ಗೂಗಲ್ ಡ್ಯುಯೋದಿಂದ ವೀಡಿಯೋ ಕರೆ ಮಾಡಲು ಗೂಗಲ್ ಅಸಿಸ್ಟೆಂಟ್ ನೆರವು
ಮೊಬೈಲ್ ನಲ್ಲಿ ಬಟನ್ ಒತ್ತುತ್ತಾ ಇರುವ ಕಾಲ ಹೋಯ್ತು. ನಂತರ ಟಚ್ ಸ್ಕ್ರೀನ್ ಆರಂಭವಾಯ್ತು. ಆದರೆ ಈಗ ಮೊಬೈಲ್ ಮುಟ್ಟುವುದು ಬೇಡ. ಬಾಯಲ್ಲಿ ಹೇಳಿದರೆ ಸಾಕು, ನಿಮ್ಮ ಮೊಬೈಲ್ ನೀವು ಹೇಳುವ ಕೆಲಸವನ್ನು ಮಾಡುತ್ತದೆ. ಅಷ್ಟರಮಟ್ಟಿಗೆ ಕೃತಕ ಬುದ್ಧಿಮತ್ತೆ ಅಭಿವೃದ್ಧಿ ಕಂಡಿದೆ. ಹೌದು ನಾವು ಮಾತನಾಡುತ್ತಾ ಇರುವುದು ಗೂಗಲ್ ಅಸಿಸ್ಟೆಂಟ್ ಬಗ್ಗೆ.
ಹಾಯ್ ಗೂಗಲ್ ಹೀಗೆ ಮಾಡು ಎಂದು ಸೂಚಿಸಿದರೆ ಸಾಕು ಅದು ನೀವು ಹೇಳುವ ಮೊಬೈಲ್ ಸಂಬಂಧಿತ ಕೆಲಸಕಾರ್ಯಗಳನ್ನು ಮಾಡುತ್ತದೆ. ಇನ್ನು ಮುಂದೆ ಈ ಗೂಗಲ್ ಅಸಿಸ್ಟೆಂಟ್ ಬಳಸಿ ಗೂಗಲ್ ಡುಯೋ ಮೂಲಕ ವೀಡಿಯೋ ಕರೆಗಳನ್ನು ಮಾಡುವ ಅವಕಾಶವು ಲಭ್ಯವಾಗುತ್ತದೆ.

ಗೂಗಲ್ ಅಸಿಸ್ಟೆಂಟ್ ದಿನದಿಂದ ದಿನಕ್ಕೆ ಹೆಚ್ಚು ಪ್ರಸಿದ್ಧಿಯಾಗುತ್ತಿದೆ ಮತ್ತು ಅದು ಕೇವಲ ಗೂಗಲ್ ನಿಂದ ಮಾಹಿತಿಗಳನ್ನು ಪಡೆದುಕೊಳ್ಳಲು ಮಾತ್ರ ಸೀಮಿತವಾಗಿ ಉಳಿಯದೇ ಒಂದು ಚಾಟ್ ಮಾಡುವ ಕುತೂಹಲಕಾರಿ ಆಪ್ ಆಗಿ ಬದಲಾಗುತ್ತಿದೆ.
ಗೂಗಲ್ ಈ ಏಕೀಕರಣವನ್ನು ಸಾಧಿಸಲು ತನ್ನ ವರ್ಚುವಲ್ ಡಿಜಿಟಲ್ ಅಸಿಸ್ಟೆಂಟ್ ಗೂಗಲ್ ಅಸಿಸ್ಟೆಂಟ್ ನ್ನು ವೀಡಿಯೋ ಕಾಲಿಂಗ್ ಮಾಡಲು ತನ್ನ ವೀಡಿಯೋ ಕರೆಗಳ ಆಪ್ ಆಗಿರುವ ಗೂಗಲ್ ಡುಯೋದೊಂದಿಗೆ ಅವಕಾಶ ಕಲ್ಪಿಸಿ ಕೊಡುತ್ತಿದೆ.
ಆಂಡ್ರಾಯ್ಡ್ ಪೋಲೀಸರ ವರದಿಯಂತೆ, ಬಳಕೆದಾರರು ತಮ್ಮ ಸ್ಮಾರ್ಟ್ ಫೋನ್ ನಲ್ಲಿರುವ ಗೂಗಲ್ ಅಸಿಸ್ಟೆಂಟ್ ಸಹಾಯಕದ ಮೂಲಕ ಕಾಂಟ್ಯಾಕ್ಟ್ ಪಟ್ಟಿಯಲ್ಲಿರುವ ಯಾವುದೇ ನಂಬರ್ ಗೆ ವೀಡಿಯೋ ಕರೆಗಳನ್ನು ಮಾಡಲು ಹೇಳಬಹುದು. ಆಗ ಗೂಗಲ್ ಅಸಿಸ್ಟೆಂಟ್ ಗೂಗಲ್ ಡುಯೋ ಆಪ್ ಮೂಲಕ ಇದನ್ನು ಸಾಧಿಸುತ್ತದೆ.ಆದರೆ, ಒಂದು ವೇಳೆ ಬಳಕೆದಾರರು ಗೂಗಲ್ ಡುಯೋವನ್ನು ಇನ್ಸ್ಟಾಲ್ ಮಾಡಿಲ್ಲದೇ ಇದ್ದರೆ ಆಗ ಅದು ಸ್ವಯಂಚಾಲಿತವಾಗಿ ಹ್ಯಾಂಗ್ಸ್ ಔಟ್ ನ್ನು ವೀಡಿಯೋ ಕರೆಗಳಿಗೆ ಬಳಕೆ ಮಾಡುತ್ತದೆ.

ವರದಿಯ ಅನುಸಾರ ಸದ್ಯ ಈ ವೈಶಿಷ್ಟ್ಯವು ಇನ್ನೂ ಬಿಡುಗಡೆಗೊಂಡಿಲ್ಲ. ಸದ್ಯ ಕೆಲವೇ ಕೆಲವು ಪ್ರದೇಶಗಳಲ್ಲಿ ಮಾತ್ರ ಇದು ಕೆಲಸ ಮಾಡುತ್ತದಿ.ಆಂಡ್ರಾಯ್ಡ್ ಮತ್ತು ಐಓಎಸ್ ಎರಡರಲ್ಲೂ ಇದನ್ನು ಪ್ರಯತ್ನಿಸುವ ಅವಕಾಶವಿದೆ. ಇದರ ಜೊತೆಗೆ , ಗೂಗಲ್ ಅಸಿಸ್ಟೆಂಟ್ ಸೆಟ್ಟಿಂಗ್ಸ್ ಗೂಗಲ್ ಡುಯೋ ಅಕೌಂಟ್ ಗೆ ವೀಡಿಯೋ ಮತ್ತು ಆಡಿಯೋ ಕರೆಗಳನ್ನು ಸಾಧಿಸುವ ನಿಟ್ಟಿನಲ್ಲಿ ಕಾಂಟ್ಯಾಕ್ಟ್ ಗಳನ್ನು ಲಿಂಕ್ ಮಾಡಿಕೊಳ್ಳಲು ಅವಕಾಶವಿರುತ್ತದೆ.
ಹಾಗಾದ್ರೆ ವೀಡಿಯೋ ಕಾಲಿಂಗ್ ನ್ನು ಗೂಗಲ್ ಅಸಿಸ್ಟೆಂಟ್ ಬಳಸಿ ಮಾಡುವುದಾದರೂ ಹೇಗೆ ? ಒಂದು ವೇಳೆ ಈ ವೈಶಿಷ್ಟ್ಯವು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಲಭ್ಯವಿದ್ದರೆ, ಜಸ್ಟ್ ಗೂಗಲ್ ಅಸಿಸ್ಟೆಂಟ್ ನ್ನು ಎಚ್ಚರಿಸಬೇಕು ಮತ್ತು ಕಾಂಟ್ಯಾಕ್ಟಾ ನಲ್ಲಿರುವ ಯಾವುದೇ ನಂಬರ್ ಗೆ ವೀಡಿಯೋ ಕರೆ ಮಾಡುವಂತೆ ಸೂಚಿಸಬೇಕು. ಅದಕ್ಕಾಗಿ ನೀವು ಜಸ್ಟ್ ಹೀಗೆ ಹೇಳಿದರೆ ಸಾಕು –“ಹಾಯ್ ಗೂಗಲ್, ವೀಡಿಯೋ ಕಾಲ್ “ಕಾಂಟ್ಯಾಕ್ಟ್ ನಲ್ಲಿರುವ ಹೆಸರು”" ಮತ್ತು ಇಷ್ಟು ಹೇಳುತ್ತಿದ್ದಂತೆ ನಿಮ್ಮ ವೀಡಿಯೋ ಕರೆ ಪ್ರಾರಂಭಗೊಳ್ಳುತ್ತದೆ.
ಆದರೆ ಇದೆಲ್ಲದರ ಜೊತೆಗೆ ಕೆಲವೊಂದಿಷ್ಟು ನಿಯಮಗಳನ್ನು ಕೂಡ ಗೂಗಲ್ ಡುಯೋ ಪೇಜ್ ನಲ್ಲಿ ಹೇಳಲಾಗಿದೆ. ಹಾಗೆ ಮಾಡಿದರೆ ಮಾತ್ರ ನೀವು ವೀಡಿಯೋ ಕರೆಗಳನ್ನು ಮಾಡಲು ಸಾಧ್ಯವಾಗುತ್ತದೆ. ನೀವಿದನ್ನು ಮೊದಲ ಬಾರಿ ಬಳಕೆ ಮಾಡುತ್ತಿರುವುದಾದರೆ, ಆಂಡ್ರಾಯ್ಡ್ ಬಳಕೆದಾರರು ಇತ್ತೀಚಿನ ಮೊಬೈಲ್ ಓಎಸ್ ಆವೃತ್ತಿ ಪಡೆದಿರಬೇಕು ಅದುವೇ ಆಂಡ್ರಾಯ್ಡ್ 7.0 ಅಥವಾ ಅದಕ್ಕಿಂತ ಮೇಲಿನ ಆವೃತ್ತಿಗಳಾಗಿರಬೇಕು.
ಇತ್ತೀಚಿನ ಆವೃತ್ತಿಯ ಡುಯೋ ಕೂಡ ಇನ್ಸ್ಟಾಲ್ ಆಗಿರಬೇಕು ಅದುವೇ ವರ್ಷನ್ 13.0 ಮತ್ತು ಅದಕ್ಕಿಂತ ಮೇಲಿನ ಫೋನ್ ಆಪ್. ಕಾಂಟಾಕ್ಟ್ ಆಪ್ ವರ್ಷನ್ 2.1 ಅಥವಾ ಅದಕ್ಕಿಂತ ಮೇಲಿನದ್ದಾಗಿರಬೇಕು. ಮೇಸೇಜಿಂಗ್ ಆಪ್ ವರ್ಷನ್ 2.6 ಅಥವಾ ಅದಕ್ಕಿಂತ ಮೇಲಿನದ್ದಾಗಿರಬೇಕು ಆಗ ಮಾತ್ರ ಡುಯೋ ಮೂಲಕ ವೀಡಿಯೋ ಮತ್ತು ವಾಯ್ಸ್ ಕರೆಗಳನ್ನು ಮಾಡಲು ಸಾಧ್ಯವಾಗುತ್ತದೆ. ಒಟ್ಟಾರೆ ದೈನಂದಿನ ಬದುಕಿನಲ್ಲಿ ಗೂಗಲ್ ಅಸಿಸ್ಟೆಂಟ್ ಬಹಳ ಅವಿಭಾಜ್ಯ ಅಂಗವೇನೋ ಎಂಬಂತೆ ಬದಲಾಗುತ್ತಾ ಇರುವುದು ಮಾತ್ರ ಸುಳ್ಳಲ್ಲ.


Click it and Unblock the Notifications








