ಮಾರುಕಟ್ಟೆಯಲ್ಲಿ ಸಂಚಲನ: ಲೀಕ್ ಆಗಿದೆ ನೋಕಿಯಾ 8 ಪ್ರೋ ಮಾಹಿತಿ...!

By Tejaswini P G
|

ಇತ್ತೀಚೆಗೆ ನಡೆದ MWC 2018 ರಲ್ಲಿ HMD ಗ್ಲೋಬಲ್ ಸಂಸ್ಥೆಯು ಹಲವು ನೋಕಿಯಾ ಫೋನ್ ಗಳನ್ನು ಅನಾವಾರಣಗೊಳಿಸಿತ್ತು. ಈ ಫಿನ್ನಿಶ್ ಸಂಸ್ಥೆಯು ಸಧ್ಯಕ್ಕೆ ನೋಕಿಯಾ 9 ಮತ್ತು ನೋಕಿಯಾ 8 ಪ್ರೋ ಎಂಬ 2 ಹೈ-ಎಂಡ್ ಸ್ಮಾರ್ಟ್ಫೋನ್ ಗಳ ಮೇಲೆ ಕೆಲಸಮಾಡುತ್ತಿದೆ. ಈ ಎರಡೂ ಸ್ಮಾರ್ಟ್ಫೋನ್ಗಳು ಈ ವರ್ಷಾಂತ್ಯದೊಳಗೆ ಬಿಡುಗಡೆಯಾಗುವ ಸಾಧ್ಯತೆಗಳಿವೆ. ನೋಕಿಯಾ 9 ನ ಮಾಹಿತಿಗಳು ಈಗಾಗಲೇ ಹಲವು ಬಾರಿ ಸೋರಿಕೆಯಾಗಿದ್ದು, ಈಗ ನೋಕಿಯಾ 8 ಪ್ರೋ ನ ಸಂಪೂರ್ಣ ಮಾಹಿತಿ ಆನ್ಲೈನ್ ನಲ್ಲಿ ಸೋರಿಕೆಯಾಗಿದೆ.

ನೋಕಿಯಾ 8 ಪ್ರೋ ಸ್ಮಾರ್ಟ್ಫೋನ್ ನೋಕಿಯಾ 8 ಸಿರೋಕೋ ನ ಸುಧಾರಿತ ಆವೃತ್ತಿ ಎಂದು ಹೇಳಲಾಗುತ್ತಿದೆ. ಸೋರಿಕೆಯಾಗಿರುವ ಮಾಹಿತಿಯ ಅನುಸಾರ ಈ ಸ್ಮಾರ್ಟ್ಫೋನ್ ನಲ್ಲಿದೆ 6.01 ಇಂಚ್ ಫುಲ್ HD ಡಿಸ್ಪ್ಲೇ 1080X2160 ಪಿಕ್ಸೆಲ್ ರೆಸೊಲ್ಯೂಶನ್ ಮತ್ತು 18:9 ಆಸ್ಪೆಕ್ಟ್ ಅನುಪಾತದೊಂದಿಗೆ. ಅಲ್ಲದೆ ಇದರಲ್ಲಿದೆಯಂತೆ ಕ್ವಾಲ್ಕಮ್ ನ ನೂತನ ಫ್ಲ್ಯಾಗ್ಶಿಪ್ ಪ್ರಾಸೆಸರ್ ಆದ ಸ್ನ್ಯಾಪ್ಡ್ರಾಗನ್ 845 SoC.

ಇದರ ಮೆಮೋರಿ ಕುರಿತು ಹೇಳುವುದಾದರೆ ನೋಕಿಯಾ 8 ಪ್ರೋ ಎರಡು ಆವೃತ್ತಿಗಳಲ್ಲಿ ಬರಲಿದೆ. ಮೂಲ ಆವೃತ್ತಿ 6GB RAM ಮತ್ತು 64GB ಆಂತರಿಕ ಸ್ಟೋರೇಜ್ ಹೊಂದಿದ್ದರೆ, ಮತ್ತೊಂದು ಆವೃತ್ತಿ 8GB RAM ಮತ್ತು 128GB ಆಂತರಿಕ ಸ್ಟೋರೇಜ್ ಹೊಂದಿರಲಿದೆ.

ಸೋರಿಕೆಯಾಗಿರುವ ಮಾಹಿತಿಗಳ ಅನುಸಾರ ನೋಕಿಯಾ 8 ಪ್ರೋ ನಲ್ಲಿ ಡ್ಯುಯಲ್ ರೇರ್ ಕ್ಯಾಮೆರಾ ಸೆಟಪ್ ಇರಲಿದ್ದು, ಎರಡು 16MP ಸೆನ್ಸರ್ಗಳು ಇರಲಿವೆ. ಇದರೊಂದಿಗೆ ಡ್ಯುಯಲ್ ಟೋನ್ LED ಫ್ಲ್ಯಾಶ್ ಕೂಡ ಇರಲಿದೆ. ಅಲ್ಲದೆ ನೋಕಿಯಾ 8 ಪ್ರೋ ನಲ್ಲಿರಲಿದೆ 13 MP ಸೆನ್ಸರ್ ಹೊಂದಿರುವ ಫ್ರಂಟ್ ಕ್ಯಾಮೆರಾ.

ಈ ನೂತನ ನೋಕಿಯಾ ಸ್ಮಾರ್ಟ್ಫೋನ್ ಹಿರಿದಾದ 4000 mAh ಸಾಮರ್ಥ್ಯದ ಬ್ಯಾಟರಿ ಇರಲಿದ್ದು,ವೈರ್ಲೆಸ್ ಚಾರ್ಜಿಂಗ್ ಅನ್ನು ಇದು ಬೆಂಬಲಿಸಲಿದೆ. ಅಲ್ಲದೆ ಇದರಲ್ಲಿರಲಿದೆ ಆಂಡ್ರಾಯ್ಡ್ ಓರಿಯೋ ಓಎಸ್ ಮತ್ತು USB ಟೈಪ್-ಸಿ ಪೋರ್ಟ್.

ಈ ಹಿಂದೆ ಬಂದಿರುವ ವರದಿಗಳ ಅನುಸಾರ ನೋಕಿಯಾ 8 ಹಿಂಭಾಗ ಮತ್ತು ಮುಂಭಾಗದಲ್ಲಿ 3D ಗ್ಲಾಸ್ ಹೊಂದಿರಲಿದೆ. ಇನ್ನು ಇದರ ಲಭ್ಯತೆ ಮತ್ತು ಬೆಲೆಯ ಕುರಿತು ಹೇಳುವುದಾದರೆ ಇದು ಆಗಸ್ಟ್ ನಲ್ಲಿ ಲಾಂಚ್ ಆಗಲಿದ್ದು, ತುಲನಾತ್ಮಕವಾಗಿ ಕಡಿಮೆ ಬೆಲೆ ಹೊಂದಿರಲಿದೆ. ಈ ವರದಿಗಳನ್ನು ನಂಬುವುದಾದರೆ ಇದು ಒನ್ಪ್ಲಸ್ 6, ಶಿಯೋಮಿ ಮಿ ಮ್ಯಾಕ್ಸ್ 3 ಮೊದಲಾದ ಸ್ಮಾರ್ಟ್ಫೋನ್ಗಳಿಗೆ ಪ್ರತಿಸ್ಪರ್ಧಿಯಾಗಿ ನಿಲ್ಲಲಿದೆ.

Do you know what all u can do by Downloading Hike Messenger app.?

ಇಗಾಗಲೇ ತಿಳಿಸಿದಂತೆ ನೋಕಿಯಾ 9 ನ ತಯಾರಿಯೂ ಪ್ರಗತಿಯಲ್ಲಿದೆ. ಈ ಹ್ಯಾಂಡ್ಸೆಟ್ ನಲ್ಲಿ ತುಂಬಾ ಶಕ್ತಿಶಾಲಿ ಫೀಚರ್ಗಳು ಇರಲಿವೆಯಂತೆ. ಗಿಜ್ಮೋಚೈನಾ ದ ಅನುಸಾರ ಇದು 2018ರಲ್ಲಿ HMD ಗ್ಲೋಬಲ್ ಸಂಸ್ಥೆಯ ಟಾಪ್ ಫ್ಲ್ಯಾಗ್ಶಿಪ್ ಮೊಬೈಲ್ ಎನಿಸಲಿದೆ. ವರದಿಗಳ ಅನುಸಾರ ಇದು ಅಂಡರ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್ ಹೊಂದಿರುವ ಮೊದಲ ನೋಕಿಯಾ ಫೋನ್ ಎನಿಸಲಿದೆ. ನೋಕಿಯಾ 9 ಈ ಬೇಸಿಗೆಯ ಅಂತ್ಯದಲ್ಲಿ ಬರ್ಲಿನ್ ನಲ್ಲಿ ನಡೆಯಲಿರುವ IFA 2018 ಟ್ರೇಡ್ ಶೋ ನಲ್ಲಿ ಬಿಡುಗಡೆಯಾಗಲಿದೆ.

Best Mobiles in India

English summary
Nokia 8 Pro specifications leaked; Snapdragon 845, 8GB RAM. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X