ಒನ್‌ಪ್ಲಸ್ 6 VS ಒನ್‌ಪ್ಲಸ್ 5: ಅಪ್‌ಡೇಟ್ ಆಗಬೇಕಿದೆಯಾ?

By Lekhaka
|

ಸದ್ಯ ಮಾರುಕಟ್ಟೆಯಲ್ಲಿ ಒನ್ ಪ್ಲಸ್ 6 ಸ್ಮಾರ್ಟ್ ಫೋನ್ ಕಾಣಿಸಿಕೊಂಡಿದ್ದು, ಹೆಚ್ಚು ಪ್ರಮಾಣದ ಅಭಿಮಾನಿಗಳನ್ನು ಸೆಳೆಯಲು ಇದು ಮುಂದಾಗಿದೆ. ಈ ಹಿನ್ನಲೆಯಲ್ಲಿ ಈಗಾಗಲೇ ಒನ್ ಪ್ಲಸ್ 5 ಸ್ಮಾರ್ಟ್ಫೋನ್ ಹೊಂದಿರುವ ಈ ಹೊಸ ಫೋನಿಗೆ ಆಪ್ ಗ್ರೇಡ್ ಆಗಬೇಕೆ ಅಥವಾ ಈ ಎರಡು ಫೋನಿನಲ್ಲಿಯೂ ಇರುವ ವ್ಯತ್ಯಾಸಗಳು ಯಾವುವು, ಮತ್ತು ಇರುವ ಸಾಮ್ಯತೆಗಳು ಯಾವುವು ಎನ್ನುವುದನ್ನು ತಿಳಿಸುವ ಪ್ರಯತ್ನವು ಇದಾಗಿದೆ.

ಒನ್‌ಪ್ಲಸ್ 6 VS ಒನ್‌ಪ್ಲಸ್ 5: ಅಪ್‌ಡೇಟ್ ಆಗಬೇಕಿದೆಯಾ?


ಒನ್ ಪ್ಲಸ್ 6 ಸ್ಮಾರ್ಟ್ ಫೋನಿನಲ್ಲಿ ಈ ಹಿಂದೆ ಇದ್ದ ಸ್ಮಾರ್ಟ್ ಫೋನ್ ಮಾದರಿಯಲ್ಲಿ ಡ್ಯಾಷ್ ಚಾರ್ಜಿಂಗ್ 3300 mAh ಬ್ಯಾಟರಿ. 6GB RAM/ 8GB RAM ಹಾಗೂ 64 GB ಮತ್ತು 128GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ. ಇದಲ್ಲದೇ ಇನ್ನು ಹೊಸ ಆಯ್ಕೆಗಳು ಕಾಣಿಸಿಕೊಂಡಿದ್ದು ಈ ಕುರಿತ ಮಾಹಿತಿಯೂ ಇಲ್ಲಿದೆ.

ವ್ಯತ್ಯಾಸಗಳೇನು..?

ಈ ಎರಡು ಸ್ಮಾರ್ಟ್ ಫೋನ್ ಗಳಲ್ಲಿ ಕೆಲವು ಅಂಶಗಳು ಮಾತ್ರವೇ ವ್ಯತ್ಯಾಸವನ್ನು ಹೊಂದಿವೆ ಎನ್ನಲಾಗಿದೆ. ಡಿಸೈನ್ ನಲ್ಲಿ ಸಾಕಷ್ಟು ಬದಲಾವಣೆಯನ್ನು ಗುರುತಿಸಬಹುದಾಗಿದೆ. ಇದನ್ನು ಬಿಟ್ಟರೆ ಸಾಫ್ಟ್ ವೇರ್ ವಿಭಾಗದಲ್ಲಿ ಹೆಚ್ಚು ವ್ಯತ್ಯಾಸವು ಕಾಣಿಸಿಕೊಂಡಿಲ್ಲ.

ಒನ್ ಪ್ಲಸ್ 6 ಸ್ಮಾರ್ಟ್ ಫೋನಿನಲ್ಲಿ 6.3 ಇಂಚಿನ 19:9 ಅನುಪಾತದ ಡಿಸ್ ಪ್ಲೇಯನ್ನು ಕಾಣಬಹುದಾಗಿದ್ದು, ನೋಚ್ ಸಹ ಇದರಲ್ಲಿ ಕಾಣಿಸಿಕೊಂಡಿದೆ. ಈ ಸ್ಮಾಟ್ ಫೋನಿನಲ್ಲಿ ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಇದ್ದರೇ ಒನ್ ಪ್ಲಸ್ 5 ಸ್ಮಾರ್ಟ್ ಪೋನಿನಲ್ಲಿ ಮುಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಕಾಣಹುದಾಗಿದ್ದು, ಇದರಲ್ಲಿ ಹಾರಿಸಾಂಟಲ್ ಡ್ಯುಯಲ್ ಕ್ಯಾಮೆರಾ ಇದ್ದರೇ, ಒನ್ ಪ್ಲಸ್ 6 ನಲ್ಲಿ ವರ್ಟಿಕಲ್ ಡ್ಯುಯಲ್ ಕ್ಯಾಮೆರಾವನ್ನು ನೀಡಲಾಗಿದೆ.

ಆಪ್ ಡೇಟ್ ಆಗಬೇಕಾ..?

ಈಗಾಗಲೇ ಒನ್ ಪ್ಲಸ್ 5 ಸ್ಮಾರ್ಟ್ ಫೋನ್ ಅನ್ನು ಹೊಂದಿದವರು ಒನ್ ಪ್ಲಸ್ 6 ಸ್ಮಾರ್ಟ್ ಫೋನಿಗೆ ಆಪ್ ಗ್ರೇಡ್ ಆಗಬೇಕೇ ಎನ್ನುವ ಪ್ರಶ್ನೇಯನ್ನು ಕೇಳಿದರೆ, ಒನ್ ಪ್ಲಸ್ 5 ಸ್ಮಾರ್ಟ್ ಫೋನ್ ಇನ್ನು ಕೇಲವ ಒಂದು ವರ್ಷದ ಹಳೇಯದು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಹೊಸ ಫೋನ್ ಬೇಕು ಎನ್ನುವವರು ಆಪ್ ಗ್ರೇಡ್ ಆಗಬಹುದಾಗಿದೆ. ಅನ್ನು ಬಿಟ್ಟರೆ ಸಾಫ್ಟ್ ವೇರ್ ವಿಭಾಗದಲ್ಲಿ ಎಲ್ಲಾ ವಿಶೇಷತಗಳು ಒಂದೇ ಮಾದರಿಯಲ್ಲಿ ಕಾಣಿಸಿಕೊಂಡಿದೆ.

ಆದರೆ ಒನ್ ಪ್ಲಸ್ 6 ವಿನ್ಯಾಸ ಉತ್ತಮವಾಗಿದ್ದು, ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ. ಕ್ಯಾಮೆರಾ ಒಂದೇ ಆದರೂ ಸಹ ಆಯ್ಕೆಗಳು ಮಾತ್ರವೇ ಬೇರೆ ಬೇರೆ ಯಾಗಿದೆ. ಇದರಿಂದಾಗಿ ಬೆಸ್ಟ್ ಫೋನ್ ಬೇಕು ಎನ್ನುವವರು ಆಪ್ ಡೇಟ್ ಮಾಡಿಕೊಳ್ಳಬಹುದು, ಇಲ್ಲ ಸಾಕು ಎನ್ನುವವರಿಗೆ ಇದು ಒನ್ ಪ್ಲಸ್ 5 ಸಹ ಬೆಸ್ಟ್ ಎನ್ನಬಹುದಾಗಿದೆ.

Best Mobiles in India

English summary
Is it time to continue with the one-year upgrade cycle?. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X