ಒನ್‌ಪ್ಲಸ್ 6 - ಯಾವ RAM ಮತ್ತು ಸ್ಟೋರೇಜ್ ಸ್ಮಾರ್ಟ್‌ಫೋನ್ ಖರೀದಿ ಉತ್ತಮ?

  ಒನ್ ಪ್ಲಸ್ 6 ಮೂರು ವಿವಿಧ ಮಾಡೆಲ್ ಗಳು ಮಾರುಕಟ್ಟೆಗೆ ಬರುತ್ತಿದ್ದು, ಬೇರೆಬೇರೆ ಕಲರ್ ಮತ್ತು RAM ಮತ್ತು ಅದರ ಸ್ಟೋರೇಜ್ ಕೆಪಾಸಿಟಿಯಲ್ಲೂ ಕೂಡ ಭಿನ್ನತೆಗಳಿವೆ. ಕಡಿಮೆ ಬೆಲೆಗಾಗಿ ಹೆಚ್ಚಿನವರು ಬೇಝ್ ಮಾಡೆಲ್ ನ್ನೇ ಆಯ್ಕೆ ಮಾಡಿ ಬಿಡುತ್ತಾರೆ. ನಿಮ್ಮ ಹೊಸ ಖರೀದಿ ಫರ್ಫೆಕ್ಟ್ ಆಗಿರಬೇಕು ಎಂದು ನಾವಿಲ್ಲಿ ಕೆಲವು ಸಲಹೆಗಳನ್ನು ನೀಡುತ್ತಿದ್ದೀವಿ. ಒನ್ ಪ್ಲಸ್6 ನಲ್ಲಿ ಯಾವ RAM ಮತ್ತು ಸ್ಟೋರೇಜ್ ಸೈಜ್ನ ನ್ನು ನೀವು ಖರೀದಿಸಬೇಕು ಎಂಬುದರ ಬಗ್ಗೆ ಯಾವುದೇ ಗೊಂದಲುಗಳು ಬೇಡ. ಈ ಲೇಖನ ಓದಿ ನೀವು ನಿರ್ಧಾರ ಮಾಡಬಹುದು.

  ಒನ್‌ಪ್ಲಸ್ 6 - ಯಾವ RAM ಮತ್ತು ಸ್ಟೋರೇಜ್ ಸ್ಮಾರ್ಟ್‌ಫೋನ್ ಖರೀದಿ ಉತ್ತಮ?

  ಮೊದಲು ಯಾವ ಬಣ್ಣದ್ದು ಬೇಕು ಆಯ್ಕೆ ಮಾಡಿಕೊಳ್ಳಿ

  ಒನ್ ಪ್ಲಸ್ 6 ನಲ್ಲಿ ಮೂರು ವಿವಿಧ ಬಣ್ಣದ ಫೋನ್ ಗಳಿವೆ. ಮಿರರ್ ಕಪ್ಪು, ಮಿಡ್ ನೈಡ್ ಕಪ್ಪು, ಮತ್ತು ಸಿಲ್ಕ್ ಬಿಳಿ. ಆದರೆ ಎಲ್ಲಾ ಕಲರ್ ನಲ್ಲೂ ಎಲ್ಲಾ ಸ್ಟೋರೇಜ್ ಅವಕಾಶಗಳಿಲ್ಲ. ಹಾಗಾಗಿ ನೀವು ಬಣ್ಣಕ್ಕೆ ಮಹತ್ವ ಕೊಡುವವರೋ ಇಲ್ಲ ಫೋನಿನ ಸ್ಟೋರೇಜ್ ಫೆಸಿಲಿಟಿಗೆ ಮಹತ್ವ ನೀಡುವವರೋ ನಿಮಗೆ ಬಿಟ್ಟದ್ದು. ಆದರೆ ಆ ಬಗ್ಗೆ ತಿಳಿದಿರುವುದು ಉತ್ತಮವಾಗಿರುವುದರಿಂದ ಅದರ ಮಾಹಿತಿ ಇಲ್ಲಿದೆ.

  • 64GB ಸ್ಟೋರೇಜ್: ಮಿರರ್ ಕಪ್ಪು

  • 128GB ಸ್ಟೋರೇಜ್: ಮಿರರ್ ಕಪ್ಪು, ಮಿಡ್ ನೈಡ್ ಕಪ್ಪು, ಸಿಲ್ಕ್ ಬಿಳಿ

  • 256GB ಸ್ಟೋರೇಜ್ : ಮಿಡ್ ನೈಡ್ ಕಪ್ಪು

  ಬೇಸ್ ಮಾಡೆಲ್ ನಲ್ಲಿ ಕೇವಲ ಮಿರರ್ ಕಪ್ಪು ಮಾತ್ರ ಇದೆ. ನೀವು ಸ್ವಲ್ಪ ಬೇರೆ ಬಣ್ಣದ್ದೇ ಆಯ್ಕೆ ಮಾಡಬೇಕೆಂದರೆ ಸ್ಟೋರೇಜ್ ಹೆಚ್ಚಿಸಿಕೊಂಡು ಅದರಲ್ಲಿರುವ ಮೂರು ಬಣ್ಣಗಳಾದ ಮಿರರ್ ಕಪ್ಪು, ಮಿಡ್ ನೈಟ್ ಕಪ್ಪು ಇಲ್ಲವೇ ಸಿಲ್ಕ್ ಬಿಳಿಯಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ಸಿಲ್ಕ್ ಬಿಳಿ ಬಣ್ಣದ ಮೊಬೈಲ್ ಹೆಚ್ಚು ತಯಾರಿಯಾಗಿಲ್ಲ. ಕೆಲವೇ ಕೆಲವು ಈ ಬಣ್ಣದ ಮೊಬೈಲ್ ಲಭ್ಯವಿದ್ದು, ಬೇಡಿಕೆಗೆ ತಕ್ಕಂತೆ ಯಾವಾಗ ಲಭ್ಯವಾಗ ಬಹುದು ಎಂಬುದರ ಮಾಹಿತಿ ಸದ್ಯ ಸಿಕ್ಕಿಲ್ಲ.

  . ಸ್ಟೋರೇಜ್ ಸೈಜ್ ಆಯ್ಕೆ ಮಾಡಿ

  ನೀವು ಕಲರ್ ಆಯ್ಕೆ ಮಾಡಿದ ನಂತರ, ಸ್ಟೋರೇಜ್ ಕೆಪಾಸಿಟಿಯ ಬಗ್ಗೆಯೂ ತಿಳಿಯಬೇಕು.64GB ಯ ಬೇಸ್ ಮಾಡೆಲ್ ಹೆಚ್ಚಿನವರಿಗೆ ಸಾಕಾಗುತ್ತದೆ.ಯಾಕೆಂದರೆ ಒನ್ ಪ್ಲಸ್ ಉತ್ತಮ ಸಾಫ್ಟ್ ವೇರ್ ಹೊಂದಿದೆ ಮತ್ತು ಖಾಲಿ ಜಾಗಗಳೂ ಇದರಲ್ಲಿ ಸಾಕಷ್ಟಿರುತ್ತೆ. SD ಕಾರ್ಡ್ ಹಾಕಿ ಸ್ಟೋರೇಜ್ ಫೆಸಿಲಿಟಿಯನ್ನು ಸ್ಯಾಮ್ ಸಂಗ್ ಗ್ಯಾಲಕ್ಸಿಯಲ್ಲಿ ಹೆಚ್ಚಿಸಿಕೊಳ್ಳುವಂತೆ ಇದರಲ್ಲಿ ಸಾಧ್ಯವಾಗುವುದಿಲ್ಲ. ನೀವು ಖರೀದಿಸಿದ ಸ್ಟೋರೇಜ್ ಫೆಸಿಲಿಯ ಮೊಬೈಲ್ ಗೆ ನೀವು ಸ್ಟಿಕ್ ಆನ್ ಆಗಬೇಕು.128 GB ಸ್ಟೋರೇಜ್ ಹೊಂದಿರುವ ಮೊಬೈಲ್ ಗೆ $50/€50/£50 ಹೆಚ್ಚು ಹಣ ಪಾವತಿಸಬೇಕಾಗುತ್ತದೆ.ನಿಮಗೆ ಇಂತಿಷ್ಟೇ ಸ್ಟೋರೇಜ್ ಇರುವ ಅಗತ್ಯವಿದೆ ಎಂದು ಅನ್ನಿಸಿ, ದೊಡ್ಡ ಮಟ್ಟದ ಮ್ಯಾನೇಜ್ ಮೆಂಟ್ ಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಹ್ಯಾಂಡಲ್ ಮಾಡುತ್ತಿದ್ದೀರಾದರೆ ಜಸ್ಟ್ ನೀವಂದುಕೊಂಡು128 ಜಿಬಿಯನ್ನೇ ಆಯ್ಕೆ ಮಾಡಬಹುದು. ಇಲ್ಲದೇ ಇದ್ದಲ್ಲಿ 64ಜಿಬಿಯ ಮೊಬೈಲ್ ಸಾಕಾಗುತ್ತೆ. 128 ಜಿಬಿ ಮೊಬೈಲ್ ಖರೀದಿಸುತ್ತಿದ್ದಾರೆ ಅದ್ರಲ್ಲಿ 8 ಜಿಬಿ RAM ಇರುತ್ತೆ.

  Oneplus 6 First Impressions - Gizbot Kannada
  ಯಾರು 256 ಜಿಬಿ ಮಾಡೆಲ್ ನ್ನು ಖರೀದಿಸಬಹುದು? ತುಂಬಾ ಜನರಿಗೆ ಇದರ ಅಗತ್ಯವಿಲ್ಲ. ಅತಿಯಾಗಿ ಗೇಮ್ ಬಳಕೆ ಮಾಡುವವರು,ಲೋಕಲ್ ಮೀಡಿಯಾದಲ್ಲಿ ಸಾಕಷ್ಟು ಫೈಲ್ ಗಳನ್ನು ಸೇವ್ ಮಾಡಿ ಇರುವವರಿಗೆ ಇದು ಬೇಕಾದೀತು ಅಷ್ಟೇ.ಇವುಗಳಿಂದಲೇ ನೀವು 128 ಜಿಬಿ ತುಂಬಿಸುತ್ತಿರಾದರೆ ಅಂತವರು 256ಜಿಬಿ ಮಾಡೆಲ್ ಖರೀದಿಗೆ ಮುಂದಾಗುವುದರಲ್ಲಿ ಅರ್ಥವಿದೆ. ಈಗಾಗಲೇ ನಿಮ್ಮ ಹಳೆಯ ಫೋನ್ ನಲ್ಲಿ ಸ್ಟೋರೇಜ್ ಸಮಸ್ಯೆ ಎದುರಿಸುತ್ತಿದ್ದು, ಹೊಸ ಫೋನಿನಲ್ಲಿ ಅದಕ್ಕಿಂತಲೂ ಹೆಚ್ಚಿನ ಸ್ಟೋರೇಜ್ ಫೆಸಿಲಿಟಿ ಬೇಕು ಎಂದು ಬಯಸುತ್ತಿರುವವರು ಜಸ್ಟ್ ಯಾವುದೇ ಮುಲಾಜಿಲ್ಲದೆ 256 ಜಿಬಿ ಮಾಡೆಲ್ ಖರೀದಿಸಬಹುದು. 128 ಜಿಬಿ ಮಾಡೆಲ್ ಗಿಂತ 50/€50/£50 ಹಣ ಹೆಚ್ಚು ಪಾವತಿಸಬೇಕಾಗುತ್ತದೆ ಅಷ್ಟೇ. ಇದರ ಜೊತೆಗೂ ನಿಮಗೆ ಸಿಗುವುದು 8GB RAM…

  . ಹೆಚ್ಚು RAM ಇರುವುದು ಒಂದು ಬೋನಸ್ ಅಷ್ಟೇ..

  ಯಾವ RAM ವಿಚಾರವನ್ನು ಈ ಲೇಖನದಲ್ಲಿ ಕೊನೆಯಲ್ಲಿ ಪ್ರಸ್ತಾಪಿಸುತ್ತಿದ್ದೇವೆ ಯಾಕೆಂದರೆ ನಿಮಗಿಲ್ಲಿ ಆಯ್ಕೆಗೆ ಯಾವುದೇ ಅವಕಾಶವಿಲ್ಲ.64 ಜಿಬಿ ಮಾಡೆಲ್ ಖರೀದಿಸಿದರೆ 6 ಜಿಬಿ RAM ಅಟೋಮ್ಯಾಟಿಕಲಿ ನಿಮಗೆ ಲಭ್ಯವಾಗುತ್ತೆ. ಹೆಚ್ಚಿನ ವರ್ಷನ್ನಿನ ಮೊಬೈಲ್ ಖರೀದಿಸಿದರೆ 8GB RAM ಬೋನಸ್ ನಂತೆ ಸಿಗಲಿದೆ ಅಷ್ಟೇ..

  . 8 gb RAM ಗಾಗಿ ಸುಮ್ಮನೆ ಹೆಚ್ಚು ಪಾವತಿಸಬೇಡಿ..

  ಕೆಲವರು RAM ನೋಡಿ ಮರುಳಾಗಬಹುದು. ಆದರೆ 6GB RAM ಆರಾಮಾಗಿ ಸಾಕಾಗುತ್ತೆ. ಈಗ ಸದ್ಯ ಲಭ್ಯವಾಗುತ್ತಿರುವ ಆಂಡ್ರಾಯ್ಡ್ ಫೋನ್ ಗಳಲ್ಲಿ 4 ರಿಂದ 6 GB RAM ಇರುತ್ತೆ. ಯಾವುದೇ ಸಾಫ್ಟ್ ವೇರ್ ಅಥವಾ ಅಪ್ಲಿಕೇಷನ್ ಗಳು ಇಂತಿಷ್ಟೇ RAM ಬೇಕೆಂದು ನಿರೀಕ್ಷಿಸುವುದಿಲ್ಲ. ಭವಿಷ್ಯದ ಯಾವುದಾದರೂ ನಿರೀಕ್ಷೆಗಳಿಗಾಗಿ 8GB RAM ಬೇಕು ಎಂದು ಹೇಳಬಹುದೇ ಹೊರತು ಸದ್ಯದ ಎಲ್ಲಾ ಚಟುವಟಿಕೆಗಳಿಗೆ 6GB RAM ಸಾಕಾಗುತ್ತೆ. ಕೇವಲ 2GBRAM ಗಾಗಿ ಹೆಚ್ಚು ಪಾವತಿಸುವುದು ಲಾಭದಾಯಕವಲ್ಲ. ಒಂದು ವೇಳೆ ಸ್ಟೋರೇಜ್ ಗಾಗಿ ಖರೀದಿಸುತ್ತೀರಿ ಎಂದರೆ ಅದರಲ್ಲಿ ಅರ್ಥವಿದೆ. ಹಾಗಾಗಿ ಸ್ಟೋರೇಜ್ ಬಗ್ಗೆ ಮೊದಲು ಆಯ್ಕೆ ಮಾಡಿ. RAM ಬಗ್ಗೆ ತಲೆಕೆಡಿಸಿಕೊಳ್ಳಬೇಡಿ..

  English summary
  We all like big numbers, but the extra cost doesn't always make sense.to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more