ಒಲಾದಿಂದ ನೂತನವಾಗಿ ಆಟೋ ಕನೆಕ್ಟ್ ವೈಫೈ ಸೇವೆ ಆರಂಭ..!

ಈಗಾಗಲೇ ನಗರ ಸಾರಿಗೆ ವ್ಯವಸ್ಥೆಯಲ್ಲಿ ಒಲಾ ಆಟೋ ಮತ್ತು ಕ್ಯಾಬ್ ಗಳು ಪ್ರಮುಖ ಪಾತ್ರವನ್ನು ವಹಿಸುತ್ತಿದ್ದು, ಈಗಾಗಲೇ ಒಲಾ ಆಟೋ ಸೇವೆ ಹೆಚ್ಚಿನ ಖ್ಯಾತಿಯನ್ನು ತನ್ನದಾಗಿಸಿಕೊಂಡಿದೆ.

By Lekhaka
|

ಆಪ್ ಆಧಾರಿತ ಟ್ಯಾಕ್ಸಿ ಸೇವೆಯನ್ನು ನೀಡುತ್ತಿರುವ ಒಲಾ ತನ್ನ ಆಟೋ ಸೇವೆಯನ್ನು ಮತ್ತಷ್ಟು ಉತ್ತಮಗೊಳಿಸುವ ಸಲುವಾಗಿ ಆಟೋ ಕನೆಕ್ಟ್ ವೈಫೈ ಎಂಬ ಹೊಸ ಆಯ್ಕೆಯೊಂದನ್ನು ಪರಿಚಯಿಸಲು ಮುಂದಾಗಿದೆ. ಇದು ಒಟ್ಟು ದೇಶದ 73 ನಗರಗಳಲ್ಲಿ ಜಾರಿಗೆ ಬರಲಿದೆ ಎನ್ನಲಾಗಿದೆ.

ಒಲಾದಿಂದ ನೂತನವಾಗಿ ಆಟೋ ಕನೆಕ್ಟ್ ವೈಫೈ ಸೇವೆ ಆರಂಭ..!

ಈಗಾಗಲೇ ನಗರ ಸಾರಿಗೆ ವ್ಯವಸ್ಥೆಯಲ್ಲಿ ಒಲಾ ಆಟೋ ಮತ್ತು ಕ್ಯಾಬ್ ಗಳು ಪ್ರಮುಖ ಪಾತ್ರವನ್ನು ವಹಿಸುತ್ತಿದ್ದು, ಈಗಾಗಲೇ ಒಲಾ ಆಟೋ ಸೇವೆ ಹೆಚ್ಚಿನ ಖ್ಯಾತಿಯನ್ನು ತನ್ನದಾಗಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಈ ಸೇವೆಯನ್ನು ಮತ್ತಷ್ಟು ಉತ್ತಮಗೊಳಿಸುವ ಸಲುವಾಗಿ ಆಟೋ ಕನೆಕ್ಟ್ ವೈಫೈ ಆಯ್ಕೆಯನ್ನು ನೀಡಲಾಗುತ್ತಿದೆ.

ಡಿಜಿಟಲ್ ಇಂಡಿಯಾವನ್ನು ಸಕಾರಗೊಳಿಸುವಲ್ಲಿ ಈ ಹೊಸ ಆಯ್ಕೆಯೂ ಸಹಾಯ ಮಾಡಲಿದೆ ಎಂದು ಒಲಾ ಅಭಿಪ್ರಾಯಪಟ್ಟಿದ್ದು, ಇದು ಹೊಸ ಮಾದರಿಯ ಪ್ರಯೋಗನ್ನಲಾಗಿದೆ. ಈಗಾಗಲೇ ತನ್ನ ಸೇವಾ ಕ್ವಾಲಿಟಿಯನ್ನು ಹಚ್ಚಿಸಲು ಮುಂದಾಗಿರುವ ಒಲಾಗೆ ಇದು ಮಹತ್ವದ ಹೆಜ್ಜೆಯಾಗಿದೆ.

ಆಟೋ ಕನೆಕ್ಟ್ ವೈಫೈ ಇನ್ನು ಮುಂದೆ ಒಲಾ ಬಳಕೆದಾರರು ಒಲಾ ಕ್ಯಾಬ್ ಹತ್ತಿದ ಕೂಡಲೇ ಯಾವುದೇ ಪಾಸ್ ವರ್ಡ್ ಯುಸರ್ ನೇಮ್ ನೀಡದೆಯೇ ಉಚಿತ ವೈಫೈ ಸೇವೆಯನ್ನು ಆನಂದಿಸಬಹುದಾಗಿದೆ. ಈ ಸೇವೆ ಮಿನಿ, LUX ಮತ್ತು ಮೈಕ್ರೊ ದಲ್ಲಿಯೂ ಲಭ್ಯವಿರಲಿದೆ ಎನ್ನಲಾಗಿದೆ.

ಗ್ರೂಪ್ ಅಡ್ಮಿನ್‌ಗಳಿಗೆ ಹೆಚ್ಚು ಅಧಿಕಾರ ನೀಡಿದ ಫೇಸ್‌ಬುಕ್!!..ಏನೇನು?ಗ್ರೂಪ್ ಅಡ್ಮಿನ್‌ಗಳಿಗೆ ಹೆಚ್ಚು ಅಧಿಕಾರ ನೀಡಿದ ಫೇಸ್‌ಬುಕ್!!..ಏನೇನು?

ದೇಶದ 73 ನಗರಗಳಲ್ಲಿ ಸುಮಾರು 1,20,000 ಆಟೋಗಳು ಒಲಾದೊಂದಿಗೆ ಕಾರ್ಯನಿರ್ವಹಿಸುತ್ತಿವೆ ಎನ್ನಲಾಗಿದೆ. ಇದನ್ನು ಇನ್ನು ಹೆಚ್ಚು ಮಾಡುವ ಆಲೋಚನೆಯಲ್ಲಿರುವ ಒಲಾ ಜನಸಾಮಾನ್ಯರನ್ನು ಸಂತೋಷಪಡಿಸುವ ಗುರಿಯನ್ನು ಇಟ್ಟುಕೊಂಡಿದೆ.

Best Mobiles in India

Read more about:
English summary
Ola soon expanded this offering to other categories including Mini, Lux, and Micro.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X