ ಸ್ಕ್ಯಾನಿಂಗ್ ಸಲ್ಯೂಷನ್ ಆಗಿದ್ದು ಕಂಪ್ಯೂಟರ್ ವಿಷನ್, ಡಾಟಾ ಸೈನ್ಸ್, ಮಷೀನ್ ಲರ್ನಿಂಗ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಕೆಲವು ಆಯ್ದ ಅಲ್ಗೋರಿತ್ತಮ್ ಗಳನ್ನು ಬಳಸಿ ನಿಮ್ಮ ಕಾಲಿಗೆ ಸರಿಹೊಂದುವ ಶೂ ಸೈಜ್ ನ್ನು ಗುರುತಿಸುತ್ತದೆ ಎಂದು ನೈಕ್ ನ ಗ್ಲೋಬಲ್ ಕಮ್ಯುನಿಕೇಷನ್ ನ ಡೈರೆಕ್ಟರ್ ಆಗಿರುವ ಸಂದ್ರಾ ಕರೋನ್ ಜಾನ್ ತಿಳಿಸಿದ್ದಾರೆ.

3 ಡಾಟಾ ಪಾಯಿಂಟ್

3 ಡಾಟಾ ಪಾಯಿಂಟ್

ಫಿಟ್ ಅಡ್ರೆಸ್ಸ್ ಅನ್ನೋದು ಶೂ ಇಂಡಸ್ಟ್ರಿಯ ಸೈಜ್ ಕಂಡುಹಿಡಿಯುವ ಮಾರ್ಗ. ಫೋನ್ ಕ್ಯಾಮರಾ ಬಳಸಿ ನಿಮ್ಮ ಕಾಲಿನ ಸೈಜ್ ನ್ನು ಗುರುತಿಸುವ ಟೂಲ್ ಕೆಲಸ ಮಾಡುತ್ತದೆ. 13 ಡಾಟಾ ಪಾಯಿಂಟ್ ಗಳನ್ನು ಗುರುತಿಸಿ ಕಾಲಿನ ಸೈಜ್ ತಿಳಿಯುತ್ತದೆ ಮತ್ತು ಇದು ನೈಕ್ ಪ್ಲಸ್ ಮೆಂಬರ್ ಪ್ರೊಫೈಲ್ ನಲ್ಲಿ ಸೇವ್ ಕೂಡ ಆಗಿರುತ್ತದೆ.

ನೈಕ್ ಫಿಟ್ ಮ್ಯಾಟ್

ನೈಕ್ ಫಿಟ್ ಮ್ಯಾಟ್

ಸ್ಕ್ಯಾನ್ ಆದ ನಂತರ, ನೈಕ್ ಸಂಸ್ಥೆ ನಿಮಗೆ ಉತ್ತಮ ಶೂ ಅಥವಾ ಫೂಟ್ ವೇರ್ ಯಾವುದು ಎಂದು ತಿಳಿಸುತ್ತದೆ. ಇದರ ಜೊತೆಗೆ ನೈಟ್ ಫಿಟ್ ನ್ನು ನೀವು ನೈಕ್ ರೀಟೇಲ್ ಸ್ಟೋರ್ ಗಳಲ್ಲಿ ಜೊತೆಗೆ ನೈಕ್ ಫಿಟ್ ಮ್ಯಾಟ್ ನಲ್ಲಿ ಬಳಸಬಹುದು. ನೀವು ನಿಮ್ಮ ಸ್ನೇಹಿತರು ಅಥವಾ ಕುಟುಂಬದ ಸದಸ್ಯರಿಗಾಗಿ ಶಾಪಿಂಗ್ ಮಾಡುತ್ತಿದ್ದರೆ ಅವರ ಪಾದವನ್ನು ಸ್ಕ್ಯಾನ್ ಮಾಡುವುದಕ್ಕೆ ನೈಕ್ ಫಿಟ್ ಆಪ್ ನ್ನು ಬಳಕೆ ಮಾಡಬಹುದು.

ನೈಕ್ ಆಪ್

ನೈಕ್ ಆಪ್

ನೈಕ್ ಫಿಟ್ ಮೂಲಕ ಗ್ರಾಹಕರು ಅಗತ್ಯತೆ, ಡಿಸೈನ್, ತಯಾರಿಕೆ ಮತ್ತು ಮಾರಾಟ ಮಾಡುವ ಶೈಲಿ ಎಲ್ಲವೂ ಕೂಡ ಬದಲಾಗುತ್ತದೆ ಎಂದು ನೈಕ್ ಅಭಿಪ್ರಾಯ ಪಟ್ಟಿದೆ. ಅತ್ಯುತ್ತಮ ಫಿಟ್ಟಿಂಗ್ ಇರುವ ಶೂಗಳು ಹೆಚ್ಚು ಉತ್ತಮವಾಗಿರುತ್ತದೆ ಮತ್ತು ಉತ್ತಮ ಪ್ರದರ್ಶನವನ್ನು ನೀಡುತ್ತದೆ. ಅಂತಿಮ ಗುರಿ ಏನೆಂದರೆ ಸಂಖ್ಯೆಯಾಗಲೀ, ಲಿಂಗವಾಗಲಿ ಅಥವಾ ಕೇವಲ ಹೆಸರು ಮಾತ್ರವೇ ಅಲ್ಲ ನಿಮ್ಮ ವಯಕ್ತಿಕ ವಸ್ತುವೊಂದು ಹೆಚ್ಚು ಉತ್ತಮ ಫೀಲ್ ನೀಡುವುದಕ್ಕೆ ಸಹಕರಿಸಬೇಕು ಎಂಬುದೇ ಆಗಿದೆ.

ಜುಲೈ ನಲ್ಲಿ ಈ ತಂತ್ರಗಾರಿಕೆಯು ಬಿಡುಗಡೆಗೊಳ್ಳಲಿದೆ ಮತ್ತು ನೈಕ್ ಆಪ್ ಅಪ್ ಡೇಟ್ ಆಗುತ್ತದೆ ಮತ್ತು ಯುರೋಪ್ ನಲ್ಲಿ ನಂತರ ಬೇಸಿಗೆಯಲ್ಲಿ ಇದು ಆರಂಭವಾಗುತ್ತದೆ. ಒಟ್ಟಿನಲ್ಲಿ ನೈಕ್ ಸಂಸ್ಥೆ ಒಂದಿಲ್ಲೊಂದು ಹೊಸತನಕ್ಕೆ ತೆರೆದುಕೊಳ್ಳುತ್ತದೆ ಎಂಬುದು ಮಾತ್ರ ಸುಳ್ಳಲ್ಲ.

Best Mobiles in India

Read more about:
English summary
Nike Fit AR tool looks to help you find your perfect shoe size

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X