ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ “ನಿಖಿಲ್ ಎಲ್ಲಿದ್ದೀಯಪ್ಪಾ” ಆಪ್!

By Gizbot Bureau
|

ಇತ್ತೀಚೆಗೆ ಕರ್ನಾಟಕದಲ್ಲಿ ಅತೀ ಹೆಚ್ಚು ಟ್ರಾಲ್ ಮತ್ತು ಮೆಮೊ ಪೇಜ್ ಗಳಲ್ಲಿ ಕಾಣಿಸಿಕೊಂಡ ಡೈಲಾಗ್ ಎಂದರೆ ಅದು “ನಿಖಿಲ್ ಎಲ್ಲಿದ್ದೀಯಪ್ಪಾ”. ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಮಗನನ್ನು ಆತನ ಸಿನಿಮಾ ಪ್ರಮೋಷನ್ನಿನ ವೇಳೆಯಲ್ಲಿ ಕರೆದ ಡೈಲಾಗ್ ಇದು.ಒಂದು ರೀತಿಯಲ್ಲಿ ನೈಜವೆಂಬಂತೆ ತೋರಿಸಲು ಪ್ರಯತ್ನಿಸಿದ ಕುಮಾರಸ್ವಾಮಿ ಮತ್ತು ಅವರ ಪುತ್ರನ ಪ್ರೀಪ್ಲಾನ್ಡ್ ಡೈಲಾಗ್ ಗಳು ಜನರಿಗೆ ಮನರಂಜನೆಯ ವಸ್ತುವಾಗಿ ಬಿಟ್ಟಿತ್ತು.

ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ “ನಿಖಿಲ್ ಎಲ್ಲಿದ್ದೀಯಪ್ಪಾ” ಆಪ್!

ಸದ್ಯ ಈ ಡೈಲಾಗಿನ ರಿಮಿಕ್ಸ್ ಹಾಡುಗಳು ಅದಕ್ಕೆ ಡ್ಯಾನ್ಸ್ ಗಳನ್ನು ಕೂಡ ಮಾಡಲಾಗಿದ್ದು ಹೊಟ್ಟೆ ಹುಣ್ಣಾಗುವಷ್ಟು ನಗು ತರಿಸುತ್ತದೆ. ಅಷ್ಟೇ ಯಾಕೆ ಪಡ್ಡೆ ಹುಡುಗರ ನೆಚ್ಚಿನ ಡೈಲಾಗ್ ಆಗಿ ಬಿಟ್ಟಿದೆ. ಬಹುಶ್ಯಃ ಒಂದು ರಾಜ್ಯದ ಮುಖ್ಯಮಂತ್ರಿಯ ಎರಡೇ ಎರಡು ಪದ ಇಷ್ಟೊಂದು ಪಬ್ಲಿಸಿಟಿ ಪಡೆದಿರುವುದು ಇದೇ ಮೊದಲು! ಇದೀಗ ಈ ಡೈಲಾಗ್ ನಲ್ಲಿ ಒಂದು ಆಪ್ ಕೂಡ ಇದೆ ಅಂದರೆ ನೀವು ನಂಬ್ತೀರಾ?

ಪ್ಲೇ ಸ್ಟೋರ್ ನಲ್ಲಿ ಲಭ್ಯ:

ಪ್ಲೇ ಸ್ಟೋರ್ ನಲ್ಲಿ ಲಭ್ಯ:

ಹೌದು ನಿಮ್ಮ ಪ್ಲೇ ಸ್ಟೋರ್ ನಲ್ಲಿ "ನಿಖಿಲ್ ಎಲ್ಲಿದ್ದೀಯಪ್ಪಾ" ಎಂದು ಇಂಗ್ಲೀಷ್ ನಲ್ಲಿ ಟೈಪ್ ಮಾಡಿ ನೋಡಿ. 4.9 ಸ್ಟಾರ್ ಪಡೆದಿರುವ 6.7ಎಂಬಿ ಇರುವ ಎಲ್ ಟಿ ಸರ್ವೀಸ್ ನಿರ್ಮಿಸಿರುವ ಒಂದು ಆಪ್ ಲಭ್ಯವಾಗುತ್ತದೆ. ಈಗಾಗಲೇ ಸುಮಾರು 5k+ ಮಂದಿ ಇದನ್ನು ಡೌನ್ ಲೋಡ್ ಮಾಡಿದ್ದಾರೆ ಮತ್ತು ಅತ್ಯಧ್ಬುತವಾಗಿರುವ ಮನರಂಜನಾ ಆಪ್ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆಪ್ ನಲ್ಲಿ ಏನಿದೆ?

ಆಪ್ ನಲ್ಲಿ ಏನಿದೆ?

ಈ ಆಪ್ ನಲ್ಲಿ ನಿಮಗೆ ನಿಖಿಲ್ ಎಲ್ಲಿದ್ದೀಯಪ್ಪಾ ಡೈಲಾಗ್ ನಲ್ಲಿ ನಿರ್ಮಿಸಲಾಗಿರುವ ಫನ್ನಿ ವೀಡಿಯೋಗಳು ಮತ್ತು ಫೋಟೋಗಳು ಲಭ್ಯವಾಗುತ್ತದೆ. ನಿಖಿಲ್ ಎಲ್ಲಿದ್ದೀಯಪ್ಪಾ ಡೈಲಾಗ್ ಬಳಸಿ ಮಾಡಲಾಗಿರುವ ಸ್ಯಾಂಡಲ್ ವುಡ್ ಮತ್ತು ಇತರೆ ಸಿನಿಮಾಗಳ ರಿಮಿಕ್ಸ್, ಡಬ್ ಮಾಡಿದ ಡೈಲಾಗ್ ಗಳು ಹೊಟ್ಟೆ ಹುಣ್ಣು ಮಾಡುವಂತೆ ನಗಿಸುತ್ತವೆ. ಅಷ್ಟೇ ಯಾಕೆ ಕಾಲೇಜು ಹುಡುಗ ಹುಡುಗಿಯರು ನಿಖಿಲ್ ಎಲ್ಲಿದ್ದೀಯಪ್ಪ ಡೈಲಾಗ್ ಬಳಸಿ ಮಾಡಿರುವ ಹೊಸ ಹೊಸ ವೀಡಿಯೋಗಳು ಇಲ್ಲಿ ಲಭ್ಯವಾಗುತ್ತದೆ. ಇನ್ನು ಸ್ಟಿಕ್ಕರ್ ಗಳು, ಫೋಟೋಗಳಿಗಂತೂ ಲೆಕ್ಕವೇ ಅಲ್ಲ.

ಸೇವ್ ಮತ್ತು ಶೇರ್ ಮಾಡುವುದಕ್ಕೆ ಅವಕಾಶ:

ಸೇವ್ ಮತ್ತು ಶೇರ್ ಮಾಡುವುದಕ್ಕೆ ಅವಕಾಶ:

ಅದನ್ನು ನೀವು ಗ್ಯಾಲರಿಯಲ್ಲಿ ಸೇವ್ ಮಾಡಿಕೊಳ್ಳುವುದಕ್ಕೆ, ಮತ್ತೊಬ್ಬರಿಗೆ ಶೇರ್ ಮಾಡುವುದಕ್ಕೆ ಅವಕಾಶವಿರುತ್ತದೆ.ಒಟ್ಟಿನಲ್ಲಿ ನಿಖಿಲ್ ಎಲ್ಲಿದ್ದೀಯಪ್ಪಾ ಡೈಲಾಗ್ ಇದೀಗ ಸಾಕಷ್ಟು ಹವಾ ಎಬ್ಬಿಸಿ ಮನರಂಜನೆಗೆ ಕಾರಣವಾಗಿರುವುದಂತೂ ಸುಳ್ಳಲ್ಲ. ನಿಮಗೂ ಈ ಮನರಂಜನೆ ಬೇಕಿದ್ದರೆ ಖಂಡಿತ ಆಪ್ ನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.

ವಾಟ್ಸ್ ಆಪ್ ನಲ್ಲೂ ಸ್ಟೇಟಸ್:

ವಾಟ್ಸ್ ಆಪ್ ನಲ್ಲೂ ಸ್ಟೇಟಸ್:

ಕೆಲವರು ಆಪ್ ಬಗ್ಗೆ ಈಗಾಗಲೇ ತಮ್ಮ ವಾಟ್ಸ್ ಆಪ್ ಸ್ಟೇಟಸ್ ನಲ್ಲೂ ಹಂಚಿಕೊಂಡಿರುವುದಿದೆ.ನಿಖಿಲ್ ಎಲ್ಲಿದ್ದೀಯಪ್ಪಾ ಡೈಲಾಗ್ ಬಗೆಗಿನ ತಮಾಷೆಯಲ್ಲಿ ವಾಟ್ಸ್ ಆಪ್ ನಲ್ಲಿ ಸ್ಟೇಟಸ್ ಮತ್ತು ಮೆಸೇಜ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ಮುಂದೊಂದು ದಿನ ಕುಮಾರಸ್ವಾಮಿಯವರು ಇದೇ ಡೈಲಾಗ್ ಮೇಲೆ ಮಗನಿಗೊಂದು ಸಿನಿಮಾ ನಿರ್ಮಿಸಿದರೂ ಆಶ್ಚರ್ಯವಿಲ್ಲ!

Best Mobiles in India

Read more about:
English summary
'Nikhil Yellidiyappa' app available on Play Store!

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X