Home
Apps

ಭಾರತದಲ್ಲಿ ಲಾಂಚ್ ಆಗಿದೆ ಒಪ್ಪೋ F7 ಕ್ರಿಕೆಟ್ ಸೀಮಿತ ಆವೃತ್ತಿ; ಬೆಲೆ ರೂ 21,990

By Tejaswini P G

ಚೀನಾದ ಮೊಬೈಲ್ ತಯಾರಕರಾದ ಒಪ್ಪೋ ಭಾರತದಲ್ಲಿ F7 ಸ್ಮಾರ್ಟ್ಫೋನ್ ನ "ಕ್ರಿಕೆಟ್ ಸೀಮಿತ ಆವೃತ್ತಿ" ಯನ್ನು ಲಾಂಚ್ ಮಾಡಿದ್ದು, ಇದರ ಬೆಲೆ ರೂ 21,990. ಈ ಸೀಮಿತ ಆವೃತ್ತಿಯ ಮೊಬೈಲ್ಗಳು ಭಾರತದಾದ್ಯಂತ ಎಲ್ಲಾ ಒಪ್ಪೋ ರಿಟೈಲ್ ಮಳಿಗೆಗಳಲ್ಲಿ ಮತ್ತು ಆನ್ಲೈನ್ ಪ್ಲ್ಯಾಟ್ಫಾರ್ಮ್ ಆದ ಫ್ಲಿಪ್ಕಾರ್ಟ್ ನಲ್ಲಿ ಖರೀದಿಗೆ ಲಭ್ಯವಾಗಲಿದೆ.

"ಈ F7 ಕ್ರಿಕೆಟ್ ಸೀಮಿತ ಆವೃತ್ತಿ ನಮ್ಮ ಬಳಕೆದಾರರಿಗೆ ಹೆಚ್ಚು ಆಪ್ತವೆನಿಸಿಲಿದೆ ಎಂಬ ಆಶಯ ನಮ್ಮದು. ಅಲ್ಲದೆ ನಮ್ಮ ಕ್ರೀಡಾ ಬ್ರ್ಯಾಂಡ್ ರಾಯಭಾರಿಗಳ ಸಹಿ ಹೊಂದಿರುವ ಸಾಧನವನ್ನು ತಮ್ಮದಾಗಿಸಿಕೊಳ್ಳುವುದು ನಮ್ಮ ಗ್ರಾಹಕರಿಗೆ ಹೆಮ್ಮೆಯ ಸಂಗತಿಯಾಗಲಿದೆ" ಎಂದು ಒಪ್ಪೋ ಇಂಡಿಯಾದ ಬ್ರ್ಯಾಂಟ್ ಡೈರೆಕ್ಟರ್ ಆದ ವಿಲ್ ಯಾಂಗ್ ಹೇಳಿದ್ದಾರೆ.

ಭಾರತದಲ್ಲಿ ಲಾಂಚ್ ಆಗಿದೆ ಒಪ್ಪೋ F7 ಕ್ರಿಕೆಟ್ ಸೀಮಿತ ಆವೃತ್ತಿ; ಬೆಲೆ ರೂ 21,990


ಒಪ್ಪೋ F7 ಕ್ರಿಕೆಟ್ ಸೀಮಿತ ಆವೃತ್ತಿ ಯ ಮೊದಲ ಸೇಲ್ ಭಾರತದಾದ್ಯಂತ ಮೇ 14 ರಂದು ಪ್ರಾರಂಭವಾಗಲಿದೆ.ಡ್ಯುಯಲ್ ಸಿಮ್ (ನ್ಯಾನೋ) ಒಪ್ಪೋ F7 ಆಂಡ್ರಾಯ್ಡ್ 8.1 ಓರಿಯೋ ಆಧಾರಿತ ಕಲರ್ ಓಎಸ್5.0 ಆಪರೇಟಿಂಗ್ ಸಿಸ್ಟಮ್ ಹೊಂದಿದೆ. 6.23 ಇಂಚ್ ಫುಲ್ HD+(1080X2280 ಪಿಕ್ಸೆಲ್) ಫುಲ್ ಸ್ಕ್ರೀನ್ 2.0 ಡಿಸ್ಪ್ಲೇ ಹೊಂದಿರುವ ಈ ಸ್ಮಾರ್ಟ್ಪೋನ್ 19:9 ಆಸ್ಪೆಕ್ಟ್ ಅನುಪಾತ ಹೊಂದಿದೆ. ಅಲ್ಲದೆ ಇದು 64 ಬಿಟ್ ಮೀಡಿಯಾ ಟೆಕ್ ಹೀಲಿಯೋ P60 SoC ಹೊಂದಿದ್ದು ಜೊತೆಗೆ 4GB RAM ಹೊಂದಿದೆ. ಇದರ ರೇರ್ ಪ್ಯಾನಲ್ ನಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್ ಇದ್ದು ಫೇಶಿಯಲ್ ಅನ್ಲಾಕ್ ಫೀಚರ್ ಕೂಡ ಈ ಮೊಬೈಲ್ನಲ್ಲಿದೆ.

ಒಪ್ಪೋ F7 ನಲ್ಲಿ 16MP ರೇರ್ ಕ್ಯಾಮೆರಾ ಇದ್ದು ಇದು f/1.8 ಅಪರ್ಚರ್ ಮತ್ತು ಎಐ ಸೀನ್ ರೆಕಗ್ನಿಶನ್ ಫೀಚರ್ಗಳನ್ನು ಹೊಂದಿದೆ. ಅಲ್ಲದೆ 25MP ಫ್ರಂಟ್ ಕ್ಯಾಮೆರಾ(ಸೋನಿ IMX576 ಸೆನ್ಸರ್) ಹೊಂದಿದ್ದು ಇದು f/2.0 ಅಪರ್ಚರ್ ಮತ್ತು ರಿಯಲ್-ಟೈಮ್ HDR ಸಾಮರ್ಥ್ಯ ಹೊಂದಿದೆ.

ಒಪ್ಪೋ F7 ನಲ್ಲಿ ಎಐ ಬ್ಯೂಟಿ 2.0 ಆಪ್ ಕೂಡ ಇದ್ದು ಇದು 296 ಫೇಶಿಯಲ್ ರೆಕಗ್ನಿಶನ್ ಪಾಯಿಂಟ್ಗಳನ್ನು ಸ್ಕ್ಯಾನ್ ಮಾಡಬಲ್ಲದು. ಇದು ಫರ್ಸ್ಟ್-ಜನರೇಶನ್ ತಂತ್ರಜ್ಞಾನಕ್ಕಿಂತ 20% ಸುಧಾರಣೆಯನ್ನು ಪಡೆದಿದ್ದು ಹೆಚ್ಚು ನಿಖರವಾದ ಫೇಶಿಯಲ್ ರೆಕಗ್ನಿಶನ್ ಸಾಮರ್ಥ್ಯವನ್ನು ನೀಡುತ್ತದೆ.

ಒಪ್ಪೋ ಸಂಸ್ಥೆಯು ಆರ್.ಆಶ್ವಿನ್,ಹಾರ್ದಿಕ್ ಪಾಂಡ್ಯಾ ಮತ್ತು ರೋಹಿತ್ ಶರ್ಮಾ ಇವರನ್ನು ತಮ್ಮ ನೂತನ ಕ್ರೀಡಾ ಬ್ರ್ಯಾಂಡ್ ರಾಯಭಾರಿಗಳನ್ನಾಗಿ ನಿಯೋಜಿಸಿದೆ.

ಒಪ್ಪೋ F7 ನ ಈ ವಿಶೇಷ ಕ್ರಿಕೆಟ್ ಆವೃತ್ತಿ ಅನನ್ಯ ಗ್ಲಾಸ್ ಬಾಡಿಯನ್ನು ಹೊಂದಿದ್ದು ಜೆಮ್ ಸ್ಟೋನ್ ಗಳಂತೆ ಹೊಳೆಯುತ್ತದೆ. ಅಲ್ಲದೆ ಬಳಕೆದಾರರು ಅದನ್ನು ನೋಡಿದಾಗಲೆಲ್ಲ ಬೇರೆ ಬೇರೆ ವರ್ಣಗಳನ್ನು ಪ್ರತಿಫಲಿಸುತ್ತದೆ. ಇದರ ಜೊತೆಗೆ ಕ್ರಿಕೆಟ್ ಕೇಸ್ ಕವರ್ಗಳನ್ನು ಬಳಸಿದರೆ ಅವು ಇದರ ವಿನ್ಯಾಸಕ್ಕೆ ಮತ್ತಷ್ಟು ಮೆರುಗನ್ನು ನೀಡುತ್ತದೆ.

TRA ರೀಸರ್ಚ್(ಒಂದು ಕಾಮ್ನಿಸೆಂಟ್ ಗ್ರೂಪ್ ಸಂಸ್ಥೆ) ಬಿಡುಗಡೆಮಾಡಿದ ಬ್ರ್ಯಾಂಡ್ ಟ್ರಸ್ಟ್ ರಿಪೋರ್ಟ್ 2018 ಎಂಬ ವರದಿಯ ಅನುಸಾರ ಒಪ್ಪೋ ಭಾರತದ 11 ನೆ ವಿಶ್ವಾಸಾರ್ಹ ಬ್ರ್ಯಾಂಡ್ ಎನಿಸಿದೆ ಎನ್ನುವುದನ್ನು ಈ ಸಂದರ್ಭದಲ್ಲಿ ತಿಳಿಸಬಯಸುತ್ತೇವೆ.

ಒಪ್ಪೋ 2017ರಲ್ಲಿ ನಡೆದ ಇದೇ ಮಾದರಿಯ ಸಮೀಕ್ಷೆಯಲ್ಲಿ 29ನೇ ಸ್ಥಾನ ಪಡೆದಿತ್ತು. ಆದರೆ 2018ರಲ್ಲಿ 11 ನೇ ಸ್ಥಾನಕ್ಕೇರುವ ಮೂಲಕ ತನ್ನ ಜನಪ್ರಿಯತೆಯನ್ನು ಸಾಬೀತು ಪಡಿಸಿದೆ. 16 ವಿವಿಧ ನಗರಗಳಲ್ಲಿ TRA ರೀಸರ್ಚ್ ನಡೆಸಿದ ಈ ಸಮೀಕ್ಷೆಯಲ್ಲಿ 2450ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.

Best Mobiles in India

English summary
The F7 Cricket Limited Edition first sale begins from May 14th across India. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+