ಯಾವುದೇ ಲೆಕ್ಕಗಳನ್ನು ಬಗೆಹರಿಸಿ 1 ಸೆಕೆಂಡ್‌ನಲ್ಲಿ : ಆಪ್‌

By Suneel
|

ಗಣಿತದ ಲೆಕ್ಕಗಳು ಬಹುಸಂಖ್ಯಾತರಿಗೆ ಕಬ್ಬಿಣದ ಕಡಲೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಸ್ಮಾರ್ಟ್‌ಫೋನ್‌ ಮತ್ತು ಸ್ಮಾರ್ಟ್‌ ಅಪ್ಲಿಕೇಶನ್‌ಗಳು ಬಂದಮೇಲು ನಾವು ಸಮಸ್ಯೆಗಳನ್ನು ಸಮಸ್ಯೆಯಾಗಿಯೇ ಉಳಿಸಿಕೊಳ್ಳುವುದು ಅಪಹಾಸ್ಯವಾಗಿಬಿಡುತ್ತದೆ. ಟೆಕ್ನಾಲಜಿ ಬಗ್ಗೆ ಮಾತನಾಡುವ ಗಿಜ್‌ಬಾಟ್‌ ಏಕೆ ಗಣಿತದ ಲೆಕ್ಕದ ಬಗ್ಗೆ ಮಾತನಾಡುತ್ತಿದೆ ಎಂದು ಆಶ್ಚರ್ಯವಾಗುತ್ತಿರಬಹುದಲ್ಲವೇ!!.

ಗಣಿತದ ಯಾವುದೇ ಲೆಕ್ಕಗಳನ್ನು ಕೇವಲ 1 ಸೆಕೆಂಡ್‌ನಲ್ಲಿ ಸಮೀಕರಣದೊಂದಿಗೆ ಬಗೆಹರಿಸುವ ಅಪ್ಲಿಕೇಶನ್‌ ಅಭಿವೃದ್ದಿಗೊಂಡಿದೆ. ಈ ಅಪ್ಲಿಕೇಶನ್‌ ವಿದ್ಯಾರ್ಥಿಗಳಿಗೆ ಅತ್ಯುತ್ತಮವಾಗಿ ಸಹಾಯವಾಗಲಿದ್ದು, ಯಾವುದೇ ರೀತಿಯ ಲೆಕ್ಕವನ್ನು ಉತ್ತರ ಹೇಗೆ ಬಂತು ಎಂಬ ಸಮೀಕರಣ ಸಹಿತ ಸಮಸ್ಯೆ ಬಗೆಹರಿಸುತ್ತದೆ. ಈ ಟೆಕ್ನಾಲಜಿ ಬಳಸಿದ್ದಲ್ಲಿ ಗಣಿತದಲ್ಲಿ ಹಿಂದೆ ಉಳಿದಿರುವವರು ಇತರರ ಸಹಾಯವಿಲ್ಲದೇ ಗಣಿತದ ಸಮಸ್ಯೆ ಬಗೆಹರಿಸಿಕೊಂಡು ಸಮೀಕರಣಗಳನ್ನು ತಿಳಿಯಬಹುದಾಗಿದೆ. ಹಾಗಾದರೆ ಅಂತಹ ಅಪ್ಲಿಕೇಶನ್‌ ಯಾವುದು ಎಂಬ ಮಾಹಿತಿಯನ್ನು ಲೇಖನದಲ್ಲಿ ಓದಿ ತಿಳಿಯಿರಿ.

PhotoMath ಅಪ್ಲಿಕೇಶನ್

PhotoMath ಅಪ್ಲಿಕೇಶನ್

PhotoMath ಅಪ್ಲಿಕೇಶನ್‌ ಆಗಿದ್ದು, ಇದು ಗಣಿತ ಶಿಕ್ಷಕರಿಗಿಂತ ಬಹುಬೇಗ ನಿಮಗೆ ಲೆಕ್ಕದ ಸಮೀಕರಣವನ್ನು ಬಿಡಿಸಿಕೊಡುತ್ತದೆ.

ಮೈಕ್ರೋಬ್ಲಿಂಕ್‌

ಮೈಕ್ರೋಬ್ಲಿಂಕ್‌

PhotoMath ಅಪ್ಲಿಕೇಶನ್‌, ಕ್ರೊಯೇಷಿಯಾ ಮತ್ತು ಲಂಡನ್‌ ಮೂಲದಲ್ಲಿನ ಮೈಕ್ರೋಬ್ಲಿಂಕ್‌ ಕಂಪನಿ ಅಭಿವೃದ್ದಿ ಪಡಿಸಿದೆ.

ಸಮೀಕರಣಗಳ ಸಮಸ್ಯೆ ಬಿಡಿಸುವಿಕೆ

ಸಮೀಕರಣಗಳ ಸಮಸ್ಯೆ ಬಿಡಿಸುವಿಕೆ

PhotoMath ಅಪ್ಲಕೇಶನ್ ಸಮೀಕರಣ, ಮೊತ್ತ ಕಂಡುಹಿಡಿಯುವಿಕೆಯಂತಹ ಸಮಸ್ಯಗೆಳನ್ನು ಕೇವಲ ಸೆಕೆಂಡುಗಳಲ್ಲಿ ಮಾಡಿಕೊಡುತ್ತದೆ.

PhotoMath ಹೇಗೆ ಕೆಲಸ ನಿರ್ವಹಿಸುತ್ತದೆ.

PhotoMath ಹೇಗೆ ಕೆಲಸ ನಿರ್ವಹಿಸುತ್ತದೆ.

PhotoMath ಅಪ್ಲಿಕೇಶನ್‌ ಮೊಬೈಲ್‌ ಫೋನಿಮ ಕ್ಯಾಮೆರಾ ಬಳಸಿಕೊಂಡು ಸಮೀಕರಣ ಗೊಳಿಸುತ್ತದೆ. ಉತ್ತರಿಸಿದ ನಂತರ ನಿಮಗೆ ಸಮೀಕರಣದ ಹಂತಗಳನ್ನು ತಿಳಿಸುತ್ತದೆ.

PhotoMath ಕಾರ್ಯಗಳು

PhotoMath ಕಾರ್ಯಗಳು

ಅಂಕಗಣಿತದ, ಸಂಕಲನ, ವ್ಯವಕಲನ, ವಿಭಾಗ, ಮತ್ತು ಗುಣಾಕಾರಗಳಂತಹ ಲೆಕ್ಕಗಳನ್ನು ಬಿಡಿಸುತ್ತದೆ.

PhotoMath ಕಾರ್ಯಗಳು

PhotoMath ಕಾರ್ಯಗಳು

ಭಿನ್ನರಾಶಿ, ರೇಖಾತ್ಮಕ ಸಮೀಕರಣಗಳು, ಗುಣಾಕಾರದ X ಚಿಹ್ನೆಯ ಲೆಕ್ಕಗಳು, ಇಟಾಲಿಕ್ ಸಂಖ್ಯೆಯ ಲೆಕ್ಕಗಳನ್ನು ಸಹ ಇದು ಯಾವುದೇ ಗೊಂದಲಕ್ಕೆ ಒಳಗಾಗದಂತೆ ಬಿಡಿಸುತ್ತದೆ.

ಶಿಕ್ಷಕರು ಏನು ಹೇಳಿದ್ದಾರೆ

ಶಿಕ್ಷಕರು ಏನು ಹೇಳಿದ್ದಾರೆ

ಹಲವು ಶಾಲಾ ಶಿಕ್ಷಕರು PhotoMath ಅಪ್ಲಿಕೇಶನ್‌ ಹಲವು ರೀತಿಯಲ್ಲಿ ಸ್ಟೂಡೆಂಟ್ಸ್‌ಗಳಿಗೆ ಸಹಾಯ ಮಾಡಲಿದೆ. ಆದರೆ ಇದು ತರಬೇತಿಗಾಗಿ ಬಳಕೆಯಾಗಬೇಕು ಎಂದಿದ್ದಾರೆ.

ಬಳಸುವುದು ಹೇಗೆ

ಬಳಸುವುದು ಹೇಗೆ

PhotoMath ಅಪ್ಲಿಕೇಶನ್‌ ಇರುವ ಸ್ಮಾರ್ಟ್‌ಫೋನ್‌ ಬಳಕೆದಾರರು ಈ ಅಪ್ಲಿಕೇಶನ್‌ ಓಪೆನ್‌ ಮಾಡಿ ಬಗೆಹರಿಸಬೇಕಾದ ಲೆಕ್ಕಗಳ ಮೇಲೆ ಕ್ಯಾಮೆರಾ ಹಿಡಿದು ಕ್ಯಾಪ್ಚರ್‌ ಮಾಡಬೇಕು. ನಂತರದಲ್ಲಿ ಉತ್ತರ ಪ್ರದರ್ಶನ ಆಗುತ್ತದೆ.

ಬಳಸುವುದು ಹೇಗೆ

ಬಳಸುವುದು ಹೇಗೆ

ಉತ್ತರ ಪ್ರದರ್ಶನಗೊಂಡ ಮೇಲೆ ಒಮ್ಮೆ ಟ್ಯಾಪ್ ಮಾಡಿದರೆ ಲೆಕ್ಕದ ಸ್ಟೆಪಗಳನ್ನು ತಿಳಿಯಬಹುದು.

ಅಪ್ಲಿಕೇಶನ್‌

ಅಪ್ಲಿಕೇಶನ್‌

ಅಪ್ಲಿಕೇಶನ್‌ ಐಓಎಸ್‌ ಮತ್ತು ವಿಂಡೋಸ್‌ ಫೋನ್‌ಗಳಿಗೆ ಲಭ್ಯ.

ಆಂಡ್ರಾಯ್ಡ್‌

ಆಂಡ್ರಾಯ್ಡ್‌

ಆಂಡ್ರಾಯ್ಡ್‌ ವರ್ಸನ್‌ ಫೋನ್‌ಗಳಿಗೆ ಮುಂದಿನ ದಿನಗಳಲ್ಲಿ ಲಭ್ಯ.

ಯಾರಿಗೆ ಹೆಚ್ಚು ಉಪಯೋಗ

ಯಾರಿಗೆ ಹೆಚ್ಚು ಉಪಯೋಗ

ಗಣಿತ ಲೆಕ್ಕದಲ್ಲಿ ಹೆಚ್ಚು ವೀಕ್ ಆಗಿರುವವರು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುವವರು ಹೆಚ್ಚು ಸದುಪಯೋಗ ಪಡೆಯಬಹುದಾಗಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಮೊಬೈಲ್‌ನಿಂದಲೇ ದೂರು ಸಲ್ಲಿಸಲು ಅಪ್ಲಿಕೇಶನ್‌ </a></strong><br /><strong><a href=ಸಾಮಾಜಿಕ ಜಾಲತಾಣಕ್ಕಾಗಿ ಗುಪ್ತ ಲಕ್ಷಣಗಳ ಅಪ್ಲಿಕೇಶನ್‌
ಕಂಪ್ಯೂಟರ್‌ನಲ್ಲಿ ಆಂಡ್ರಾಯ್ಡ್ ಅಪ್ಲಿಕೇಶನ್ ಬಳಸುವುದು ಹೇಗೆ? " title="ಮೊಬೈಲ್‌ನಿಂದಲೇ ದೂರು ಸಲ್ಲಿಸಲು ಅಪ್ಲಿಕೇಶನ್‌
ಸಾಮಾಜಿಕ ಜಾಲತಾಣಕ್ಕಾಗಿ ಗುಪ್ತ ಲಕ್ಷಣಗಳ ಅಪ್ಲಿಕೇಶನ್‌
ಕಂಪ್ಯೂಟರ್‌ನಲ್ಲಿ ಆಂಡ್ರಾಯ್ಡ್ ಅಪ್ಲಿಕೇಶನ್ ಬಳಸುವುದು ಹೇಗೆ? " loading="lazy" width="100" height="56" />ಮೊಬೈಲ್‌ನಿಂದಲೇ ದೂರು ಸಲ್ಲಿಸಲು ಅಪ್ಲಿಕೇಶನ್‌
ಸಾಮಾಜಿಕ ಜಾಲತಾಣಕ್ಕಾಗಿ ಗುಪ್ತ ಲಕ್ಷಣಗಳ ಅಪ್ಲಿಕೇಶನ್‌
ಕಂಪ್ಯೂಟರ್‌ನಲ್ಲಿ ಆಂಡ್ರಾಯ್ಡ್ ಅಪ್ಲಿಕೇಶನ್ ಬಳಸುವುದು ಹೇಗೆ?

 ಗಿಜ್‌ಬಾಟ್‌

ಗಿಜ್‌ಬಾಟ್‌

https://www.facebook.com/GizBotKannada/?fref=ts

Best Mobiles in India

English summary
Now You can solve mathematical equations in 1 second. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X