ಕಣ್ಣಿಗೆ ಕಾಣೋದೆಲ್ಲ ಸತ್ಯವಲ್ಲ...! ಪತಂಜಲಿ ಕಿಂಬೋ ಆಪ್ ಪ್ಲೇ ಸ್ಟೋರ್ ನಲ್ಲಿ ಇಲ್ಲವೇ ಇಲ್ಲ...!!!

|

“ಕಣ್ಣಿಗೆ ಕಂಡರೂ ಪರಾಮರ್ಶಿಸಿ ನೋಡು” ಎಂಬ ಗಾದೆ ಮಾತು ಸುಮ್ಮನೆ ಹಿಂದಿನವರು ಹೇಳಿಲ್ಲ ಕಣ್ರೀ.. ಅದೆಷ್ಟು ಮೋಸ ಗೊತ್ತಾ... ಪತಂಜಲಿ ಕಿಂಬೋ ಆಪ್ ಅಂತ ಯಾವ್ಯಾವುದನ್ನೋ ಡೌನ್ ಲೋಡ್ ಮಾಡಿಬಿಟ್ಟೀರಾ ಹುಷಾರ್...!

ಪತಂಜಲಿ ಕಿಂಬೋ ಆಪ್ ಪ್ಲೇ ಸ್ಟೋರ್ ನಲ್ಲಿ ಇಲ್ಲವೇ ಇಲ್ಲ...!!!


ಎಸ್..ಇತ್ತೀಚೆಗಷ್ಟೇ ಅಂದರೆ ಮೊನ್ನೆ ಬುಧವಾರ ರಾತ್ರಿ ಬಿಡುಗಡೆಗೊಂಡಿರುವ ಬಾಬಾ ರಾಮ್ ದೇವರ ಪತಂಜಲಿ ಕಿಂಬೋ ಮೇಸೇಜಿಂಗ್ ಆಪ್ ಎಲ್ಲರಲ್ಲೂ ಕೂತೂಹಲಕ್ಕೆ ಕಾರಣವಾಗಿದೆ. ಫೇಸ್ ಬುಕ್ ಮಾಲೀಕತ್ವದ ವಾಟ್ಸ್ ಆಪ್ ಗೆ ಕಾಂಪಿಟೇಷನ್ ಕೊಡುವ ಉದ್ದೇಶದಿಂದ ಬಂದಿರುವ ಸ್ವದೇಶಿ ಆಪ್ ಇದು. ವಿಷಯ ತಿಳಿದ ಕೂಡಲೇ ಪ್ರತಿಯೊಬ್ಬರು ಪ್ಲೇ ಸ್ಟೋರ್ ನಲ್ಲಿ ಒಮ್ಮೆ ತಡಕಾಡುತ್ತಾರೆ.

ಆದರೆ ಕಿಂಬೋ ಬಿಡುಗಡೆಗೊಂಡ ಒಂದೇ ದಿನದಲ್ಲಿ ಸಾಕಷ್ಟು ಅಭದ್ರತೆಯ ಹಲವು ಕಾರಣಗಳಿಂದ ಆಪಾದನೆಗಳನ್ನು ಎದುರಿಸುತ್ತಿದೆ. ಸೆಕ್ಯುರಿಟಿ ಅಧ್ಯಯನಕಾರರು ಕಿಂಬೋ ಆಪ್ ನಲ್ಲಿ ಭದ್ರತೆ ಭಾರೀ ಕೆಟ್ಟದಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅದರಲ್ಲೂ ಫ್ರಾನ್ಸಿನ ಪ್ರಸಿದ್ಧ ಭದ್ರತಾ ರಿಸರ್ಚರ್ ಆಗಿರುವ ಎಲಿಯೋಟ್ ಅಲ್ಡರ್ಸನ್ ಅವರೂ ಕೂಡ ಟ್ವೀಟರ್ ಮೂಲಕ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಿಂಬೋ ದಲ್ಲಿ ವೆರಿಫಿಕೇಷನ್ ಪ್ರೊಸೆಸ್ ಭಾರೀ ವೀಕ್ ಇದ್ದು, ಎಲ್ಲಾ ಬಳಕೆದಾರರ ಚಾಟ್ ಮಾಡಿದ ಡಾಟಾವನ್ನು ಸುಲಭವಾಗಿ ಕದಿಯಬಹುದು ಎಂಬ ಅಭಿಪ್ರಾಯವನ್ನು ಇಂಡಿಯಾ ಟುಡೇ ಟೆಕ್ ಒಬ್ಬರೂ ಕೂಡ ಹೇಳುತ್ತಿದ್ದಾರೆ.

ಅಭದ್ರತೆಯ ಬಗ್ಗೆ ಅಂತರ್ಜಾಲದಲ್ಲಿ ಮಾತುಕತೆ, ಚರ್ಚೆ ಆರಂಭವಾಗುತ್ತಿದ್ದಂತೆ , ಪತಂಜಲಿ ಸಂಸ್ಥೆಯು ಕಿಂಬೋ ಆಪ್ ನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್ ನಿಂದ ಡಿಲೀಟ್ ಮಾಡಿದೆ. ಕೇವಲ ಗೂಗಲ್ ಪ್ಲೇ ಸ್ಟೋರ್ ನಿಂದ ಮಾತ್ರವಲ್ಲ. ಕಿಂಬೋ ಅಧಿಕೃತ ವೆಬ್ ಸೈಟ್ ನಲ್ಲೂ ಕೂಡ ಕಿಂಬೋ ಆಪ್ ಲಭ್ಯವಾಗುತ್ತಿಲ್ಲ. ಆದರೆ ಕಿಂಬೋ ಆಪಿನ ಚಿತ್ರಗಳನ್ನೇ ಹೋಲುವ ಸಾಕಷ್ಟು ಆಪ್ ಗಳು ಪ್ಲೇ ಸ್ಟೋರ್ ನಲ್ಲಿ ತುಂಬಿ ತುಳುಕಾಡುತ್ತಿವೆ. ಬೇಕಿದ್ದರೆ ನಾವು ಕೆಳಗೆ ತೋರಿಸಿರುವ ಚಿತ್ರವನ್ನು ಗಮನಿಸಿ.

ಗುರುವಾರ ಬೆಳಿಗ್ಗೆಯೇ ಅಧಿಕೃತ ಆಪ್ ಕಿಂಬೋ ವನ್ನು ಡಿಲೀಟ್ ಮಾಡಲಾಗಿದೆ. ಆದರೆ ಕುತೂಹಲಕಾರಿ ವಿಚಾರವೇನೆಂದರೆ, ಕಿಂಬೋ ಸಂಸ್ಥೆ ಹೇಳುವ ಪ್ರಕಾರ ಅವರು ಆಪ್ ಡಿಲೀಟ್ ಮಾಡಿರಲು ಕಾರಣವೇನೆಂದರೆ ಬೇಡಿಕೆ ಹೆಚ್ಚಾಗಿರುವುದು.

ಆದರೆ ಇದನ್ನು ಭದ್ರತಾ ರಿಸರ್ಚಸ್ ಗಳು ಇದನ್ನು ಒಪ್ಪುತ್ತಿಲ್ಲ. ಪತಂಜಲಿ ಕಿಂಬೋ ಸಂಸ್ಥೆ ಸುಳ್ಳು ಹೇಳುತ್ತಿದೆ ಎಂದು ಹೇಳುತ್ತಿದ್ದಾರೆ.

ಒಂದು ವೇಳೆ ನೀವು ಪ್ಲೇ ಸ್ಟೋರ್ ನಲ್ಲಿ “KIMBHO”, “kimbo app”, ಅಥವಾ “patanjali kimbho” ಹೆಸರಿನಲ್ಲಿ ಹಲವು ಆಪ್ ಗಳನ್ನು ಪ್ಲೇ ಸ್ಟೋರ್ ನಲ್ಲಿ ಕಾಣಬಹುದು. ಆದರೆ ಇದ್ಯಾವುದು ನಿಜವಾದುದ್ದಲ್ಲ. ಇದೆಲ್ಲವೂ ಬೇರೆ ಯಾವುದೋ ಡೆವಲಪರ್ ಗಳು ತಯಾರಿಸುವುದು. ಕಿಂಬೋ ಚಿಹ್ನೆಯಲ್ಲೇ ಹಲವು ಆಪ್ ಗಳು ಪ್ರತಿದಿನ ಹುಟ್ಟಿಕೊಳ್ಳುತ್ತಿವೆ. ಇವೆಲ್ಲವೂ ಫೇಕ್ ಅಥವಾ ಸುಳ್ಳು ಆಪ್ ಗಳಾಗಿದ್ದು. ದಯವಿಟ್ಟು ಇದ್ಯಾವುದನ್ನೂ ಡೌನ್ ಲೋಡ್ ಮಾಡಬೇಡಿ.

ಕಿಂಬೋ ಸಂಸ್ಥೆ ಕೂಡ ಇದನ್ನು ಬಳಕೆದಾರರಿಗೆ ತಿಳಿಸಿದ್ದು, ಪ್ಲೇ ಸ್ಟೋರ್ ನಲ್ಲಿರುವ ಯಾವುದೇ ಕಿಂಬೋ ಚಿಹ್ನೆಯ ಆಪ್ ಗಳನ್ನು ಡೌನ್ ಲೋಡ್ ಮಾಡಬೇಡಿ ಎಂದು ಹೇಳಿದೆ. “ನಮ್ಮ ಕಿಂಬೋ ಆಪ್ ಯಾವುದೇ ಪ್ಲಾಟ್ ಫಾರಂನಲ್ಲೂ ಸದ್ಯಕ್ಕೆ ಲಭ್ಯವಿಲ್ಲ. ನಮ್ಮ ಚಿಹ್ನೆಯಂತೆ ಕಾಣುವ ಯಾವುದೇ ಡುಪ್ಲಿಕೇಟ್ ಆಪ್ ಗಳನ್ನು ಡೌನ್ ಲೋಡ್ ಮಾಡಿಕೊಂಡರೆ ಅದಕ್ಕೆ ನಮ್ಮ ಕಂಪೆನಿ ಜವಾಬ್ದಾರರಲ್ಲ. ಜಾಗೃತರಾಗಿರಿ” ಎಂದು ತಿಳಿಸಿದೆ.

ಅಮೆಜಾನ್‌ನಲ್ಲಿ ಫೇಕ್ ರಿವ್ಯೂ ಕಂಡುಹಿಡಿಯುವುದು ಹೇಗೆ..? ಇಲ್ಲಿದೇ ಸಿಂಪಲ್ ಟಿಪ್ಸ್..!ಅಮೆಜಾನ್‌ನಲ್ಲಿ ಫೇಕ್ ರಿವ್ಯೂ ಕಂಡುಹಿಡಿಯುವುದು ಹೇಗೆ..? ಇಲ್ಲಿದೇ ಸಿಂಪಲ್ ಟಿಪ್ಸ್..!

ಕಿಂಬೋ ಚಿಹ್ನೆಯೊಂದಿಗೆ ಕಾಣುವ ಕೆಲವು ಫೇಕ್ ಆಪ್ ಗಳ ಹೆಸರನ್ನು ನಾವಿಲ್ಲಿ ತಿಳಿಸುತ್ತಿದ್ದೇವೆ. ದಯವಿಟ್ಟು ಗಮನಿಸಿ – “Kimbho official app, Kimbho messaging app, Kimbho fun time, Kimbho video play, Kimbho app” ಹೀಗೆ ಪಟ್ಟಿ ಬೆಳೆಯುತ್ತಾ ಸಾಗುತ್ತೆ. ಇವುಗಳನ್ನು ಡೌನ್ ಲೋಡ್ ಮಾಡಿದರೆ

ಖಂಡಿತ ನೀವು ಸುಮ್ಮನೇ ನಿಮ್ಮ ಡಾಟಾವನ್ನು ವ್ಯರ್ಥಗೊಳಿಸಿದ್ದೀರಿ.

How to Send Message to Multiple Contacts on WhatsApp - GIZBOT KANNADA

ಮೂಲ ಆಪ್ ನ್ನು ಫೇಕ್ ಆಪ್ ಗಳ ನಡುವೆ ಕಂಡುಹಿಡಿಯುವುದು ಬಹಳ ಕಷ್ಟಕರವಾದದ್ದು. ಈ ಕಳ್ಳಆಪ್ ಗಳು ಕೇವಲ ಕಿಂಬೋ ಹೆಸರನ್ನು ಮಾತ್ರ ಬಳಸಿಕೊಂಡಿಲ್ಲ. ಬದಲಾಗಿ ಕಿಂಬೋ ಲೋಗೋ ಅಥವಾ ಚಿಹ್ನೆಯನ್ನೂ ಕೂಡ ತಮ್ಮ ಲಾಭಕ್ಕಾಗಿ ಬಳಸಿಕೊಂಡು ಜನರನ್ನು ಮೋಸ ಗೊಳಿಸಲು ಮುಂದಾಗಿವೆ. ಕೆಲವು ಇನ್ನೂ ಮುಂದಿನ ಹಂತಕ್ಕೆ ಹೋಗಿ ಬಾಬಾ ರಾಮ್ ದೇವರ ಫೋಟೋವನ್ನು ಕೂಡ ಬಳಸಿಕೊಂಡಿವೆ.

ಈಗಾಗಲೇ ನಾವು ನಿಮಗೆ ಮೇಲೆ ತಿಳಿಸಿರುವಂತೆ ಕಿಂಬೋ ಆಪ್ ಸದ್ಯ ಪ್ಲೇ ಸ್ಟೋರ್ ನಲ್ಲಿ ಲಭ್ಯವಿಲ್ಲ. ಡೌನ್ ಲೋಡ್ ಮಾಡಲು ಸಾಧ್ಯವಿಲ್ಲ. ಆದರೆ ಕಂಪೆನಿ ಹೇಳಿರುವಂತೆ ಇನ್ನು ಕೆಲವೇ ದಿನದಲ್ಲಿ ಲಭ್ಯವಾಗಲಿದೆ ಎಂದು ತಿಳಿಸಿದೆ. ನಾವು ತುಂಬಾ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿದ್ದೇವೆ. ತುಂಬಾ ಜನ ಒಮ್ಮೆಲೆ ಡೌನ್ ಲೋಡ್ ಮಾಡಲು ಯತ್ನಿಸಿದರು. ಹಾಗಾಗಿ ಸದ್ಯ ರಿಮೂವ್ ಮಾಡಿದ್ದೇವೆ. ಸರ್ವರ್ ನ್ನು ಅಪ್ ಗ್ರೇಡ್ ಮಾಡುತ್ತಿದ್ದೇವೆ ಮತ್ತು ಆದಷ್ಟು ಬೇಗ ಪುನಃ ಬರುತ್ತವೆ ಎಂದು ಕಿಂಬೋ ತನ್ನ ಅಧಿಕೃತ ಹೇಳಿಕೆಯನ್ನು ನೀಡಿದೆ.

ಸುಳ್ಳು ಆಪ್ ಗಳನ್ನು ಕಂಡುಹಿಡಿಯುವ ಬಗೆ ಹೇಗೆ..:

 ಆಪ್ ನ ಹೆಸರನ್ನು ಚೆಕ್ ಮಾಡಿ

 ಆಪ್ ನ ಡೆವಲಪರ್ ಯಾರು ಎಂದು ಪ್ರಶ್ನಿಸಿ

 ಎಷ್ಟು ಜನ ಇನ್ಸ್ಟಾಲ್ ಮಾಡಿದ್ದಾರೆ ಎಂದು ಪರೀಕ್ಷಿಸಿ

 ಬಳಕೆದಾರರ ವಿಮರ್ಶೆಗಳನ್ನು ಓದಿ

 ವಿವರಣೆಗಳನ್ನು ಓದಿ

 ರೇಟಿಂಗ್ ಎಷ್ಟಿದೆ ಎಂಬುದನ್ನು ಗಮನಿಸಿ

ಮತ್ತೆ ಬಿಡುಗಡೆಗೊಳ್ಳುವವರೆಗೆ ದಯವಿಟ್ಟು ಕಾಯಿರಿ. ಪ್ಲೇ ಸ್ಟೋರ್ ನಲ್ಲಿ ತಡಕಾಡಿ ಯಾವುದೋ ಮೋಸಗೊಳಿಸೋ ಆಪ್ ಡೌನ್ ಲೋಡ್ ಮಾಡಿ ನಿಮ್ಮ ಡಾಟಾವನ್ನು ವೇಸ್ಟ್ ಮಾಡಿಕೊಳ್ಳಬೇಡಿ. ನಿಜವಾದ ಕಿಂಬೋ ಆಪನ್ನು ಪತಂಜಲಿ ಕಮ್ಯುನಿಕೇಷನ್ ಡೆವಲಪ್ ಮಾಡಿದೆ ಎಂಬುದು ನೆನಪಿರಲಿ. ಕಣ್ಣಿಗೆ ಕಂಡದ್ದೆಲ್ಲ ಪತಂಜಲಿ ಕಿಂಬೋ ಆಪ್ ಅಲ್ಲ ಅನ್ನುವುದು ತಿಳಿದಿರಲಿ..

Best Mobiles in India

Read more about:
English summary
Original Patanjali Kimbho App Deleted From Play Store, This Is The Reason

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X