Subscribe to Gizbot

ವಾಟ್ಸ್‌ಆಪ್ ನೀಡಲು ಸಾಧ್ಯವೇ ಇಲ್ಲ: ಹೈಕ್‌ನಲ್ಲಿ ಬಂದಿದೆ ಒಲಾ..!

Written By:

ದೇಶಿಯ ಮೂಲದ ಸೋಶಿಯಲ್ ಮೆಸೆಂಜಿಗ್ ತಾಣ ಹೈಕ್, ಫೇಸ್‌ಬುಕ್ ಮಾಲೀಕತ್ವದ ವಾಟ್ಸ್‌ಆಪ್ ನೊಂದಿಗೆ ನೇರವಾಗಿ ಸ್ಪರ್ಧೆಗೆ ಇಳಿದೆ. ವಾಟ್ಸ್‌ಆಪ್ ನೀಡದ ಇರುವ ಹಲವು ಆಯ್ಕೆಗಳನ್ನು ಬಳಕೆಗೆ ನೀಡುತ್ತಿದೆಯಾದರೂ ಹೆಚ್ಚಿನ ಜನರನ್ನು ಸೆಳೆಯಲು ಹಿಂದೆ ಬಿದ್ದಿದೆ. ಈಗಾಗಲೇ ಹೈಕ್ ಹಣ ವರ್ಗವಣೆಯನ್ನು ಮಾಡುವ ಆಯ್ಕೆಯನ್ನು ನೀಡಿದೆ ಆದರೆ ವಾಟ್ಸ್‌ಆಪ್ ಇನ್ನು ಎಲ್ಲಾ ಬಳಕೆದಾರರಿಗೆ ಈ ಅವಕಾಶವನ್ನು ನೀಡಲ್ಲ ಎನ್ನಲಾಗಿದೆ.

ವಾಟ್ಸ್‌ಆಪ್ ನೀಡಲು ಸಾಧ್ಯವೇ ಇಲ್ಲ: ಹೈಕ್‌ನಲ್ಲಿ ಬಂದಿದೆ ಒಲಾ..!

ಇದಲ್ಲದೇ ಮತ್ತೊಂದು ಪ್ರಯತ್ನಕ್ಕೂ ಹೈಕ್ ಮುಂದಾಗಿದ್ದು, ಹೈಕ್ ತನ್ನ ಬಳಕೆದಾರರಿಗೆ ತನ್ನ ಆಪ್ ನಲ್ಲಿಯೇ ಒಲಾ ಕ್ಯಾಬ್ ಬುಕ್ ಮಾಡುವ ಅವಕಾಶವನ್ನು ಮಾಡಿಕೊಡಲಿದೆ. ಅಲ್ಲದೇ ತನ್ನ ವ್ಯಾಲೆಟ್ ಮೂಲಕವೇ ಹಣವನ್ನು ಪಾವತಿ ಮಾಡುವ ಅವಕಾಶವನ್ನು ನೀಡಿದೆ. ವಾಟ್ಸ್ಆಪ್ ಪೇಮೆಂಟ್ ಆಯ್ಕೆಯನ್ನು ನೀಡಿದ್ದ ಹಿನ್ನಲೆಯಲ್ಲಿ ಅದನ್ನು ಮಿರೀಸುವ ಪ್ರಯತ್ನವನ್ನು ಇದು ಮಾಡುತ್ತಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒಲಾ-ಹೈಕ್

ಒಲಾ-ಹೈಕ್

ದೇಶದ ಸುಮಾರು 110 ನಗರಗಳಲ್ಲಿ ಆಪ್ ಆಧಾರಿತ ಕ್ಯಾಬ್ ಸೇವೆಯನ್ನು ಒಲಾ ನೀಡುತ್ತಿದ್ದು, ಭಾರತೀಯ ಮೂಲಕದ ಕಂಪನಿಯಾಗಿದೆ. ಸದ್ಯ ಹೈಕ್‌ ನೊಂದಿಗೆ ಒಲಾ ಒಪ್ಪಂದವನ್ನು ಮಾಡಿಕೊಂಡಿದೆ ಎನ್ನಲಾಗಿದೆ.

Do you know what all u can do by Downloading Hike Messenger app.?
ಹೈಕ್‌ನಲ್ಲಿಯೇ ಬುಕ್ ಮಾಡಿ

ಹೈಕ್‌ನಲ್ಲಿಯೇ ಬುಕ್ ಮಾಡಿ

ಹೈಕ್ ಬಳಕೆದಾರರು ಒಲಾ ಕ್ಯಾಬ್ ಅನ್ನು ಸುಲಭವಾಗಿ ಬುಕ್ ಮಾಡಬಹುದಾಗಿದೆ. ಇದಕ್ಕಾಗಿಯೇ ಹೊಸ ಆಪ್ ಡೇಟ್ ಅನ್ನು ಹೈಕ್ ನೀಡಲಿದೆ ಎನ್ನಲಾಗಿದೆ. ಇದರಿಂದಾಗಿ ಮತ್ತೊಂದು ಆಪ್ ಹಾಕಿಕೊಳ್ಳುವ ಅಗತ್ಯತೆಯೂ ಇಲ್ಲ.

ಹೈಕ್‌ನಿಂದಲೇ ಪಾವತಿಸಿ

ಹೈಕ್‌ನಿಂದಲೇ ಪಾವತಿಸಿ

ಇದಲ್ಲದೇ ಹೈಕ್ ನಿಂದ ಕ್ಯಾಬ್ ಬುಕ್ ಮಾಡಿದರೆ ಹೈಕ್ ವ್ಯಾಲೆಟ್ ನಿಂದಲೇ ಹಣವನ್ನು ಪಾವತಿ ಮಾಡುವ ವ್ಯವಸ್ಥೆಯನ್ನು ಮಾಡಿಕೊಡಲಾಗಿದೆ. ಇದರಿಂದಾಗಿ ಕ್ಯಾಷ್ ಲೆಸ್ ಪ್ರಯಾಣವನ್ನು ಮಾಡಲು ಹೈಕ್ ಬಳಕೆದಾರರು ಅವಕಾಶವನ್ನು ಪಡೆದುಕೊಂಡಿದ್ದಾರೆ.

ಕಡಿಮೆ ಗಾತ್ರ

ಕಡಿಮೆ ಗಾತ್ರ

ಇದಲ್ಲದೇ ಒಲಾ ಸೇರ್ಪಡೆಗಾಗಿ ಹೈಕ್ ನೀಡುತ್ತಿರುವ ಆಪ್‌ಡೇಟ್ ಅತೀ ಸಣ್ಣಗಾತ್ರದಲ್ಲಿ ಇರಲಿದ್ದು, ಒಲಾ ಲೈಟ್ ಮಾದರಿಯೂ ಹೈಕ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನು ಇದೆ

ಇನ್ನು ಇದೆ

ಹೈಕ್ ಬಳಕೆದಾರರು ಕೇವಲ ಒಲಾ ಬುಕ್ ಮಾಡುವುದಲ್ಲದೇ ಇನ್ನು ಅನೇಕ ಕಾರ್ಯಗಳನ್ನು ಮಾಡಲು ಶಕ್ತರಾಗಿದ್ದಾರೆ ಎನ್ನಲಾಗಿದೆ. ಎಲೆಕ್ಟ್ರಿಸಿಟಿ ಬಿಲ್, ಗ್ಯಾಸ್ ಬಿಲ್, DTH ರಿಚಾರ್ಜ್ ಹಾಗೂ ಮೊಬೈಲ್ ರಿಚಾರ್ಜ್ ಮಾಡಿಕೊಳ್ಳುವ ಅವಕಾಶವನ್ನು ಹೊಂದಿದ್ದಾರೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Now Book an Ola Right From Your Hike App. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot