ಗೂಗಲ್ ಮ್ಯಾಪ್‌ನಲ್ಲಿನ್ನು ಬಸ್ ಮತ್ತು ಟ್ರೈನ್ ಸಂಚಾರದಲ್ಲೂ ಲೈವ್ ಲೊಕೇಷನ್ ಸೇವೆ!

  ಕೈಯಲ್ಲಿ ಮೊಬೈಲ್ ಇಲ್ಲದೇ ಈಗೀನ ಕಾಲದಲ್ಲಿ ಯಾರೂ ಬಸ್ ಹತ್ತೋದಿಲ್ಲ. ರೈಲಲ್ಲಿ ಪ್ರಯಾಣ ಮಾಡೋದಿಲ್ಲ. ಹಾಗಿರುವಾಗ ಆ ಮೊಬೈಲ್ ನಿಮ್ಮ ಸಹಾಯಕ್ಕೆ 24/7 ಇಲ್ಲದೇ ಇದ್ದರೆ ಹೇಗೆ ಅಲ್ವಾ? ನೀವು ಅಪರಿಚಿತ ಸ್ಥಳಕ್ಕೊ ಅಥವಾ ಹೊರಗಡೆ ಪ್ರಯಾಣ, ಪ್ರವಾಸ ಕೈಗೊಳ್ಳುತ್ತಿರುವ ಸಮಯದಲ್ಲಿ ಗೂಗಲ್ ಮ್ಯಾಪ್ ಮಾಡುವಷ್ಟು ಸಹಾಯವನ್ನು ಬಹುಶ್ಯಃ ಮತ್ಯಾವ ಆಪ್ ಕೂಡ ಮಾಡಲಿಕ್ಕಿಲ್ಲ.

   ಗೂಗಲ್ ಮ್ಯಾಪ್‌ನಲ್ಲಿನ್ನು ಬಸ್ ಮತ್ತು ಟ್ರೈನ್ ಸಂಚಾರದಲ್ಲೂ ಲೈವ್ ಲೊಕೇಷನ್ ಸೇವೆ!

  ಇದೀಗ ಗೂಗಲ್ ಮ್ಯಾಪ್ ಇನ್ನಷ್ಟು ಮುಂದುವರಿದು ನೀವು ಪ್ರಯಾಣದ ಸಮಯದಲ್ಲಿ ನೀವೆಲ್ಲಿದ್ದೀರಿ, ಎಷ್ಟೊತ್ತಿಗೆ ತಲುಪಬೇಕಾದ ಸ್ಥಳವನ್ನು ತಲುಪುತ್ತೀರಿ ಎಂಬ ಬಗೆಗಿನ ಮಾಹಿತಿಯನ್ನು ನಿಮ್ಮ ಕುಟುಂಬದವರೊಂದಿಗೆ,ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುತ್ತಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಲೈವ್ ಲೋಕೇಷನ್ ಮಾಹಿತಿ:

  ಸಾರ್ವಜನಿಕ ವಾಹನಗಳಲ್ಲಿ ಸಂಚರಿಸುತ್ತಿರುವಾಗ ಅಂದರೆ ಬಸ್ ಅಥವಾ ರೈಲಿನಲ್ಲಿ ಸಂಚರಿಸುವಾಗ ನಿಮ್ಮ ಲೈವ್ ಲೊಕೇಷನ್ ನ್ನು ಹಂಚಿಕೊಳ್ಳುವ ಅವಕಾಶವನ್ನು ಭಾರತದಲ್ಲಿ ಗೂಗಲ್ ಮ್ಯಾಪ್ ಇದೀಗ ಸಾರ್ವಜನಿಕರಿಗೆ ನೀಡುತ್ತಿದೆ. ಅಂದರೆ ಇದೀಗ ನೀವು ನೇರವಾಗಿ ನಿಮ್ಮ ಲೈವ್ ಲೊಕೇಷನ್ ನ್ನು ಯಾವ ಸಮಯಕ್ಕೆ ನೀವು ತಲುಪಬೇಕಾಗಿರುವ ಸ್ಥಳವನ್ನು ತಲುಪುತ್ತೀರಿ ಎಂಬ ಬಗ್ಗೆ ನಿಮ್ಮ ಸ್ನೇಹಿತರಿಗೆ ಗೂಗಲ್ ಮ್ಯಾಪ್ ಮೂಲಕವೇ ನೇರವಾಗಿ ಕಳುಹಿಸಿಕೊಡಬಹುದು.ಆದರೆ, ಈ ಫೀಚರ್ ಸದ್ಯ ಆಂಡ್ರಾಯ್ಡ್ ನಲ್ಲಿ ಮಾತ್ರವೇ ಲಭ್ಯವಿರುತ್ತದೆ. ಹಾಗಂತ ಯಾವುದೇ ಅಧಿಕೃತ ಪ್ರಕಟಣೆ ಇದುವರೆಗೂ ಹೊರಬಿದ್ದಿಲ್ಲವಾದರೂ ಐಫೋನ್ ಬಳಕೆದಾರರು ಕೂಡ ಸಧ್ಯದಲ್ಲೇ ಈ ವೈಶಿಷ್ಟ್ಯತೆಯನ್ನು ಪಡೆಯಲಿದ್ದಾರೆ ಎಂಬುದು ದಿಟವಾದ ಸಂಗತಿ.

  ಆಂಡ್ರಾಯ್ಡ್ ಗೂಗಲ್ ಮ್ಯಾಪ್ ಆಪ್ ನಲ್ಲಿ ಭಾರತದ ಅಧಿಕೃತ ಟ್ವೀಟರ್ ನಲ್ಲಿ ಪ್ರಕಟಿಸಲಾಗಿದ್ದು ಇಂದಿನಿಂದ ನೀವು ನಿಮ್ಮ ಲೈವ್ ಲೊಕೇಷನ್ ನ್ನು ಮತ್ತು ಇಟಿಎಯನ್ನು ಬಸ್ ಮತ್ತು ರೈಲ್ವೇ ಪ್ರಯಾಣದ ಸಂದರ್ಬದಲ್ಲೂ ಕೂಡ ನಿಮ್ಮ ಪ್ರೀತಿ ಪಾತ್ರರೊಂದಿಗೆ ಗೂಗಲ್ ಮ್ಯಾಪ್ ನಲ್ಲಿ ಹಂಚಿಕೊಳ್ಳಬಹುದು ಎಂದು ತಿಳಿಸಿದೆ.

  ಅಧಿಕೃತ ವೆಬ್ ಸೈಟ್ ನಲ್ಲಿ ಹಂಚಿಕೊಂಡ ಟ್ವೀಟ್ ಇಲ್ಲಿದೆ ನೋಡಿ.

  Apart, but together. Starting today, you can share your live location and ETA with your loved ones on Google Maps,... https://t.co/X1Y5nT990K

  - Google India (@GoogleIndia) 1543323601000

  ವಾಟ್ಸ್ ಆಪ್ ನ ಲೈವ್ ಲೊಕೇಷನ್ ಫೀಚರ್ ನಂತೆಯೇ ಕೆಲಸ:

  ಈ ವೈಶಿಷ್ಟ್ಯತೆಯು ವಾಟ್ಸ್ ಆಪ್ ನಲ್ಲಿರುವ "ಲೈವ್ ಲೊಕೇಷನ್" ಫೀಚರ್ ನಂತೆಯೇ ಕಾರ್ಯ ನಿರ್ವಹಿಸುತ್ತದೆ. ಆದರೆ ನೀವು ಹಂಚಿಕೊಳ್ಳುವ ಕಾಂಟ್ಯಾಕ್ಟ್ ನವರಿಗೆ ಕೇವಲ ನಿಮ್ಮ ಲೈವ್ ಲೊಕೇಷನ್ ಮಾಹಿತಿ ಮಾತ್ರವೇ ಸಿಗುವುದಿಲ್ಲ ಬದಲಾಗಿ ನಿಗದಿತ ಸ್ಥಳವನ್ನು ತಲುಪಲು ಇನ್ನೆಷ್ಟು ಸಮಯ ಬೇಕು ಎಂಬ ವಿವರವೂ ಕೂಡ ಲಭ್ಯವಾಗುತ್ತದೆ.

  ಪ್ರಯಾಣದಲ್ಲಿ ಅನುಕೂಲ:

  ಬಳಕೆದಾರರು ಇತರೆ ಆಪ್ ಗಳಲ್ಲೂ ಕೂಡ ಉದಾಹರಣೆಗೆ ಫೇಸ್ಬುಕ್ ಮೆಸೇಂಜರ್ ಅಥವಾ ಹ್ಯಾಂಗ್ಸ್ ಔಟ್ ಇಲ್ಲವೇ ವಾಟ್ಸ್ ಆಪ್ ನಲ್ಲಿ ಕೂಡ ಲೊಕೇಷನ್ ನ್ನು ಶೇರ್ ಮಾಡಿಕೊಳ್ಳಬಹುದು. ಈ ವೈಶಿಷ್ಟ್ಯತೆಯನ್ನು ನಿಮ್ಮ ಫ್ಯಾಮಿಲಿ ಸದಸ್ಯರನ್ನು ಸಾರ್ವಜನಿಕ ವಾಹನ ಬಳಸಿ ಸಂಚರಿಸುತ್ತಿರುವ ಸಂದರ್ಬದಲ್ಲಿ ನಿರ್ಧಿಷ್ಟ ಸ್ಥಳವನ್ನು ತಲುಪುವವರೆಗೆ ಟ್ರ್ಯಾಕ್ ಮಾಡುವುದಕ್ಕೂ ಕೂಡ ಬಳಸಿಕೊಳ್ಳಬಹುದು. ಕಳೆದ ವರ್ಷ ಅಕ್ಟೋಬರ್ ನಲ್ಲಿ ವಾಟ್ಸ್ ಆಪ್ ಆಂಡ್ರಾಯ್ಡ್ ಮತ್ತು ಐಓಎಸ್ ಎರಡರಲ್ಲೂ ಕೂಡ ಇದೇ ರೀತಿಯ ಫೀಚರ್ ನ್ನು ಬಿಡುಗಡೆಗೊಳಿಸಿತ್ತು.

  ಆಂಡ್ರಾಯ್ಡ್ ಗೂಗಲ್ ಮ್ಯಾಪ್ ಆಪ್ ನಲ್ಲಿ ಲೈವ್ ಲೊಕೇಷನ್ ಹಂಚಿಕೊಳ್ಳುವುದು ಹೇಗೆ?

  ನಿಮ್ಮ ನಿಗದಿತ ಸ್ಥಳದಿಂದ ಪ್ರಯಾಣ ಆರಂಭವಾದಾಗ ವಿವರವಾದ ದಾರಿಯ ಮಾಹಿತಿ ಪಡೆಯಲು ಸ್ಕ್ರೋಲ್ ಡೌನ್ ಮಾಡಿ ಮತ್ತು ನೀವು " ಶೇರ್ ಟ್ರಿಪ್" ಆಯ್ಕೆಯನ್ನು ಗಮಿನಿಸುತ್ತೀರಿ. ಅದನ್ನು ಟ್ಯಾಪ್ ಮಾಡಿ ಮತ್ತು ನಿಮ್ಮ ಕಾಂಟ್ಯಾಕ್ಟ್ ನಲ್ಲಿರುವ ವ್ಯಕ್ತಿಯೊಂದಿಗೆ ಮೆಸೇಜ್ ಮೂಲಕ, ವಾಟ್ಸ್ ಆಪ್ ಮೂಲಕ ಇಲ್ಲವೇ ಹ್ಯಾಂಗ್ಸ್ ಔಟ್ ಮೂಲಕ ಹಂಚಿಕೊಳ್ಳಬಹುದು.

  ಪ್ರಮುಖ ವಿಚಾರವೇನೆಂದರೆ ಗೂಗಲ್ ಟೆಕ್ಸ್ಟ್ ಮೆಸೇಜಿಂಗ್ ಫೀಚರ್ ನ್ನು ಮ್ಯಾಪ್ ಆಪ್ ನಲ್ಲಿ ಪರಿಚಯಿಸಿ ನಿಮ್ಮ ಸುತ್ತ ಬ್ಯುಸಿನೆಸ್ ನ್ನು ಹೆಚ್ಚಿಸಿಕೊಳ್ಳುವುದಕ್ಕೆ ನೆರವು ನೀಡಿತ್ತು.ಕಳೆದ ವರ್ಷ ಗೂಗಲ್ ಗ್ರಾಹಕರಿಗೆ ತಮ್ಮ ಬ್ಯುಸಿನೆಸ್ ಪ್ರೊಫೈಲ್ ನಿಂದ ಸೆಂಡ್ ಮೆಸೇಜ್ ಟು ಬ್ಯುಸಿನೆಸ್ ಫೀಚರ್ ನ್ನು ಗೂಗಲ್ ನಲ್ಲಿ ನೀಡಿತ್ತು. ಅದೇ ವೈಶಿಷ್ಟ್ಯತೆಯು ಇದೀಗ ಗೂಗಲ್ ಮ್ಯಾಪ್ ನಲ್ಲಿ ಅಳವಡಿಸಲಾಗಿದೆ. ಬಳಕೆದಾರರು ಇದೀಗ ಈ ಮೆಸೇಜ್ ಗಳನ್ನು ಮ್ಯಾಪ್ ಆಪ್ ನ ಬ್ಯುಸಿನೆಸ್ ಆಯ್ಕೆಯ ಒಳಗೆ ನೋಡಬಹುದು ಮತ್ತು ಚಾಟಿಂಗ್ ನ್ನು ಅಲ್ಲಿಂದಲೇ ಮುಂದುವರಿಸಬಹುದು. ಇದು ಗೂಗಲ್ ಮ್ಯಾಪ್ ನ ಆಂಡ್ರಾಯ್ಡ್ ಮತ್ತು ಐಓಎಸ್ ಎರಡೂ ಆಯ್ಕೆಗಳಲ್ಲೂ ಕೂಡ ಸಿಗುತ್ತದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  Now you can track live bus, train location of someone using Google Maps
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more