ವಾಟ್ಸ್‌ಆಪ್‌ ಬ್ಯುಸಿನೆಸ್‌ನಲ್ಲಿ ಹೊಸ ಫೀಚರ್‌..! ವ್ಯಾಪಾರಿಗಳಿಗೆ ಅನುಕೂಲ..!

By Gizbot Bureau
|

ವಾಟ್ಸ್‌ಆಪ್ ತನ್ನ ಬ್ಯುಸಿನೆಸ್ ಆಪ್‌ನಲ್ಲಿ ಹೊಸ ವೈಶಿಷ್ಟ್ಯವನ್ನು ಹೊರತಂದಿದ್ದು, ಇದರ ಮೂಲಕ ಗ್ರಾಹಕರು ತಮ್ಮ ಉತ್ಪನ್ನಗಳನ್ನು ಸುಲಭವಾಗಿ ಖರೀದಿಸಬಹುದಾಗಿದೆ. ಭಾರತ, ಬ್ರೆಜಿಲ್, ಜರ್ಮನಿ, ಇಂಡೋನೇಷ್ಯಾ, ಮೆಕ್ಸಿಕೊ, ಯುಕೆ ಮತ್ತು ಯುಎಸ್‌ನಲ್ಲಿ ವಾಟ್ಸ್‌ಆಪ್ ಬ್ಯುಸಿನೆಸ್ ಅಪ್ಲಿಕೇಶನ್ ಬಳಸುವ ವ್ಯವಹಾರಗಳಿಗೆ ಕ್ಯಾಟಲಾಗ್ಸ್ ಎಂಬ ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಲಾಗಿದೆ.

ಏಳು ದೇಶಗಳಲ್ಲಿ ಲಭ್ಯ

ಏಳು ದೇಶಗಳಲ್ಲಿ ಲಭ್ಯ

ವಾಟ್ಸ್‌ಆಪ್ ಬ್ಯುಸಿನೆಸ್‌ನ ಕ್ಯಾಟಲಾಗ್ ಫೀಚರ್‌ ಈಗಾಗಲೇ ಏಳು ದೇಶಗಳಲ್ಲಿ ಲಭ್ಯವಿದ್ದು, ಶೀಘ್ರದಲ್ಲಿಯೇ ಇತರ ದೇಶಗಳಿಗೂ ವಿಸ್ತರಣೆಯಾಗುವ ನಿರೀಕ್ಷೆಯಿದೆ. ಹೊಸ ವೈಶಿಷ್ಟ್ಯವು ಆಂಡ್ರಾಯ್ಡ್ ಮತ್ತು ಐಒಎಸ್ ಎರಡು ಸಾಧನಗಳ ಬಳಕೆದಾರರಿಗೆ ಲಭ್ಯವಿದೆ,

ಮೊಬೈಲ್‌ ಶೋರೂಂ

ಮೊಬೈಲ್‌ ಶೋರೂಂ

ಕ್ಯಾಟಲಾಗ್‌ಗಳು ವ್ಯಾಪಾರಿಗಳು ತಮ್ಮ ವಸ್ತುಗಳನ್ನು ಪ್ರದರ್ಶಿಸಲು ಮತ್ತು ಹಂಚಿಕೊಳ್ಳಲು ಮೊಬೈಲ್ ಶೋರೂಂ ಆಗಿದೆ. ಇದರಿಂದ ಜನರು ಖರೀದಿಸಲು ಬಯಸುವ ಯಾವ ವಸ್ತುವನ್ನಾದರೂ ಸುಲಭವಾಗಿ ಬ್ರೌಸ್ ಮಾಡಬಹುದು ಮತ್ತು ಕಂಡುಹಿಡಿಯಬಹುದು. ಈ ಹಿಂದೆ ವ್ಯಾಪಾರಿಗಳು ಉತ್ಪನ್ನಗಳ ಫೋಟೋಗಳನ್ನು ಒಂದೊಂದಾಗಿ ಕಳುಹಿಸಬೇಕಾಗಿತ್ತು. ಮತ್ತು ಪದೇ ಪದೇ ಮಾಹಿತಿಯನ್ನು ಒದಗಿಸಬೇಕಾಗಿತ್ತು. ಆದರೆ, ಈಗ ಗ್ರಾಹಕರು ವ್ಯಾಪಾರಿಗಳ ಪೂರ್ಣ ಕ್ಯಾಟಲಾಗ್‌ನ್ನು ವಾಟ್ಸ್‌ಆಪ್‌ನಲ್ಲಿಯೇ ನೋಡಬಹುದಾಗಿದೆ.

ಹೆಚ್ಚಿನ ಆಯ್ಕೆಗಳು

ಹೆಚ್ಚಿನ ಆಯ್ಕೆಗಳು

ಕ್ಯಾಟಲಾಗ್‌ಗಳ ಭಾಗವಾಗಿ ಉತ್ಪನ್ನದ ಚಿತ್ರಗಳು, ಹೆಸರು, ಬೆಲೆ, ವಿವರಣೆ ಮತ್ತು ಲಿಂಕ್‌ನಂತಹ ಮಾಹಿತಿಯನ್ನು ಸೇರಿಸಬಹುದು. ವಾಟ್ಸ್‌ಆಪ್‌ನಲ್ಲಿ ಅಂತಹ ಎಲ್ಲ ಮಾಹಿತಿಯನ್ನು ಒದಗಿಸಲು ಸಾಧ್ಯವಾಗುವುದರಿಂದ ವ್ಯಾಪಾರಿಯ ವೆಬ್‌ಸೈಟ್‌ಗೆ ಹೋಗುವ ಅಗತ್ಯ ನಿವಾರಿಸುತ್ತದೆ. ಮತ್ತು ಫೇಸ್‌ಬುಕ್ ಒಡೆತನದ ವಾಟ್ಸ್‌ಆಪ್ ಮೂಲಕ ನೇರವಾಗಿ ಉತ್ಪನ್ನವನ್ನು ಕಾಯ್ದಿರಿಸಬಹುದು.

ಪ್ರತಿದಿನದ ವ್ಯವಹಾರ

ಪ್ರತಿದಿನದ ವ್ಯವಹಾರ

ನಾವು ವಾಣಿಜ್ಯ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ತೆರೆಯುತ್ತಿದ್ದೇವೆ. ಗ್ರಾಹಕರನ್ನು ಉತ್ಪನ್ನಗಳ ಮಾಹಿತಿಗಾಗಿ ವೆಬ್‌ಸೈಟ್‌ಗೆ ಕಳುಹಿಸುವುದಕ್ಕಿಂತ ಹೆಚ್ಚಾಗಿ, ಅವರು ವಾಟ್ಸ್‌ಆಪ್‌ನಲ್ಲಿ ಪ್ರತಿದಿನದ ವ್ಯವಹಾರಗನ್ನು ಮಾಡಬಹುದು ಎಂದು ವಾಟ್ಸ್‌ಆಪ್‌ನ ಉತ್ಪನ್ನ ವ್ಯವಸ್ಥಾಪಕ ಅಮೃತ್ ಪಾಲ್ ಹೇಳಿದ್ದಾರೆ.

ವ್ಯಾಪಾರಕ್ಕೆ ವೇದಿಕೆ

ವ್ಯಾಪಾರಕ್ಕೆ ವೇದಿಕೆ

ವಾಟ್ಸ್‌ಆಪ್ ಬ್ಯುಸಿನೆಸ್ ಆಪ್‌ನ್ನು 2018ರಲ್ಲಿ ಪ್ರಾರಂಭಿಸಲಾಯಿತು, ಇದು ವ್ಯಾಪಾರಿಗಳಿಗೆ ತಮ್ಮ ಸಂಭಾವ್ಯ ಗ್ರಾಹಕರೊಂದಿಗೆ ಸಂವಹನ ನಡೆಸಲು ಒಂದು ವೇದಿಕೆಯನ್ನು ಒದಗಿಸಿದೆ. ಈ ಅಪ್ಲಿಕೇಶನ್‌ನಲ್ಲಿ ವ್ಯಾಪಾರಿಗಳು ತಮ್ಮ ಅಧಿಕೃತ ಜೈವಿಕ, ಇಮೇಲ್, ವಿಳಾಸ ಮತ್ತು ಸಂಪರ್ಕ ಸಂಖ್ಯೆಯನ್ನು ಸೇರಿಸಬಹುದು.

Best Mobiles in India

Read more about:
English summary
Online Shopping Made Easy; Thanks WhatsApp

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X