ರೈಲ್ವೆ ಪ್ರಯಾಣದ ನಡುವೆಯೇ ಟಿಕೆಟ್ ನೀಡುವ ''ಯುಟಿಎಸ್ ಆಪ್'' ನೀಡುತ್ತಿದೆ ಭರ್ಜರಿ ಕ್ಯಾಶ್‌ಬ್ಯಾಕ್!!

|

ವಿಮಾನಯಾನ ಸೇವೆಯಂತೆ ಅಪ್‌ಡೇಟ್ ಆಗುತ್ತಿರುವ ಭಾರತೀಯ ರೈಲ್ವೆ ಇಲಾಖೆಯು ಕಾಯ್ದಿರಿಸದ ಟಿಕೆಟ್ ವ್ಯವಸ್ಥೆ (ಯುಟಿಎಸ್) ಬಳಕೆದಾರರಿಗೆ ಆಕರ್ಷಕ ಕೊಡುಗೆ ನೀಡಲು ಮುಂದಾಗಿದೆ. ಪ್ರಯಾಣಿಕರನ್ನು ಆಕರ್ಷಿಸಲು ರೈಲ್ವೆ ಇಲಾಖೆ ಈ ಆಫರ್ ನೀಡುತ್ತಿದ್ದು, ಇದೇ ಗುರುವಾರದಿಂದ ಹೊಸ ಸೌಲಭ್ಯ ಎಲ್ಲಾ ರೈಲ್ವೆ ವಿಭಾಗಗಳಲ್ಲಿ ಜಾರಿಗೆ ಬರಲಿದೆ.

ರೈಲ್ವೆ ಇಲಾಖೆಯ ಯುಟಿಎಸ್ ಆಪ್‌ನಲ್ಲಿರುವ ಆರ್‌ ವ್ಯಾಲೆಟ್‌ಗೆ ಮಾಡುವ ಪ್ರತಿ ರಿಚಾರ್ಜ್‌ಗೆ ಹೆಚ್ಚುವರಿಯಾಗಿ ಶೇ. 5ರಷ್ಟು "ಕ್ಯಾಶ್‌ ಬ್ಯಾಕ್‌'' ನೀಡಲು ಇಲಾಖೆ ನಿರ್ಧರಿಸಿದೆ. ಅಲ್ಲದೆ, ರಿಚಾರ್ಜ್‌ನ ಗರಿಷ್ಠ ಮಿತಿಯನ್ನು ಕೂಡ ದುಪ್ಪಟ್ಟುಗೊಳಿಸಿದ್ದು, ಕನಿಷ್ಠ 100ರೂಪಾಯಿಗಳಿಂದ ಗರಿಷ್ಠ 10 ಸಾವಿರ ರೂಪಾಯಿಗಳ ವರೆಗೂ ವಿಸ್ತರಿಸಿರುವ ಮಾಹಿತಿಯನ್ನು ರೈಲ್ವೆ ನಿಡಿದೆ.

ರೈಲ್ವೆ ಪ್ರಯಾಣದ ನಡುವೆಯೇ ಟಿಕೆಟ್ ನೀಡುವ ಆಪ್ ನೀಡುತ್ತಿದೆ ಕ್ಯಾಶ್‌ಬ್ಯಾಕ್!!

ಕಾಯ್ದಿರಿಸದ ಟಿಕೆಟ್ ಪಡೆಯಲು ಆರ್‌-ವ್ಯಾಲೆಟ್ ಅತ್ಯಗತ್ಯವಾಗಿದ್ದು, ಬಳಕೆದಾರರು ಪೇಟಿಎಂ, ಮೊಬಿಕ್ವಿಕ್ ಅಥವಾ ಆನ್‌ ಲೈನ್‌ ಮೂಲಕ ಆರ್‌-ವ್ಯಾಲೆಟ್‌ಗೆ ಹಣ ತುಂಬಿಸಬಹುದಾಗಿದೆ. ಹಾಗಾದರೆ, ರೈಲ್ವೆ ಇಲಾಖೆಯು ಯುಟಿಎಸ್ ಬಳಕೆದಾರರಿಗೆ ನೀಡಿರುವ ಕ್ಯಾಶ್‌ಬ್ಯಾಕ್ ಹೇಗೆ ಸಿಗಲಿದೆ? ರೈಲ್ವೆ ಮತ್ತು ಗ್ರಾಹಕರಿಗೆ ಏನು ಲಾಭ ಎಂಬುದನ್ನು ಮುಂದೆ ತಿಳಿಯಿರಿ.

ಯುಟಿಎಸ್ ಆಪ್‌

ಯುಟಿಎಸ್ ಆಪ್‌

ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಸಲು ಪ್ರಯಾಣಿಕರು ತಾವು ಇದ್ದಲ್ಲಿಂದಲೇ ಟಿಕೆಟ್‌ ಪಡೆಯಲು ಅನುಕೂಲವಾಗುವಂತೆ ಫೆಬ್ರವರಿ 8ರಂದು ಯುಟಿಎಸ್ ಆಪ್‌ ಬಿಡುಗಡೆಮಾಡಲಾಗಿತ್ತು. ಇದಾಗಿ ಮೂರೂವರೆ ತಿಂಗಳಲ್ಲಿ ಸುಮಾರು 50 ಸಾವಿರ ಜನ ನೋಂದಣಿ ಮಾಡಿಕೊಂಡು, 17,35,452 ಮೊತ್ತದಷ್ಟು ಟಿಕೆಟ್ ಖರೀದಿಯಾಗಿತ್ತು.

ಯುಟಿಎಸ್ ಲಾಭ ಹೇಗೆ?

ಯುಟಿಎಸ್ ಲಾಭ ಹೇಗೆ?

ರೈಲು ಬರಲು ಇನ್ನೇನು ಕೆಲವೇ ನಿಮಿಷವಷ್ಟೇ ಬಾಕಿ ಇದೆ ಎನ್ನುವಾಗ ಟಿಕೆಟ್ ಖರೀದಿಸಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಯುಟಿಎಸ್ ಹೇಳಿ ಮಾಡಿಸಿದ ವ್ಯವಸ್ಥೆ ಆಗಿದೆ. ಮಾರ್ಗದಲ್ಲಿಯೇ ಮೊಬೈಲ್‌ನಲ್ಲಿ ಟಿಕೆಟ್ ಪಡೆಯಬಹುದು. ನಂತರ ಮೊಬೈಲ್‌ ನಲ್ಲಿಯ ಟಿಕೆಟ್ ತೋರಿಸಿದರೆ ಸಾಕು.

ಶೇ. 5ರಷ್ಟು

ಶೇ. 5ರಷ್ಟು "ಕ್ಯಾಶ್‌ ಬ್ಯಾಕ್‌''

ಬಳಕೆದಾರರು ಹೆಚ್ಚಾಗಿರುವುದನ್ನು ಮನಗಂಡಿರುವ ರೈಲ್ವೆ ಯುಟಿಎಸ್ ಬಳಕೆದಾರರಿಗೆ 5% ಕ್ಯಾಶ್‌ಬ್ಯಾಕ್ ಘೋಷಿಸಿದೆ. ಬಳಕೆದಾರ ಒಂದು ಸಾವಿರ ರೂಪಾಯಿ ರಿಚಾರ್ಜ್ ಮಾಡಿಸಿದರೆ, ಆತನ ಖಾತೆಗೆ 1,050 ರೂ. ಜಮೆ ಆಗಲಿದೆ .ಈ ಕೊಡುಗೆಯಿಂದ ಯುಟಿಎಸ್ ಬಳಕೆದಾರರ ಸಂಖ್ಯೆಯನ್ನು ಮುಂದಿನ ದಿನಗಳಲ್ಲಿ ದ್ವಿಗುಣಗೊಳ್ಳಲಿದೆ ಎಂದು ರೈಲ್ವೆ ಇಲಾಖೆ ನಿರೀಕ್ಷಿಸಿದೆ.

ಸಿಲಿಕಾನ್‌ ಸಿಟಿ ಜನರಿಗೆ ಲಾಭ!!

ಸಿಲಿಕಾನ್‌ ಸಿಟಿ ಜನರಿಗೆ ಲಾಭ!!

ಯುಟಿಎಸ್ ಸೇವೆ ಎಲ್ಲ ರೈಲ್ವೆ ವಲಯಗಳಲ್ಲಿ ಜಾರಿಯಾಗಿದ್ದರೂ ಕೂಡ, ಅತಿ ಹೆಚ್ಚು ಬಳಕೆ ಇರುವುದು ಸಿಲಿಕಾನ್‌ ಸಿಟಿಯಲ್ಲಿ ಮಾತ್ರ. ಆಪ್‌ನಲ್ಲಿ ಒಟ್ಟಾರೆ ನೋಂದಣಿಯಾದ 50,232ರಲ್ಲಿ 38,672 ಮಂದಿ ಬೆಂಗಳೂರಿನಿಂದಲೇ ನೋಂದಣಿಯಾಗಿದ್ದಾರೆ. ಮೈಸೂರಿನಲ್ಲಿ 8,255 ಜನರಯ ಮತ್ತು ಹುಬ್ಬಳ್ಳಿಯಲ್ಲಿ 3,305 ಜನರು ಆಪ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.

ಎಲ್ಲಾ ಮಾದರಿಗಳಲ್ಲಿಯೂ ಆಪ್!!

ಎಲ್ಲಾ ಮಾದರಿಗಳಲ್ಲಿಯೂ ಆಪ್!!

ಬಿಡುಗಡೆಯಾದ ಮೊದಲು ಈ ಯುಟಿಎಸ್ ಆಪ್‌ ವಿಂಡೋಸ್‌ ಮತ್ತು ಆಂಡ್ರಾಯ್ಡ್ ಆವೃತ್ತಿಗಳಿಗೆ ಮಾತ್ರ ಸೀಮಿತವಾಗಿತ್ತು. ಇತ್ತೀಚೆಗೆ ಆಪಲ್‌ನ ಐಒಎಸ್ ಮಾದರಿ ಮೊಬೈಲ್‌ಗ‌ಳಿಗೂ ವಿಸ್ತರಿಸಲಾಗಿದೆ. ಅಷ್ಟೇ ಅಲ್ಲ, ಈ ಎಲ್ಲಾ ಮಾದರಿಗಳಲ್ಲಿಯೂ ಕನ್ನಡದಲ್ಲಿ ಮಾಹಿತಿ ಲಭ್ಯವಾಗುತ್ತಿದೆ. ಹಾಗಾದರೆ, ತಡವೇಕೆ? ಈಗಲೇ ಡೌನ್‌ಲೋಡ್ ಮಾಡಿಬಿಡಿ.!!

Best Mobiles in India

English summary
Mobile, App, Railway, Tickets, UTS, ticketing app, ಯುಟಿಎಸ್, ಆಪ್‌, ರೈಲ್ವೆ, news

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X