ಸುಧಾರಿತ ಆವೃತ್ತಿ ಒಪ್ಪೋ A83 2018 ಸ್ಮಾರ್ಟ್‌ಫೋನ್ ಬಿಡುಗಡೆ!

By Tejaswini P G

  ಒಪ್ಪೋ ಭಾರತದಲ್ಲಿ ಲಾಂಚ್ ಮಾಡಿದೆ ನೂತನ ಆರಂಭಿಕ ಶ್ರೇಣಿಯ ಸ್ಮಾರ್ಟ್ಫೋನ್ ಒಂದನ್ನು. ಒಪ್ಪೋ A83 2018 ಎಂಬ ಹೆಸರಿನ ಈ ಸ್ಮಾರ್ಟಫೋನ್ ಜನವರಿಯಲ್ಲಿ ಲಾಂಚ್ ಆದ ಒಪ್ಪೋ A83 ಯ ಉನ್ನತ ಆವೃತ್ತಿ ಎಂದೆನಿಸಿದೆ. ರೂ 25990 ಬೆಲೆಯ ಒಪ್ಪೋ A83 2018 ಸ್ಮಾರ್ಟ್ಫೋನ್ ಅಮೇಜಾನ್, ಫ್ಲಿಪ್ಕಾರ್ಟ್, ಪೇಟಿಯಂ ಮತ್ತು ಆಪ್ಲೈನ್ ಸ್ಟೋರ್ಗಳಲ್ಲಿಯೂ ಖರೀದಿಗೆ ಲಭ್ಯವಾಗಲಿದೆ. ಒಪ್ಪೋ A83 2018 ಬ್ಲೂ ಮತ್ತು ಗೋಲ್ಡ್ ಬಣ್ಣಗಳ ಎರಡು ಆವತ್ತಿಗಳಲ್ಲಿ ಲಭ್ಯವಿದೆ.

  ಇದರ ಸ್ಪೆಸಿಫಿಕೇಶನ್ಗಳ ಕುರಿತು ಹೇಳುವುದಾದರೆ, ಒಪ್ಪೋ A83 2018 5.7 ಇಂಚ್ ಫುಲ್ ಸ್ಕ್ರೀನ್ ಡಿಸ್ಪ್ಲೇ ಹೊಂದಿದ್ದು 1440X 720 ಪಿಕ್ಸೆಲ್ಗಳ ರೆಸೊಲ್ಯೂಶನ್ ಹೊಂದಿದೆ.ಒಕ್ಟಾಕೋರ್ MT6763T ಪ್ರಾಸೆಸರ್ ಹೊಂದಿರುವ ಈ ಸ್ಮಾರ್ಟ್ಫೋನ್ 4GB RAM ಮತ್ತು 64GB ಸ್ಟೋರೆಜ್ ಸಾಮರ್ಥ್ಯ ಹೊಂದಿದೆ. ಮೈಕ್ರೋSD ಕಾರ್ಡ್ ಬಳಸಿ ಸ್ಟೋರೇಜ್ ಅನ್ನು 256GB ವರೆಗೆ ವಿಸ್ತರಿಸಬಹುದಾಗಿದೆ.

  ಸುಧಾರಿತ ಆವೃತ್ತಿ ಒಪ್ಪೋ A83 2018 ಸ್ಮಾರ್ಟ್‌ಫೋನ್ ಬಿಡುಗಡೆ!

  ಇನ್ನು ಇದರ ಕ್ಯಾಮೆರಾ ಬಗ್ಗೆ ಹೇಳುವುದಾದರೆ ಒಪ್ಪೋ A83 2018 ನಲ್ಲಿದೆ ಅಲ್ಟ್ರಾ-HD ಮೋಡ್ ಹೊಂದಿರುವ 13MP ರೇರ್ ಕ್ಯಾಮೆರಾ. ಅಲ್ಲದೆ ಫೋನ್ ನ ಮುಂಭಾಗದಲ್ಲಿ ಒಪ್ಪೋ ನ AI ಬ್ಯೂಟಿ ರೆಕಗ್ನಿಶನ್ ತಂತ್ರಜ್ಞಾನ ಹೊಂದಿರುವ 8MP ಸೆಲ್ಫೀ ಕ್ಯಾಮೆರಾ ಕೂಡ ಇದೆ.

  ಒಪ್ಪೋ A83 2018 ಆಂಡ್ರಾಯ್ಡ್ 7.1 ನುಗಾಟ್ ಓಎಸ್ ಹೊಂದಿದ್ದು ಜೊತೆಗೆ ಕಲರ್ ಓಎಸ್ 3.2 ನ ಮೇಲ್ಪದರವನ್ನು ಹೊಂದಿದೆ. 3180mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುವ ಈ ಹ್ಯಾಂಡ್ಸೆಟ್ ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯ ಹೊಂದಿಲ್ಲ.

  ಒಪ್ಪೋ A83 2018 ಒಂದು ಡ್ಯುಯಲ್ ಸಿಮ್ ಸ್ಮಾರ್ಟ್ಫೋನ್ ಆಗಿದ್ದು ಫೇಶಿಯಲ್ ಅನ್ಲಾಕ್ ಫೀಚರ್ ಹೊಂದಿದೆ. ಈ ಫೇಶಿಯಲ್ ಅನ್ಲಾಕ್ ಫೀಚರ್ ತುಂಬಾ ಕ್ಷಿಪ್ರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಒಪ್ಪೋ ಸಂಸ್ಥೆ ಹೇಳಿದೆ. ಆದರೆ ಇದರಲ್ಲಿ ಫಿಂಗರ್ಪ್ರಿಂಟ್ ಸ್ಕ್ಯಾನರ್ ಇರದೆ ಇರುವುದು ಒಂದು ನ್ಯೂನತೆಯಾಗಿದೆ.

  "ನಾವು ನಮ್ಮ ಯುವ ಜನತೆಗೆ ಶ್ರೇಷ್ಠ ಫೋಟೋಗ್ರಾಫಿ ಮತ್ತು ಸೆಲ್ಫೀ ಅನುಭವ ನೀಡುವ ಗುರಿ ಹೊಂದಿದ್ದು ಅದಕ್ಕಾಗಿ ಸೆಲ್ಫೀ ಎಕ್ಸ್ಪರ್ಟ್ A ಮತ್ತು F ಸರಣಿಗಳನ್ನು ತಯಾರಿಸಿದ್ದೇವೆ. ನಮ್ಮ A83 ಸ್ಮಾರ್ಟ್ಫೋನ್ ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿದ ಹಿನ್ನಲೆಯಲ್ಲಿ ನಾವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆಧುನಿಕ ಫೀಚರ್ಗಳನ್ನು ಹೊಂದಿರುವ ಸೆಲ್ಫೀ ಕ್ಯಾಮೆರಾ ವನ್ನು ಕೈಗೆಟಕುವ ಬೆಲೆಯಲ್ಲಿ ಜನತೆಗೆ ನೀಡುವ ಪ್ರಯತ್ನ ಮಾಡಿದ್ದೇವೆ. ಈ ಪ್ರಯತ್ನದ ಫಲವೇ A83 2018." ಎಂದು ವಿಲ್ ಯಾಂಗ್, ಬ್ರ್ಯಾಂಡ್ ಡೈರೆಕ್ಟರ್, ಒಪ್ಪೋ ಇಂಡಿಯಾ ಅವರು ಹೇಳಿದ್ದಾರೆ.

  "A83 2018 ತನ್ನ ಆಕರ್ಷಕ AI ತಂತ್ರಜ್ಞಾನ, ಅಧಿಕ ಸ್ಟೋರೇಜ್, ಉತ್ತಮ ಕಾರ್ಯಕ್ಷಮತೆ ಮತ್ತು ಆಕರ್ಷಕ ಬಣ್ಣಗಳಿಂದ ಯುವ ಗ್ರಾಹಕರ ಮನಸೆಳೆದು ಅವರ ಕುಟುಂಬ ಮತ್ತು ಸ್ನೇಹಿತರೊಂದಿಗೆ ಕಳೆಯುವ ಸುಂದರ ಕ್ಷಣಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಲಿ ಎನ್ನುವ ಆಶಯ ನಮ್ಮದು" ಎಂದು ಅವರು ಹೇಳಿದ್ದಾರೆ.

  ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
  ಒಪ್ಪೋ A83 2018 ಸ್ಮಾರ್ಟ್ಪೋನ್ ಒಪ್ಪೋ A83 ಗಿಂತ ಚಿಕ್ಕ ಪುಟ್ಟ ಸುಧಾರಣೆಗಳನ್ನು ಹೊಂದಿದ್ದು ಅದರ ಸುಧಾರಿತ ಆವೃತ್ತಿ ಎನಿಸಿದೆ. ಒಪ್ಪೋ A83 2018 ನಲ್ಲಿ RAM ಮತ್ತು ಆಂತರಿಕ ಸ್ಟೋರೇಜ್ ಸಾಮರ್ಥ್ಯದಲ್ಲಿ ಮಾತ್ರ ಸುಧಾರಣೆಯನ್ನು ತರಲಾಗಿದೆ. ಹಾಗಾಗಿ ಗ್ರಾಹಕರು ಈ ಸ್ಮಾರ್ಟ್ಫೋನ್ ಗೆ ರೂ 2000 ಅಧಿಕ ನೀಡಲು ತಯಾರಿರುವರೇ ಎಂದು ಕಾದುನೋಡಬೇಕಾಗಿದೆ.

  English summary
  Oppo A83 2018 comes with facial unlock feature, which is touted to be pretty fast by the company. to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more