Home
Apps

ಗೂಗಲ್‌ನಿಂದ ಹೊಸ ಮಾದರಿ ಎಮೋಜಿ..! ನೀವೆ ಸೃಷ್ಟಿಸಿ..!

ಸದ್ಯ ಮಾರುಕಟ್ಟೆಯಲ್ಲಿ ಎಮೋಜಿಗಳ ಅಬ್ಬರವು ಜೋರಾಗಿದೆ. ಅನೇಕ ಮಂದಿ ತಮ್ಮ ಚಾಟ್ ಗಳಲ್ಲಿ ಟೆಕ್ಸ್ಟ್ ಗಳಿಗಿಂತ ಹೆಚ್ಚಾಗಿ ಎಮೋಜಿಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಎಮೋಜಿಗಳನ್ನು ಬಳಕೆ ಮಾಡಿಕೊಳ್ಳುವವರಿಗೆ ಗೂಗಲ್ ಹೊಸ ಮಾದರಿಯ ಆಯ್ಕೆಯೊಂದನ್ನು ನೀಡಲು ಮುಂದಾಗಿದೆ. ಈಗಾಗಲೇ ಖ್ಯಾತಿಯನ್ನು ಪಡೆದುಕೊಂಡಿರುವ ತನ್ನ ಜಿ ಬೋರ್ಡ್ ಕೀ ಪ್ಯಾಡ್ ನಲ್ಲಿಯೇ ಎಮೋಜಿಗಳನ್ನು ಕ್ರಿಯೇಟ್ ಮಾಡಿಕೊಳ್ಳುವ ಹೊಸ ಮಾದರಿಯ ಆಯ್ಕೆಯನ್ನು ಮಾಡಿಕೊಟ್ಟಿದೆ.

ಗೂಗಲ್‌ನಿಂದ ಹೊಸ ಮಾದರಿ ಎಮೋಜಿ..! ನೀವೆ ಸೃಷ್ಟಿಸಿ..!

ಬಳಕೆದಾರರು ಈ ಹೊಸ ಮಾದರಿಯ ಆಯ್ಕೆಯನ್ನು ಬಳಕೆ ಮಾಡಿಕೊಂಡು ತಮಗೆ ಬೇಕಾದ ಎಮೋಜಿಗಳನ್ನು ಕ್ರಿಯೇ ಟ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಈ ಹೊಸ ಮಾದರಿಯ ಎಮೋಜಿಗಳನ್ನು ಕ್ರಿಯೇಟ್ ಮಾಡುವ ಸಲುವಾಗಿ ಗೂಗಲ್ ಮೀಷನ್ ಲರ್ನಿಂಗ್ ಅನ್ನು ಬಳಕೆ ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ. ಇದರಿಂದಾಗಿ ತನ್ನ ಬಳಕೆದಾರರಿಗೆ ಬೇಕಾದ ಮಾದರಿಯಲ್ಲಿ ಎಮೋಜಿಗಳನ್ನು ಕ್ರಿಯೇಟ್ ಮಾಡಿಕೊಂಡು ಬಳಕೆ ಮಾಡಿಕೊಳ್ಳಬಹುದಾಗಿದೆ.
ಗೂಗಲ್‌ನಿಂದ ಹೊಸ ಮಾದರಿ ಎಮೋಜಿ..! ನೀವೆ ಸೃಷ್ಟಿಸಿ..!

ಈ ಹೊಸ ಮಾದರಿಯ ಆಯ್ಕೆಯನ್ನು ತನ್ನ ಆಂಡ್ರಾಯ್ಡ್ ಮತ್ತು ಆಪಲ್ ಬಳಕೆದಾರರಿಗೆ ಬಳಸುವ ಅಧಿಕಾರವನ್ನು ನೀಡಿದೆ ಎನ್ನಲಾಗಿದೆ. ಈ ಹೊಸ ಮಾದರಿಯ ಎಮೋಜಿಗಳು ಬಳಕೆದಾರರಿಗೆ ಹೊಸ ಮಾದರಿಯಿ ಫೀಲ್ ನೀಡಲಿದೆ. ಇದರಿಂದಾಗಿ ಚಾಟಿಂಗ್ ಇನ್ನಷ್ಟು ಸುಮಧುರವಾಗಲಿದೆ. ಈಗಾಗಲೇ ಗೂಗಲ್ ಜಿ ಬೋರ್ಡ್ ಬಳಕೆದಾರರ ಸಂಖ್ಯೆಯೂ ಅತೀ ಹೆಚ್ಚಿನ ಪ್ರಮಾಣದಲ್ಲಿದ್ದು, ಈಗ ನೀಡಿರುವ ಹೊಸ ಮಾದರಿಯ ಆಯ್ಕೆಯಿಂದಾಗಿ ಬಳಕೆದಾರರ ಸಂಖ್ಯೆಯೂ ಇನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದಲ್ಲದೇ ಈ ಹೊಸ ಮಾದರಿಯ ಆಯ್ಕೆಯೊಂದಿಗೆ ಆಪಲ್ ಬಳಕೆದಾರರಿಗೂ ಒಮ್ಮೆಗೆ ಹಲವು ಜಿ ಮೇಲ್ ಆಕೌಂಟ್ ಗಳನ್ನು ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. ಇದರಿಂದಾಗಿ ಆಪಲ್ ಬಳಕೆದಾರರಿಗೆ ಹಲವು ಮಾದರಿಯಲ್ಲಿ ಸಹಾಯವಾಗಲಿದೆ. ಇದರಿಂದಾಗಿ ಜಿ ಮೇಲ್ ಬಳಕೆದಾರರು ಹೆಚ್ಚಿನ ಪ್ರಮಾಣದಲಲ್ಇ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಈಗಾಗಲೇ ಗೂಗಲ್ ತನ್ನ ಬಳಕೆದಾರರಿಗೆ ಹಲವು ಹೊಸ ಮಾದರಿಯ ಆಯ್ಕೆಗಳು ದೊರೆಯುತ್ತಿದೆ. ಇದರಿಂದಾಗಿ ಬಳಕೆದಾರರು ಭವಿಷ್ಯದ ತಂತ್ರಜ್ಞಾನಗಳನ್ನು ಉತ್ತಮವಾಗಿ ಬಳಸಿಕೊಂಡು ತಮ್ಮ ಅಭಿವೃದ್ಧಿಯನ್ನು ಸಾಧಿಸಬಹುದಾಗಿದೆ. ಇದಲ್ಲದೇ ಹೊಸ ಆಯ್ಕೆಗಳು ಬಳಕೆದಾರರಿಗೆ ತಮ್ಮ ಚಾಟಿಂಗ್ ಮತ್ತು ಸ್ಮಾರ್ಟ್ ಫೋನ್ ಬಳಕೆಯ ಅನುಭವನ್ನು ಉತ್ತಮ ಪಡಿಸುತ್ತಿದೆ ಎನ್ನಲಾಗಿದೆ.

Best Mobiles in India

English summary
Now you can create your own emoji, with this app. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+