ವಾಟ್ಸ್‌ಆಪ್‌ನಲ್ಲಿ ಹಳೇ ಮೇಸೆಜ್‌ಗಳು ಕಾಣುತ್ತಿಲ್ಲ..! ನೀವು ಚೆಕ್‌ ಮಾಡಿ..!

|

ಈ ತಿಂಗಳ ಆರಂಭದಲ್ಲಿ ವಾಟ್ಸ್ ಆಪ್ ತನ್ನ ಪ್ಲಾಟ್ ಫಾರ್ಮ್ ನಲ್ಲಿರುವ ಬಗ್ ವೊಂದನ್ನು ಪರಿಹರಿಸಿದ್ದು ಅದು ವಾಟ್ಸ್ ಆಪ್ ಕರೆಯ ಸಂದರ್ಬದಲ್ಲಿ ಹ್ಯಾಕರ್ಸ್ ಗಳಿಗೆ ದಾರಿ ಮಾಡಿ ಕೊಡುತ್ತಿತ್ತು ಎಂದು ಹೇಳಲಾಗಿದೆ. ಆದರೆ ಇದೀಗ ಈ ಆಪ್ ನಲ್ಲಿ ಇನ್ನೂ ಹೆಚ್ಚಿನ ಅಂಶಗಳನ್ನು ಫಿಕ್ಸ್ ಮಾಡಬೇಕಾಗಿದೆ ಎಂದು ಅನ್ನಿಸುತ್ತದೆ. ಯಾಕೆಂದರೆ ಕೆಲವು ವಾಟ್ಸ್ ಆಪ್ ಬಳಕೆದಾರರು ಆಪ್ ನಲ್ಲಿ ಕೆಲವು ಮೆಸೇಜ್ ಗಳು ಮಿಸ್ಸಿಂಗ್ ಆಗಿರುವುದನ್ನು ಗಮನಿಸಿದ್ದಾರೆ ಮತ್ತು ಇದುವರೆಗೂ ಈ ಸಮಸ್ಯೆಗೆ ಯಾವುದೇ ಪರಿಹಾರ ಅಥವಾ ಸಮಜಾಯಿಷಿಯು ಸಿಕ್ಕಿಲ್ಲ. ಹೌದು ವಾಟ್ಸ್ ಆಪ್ ನಲ್ಲಿರುವ ಹಳೆಯ ಕಾನ್ವರ್ಸೇಷನ್ ಗಳು ವಾಟ್ಸ್ ಆಪ್ ನಿಂದ ಇದ್ದಕ್ಕಿದ್ದಂತೆಯೇ ಡಿಲೀಟ್ ಆಗಿವೆಯಂತೆ!

ವಾಟ್ಸ್‌ಆಪ್‌ನಲ್ಲಿ ಹಳೇ ಮೇಸೆಜ್‌ಗಳು ಕಾಣುತ್ತಿಲ್ಲ..! ನೀವು ಚೆಕ್‌ ಮಾಡಿ..!

ಆದ್ಯಾ ಅನ್ನೋ ಹೆಸರಿನ ವಾಟ್ಸ್ ಆಪ್ ಬಳಕೆದಾರರೊಬ್ಬರು XDA ಡೆವಲಪರ್ ಫೋರಂನಿಂದ ಮೆಸೇಜ್ ಗಳು ಕಾಣೆಯಾಗಿರುವ ಬಗ್ಗೆ ವರದಿ ಮಾಡಿದ್ದಾರೆ. ಆದ್ಯಾ ಹೇಳುವ ಪ್ರಕಾರ, ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9 ಫ್ಲಸ್ ಫೋನಿನಲ್ಲಿದ್ದ ತಮ್ಮ ಹಳೆಯ ಕೆಲವು ವಾಟ್ಸ್ ಆಪ್ ಚಾಟ್ ಗಳು ಆಪ್ ನಿಂದ ತನ್ನಷ್ಟಕ್ಕೇ ತಾನೇ ಕಾಣೆಯಾಗಿದೆ. ಈ ಸಮಸ್ಯೆಯ ಬಗ್ಗೆ ಆಕೆ ಜುಲೈ ನಲ್ಲಿ ವರದಿ ಮಾಡಿದ್ದಾರೆ ಮತ್ತು ಈ ಸಮಸ್ಯೆಯು ಆಕೆಗೆ ಎಪ್ರಿಲ್ ನಿಂದಲೂ ಕಾಣಿಸಿತ್ತು.

ಆದ್ಯ ಹೇಳುವುದೇನು?

ಆದ್ಯ ಹೇಳುವುದೇನು?

"ನನ್ನ ಹಳೆಯ ಚಾಟ್ ಗಳು ಕಾಣೆಯಾಗಿದೆ. ಅವುಗಳು ಆರ್ಕೈವ್ ಕೂಡ ಆಗಿಲ್ಲ. ಹಳೆಯ ಚಾಟ್ ಗಳು ಮೊದಲು ಹೋದವು ಮತ್ತು ನಂತರ ಒಂದಾದ ಮೇಲೆ ಒಂದರಂತೆ ಎಲ್ಲಾ ಮೆಸೇಜ್ ಗಳೂ ಹೋದವು. ನಾನು ವಾಟ್ಸ್ ಆಪ್ ನ್ನು ರೀಇನ್ಸ್ಟಾಲ್ ಮಾಡಿದೆ ಮತ್ತು ರೀಲಾಗಿನ್ ಮಾಡಿದೆ ಆದರೆ ಸಮಸ್ಯೆ ಹಾಗೆಯೇ ಇದೆ. ನಾನು SM-G965F/DS ನ್ನು ಬಳಸುತ್ತಿದ್ದೇನೆ. ಎಪ್ರಿಲ್ ನಿಂದ ಈ ಸೆಕ್ಯುರಿಟಿ ಸಮಸ್ಯೆಯನ್ನು ಎದುರಿಸುತ್ತಿದ್ದೇನೆ. ಇನ್ಯಾರಿಗಾದರೂ ಇದೇ ಸಮಸ್ಯೆ ಇದೆಯೇ ಎಂದು ಆಕೆ ಬರೆದುಕೊಂಡಿದ್ದಾಳೆ."

ಕೆಲವರು ಇದನ್ನು ಸ್ಯಾಮ್ ಸಂಗ್ ಫೋನಿನ ಸಮಸ್ಯೆ ಎಂದು ಭಾವಿಸಬಹುದು. ಆದರೆ, ಆದ್ಯಾ ಪೋಸ್ಟ್ ಗೆ ರಿಪ್ಲೈ ಮಾಡಿರುವ ಹಲವಾರು ಬಳಕೆದಾರರು, ಇತರೆ ಹಲವಾರು ಫೋನ್ ಗಳಲ್ಲೂ ಕೂಡ ಇದೇ ಸಮಸ್ಯೆ ಇದೆ ಎಂದು ಹೇಳುತ್ತಿದ್ದಾರೆ. ವಾಟ್ಸ್ ಆಪ್ ನ ಹಳೆಯ ಕಾನ್ವರ್ಸೇಷನ್ ಗಳು ದಿನದಿಂದ ದಿನಕ್ಕೆ ಕಾಣೆಯಾಗುತ್ತದೆ ಎಂದು ತಿಳಿಸಿದ್ದಾರೆ.

ಬಳಕೆದಾರರು ಹೇಳುತ್ತಿರುವುದೇನು?

ಬಳಕೆದಾರರು ಹೇಳುತ್ತಿರುವುದೇನು?

ನಾನು ಸ್ಟೋರೇಜ್ ಮ್ಯಾನೇಜ್ ಮೆಂಟ್ ನಲ್ಲೂ ಕೂಡ ಪರಿಶೀಲಿಸಿದ್ದೇನೆ. ಒಟ್ಟು ಮೆಸೇಜ್ ಕೌಂಟ್ ಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತದೆ.ಉದಾಹರಣೆಗೆ ನಾನು ಇತರರಿಗೆ ಕಳುಹಿಸಿದ ಒಟ್ಟು ಮೆಸೇಜ್ ಗಳ ಸಂಖ್ಯೆ 3,000ವಾಗಿತ್ತು ಸ್ವಲ್ಪ ದಿನದ ನಂತರ ಪರಿಶೀಲಿಸಿದಾಗ ಅದು 2980 ಎಂದು ತೋರಿಸುತ್ತಿದ್ದು. ಈ ಸಮಸ್ಯೆ ಪದೇ ಪದೇ ಆಗುತ್ತಿದೆ" ಎನ್ನುತ್ತಾರೆ ಜೋ149 ಎಂಬ ಹೆಸರಿನಲ್ಲಿರುವ ಬಳಕೆದಾರರು. ಇವರು ಹಾನರ್ 6ಎಕ್ಸ್ ಸ್ಮಾರ್ಟ್ ಫೋನ್ ನ್ನು ಬಳಸುತ್ತಿದ್ದಾರೆ.

ನಿಕ್ 009 ಎಂಬ ಬಳಕೆದಾರರೊಬ್ಬರು ಒನ್ ಪ್ಲಸ್ 6 ಸ್ಮಾರ್ಟ್ ಫೋನ್ ನಲ್ಲಿ ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆದ್ಯಾ ಈ ಬಗ್ಗೆ ವಾಟ್ಸ್ ಆಪ್ ಸಪೋರ್ಟ್ ಟೀಮ್ ನ್ನು ಸಂಪರ್ಕಿಸಿದಾಗ ಕ್ಲೀನರ್ ಅಥವಾ ಆಂಟಿ ವೈರಸ್ ಅಪ್ಲಿಕೇಷನ್ ನ್ನು ಆಫ್ ಮಾಡುವಂತೆ ಸಲಹೆ ನೀಡಿದ್ದಾರಂತೆ ಮತ್ತು ವಾಟ್ಸ್ ಆಪ್ ಫೋಲ್ಡರ್ ನ್ನು ಬಳಕೆದಾರರ ಗಮನಕ್ಕೆ ಬಾರದಂತೆ ಕ್ಲೀನ್ ಮಾಡುವ ಕೆಲಸವನ್ನು ಆಂಟಿವೈರಸ್ ಆಪ್ ಗಳು ಮಾಡುತ್ತಿರಬಹುದು ಎಂದು ಹೇಳಿದ್ದಾರಂತೆ.

ವಾಟ್ಸ್‌ಆಪ್ ಸಪೋರ್ಟ್ ಟೀಮ್ ಹೇಳಿರುವುದೇನು?

ವಾಟ್ಸ್‌ಆಪ್ ಸಪೋರ್ಟ್ ಟೀಮ್ ಹೇಳಿರುವುದೇನು?

"ನೀವು ತಾತ್ಕಾಲಿಕವಾಗಿ ಆಂಟಿವೈರಸ್ ಆಪ್ ನ್ನು ಡಿಸೇಬಲ್ ಮಾಡುವಂತೆ ಸಲಹೆ ನೀಡಿದ್ದಾರೆ ಮತ್ತು ಕೆಲವು ಸಮಯ ಅದನ್ನು ಪರಿಶೀಲಿಸಿ ಸಮಸ್ಯೆ ಉಧ್ಬವವಾಗುತ್ತದೆಯಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ" ಎಂದು ವಾಟ್ಸ್ ಆಪ್ ಸಪೋರ್ಟ್ ಟೀಮ್ ಉತ್ತರಿಸಿದೆ.

ಸ್ಮಾರ್ಟ್‌ಫೋನ್‌ ಅಪ್‌ಡೇಟ್‌ ಮಾಡಿಕೊಳ್ಳಿ

ಸ್ಮಾರ್ಟ್‌ಫೋನ್‌ ಅಪ್‌ಡೇಟ್‌ ಮಾಡಿಕೊಳ್ಳಿ

ಆದರೆ, ಆದ್ಯ ಹೇಳುವ ಪ್ರಕಾರ ಈ ಪ್ರೊಸೆಸ್ ಮಾಡಿದ ನಂತರವೂ ಕೂಡ ಸಮಸ್ಯೆ ಹಾಗೆಯೇ ಉದ್ಭವವಾಗಿದೆಯಂತೆ. ಒಂದು ವೇಳೆ ನೀವು ಕೂಡ ಇದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಾ ಇದ್ದಲ್ಲಿ ಕೂಡಲೇ ಫೋನಿನ ಆಪರೇಟಿಂಗ್ ಸಿಸ್ಟಮ್ ನ್ನು ಅಪ್ ಡೇಟ್ ಮಾಡಿಕೊಳ್ಳಿ ಮತ್ತು ಸಾಫ್ಟ ವೇರ್ ಅಪ್ ಡೇಟ್ ಕೂಡ ಮಾಡಿಕೊಳ್ಳಬೇಕು.ಅಷ್ಟೇ ಅಲ್ಲ ಮೆಸೇಜಿಂಗ್ ಆಪ್ ನ್ನು ಕೂಡ ನಿಮ್ಮ ಫೋನಿನಲ್ಲಿ ಅಪ್ ಟು ಡೇಟ್ ಇಟ್ಟುಕೊಳ್ಳಿ. ನಿಮ್ಮ ಎಲ್ಲಾ ಚಾಟ್ ಗಳನ್ನು ಗೂಗಲ್ ಡ್ರೈವ್ ನಲ್ಲಿ ಬ್ಯಾಕ್ ಅಪ್ ತೆಗೆದಿಟ್ಟುಕೊಳ್ಳಿ.ಒಂದು ವೇಳೆ ಅದಾಗ್ಯೂ ಸಮಸ್ಯೆ ಹಾಗೆಯೇ ಉದ್ಭವವಾದಲ್ಲಿ ಕೂಡಲೇ ವಾಟ್ಸ್ ಆಪ್ ಸಪೋರ್ಟ್ ಟೀಮ್ ನ್ನು ನ ಬೆಂಬಲ ಮತ್ತು ಸಲಹೆಗಳನ್ನು ಪಡೆದು ಮುಂದುವರಿಯಿರಿ.

Best Mobiles in India

English summary
Old conversations on WhatsApp are disappearing, but no one seems to know why. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X