Subscribe to Gizbot

ಸ್ಮಾರ್ಟ್‌ಫೋನಿನಲ್ಲಿ ಸೇಫ್ ಇಂಟರ್ನೆಟ್ ಬಳಕೆಗೆ ಬಂದಿದೆ ಆಪ್..!

Written By:

ಇಂದು ಸ್ಮಾರ್ಟ್‌ಫೋನ್‌ನಲ್ಲಿ 4G ಡೇಟಾ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿದ್ದು, ಹೆಚ್ಚಿನ ಜನರು ಸ್ಮಾರ್ಟ್‌ಫೋನ್ ಮೂಲಕವೇ ಇಂಟರ್‌ನೆಟ್ ಸೇವೆಯನ್ನು ಪಡೆಯಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಸ್ಮಾರ್ಟ್‌ಫೋನ್ ಹ್ಯಾಕ್ ಮಾಡಲು ಮತ್ತು ಮಾಲ್ವೇರ್‌ ಮೂಲಕ ದಾಳಿ ಮಾಡಲು ಹ್ಯಾಕರ್ಸ್‌ಗಳು ಹೆಚ್ಚಿನ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇದಲ್ಲದೇ ಇಂಟರ್‌ನೆಟ್ ಬ್ರೌಸ್ ಮಾಡುವ ಸಂದರ್ಭದಲ್ಲಿ ಬಳಕೆದಾರರ ಮಾಹಿತಿಗೆ ಕನ್ನ ಹಾಕುವ ಕಾರ್ಯವನ್ನು ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಮೊಬೈಲ್ ಫೋನ್‌ನಲ್ಲಿ ಸೆಫ್ ಆಗಿ ಬ್ರೌಸ್‌ ಮಾಡಲು ಆಪ್ ವೊಂದು ಲಭ್ಯವಿದೆ.

ನೀವು ಸಾಮಾನ್ಯವಾಗಿ ಕ್ರೋಮ್ ಬ್ರೌಸರ್ ಇಲ್ಲವೇ ಮೊಬೈಲ್‌ನಲ್ಲಿ ನೀಡಿರುವ ಬ್ರೌಸರ್ ಅನ್ನು ಸ್ಮಾರ್ಟ್‌ಫೋನಿನಲ್ಲಿ ಬಳಕೆ ಮಾಡುವ ಸಾಧ್ಯತೆ ಹೆಚ್ಚು. ಆದರೆ ಈ ಬ್ರೌಸರ್ ಗಳಲ್ಲಿ ಮಾಹಿತಿ ಹುಡುಕಿದ ಸಂದರ್ಭದಲ್ಲಿ ನಿಮ್ಮ ಹುಟುಕಾಟದ ಮಾಹಿತಿಯನ್ನು ಸುಲಭವಾಗಿ ಟ್ರಾಕ್ ಮಾಡಬಹುದಾಗಿದೆ. ಅಲ್ಲದೇ ಅದನ್ನು ಜಾಹೀರಾತು ಸೇರಿದಂತೆ ಬೇರೆ ಬೇರೆ ಲಾಭಗಳಿಗಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ.

ಈ ಹಿನ್ನಲೆಯಲ್ಲಿ ಡಾರ್ಕ್‌ ವೆಬ್‌ ನಲ್ಲಿ ಮಾಹಿತಿಗಳನ್ನು ಹುಡುಕಲು ಮತ್ತು ನಿಮ್ಮ ಚಹರೆಯನ್ನು ಮರೆ ಮಾಚಲು ಆರ್ಬೊಟ್‌ ಆಪ್ ಸಹಾಯ ಮಾಡಲಿದೆ. ಈ ಆಪ್ ನಿಮ್ಮ ಇಂಟರ್ನೆಟ್ ಸೇವೆಯನ್ನು ಖಾಸಗಿಯಾಗಿ ಇರಿಸುವುದಲ್ಲದೇ ಡಾರ್ಕ್‌ ವೆಬ್‌ ನಲ್ಲಿ ಮಾಹಿತಿಗಳನ್ನು ಹುಡುಕಲು ತನ್ನದೇ ಬ್ರೌಸರ್ ಅನ್ನು ಹೊಂದಿದೆ. ಇದರಲ್ಲಿ ನೀವು ಬ್ರೌಸ್ ಮಾಡಿದರೆ ಯಾವುದೇ ಮಾಹಿತಿಗಳು ಈ ಆಪ್‌ನಲ್ಲಿ ಸ್ಟೋರ್ ಆಗುವುದಿಲ್ಲ.

ಅಲ್ಲದೇ ನಿಮ್ಮ ಎಲ್ಲಾ ಸೇವೆಗಳು ಇದರಲ್ಲಿ ಸೇಫ್ ಆಗಿರಲಿದೆ. ಆನ್‌ಲೈನ್‌ನಲ್ಲಿ ನಿಮ್ಮೆಲ್ಲ ಚಟುವಟಿಕೆಗಳು ಖಾಸಗಿಯಾಗಿರಲಿದೆ. ಈ ಆಪ್‌ಗೆ ಸಹಾಯ ಮಾಡುವ ಬ್ರೌಸರ್ ಅನ್ನು ನೀವು ಪ್ಲೇ ಸ್ಟೋರಿನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬೇಕಾಗಿದೆ. ಈ ಬ್ರೌಸರ್ ಅನ್ನು ಎಮೆಡ್ ಮಾಡಿಕೊಂಡರೆ ನಿಮ್ಮ ಚಹರೆಯನ್ನು ಮರೆ ಮಾಚಿ ಸೇಫ್ ಆಗಿ ಯಾವುದೇ ವೆಬ್‌ ತಾಣವನ್ನು ಬೇಕಿದ್ದರು ಪ್ರವೇಶಿಸಬಹುದಾಗಿದೆ.

ಇಂದಿನದಲ್ಲಿ ಇಂಟರ್ನೆಟ್ ಸೆಕ್ಯೂರಿಟಿಯನ್ನು ಕಳೆದುಕೊಂಡಿದ್ದು, ಈ ಹಿನ್ನಲೆಯಲ್ಲಿ ಬಳಕೆದಾರರು ಸುರಕ್ಷತೆಯನ್ನು ಪಡೆಯುವ ಸಲುವಾಗಿ ಆರ್ಬೊಟ್‌ ಆಪ್ ಬಳಕೆ ಮಾಡಿಕೊಳ್ಳಿ. ಇದು ಪ್ಲೇ ಸ್ಟೋರಿನಲ್ಲಿ ಉಚಿತವಾಗಿ ದೊರೆಯುತ್ತಿದೆ ಎನ್ನಲಾಗಿದೆ.

English summary
Orbot is a free proxy app that empowers other apps. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot