Subscribe to Gizbot

ಶೀಘ್ರವೇ ಮಾರುಕಟ್ಟೆಯಗೆ ಒಪ್ಪೊ F7 ಯೂತ್ ಸ್ಮಾರ್ಟ್ ಫೋನ್..!

Posted By: Lekhaka

ಇದೇ ವರ್ಷದ ಆರಂಭದಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡ ಒಪ್ಪೊF7 ಸ್ಮಾರ್ಟ್ ಫೋನ್, ಡಿಸ್ ಪ್ಲೇ ನೋಚ್, 25MP ಸೆಲ್ಫಿ ಕ್ಯಾಮೆರಾ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಲಭ್ಯವಿತ್ತು. ಈ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡ ಹಿನ್ನಲೆಯಲ್ಲಿ ಒಪ್ಪೋ ಈ ಸ್ಮಾರ್ಟ್ ಫೋನಿನ ಮತ್ತೊಂದು ಆವೃತ್ತಿಯನ್ನು ಲಾಂಚ್ ಮಾಡಲು ಮುಂದಾಗಿದೆ. ಒಪ್ಪೊ F7 ಯೂತ್ ಸ್ಮಾರ್ಟ್ ಫೋನ್ ಶೀಘ್ರವೇ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ.

ಶೀಘ್ರವೇ ಮಾರುಕಟ್ಟೆಯಗೆ ಒಪ್ಪೊ F7 ಯೂತ್ ಸ್ಮಾರ್ಟ್ ಫೋನ್..!


ಒಪ್ಪೊ F7 ಯೂತ್ ಸ್ಮಾರ್ಟ್ ಫೋನ್ ನಿರ್ಮಾಣವಾಗುತ್ತಿರುವ ಬಗ್ಗೆ ರೂಮರ್ಸ್ ಗಳು ಕೇಳಿ ಬಂದಿದ್ದು, ಈ ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ ಸಿಂಗಲ್ ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಅಲ್ಲದೇ ಡೈಮೆಂಟ್ ಬ್ಲಾಕ್ ಬಣ್ಣದಲ್ಲಿ ಈ ಸ್ಮಾರ್ಟ್ ಫೋನ್ ಮಾರಾಟವಾಗಲಿದೆ. ಅಲ್ಲದೆ ಈ ಸ್ಮಾರ್ಟ್ ಫೋನಿನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಸಹ ಇರುವುದಿಲ್ಲ ಎನ್ನಲಾಗಿದೆ.

ಒಪ್ಪೊ F7 ಯೂತ್ ಸ್ಮಾರ್ಟ್ ಫೋನ್ ಈ ಹಿಂದಿನ ಫೋನಿನಂತೆಯೇ 25MP ಸೆಲ್ಪೀ ಕ್ಯಾಮೆರಾವನ್ನು ಹೊಂದಿರಲಿದೆ. ಅಲ್ಲದೇ ಇದಕ್ಕಾಗಿಯೇ ಕೃತಕ ಬುದ್ದಿಮತ್ತಯನ್ನು ಬಳಕೆ ಮಾಡಿಕೊಳ್ಳಲಾಗಿದೆ. ಅಲ್ಲದೇ ಯಾಂತ್ರಿಕ ಕಲಿಕೆಯ ಬಳಕೆ ಸಹ ಆಗಿದ್ದು, ಉತ್ತಮವಾದ ಸೆಲ್ಪಿಗಳನ್ನು ಕ್ಲಿಕಿಸಲು ಈ ಸ್ಮಾರ್ಟ್ ಫೋನ್ ಹೇಳಿ ಮಾಡಿಸಿದ ಹಾಗಿದೆ.

ಒಪ್ಪೊ F7 ಯೂತ್ ಸ್ಮಾರ್ಟ್ ಫೋನಿನಲ್ಲಿ ಮೀಡಿಯಾ ಟೆಕ್ ಹೆಲಿಯಾ P60 ಪ್ರೋಸೆಸರ್ ಅನ್ನು ಕಾಣಬಹುದಾಗಿದ್ದು, ಇದರೊಂದಿಗೆ 4GB RAM ಇರುವ ಸಾಧ್ಯತೆ ಇದೆ. ಆಲ್ಲದೇ ಅಂಡ್ರಾಯ್ಡ್ 8.1 ಮತ್ತು ಕಲರ್ OS ಸಹ ಇದರಲ್ಲಿ ಇರಲಿದೆ. ಅಲ್ಲದೇ ಟಾಪ್ ಎಂಡ್ ಫೀಷರ್ ಗಳು ಒಪ್ಪೊ F7 ಯೂತ್ ಸ್ಮಾರ್ಟ್ ಫೋನ್ ನಲ್ಲಿ ಇರಲಿದೆ.

ಮೂಲಗಳ ಪ್ರಕಾರ ಒಪ್ಪೊ F7 ಯೂತ್ ಸ್ಮಾರ್ಟ್ ಫೋನಿನಲ್ಲಿ 3400mAh ಬ್ಯಾಟರಿಯನ್ನು ಕಾಣಬಹುದಾಗಿದ್ದು, ಅಲ್ಲದೇ ಒಪ್ಪೊ F7 ಯೂತ್ ಸ್ಮಾರ್ಟ್ ಫೋನ್ ರೂ.17,500ರ ಆಸುಪಾಸಿನಲ್ಲಿ ದೊರೆಯಲಿದೆ ಎನ್ನಲಾಗಿದ್ದು, ಬೆಲೆಯ ಬಗ್ಗೆ ನಿಖರವಾದ ಮಾಹಿತಿಯೂ ಲಭ್ಯವಾಗಿಲ್ಲ.

English summary
Oppo F7 Youth with AI selfie camera on the cards. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot