ಮಾರುಕಟ್ಟೆಗೆ ನೋಕಿಯಾ X6: ಮೇ 16ಕ್ಕೆ ಲಾಂಚ್..!

By Lekhaka
|

ನೋಕಿಯಾ ಈಗಾಗಲೇ ಮಾರುಕಟ್ಟೆಗೆ ಹಲವು ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡಿದೆ. ಇದೇ ಮಾದರಿಯಲ್ಲಿ ಮೇ 16 ರಂದು ಹೊಸದಾಗಿ ನೋಕಿಯಾ X6 ಲಾಂಚ್ ಮಾಡಲು ಸಿದ್ಧತೆಯನ್ನು ನಡೆಸಿದೆ ಎನ್ನಲಾಗಿದೆ. ಮೊದಲಿಗೆ ಚೀನಾದಲ್ಲಿ ಲಾಂಚ್ ಆಗಲಿದ್ದು, ನಂತರದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿಯೂ ದೊರೆಯಲಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ನೋಕಿಯಾ X6 ಲಾಂಚ್ ಆಹ್ವಾನವನ್ನು ಕಳುಹಿಸಿದೆ ಎನ್ನಲಾಗಿದೆ.

ಮಾರುಕಟ್ಟೆಗೆ ನೋಕಿಯಾ X6: ಮೇ 16ಕ್ಕೆ ಲಾಂಚ್..!

ಇದೇ ಮಾದರಿಯಲ್ಲಿ ಮಾರುಕಟ್ಟೆಗೆ ಒನ್ ಪ್ಲಸ್ 6 ಸಹ ಲಾಂಚ್ ಆಗಲಿದ್ದು, ಇದರೊಂದಿಗೆ ಮೇ ತಿಂಗಳಿನಲ್ಲಿಯೇ ನೋಕಿಯಾ X6 ಲಾಂಚ್ ಆಗುತ್ತಿರುವುದು ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಸ್ಪರ್ಧೆಯನ್ನು ನಿರೀಕ್ಷಿಸಬಹುದಾಗಿದೆ. ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಲಿರುವ ವಿಶೇಷತೆಗಳು ಈ ಸ್ಮಾರ್ಟ್ ಫೋನಿನಲ್ಲಿ ಇರಲಿದೆ.

ನೋಕಿಯಾ X6 ಸ್ಮಾರ್ಟ್ ಫೋನಿನಲ್ಲಿ ಐಫೋನ್ X ಮಾದರಿಯಲ್ಲಿ ಡಿಸ್ ಪ್ಲೇ ನೋಚ್ ಅನ್ನು ಕಾಣಬಹುದಾಗಿದ್ದು, 19:9 ಅನುಪಾತದ ಡಿಸ್ ಪ್ಲೇ ಇದಾಗಿದೆ. ಈ ಹಿಂದೆಯೇ ನೋಕಿಯಾ X6 ಲಾಂಚ್ ಆಗಲಿದೆ ಎನ್ನುವ ಮಾಹಿತಿ ಲಭ್ಯವಾಗಿತ್ತು. ಆದರೆ ಈ ಸ್ಮಾರ್ಟ್ ಪೋನ್ ಲೇಟ್ ಆಗಿ ಮಾರುಕಟ್ಟೆಗೆ ಬರುತ್ತಿದೆ. ಈ ಸ್ಮಾರ್ಟ್ ಫೋನ್ ನೋಕಿಯಾದ ಟಾಪ್ ಎಂಡ್ ಸ್ಮಾರ್ಟ್ ಫೋನ್ ಎನ್ನಿಸಿಕೊಳ್ಳಲಿದೆ.

ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಈ ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ ಕಾಣಬಹುದಾಗಿದ್ದು, ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಅಳವಡಿಸಲಾಗಿದೆ. ಅಲ್ಲದೇ ನೋಕಿಯಾ ಬ್ಯಾಂಡ್ ನೇಮ್ ಮಾತ್ರವೇ ಕೆಳಭಾಗದಲ್ಲಿ ಕಾಣಿಸಿಕೊಂಡಿದೆ. ನೋಡಲು ಈ ಸ್ಮಾರ್ಟ್ ಫೋನ್ ಆಕ್ಷರ್ಷಕವಾಗಿದ್ದು, ಬಿಡುಗಡೆಯ ನಂತರದಲ್ಲಿ ಈ ಬಗ್ಗೆ ಮಾಹಿತಿಯೂ ದೊರೆಯಲಿದೆ.

5.8 ಇಂಚಿನ ಡಿಸ್ ಪ್ಲೇ ಯೊಂದಿಗೆ ಸ್ಯಾಪ್ ಡ್ರಾಗನ್ 636 ಪ್ರೋಸೆಸರ್ ಕಾಣಬಹುದಾಗಿದ್ದು, 6GB RAM ಮತ್ತು 128GB ಇಂಟರ್ನಲ್ ಮೆಮೊರಿಯೊಂದಿಗೆ ಕಾರ್ಯನಿರ್ವಹಿದಲಿದ್ದು, ಉತ್ತಮವಾದ ಫೀಚರ್ ಗಳನ್ನು ಹೊಂದಲಿದ್ದು, ರೂ.16,800 ಗಳ ಅಸುಪಾಸಿನಲ್ಲಿ ಲಭ್ಯವಾಗಲಿದೆ. ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಇದು ಸೃಷ್ಠಿಸಿಕೊಳ್ಳಲಿದೆ ಎನ್ನಲಾಗಿದೆ.ಎರಡು ಆವೃತ್ತಿಯಲ್ಲಿ ದೊರೆಯುವ ಸಾಧ್ಯತೆಯೂ ಇದೆ.

Most Read Articles
Best Mobiles in India

English summary
Nokia X6 set to launch in China on May 16, company sends invite. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X