ಇನ್ಮುಂದೆ ಫೋನ್‌ಪೇ ಆಪ್‌ನಲ್ಲಿಯೇ ಸ್ವಿಗ್ಗಿ ಸೇವೆ, ಸ್ವಿಚ್‌ ಮಾಡಿ ಫುಡ್‌ ಆರ್ಡರ್‌ ಮಾಡಿ..!

By Gizbot Bureau
|

ಭಾರತದ ಜನಪ್ರಿಯ ಡಿಜಿಟಲ್ ಪೇಮೆಂಟ್‌ ಪ್ಲಾಟ್‌ಫಾರ್ಮ್ ಫೋನ್‌ಪೇ ತನ್ನ ಸ್ವಿಚ್ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಮುಖ ಆಹಾರ ವಿತರಣಾ ಕಂಪನಿ ಸ್ವಿಗ್ಗಿಯನ್ನು ಸಂಯೋಜಿಸಿದೆ. ಈ ಪಾಲುದಾರಿಕೆಯೊಂದಿಗೆ, ಫೋನ್‌ಪೇಯ 200 ಮಿಲಿಯನ್ ನೋಂದಾಯಿತ ಬಳಕೆದಾರರು. ಈಗ ಸ್ವಿಗ್ಗಿ ಅಪ್ಲಿಕೇಶನ್ ಪ್ರವೇಶಿಸಬಹುದು. ಹಾಗೂ ಫೋನ್‌ಪೇ ಆಪ್‌ನಿಂದಲೇ ತಮ್ಮ ಇಷ್ಟದ ಆಹಾರವನ್ನು ಆರ್ಡರ್‌ ಮಾಡಬಹುದು. ದೇಶದಲ್ಲಿ ಸ್ವಿಗ್ಗಿ ಆಹಾರ ವಿತರಣಾ ಜಾಲವಿರುವ ಎಲ್ಲಾ 520 ನಗರಗಳಲ್ಲಿ ಈ ಸೇವೆ ಲಭ್ಯವಿರುತ್ತದೆ ಎಂದು ಫೋನ್‌ಪೇ ಹೇಳಿದೆ.

ಇನ್ಮುಂದೆ ಫೋನ್‌ಪೇ ಆಪ್‌ನಲ್ಲಿಯೇ ಸ್ವಿಗ್ಗಿ ಸೇವೆ

ಫೋನ್‌ಪೇ ಸ್ವಿಚ್ ಎಂಬುದು ಫೋನ್‌ಪೇ ಪ್ಲಾಟ್‌ಫಾರ್ಮ್‌ನಲ್ಲಿರುವ ಅಪ್ಲಿಕೇಶನ್‌ಗಳನ್ನು ಒಂದೇ ಕಡೆ ನೀಡುತ್ತದೆ. ಫೋನ್‌ಪೇ ಮತ್ತು ಗ್ರಾಹಕರು ತಮ್ಮ ಆದ್ಯತೆಯ ಆಹಾರ, ದಿನಸಿ, ಆರೋಗ್ಯ, ಫಿಟ್‌ನೆಸ್, ಶಾಪಿಂಗ್, ಪ್ರಯಾಣ ಮತ್ತು ಮನರಂಜನಾ ಅಪ್ಲಿಕೇಶನ್‌ಗಳನ್ನು ಫೋನ್‌ಪೇ ಆಪ್‌ನಿಂದಲೇ ಬಳಸಬಹುದು. ಬಳಕೆದಾರರು ಈ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವ ಅಗತ್ಯವಿರುವುದಿಲ್ಲ. ಒಂದೇ ಟ್ಯಾಪ್‌ ಮೂಲಕ ಲಾಗ್‌ಇನ್‌ ಮಾಡಬಹುದು.

ಫೋನ್‌ಪೇ ಸ್ವಿಚ್ ವ್ಯಾಪಾರಿ ಪಾಲುದಾರರಿಗೆ ತಮ್ಮ ಅಸ್ತಿತ್ವದಲ್ಲಿರುವ ಪಿಡಬ್ಲ್ಯೂಎಗಳನ್ನು (ಪ್ರಗತಿಯಲ್ಲಿರುವ ವೆಬ್ ಅಪ್ಲಿಕೇಶನ್‌ಗಳು) ಅಥವಾ ಮೊಬೈಲ್ ಸೈಟ್‌ಗಳನ್ನು ಪ್ಲಾಟ್‌ಫಾರ್ಮ್‌ಗೆ ಸಂಯೋಜಿಸಲು ಅನುವು ಮಾಡಿಕೊಡುತ್ತದೆ, ಹಾಗೂ ಇದರಿಂದ ಪಾರ್ಟನರ್‌ಗಳ ಸೇವೆ ವಿಶಾಲವಾದ ಫೋನ್‌ಪೇ ಬಳಕೆದಾರರನ್ನು ತಲುಪುತ್ತದೆ.

"ಫೋನ್‌ಪೇ ಸ್ವಿಚ್ ಮೂಲಕ, ಪಾಲುದಾರ ಅಪ್ಲಿಕೇಶನ್‌ ಪರಿಸರ ವ್ಯವಸ್ಥೆಯನ್ನು ನಮ್ಮ ಆಪ್‌ನಲ್ಲಿ ನಿರ್ಮಿಸುವ ಪ್ರಯತ್ನಬವನ್ನು ನಾವು ಮಾಡುತ್ತಿದ್ದೇವೆ. ಇದರಿಂದ ನಮ್ಮ ಬಳಕೆದಾರರಿಗೆ ಬಹು ಅಪ್ಲಿಕೇಶನ್‌ಗಳನ್ನು ಪ್ರವೇಶಿಸಲು ಮತ್ತು ತೊಡಗಿಸಿಕೊಳ್ಳಲು ಬಹಳ ಸರಳವಾದ ಮಾರ್ಗವನ್ನು ನೀಡುತ್ತದೆ, ಅದಲ್ಲದೇ, ನಮ್ಮ ಪಾಲುದಾರರಿಗೆ ವೇಗವಾಗಿ ಗ್ರಾಹಕರನ್ನು ಸಂಪಾದನೆ ಮಾಡಿಕೊಡುವುದಲ್ಲದೇ ಮತ್ತು ಹೆಚ್ಚಿನ ವ್ಯಾಪಾರ ಆಗುತ್ತದೆ ಎಂದು ಫೋನ್‌ಪೇ ಸ್ವಿಚ್‌ನ ಮುಖ್ಯಸ್ಥ ರಿತುರಾಜ್ ರೌಟೆಲಾ ಹೇಳಿದ್ದಾರೆ.

ಫೋನ್‌ಪೇ ಸ್ವಿಚ್ ಪ್ರಾರಂಭವಾದಾಗಿನಿಂದ ನಾವು ಅತ್ಯುತ್ತಮ ಬಳಕೆದಾರರ ವಹಿವಾಟನ್ನು ನೋಡುತ್ತಿದ್ದೇವೆ. ಪ್ರಸ್ತುತ 100ಕ್ಕೂ ಹೆಚ್ಚು ಪಾಲುದಾರ ಅಪ್ಲಿಕೇಶನ್‌ಗಳನ್ನು ಫೋನ್‌ಪೇ ಸ್ವಿಚ್‌ನಲ್ಲಿ ಲೈವ್ ಆಗಿವೆ ಎಂದು ರೌಟೆಲಾ ಹೇಳಿದರು. ಫೋನ್‌ಪೇ ಬಳಕೆದಾರರು ಕೆಲವು ಸರಳ ಹಂತಗಳಲ್ಲಿ ಸ್ವಿಗ್ಗಿಯಲ್ಲಿ ಇಷ್ಟದ ಆಹಾರವನ್ನು ಆರ್ಡರ್‌ ಮಾಡಬಹುದು.

ಮೊದಲು ಫೋನ್‌ಪೇ ಅಪ್ಲಿಕೇಶನ್ ತೆರೆಯಿರಿ. ಬಳಿಕ ಸ್ವಿಚ್ ಐಕಾನ್ ಕ್ಲಿಕ್ ಮಾಡಿ, ಅಲ್ಲಿರುವ ಸ್ವಿಗ್ಗಿ ಅಪ್ಲಿಕೇಶನ್ ಆಯ್ಕೆಮಾಡಿ, ನೀವು ಆರ್ಡರ್‌ ಮಾಡಲು ಬಯಸುವ ರೆಸ್ಟೋರೆಂಟ್ ಆಯ್ಕೆ ಮಾಡಿ. ನಂತರ ನಿಮ್ಮ ನೆಚ್ಚಿನ ಆಹಾರ ಆರ್ಡರ್‌ ಮಾಡಿ ಮತ್ತು ತಕ್ಷಣ ಪಾವತಿಸಿ. ಆರ್ಡರ್‌ ಮುಗಿತು.

ಈ ಪಾಲುದಾರಿಕೆಯ ಮೂಲಕ, ಫೋನ್‌ಪೇ ಸ್ವಿಚ್ ಪ್ಲಾಟ್‌ಫಾರ್ಮ್‌ಗೆ ಆಹಾರ ಆರ್ಡರ್‌ ಮತ್ತು ವಿತರಣೆಯ ಅನುಕೂಲತೆಯನ್ನು ವಿಸ್ತರಿಸಲು ನಾವು ಸಂತಸಪಡುತ್ತೇವೆ. ಅದು ರಚಿಸಿದ ಅಪ್ಲಿಕೇಶನ್‌ಗಳು ಮತ್ತು ಸೇವೆಗಳ ಪರಿಸರ ವ್ಯವಸ್ಥೆಯ ಭಾಗವಾಗಿದ್ದೇವೆ ಎಂದು ಸ್ವಿಗ್ಗಿ ಮಾರ್ಕೆಟಿಂಗ್ ಉಪಾಧ್ಯಕ್ಷ ಶ್ರೀವಾಟ್ಸ್ ಟಿಎಸ್ ಹೇಳಿದರು. ಲಾಂಚಿಂಗ್‌ ಭಾಗವಾಗಿ, ಫೋನ್‌ಪೇ ಸ್ವಿಚ್ ಬಳಕೆದಾರರಿಗೆ ಕೆಲವು ವಿಶೇಷ ಕೊಡುಗೆಗಳನ್ನು ಫೋನ್‌ಪೇ ನೀಡುತ್ತಿದೆ.

Most Read Articles
Best Mobiles in India

Read more about:
English summary
Order On Swiggy Directly On PhonePe Now Everything You Need To Know

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X