ಭಾರತೀಯರೇ ತಯಾರಿಸಿದ ಈ ಆಪ್ ಇದ್ರೆ ಸ್ಮಾರ್ಟ್‌ಫೋನ್ ಬ್ಯಾಟರಿ ಬೇಗ ಖಾಲಿಯಾಗಲ್ಲ..!
ಸ್ಮಾರ್ಟ್‌ಫೋನ್‌ಗಳ ಬಹು ದೊಡ್ಡ ಸಮಸ್ಯೆ ಎಂದರೆ ಅತ್ಯಂತ ಕಡಿಮೆ ಬ್ಯಾಟರಿ ಬಾಳಿಕೆ ಎನ್ನುವುದು. ವೇಗದ ಪ್ರೋಸೆಸರ್‌ಗಳು, ಹೆಚ್ಚಿನ RAM ಜೊತೆಗೆ ಗ್ರಾಫಿಕ್ಸ್ ತುಂಬಿರುವ ಆಟಗಳು ಇವೇಲ್ಲ ಸೇರಿಕೊಂಡು ಸ್ಮಾರ್ಟ್‌ಫೋನ್ ಬ್ಯಾಟರಿಯೂ ಬೇಗನೇ ಖಾಲಿಯಾಗುವಂತೆ ಮಾಡುತ್ತವೆ. ಎಷ್ಟು ದೊಡ್ಡ ಪ್ರಮಾಣದ ಬ್ಯಾಟರಿಯನ್ನು ನೀಡಿದರೂ ಸಹ ಬಾಳಿಕೆ ಬರುವುದಿಲ್ಲ, ಒಂದು ದಿನದಲ್ಲಿಯೇ ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಖಾಲಿಯಾಗಿರುತ್ತದೆ. ಈ ಹಿನ್ನಲೆಯಲ್ಲಿ ಸಂಶೋಧಕರು ಹೊಸದೊಂದು ಆಪ್ ಅನ್ನು ಅಭಿವೃದ್ಧಿ ಮಾಡಿದ್ದಾರೆ.

ಸದ್ಯ ಮಾರುಕಟ್ಟೆಯಲ್ಲಿ ಇರುವ ಬ್ಯಾಟರಿ ಸೇವ್ ಆಪ್‌ಗಳು ಹೆಚ್ಚಿನ ಪ್ರಮಾಣದ ಬ್ಯಾಟರಿಯನ್ನು ಅವೇ ಕಬಳಿಸುತ್ತವೆ. ಆದರೆ ಟೊರೆಂಟೊ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿರುವ ಹೊಸ ಮಾದರಿಯ ನೊವೇಲ್ ಸ್ಮಾರ್ಟ್‌ಫೋನ್ ಆಪ್ ನಿಜವಾಗಿಯೂ ನಿಮ್ಮ ಬ್ಯಾಟರಿಯಯನ್ನು ಹೆಚ್ಚು ಮಾಡಲಿದೆ. ಈಗಾಗಲೇ ಈ ಆಪ್ ಪರೀಕ್ಷೆಯಲ್ಲಿ ಪಾಸ್ ಆಗಿದೆ ಎನ್ನಲಾಗಿದೆ. ಶೀಘ್ರವೇ ಇದು ಪ್ಲೇ ಸ್ಟೋರಿನಲ್ಲಿ ಕಾಣಿಸಿಕೊಳ್ಳಲಿದೆ.

ಭಾರತೀಯರ ತಂಡ:
ಈ ಹೊಸ ಆಪ್ ಬ್ಯಾಟರಿ ಸೇವ್ ಮಾಡುವ ಬದಲಿಗೆ ಬ್ಯಾಟರಿಯ ಬಾಳಿಕೆಯನ್ನು ಹೆಚ್ಚು ಮಾಡುವ ತಂತ್ರಜ್ಞಾನವನ್ನು ಮೈಗೂಡಿಸಿಕೊಂಡಿದೆ ಎನ್ನಲಾಗಿದೆ. ಈ ನೊವೇಲ್ ಸ್ಮಾರ್ಟ್‌ಫೋನ್ ಆಪ್ ನಿರ್ಮಾಣದಲ್ಲಿ ತೊಡಗಿಕೊಂಡಿದ್ದ ಭಾರತೀಯ ಮೂಲಕದ ಕೆನೆಡಾ ವಿಶ್ವವಿದ್ಯಾನಿಲಯದ ಸಂಶೋಧಕರದ ಕೃಷ್ಣಸಾಗರ್ ನಾಯಕ್ ಈ ಆಪ್ ಕುರಿತು ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

ನಿತ್ಯ ಒಂದು ಗಂಟೆ ಏರಿಕೆ:
ಈ ಹೊಸ ನೊವೇಲ್ ಸ್ಮಾರ್ಟ್‌ಫೋನ್ ಆಪ್ ಅನ್ನು ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ನೀವು ಇನ್‌ಸ್ಟಾಲ್ ಮಾಡಕೊಂಡ ಸಂದರ್ಭದಲ್ಲಿ, ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ನಿತ್ಯ ಬಾಳಿಕೆ ಬರುವುದಕ್ಕಿಂತ ಒಂದು ಗಂಟೆ ಹೆಚ್ಚಿನ ಬಾಳಿಕೆಯನ್ನು ನೀಡಲಿದೆ ಎನ್ನಲಾಗಿದೆ. ಈಗಾಗಲೇ ಇದು ಪರೀಕ್ಷೆಯಲ್ಲಿ ಸಾಬೀತು ಸಹ ಆಗಿದೆ.

200 ಸ್ಮಾರ್ಟ್‌ಫೋನಿನಲ್ಲಿ ಪರೀಕ್ಷೆ:
ಹೊಸದಾಗಿ ಬ್ಯಾಟರಿ ಬ್ಯಾಕಪ್ ಅನ್ನು ಹೆಚ್ಚು ಮಾಡುವ ಆಪ್ ಅನ್ನು ಸುಮಾರು 200 ವಿವಿಧ ಬ್ರಾಂಡ್a ಸ್ಮಾರ್ಟ್‌ಫೋನ್‌ಗಳಲ್ಲಿ ಹಾಕಿ ಟೆಸ್ಟ್ ಮಾಡಲಾಗಿದೆ. ಈ ಎಲ್ಲಾ ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ ಬ್ಯಾಕಪ್ ಶೇ.10 ರಿಂದ 25% ಏರಿಕೆಯಾಗಿದೆ ಎನ್ನಲಾಗಿದೆ.

ಹೇಗೆ ಕಾರ್ಯನಿರ್ವಹಿಸಲಿದೆ:
ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಒಮ್ಮೆಗೆ ಹಲವು ವಿಂಡೋಗಳನ್ನು ತೆರೆದುಕೊಂಡ ಸಂದರ್ಭದಲ್ಲಿ ಬೇಡದಿರುವ ಕಾರಣಕ್ಕೆ ಬ್ಯಾಟರಿಯನ್ನು ಬಳಕೆ ಮಾಡಿಕೊಳ್ಳುತ್ತವೆ. ಈ ಹೊಸ ಆಪ್ ಅವುಗಳು ಹೆಚ್ಚು ಬ್ಯಾಟರಿಯನ್ನು ಬಳಕೆ ಮಾಡಿಕೊಳ್ಳದಂತೆ ತಡೆಹಿಡಿಯಲು ಶಕ್ತವಾಗಿದೆ ಎನ್ನಲಾಗಿದೆ.

ಉತ್ತಮ ಆಪ್:
ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಬ್ಯಾಟರಿ ಬಾಳಿಕೆಯೂ ಹೆಚ್ಚಿನ ಆದ್ಯತೆಯ ವಿಷಯವಾಗಿದೆ ಈ ಹಿನ್ನಲೆಯಲ್ಲಿ ನಾನ್ ಕರ್ಮಷಿಯಲ್ ಆಪ್‌ಗಳನ್ನು ನಿಲ್ಲಿಸುವ ಮೂಲಕ ಬ್ಯಾಕಪ್ ಅನ್ನು ಏರಿಕೆ ಮಾಡಲಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಬೆಸ್ಟ್ ಆಪ್ ಎನ್ನುವ ಖ್ಯಾತಿಗೆ ಇದು ಪಾತ್ರವಾಗಲಿದೆ.


Click it and Unblock the Notifications




