ಒಪ್ಪೋದಿಂದ ಮತ್ತೊಂದು ಡ್ಯುಯಲ್ ಸೆಲ್ಫಿ ಕ್ಯಾಮೆರಾ ಫೋನ್ ಲಾಂಚ್..!
ಈ ಸ್ಮಾರ್ಟ್ ಫೋನ್ ಸದ್ಯ ಮಾರುಕಟ್ಟೆಯ ಟ್ರೆಂಡ್ ಆದ 18:9 ಅನುಪಾತದ ಡಿಸ್ ಪ್ಲೇಯನ್ನು ಹೊಂದಲಿದ್ದು, ಡ್ಯುಯಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿರುವುದು ಈ ಸ್ಮಾರ್ಟ್ ಫೋನ್ ವಿಶೇಷತೆಗಳಲ್ಲಿ ಒಂದಾಗಲಿದೆ.
ಒಪ್ಪೋ ಮತ್ತೊಂದು ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ. ಅಕ್ಟೋಬರ್ 26ರಂದು ಒಪ್ಪೊ F5 ಸ್ಮಾರ್ಟ್ ಪೋನ್ ಅನ್ನು ಲಾಂಚ್ ಮಾಡಲಿದೆ. ಇದು ಫಿಲಿಫೈನ್ಸ್ ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹೊಸ ಸ್ಮಾರ್ಟ್ ಫೋನ್ ಅನ್ನು ಪರಿಚಯಿಸುವುದಾಗಿ ತನ್ನ ಫೇಸ್ ಬುಕ್ ಪೇಜ್ ನಲ್ಲಿ ತಿಳಿಸಿದೆ.

ಈ ಸ್ಮಾರ್ಟ್ ಫೋನ್ ಸದ್ಯ ಮಾರುಕಟ್ಟೆಯ ಟ್ರೆಂಡ್ ಆದ 18:9 ಅನುಪಾತದ ಡಿಸ್ ಪ್ಲೇಯನ್ನು ಹೊಂದಲಿದ್ದು, ಡ್ಯುಯಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿರುವುದು ಈ ಸ್ಮಾರ್ಟ್ ಫೋನ್ ವಿಶೇಷತೆಗಳಲ್ಲಿ ಒಂದಾಗಲಿದೆ. ಇದು ಸಹ ಸೆಲ್ಫಿಗೆ ಪ್ರಮುಖ್ಯತೆಯನ್ನು ನೀಡಿರುವ ಸ್ಮಾರ್ಟ್ ಫೋನ್ ಆಗಲಿದೆ.
ಈ ಸ್ಮಾರ್ಟ್ ಫೋನ್ ನಲ್ಲಿ 6 ಇಂಚಿನ FHD ಡಿಸ್ ಪ್ಲೇಯನ್ನು ಕಾಣಬಹುದಾಗಿದ್ದು, ಹಿಂಭಾಗದಲ್ಲಿ 20MP ಕ್ಯಾಮೆರಾವನ್ನು ಮುಂಭಾಗದಲ್ಲಿ 12MP+16MPಯ ಡ್ಯುಯಲ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ ಎನ್ನಲಾಗಿದೆ.
ಅಲ್ಲದೇ ಈ ಸ್ಮಾರ್ಟ್ ಫೋನ್ ನಲ್ಲಿ ಸ್ನಾಪ್ ಡ್ರಾಗನ್ 625 ಇಲ್ಲವೇ 660 ಪ್ರೋಸೆಸರ್ ಅನ್ನು ಕಾಣಬಹುದಾಘಿದ್ದು, 4GB/6GB RAM ಮತ್ತು 64GB ಇಂಟರ್ನಲ್ ಮೆಮೊರಿಯನ್ನು ಹೊಂದಲಿದೆ.
ಶೀಘ್ರವೇ ಈ ಸ್ಮಾರ್ಟ್ ಫೋನ್ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎನ್ನಲಾಗಿದೆ. ಈ ಹಿಂದೆ ಇದೇ ಮಾದರಿಯಲ್ಲಿ ಸೆಲ್ಫಿಗೆ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದ F3 ಸ್ಮಾರ್ಟ್ ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಸಖತ್ ಸದ್ದು ಮಾಡಿದ್ದನ್ನು ನಾವಿಲ್ಲಿ ನೆನೆಯ ಬಹುದಾಗಿದೆ.


Click it and Unblock the Notifications








