TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಆಪ್ ಆಧಾರಿತ ಕ್ಯಾಬ್ ಸೇವೆಯಲ್ಲಿ ಸದ್ದು ಮಾಡುತ್ತಿರುವ ಒಲಾ ತನ್ನ ಬಳಕೆದಾರರಿಗೆ ಹೊಸದೊಂದು ಆಫರ್ ಅನ್ನು ಲಾಂಚ್ ಮಾಡಿದ್ದು, ಇದರಿಂದಾಗಿ ಬಳಕೆದಾರರು ಉಚಿತವಾಗಿ ಕ್ಯಾಬ್ ಸೇವೆಯನ್ನು ಕ್ಯಾಷ್ ಲೈಸ್ ನಲ್ಲಿಯೇ ಪಡೆದುಕೊಳ್ಳಬಹುದಾಗಿದೆ. ಇದರಿಂದಾಗಿ ಬಳಕೆದಾರರಿಗೆ ಸಾಕಷ್ಟು ಲಾಭವಾಗಲಿದೆ.
ಒಲಾ ಇದಕ್ಕಾಗಿ ಮೊಬಿಕ್ವೀಕ್ (Mobikwik) ಮೊಬೈಲ್ ವ್ಯಾಲೆಟ್ ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದು, ಇದರಿಂದಾಗಿ ಇನ್ನು ಮುಂದೆ ಮೊಬಿಕ್ವೀಕ್ ಆಪ್ ಮೂಲಕವು ಒಲಾ ಕ್ಯಾಬ್ನ್ನು ಬುಕ್ ಮಾಡಬಹುದು. ಇದರಲ್ಲಿ ಬುಕ್ ಮಾಡಿದರೆ 100% ಕ್ಯಾಷ್ ಬ್ಯಾಕ್ ಆಫರ್ ದೊರೆಯುತ್ತಿದೆ ಎನ್ನಲಾಗಿದೆ.
ಪ್ರತಿ ಪ್ರಯಾಣಕ್ಕೆ:
ಮೊಬಿಕ್ವೀಕ್ ಆಪ್ ಮೂಲಕ ಒಲಾ ಕ್ಯಾಬ್ ಬುಕ್ ಮಾಡಿದ್ದಲ್ಲಿ, ಮೊದಲ ಐದು ಪ್ರಯಾಣಕ್ಕೆ 50ರೂ ಕ್ಯಾಷ್ ಬ್ಯಾಕ್ ದೊರೆಯಲಿದೆ. ಈ ಒಪ್ಪಂದವು ಎರಡು ಕಂಪನಿಗಳಿಗೂ ಲಾಭ ವಾಗಲಿದ್ದು, ಪ್ರಯಾಣಿಕರಿಗೂ ಒಲಾ ಪ್ರಯಾಣ ಸುಲಭವಾಗಲಿದೆ.
100% ಕ್ಯಾಷ್ ಬ್ಯಾಕ್:
ಮೊಬಿಕ್ವೀಕ್ ಆಪ್ ಮೂಲಕ ಒಲಾ ಕ್ಯಾಬ್ ಬುಕ್ ಮಾಡಿದ್ದಲ್ಲಿ, ಪ್ರತಿದಿನ ಬೆಳಿಗ್ಗೆ 7 ಗಂಟೆಯಿಂದ 10 ಗಂಟೆಯವರೆಗೆ ಮತ್ತು ಸಂಜೆ 4 ರಿಂದ 7 ಗಂಟೆಯ ನಡುವಿನಲ್ಲಿ ಮೊಬಿಕ್ವೀಕ್ ವ್ಯಾಲೆಟ್ ಬಳಸಿ ಓಲಾ ಬುಕ್ ಮಾಡಿದರೆ 100% ಕ್ಯಾಶ್ಬ್ಯಾಕ್ ಪಡೆಯುವ ಅವಕಾಶ ಸಿಗಲಿದೆ. ಈ ಆಫರ್ ಮೊದಲು ಬುಕ್ ಮಾಡುವ 1000 ಜನರಿಗೆ ಮಾತ್ರ ಅನ್ವಯಿಸಲಿದೆ.
ಒಲಾ ಸೇವೆಗಳು:
ಒಲಾ - ಮೊಬಿಕ್ವೀಕ್ ಪಾಲುದಾರಿಕೆಯಿಂದಾಗಿ ಒಲಾ ಪ್ರೈಮ್, ಪ್ರೈಮ್ ಪ್ಲೇ, ಎಸ್ಯುವಿ ಮತ್ತು ಲಕ್ಸುರಿ ಸೇವೆಗಳನ್ನು ಮೊಬಿಕ್ವೀಕ್ ಆಪ್ ಮೂಲಕವೇ ಪಡೆಯಬಹುದಾಗಿದೆ. ಇದಕ್ಕಾಗಿ ಮೊಬಿಕ್ವೀಕ್ ಆಪ್ ಅನ್ನು ಆಪ್‌ಡೇಟ್ ಮಾಡಬೇಕಾಗಿದೆ.
ಸ್ಮಾರ್ಟ್ ಬುಕ್ಕಿಂಗ್:
ಗ್ರಾಹಕರ ವಿನಂತಿಗೆ ಅನುಸಾರವಾಗಿ ಸ್ಮಾರ್ಟ್ ಬುಕ್ಕಿಂಗ್ ಆಯ್ಕೆಯನ್ನು ಪರಿಚಯಿಸಿದ್ದೇವೆ ಎಂದು ಮೊಬಿಕ್ವೀಕ್ ತಿಳಿಸಿದ್ದು, ಮುಂದಿನ ದಿನಗಳಲ್ಲಿ ಇದು ಅತ್ಯುತ್ತಮ ಫಲಿತಾಂಶ ನೀಡುವ ವಿಶ್ವಾಸವಿದೆ. ಇನ್ನಷ್ಟು ಹೊಸ ಸೇವೆಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ.