ಊಬರ್ ಡ್ರೈವರ್‌ಗೆ ಕರೆ ಮಾಡಲು ಸಿಮ್ ಬೇಕಿಲ್ಲ..! ವೈ-ಫೈ ಇದ್ದರೆ ಸಾಕು..!
ಊಬರ್ ಪ್ರಯಾಣಿಕರಿಗೊಂದು ಸಿಹಿ ಸುದ್ದಿ ಇದೆ. ಇನ್ನು ಮುಂದೆ ಇಂಟರ್ನೆಟ್ ಸಂಪರ್ಕ್ ಇಲ್ಲದೆಯೂ ಕೂಡ ಊಬರ್ ಡ್ರೈವರ್ ಗೆ ಕರೆ ಮಾಡಬಹುದು. ಕೇವಲ ವೈ-ಫೈ ಮೂಲಕ ಊಬರ್ ಡ್ರೈವರ್ ಜೊತೆ ಸಂಪರ್ಕ ಸಾಧಿಸಬಹುದು. ಪ್ರಯಾಣಿಕ ಮತ್ತು ಊಬರ್ ಡ್ರೈವರ್ ಗೆ ಅನುಕೂಲ ಮಾಡುವ ಹೊಸ ಯೋಜನೆ ಇದಾಗಿದೆ.

ಒಂದು ವೇಳೆ ನೀವು ಮುಂದಿನ ಬಾರಿ ವಿದೇಶಿ ಪ್ರವಾಸ ಕೈಗೊಂಡಾಗ ಮತ್ತು ಊಬರ್ ನಲ್ಲಿ ಪ್ರಯಾಣಿಸಬೇಕಾದಾಗ ಯಾವುದೇ ಸಿಮ್ ಕಾರ್ಡ್ ನ ಅಗತ್ಯವಿಲ್ಲದೆಯೂ ಕೂಡ ಊಬರ್ ಬುಕ್ ಮಾಡಬಹುದು. ಊಬರ್ ತನ್ನ ಆಪ್ ನಲ್ಲಿ VoIP ಕಾಲಿಂಗ್ ವೈಶಿಷ್ಟ್ಯತೆಯನ್ನು ಪರಿಚಯಿಸಿದೆ ಮತ್ತು ಇದು ನಿಮಗೆ ವೈ-ಫೈ ಮೂಲಕ ಡ್ರೈವರ್ ಗೆ ಕರೆಯನ್ನು ಮಾಡಲು ಅವಕಾಶ ನೀಡುತ್ತದೆ. ಅಷ್ಟೇ ಅಲ್ಲ ಡ್ರೈವರ್ ಕೂಡ ನಿಮಗೆ ಕರೆ ಮಾಡಲು ಇದರಲ್ಲಿ ಅವಕಾಶವಿದೆ.

ಅಂತರಾಷ್ಟ್ರೀಯ ರೋಮಿಂಗ್ ಚಾರ್ಜ್ ಉಳಿತಾಯ:
ಒಂದು ವೇಳೆ ನೀವು ಅಂತರಾಷ್ಟ್ರೀಯ ರೋಮಿಂಗ್ ಚಾರ್ಜ್ ಗಳನ್ನು ಉಳಿಸುವುದಕ್ಕೆ ಪ್ರಯತ್ನಿಸುವುದೇ ಆದಲ್ಲಿ ಅಥವಾ ಪ್ರವಾಸದಲ್ಲಿದ್ದಾಗ ಕೆಲಸ ಮಾಡುವ ಫೋನ್ ನಿಮ್ಮ ಬಳಿ ಇಲ್ಲದೇ ಇದ್ದಲ್ಲಿ, ನೀವು ಸರಳವಾಗಿ ವೈ-ಫೈ ಕನೆಕ್ಷನ್ ನ್ನು ಬಳಸಿ ಊಬರ್ ಡ್ರೈವರ್ ಜೊತೆಗೆ ಸಂಪರ್ಕ ಸಾಧಿಸಬಹುದು. ಊಬರ್ VoIP ಕರೆ ಸೌಲಭ್ಯವು ವಾಟ್ಸ್ ಆಪ್, ಸ್ಕೈಪ್ ಮತ್ತು ಇತರೆ ವಾಯ್ಸ್ ಕರೆಯಂತೆಯೇ ಕಾರ್ಯ ನಿರ್ವಹಿಸುತ್ತದೆ.
ಸ್ಥಳೀಯವಾಗಿ ಪ್ರವಾಸ ಮಾಡುತ್ತಿದ್ದಾಗ, ಊಬರ್ ಡ್ರೈವರ್ ಗೆ ಕರೆ ಮಾಡಲು ನೀವು ನಿಮ್ಮ ಮೊಬೈಲ್ ಅಂತರ್ಜಾಲ ಸೇವೆಯನ್ನು ಬಳಕೆ ಮಾಡಬಹುದು.ಇದು ಡ್ರೈವರ್ ಗೆ ಮತ್ತು ಆಪ್ ನ್ನು ಬಳಸುವ ರೈಡರ್ ಗೂ ಸಹಾಯ ಮಾಡುತ್ತದೆ ಮತ್ತು ಊಬರ್ ಬಳಕೆದಾರರಿಗೆ ಅತ್ಯುತ್ತಮ ಅನುಭವ ನೀಡಲು ನೆರವಾಗುತ್ತದೆ.

ಪಾವತಿಗೆ ಹಲವು ಅವಕಾಶ:
ಇತ್ತೀಚೆಗೆ ಊಬರ್ ಸಂಸ್ಥೆ ಮೊದಲು ತೇಝ್ ಎಂದು ಕರೆಯಲ್ಪಡುತ್ತಿದ್ದ ಗೂಗಲ್ ಪೇಯನ್ನು ಪಾವತಿಗಾಗಿ ಬಳಕೆ ಮಾಡಬಹುದು ಎಂದು ಪ್ರಕಟಿಸಿತ್ತು. ಇದುವರೆಗೂ ಪೇಟಿಎಂ, ಜಿಯೋಮನಿ, ಗಿಫ್ಟ್ ಕಾರ್ಡ್, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ , ಯುಪಿಐ ಪಾವತಿಗಳಿಂದ ಹಣವನ್ನು ನೀಡಲು ಊಬರ್ ಅವಕಾಶ ನೀಡುತ್ತಿತ್ತು.

4 ಕ್ಕಿಂತ ಕಡಿಮೆ ರೇಟಿಂಗ್ ಬರುವಂತಿಲ್ಲ:
ಒಟ್ಟಾರೆ ಅನುಭವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ನಲ್ಲಿ ಒಂದು ವೇಳೆ ಡ್ರೈವರ್ ಗೆ 4 ಕ್ಕಿಂತ ಕಡಿಮೆ ರೇಟಿಂಗ್ ಸಿಕ್ಕಿದ್ದೇ ಆದಲ್ಲಿ ಅವರನ್ನು ಸೇವೆಯಿಂದ ಬ್ಲಾಕ್ ಮಾಡುವ ನಿರ್ಧಾರವನ್ನು ಮಾಡಿದೆ. ಆದರೆ ಇದು ಭಾರತದಲ್ಲೂ ಜಾರಿಗೆ ತರಲಾಗಿದೆಯಾ ಅಥವಾ ಇಲ್ಲವಾ ಎಂಬ ಬಗ್ಗೆ ಇದುವರೆಗೂ ಯಾವುದೇ ಮಾಹಿತಿಯನ್ನು ಊಬರ್ ಸಂಸ್ಥೆ ನೀಡಿಲ್ಲ.

ಸೇವೆಯ ಉದ್ದೇಶ:
ಊಬರ್ ಈ ಸೇವೆಯನ್ನು ಪ್ರಾರಂಭಿಸಲು ಕಾರಣ ಚಾಲಕ ಮತ್ತು ಪ್ರಯಾಣಿಕನ ನಡುವಿನ ಗೌರವ ಅಧಿಕವಾಗಬೇಕು ಎಂಬ ಉದ್ದೇಶದಿಂದ ಅಂತೆ. ಯಾರು ಕಡಿಮೆ ರೇಟಿಂಗ್ ಪಡೆಯುತ್ತಾರೋ ಅವರು ಊಬರ್ ಆಪ್ ನ ಆಕ್ಸಿಸ್ ನ್ನು ಕಳೆದುಕೊಳ್ಳುತ್ತಾರೆ. ಹಲವು ನೋಟಿಫಿಕೇಷನ್ ನ ಬಳಿಕ ಕಂಪೆನಿಯು ಈ ಕ್ರಮವನ್ನು ತೆಗೆದುಕೊಳ್ಳಲಿದೆ ಎಂದು ತಿಳಿಸಲಾಗಿದೆ.

ಡ್ರೈವರ್ ಮತ್ತು ಪ್ರಯಾಣಿಕರಿಗೆ ಸೂಚನೆಗಳು:
ಆಪ್ ನಲ್ಲಿ ರೇಟಿಂಗ್ ಅಧಿಕಗೊಳಿಸಲು ಏನು ಮಾಡಬೇಕು ಎಂಬ ಬಗ್ಗೆ ಸಲಹೆಗಳನ್ನು ನೀಡುವಂತೆ ಗ್ರಾಹಕರ ಬಳಿ ಕಂಪೆನಿಯು ಪದೇ ಪದೇ ಕೇಳುತ್ತಲೇ ಇರುತ್ತದೆ. ಇದರಲ್ಲಿ ಸಾಮಾನ್ಯ ವಿಚಾರಗಳಾಗಿರುವ ಮೌನವಾಗಿರುವುದು, ಕುಡಿದು ಚಾಲನೆ ಮಾಡದೇ ಇರುವುದು ಮತ್ತು ಕುಡಿದು ಡ್ರೈವರ್ ಜೊತೆಗೆ ಅಸಭ್ಯವಾಗಿ ವರ್ತಿಸದೇ ಇರುವುದು, ಮಧ್ಯಪಾನ ಆರೋಗ್ಯಕ್ಕೆ ಹಾನಿಕರ ಎಂಬ ಸೂಚನೆಯನ್ನು ಡ್ರೈವರ್ ಮತ್ತು ಪ್ರಯಾಣಿಕ ಇಬ್ಬರಿಗೂ ನೀಡಲಾಗುತ್ತದೆ.
ಒಟ್ಟಾರೆ ಊಬರ್ ಪ್ರಯಾಣಿಕರ ಸುರಕ್ಷತೆ ಮತ್ತು ಅವರ ಅನುಕೂಲಕ್ಕಾಗಿ ಹಲವು ಪ್ರಯತ್ನಗಳನ್ನು ಇತ್ತೀಚೆಗೆ ಮಾಡುತ್ತಿದೆ ಎಂಬುದು ಮಾತ್ರ ಸುಳ್ಳಲ್ಲ. ಇದರ ಸದುಪಯೋಗವನ್ನು ಪ್ರಯಾಣಿಕರು ಹೇಗೆ ತೆಗೆದುಕೊಳ್ಳುತ್ತಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕು.


Click it and Unblock the Notifications