ಕೇವಲ 3,999ರೂ.ಗೆ ಪ್ಯಾನಾಸೋನಿಕ್ P95 ಸ್ಮಾರ್ಟ್‌ಫೋನ್ ಲಾಂಚ್!!

By Tejaswini P G
|

ಪ್ಯಾನಸೋನಿಕ್ ಸಂಸ್ಥೆ ತನ್ನ ನೂತನ P95 ಸ್ಮಾರ್ಟ್ಫೋನ್ ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ ಪ್ರಾಸೆಸರ್ ಮತ್ತು 5-ಇಂಚ್ HD ಡಿಸ್ಪ್ಲೇ ಹೊಂದಿರುವ ಈ ಮೊಬೈಲ್ ನ ಬೆಲೆ ರೂ 4,999. ಆದರೆ ಈ P95 ಸ್ಮಾರ್ಟ್ಫೋನ್ ಮೊದಲಿಗೆ ಕೇವಲ ಫ್ಲಿಪ್ಕಾರ್ಟ್ ಬಿಗ್ ಶಾಪಿಂಗ್ ಡೇ ಸೇಲ್ ನಲ್ಲಿ ಖರೀದಿಗೆ ಲಭ್ಯವಾಗಲಿದ್ದು, ಲಾಂಚ್ ನ ವಿಶೇಷ ಬೆಲೆ ರೂ 3,999 ಕ್ಕೆ ಲಭಿಸಲಿದೆ. ಈ ವಿಶೇಷ ಮಾರಾಟ 13 ಮೇ, 2018 ಕ್ಕೆ ಆರಂಭವಾಗಲಿದ್ದು 16 ಮೇ, 2018 ರ ವರೆಗೆ ನಡೆಯಲಿದೆ.

ಕೇವಲ 3,999ರೂ.ಗೆ ಪ್ಯಾನಾಸೋನಿಕ್ P95 ಸ್ಮಾರ್ಟ್‌ಫೋನ್ ಲಾಂಚ್!!


ಪ್ಯಾನಸೋನಿಕ್ P95 1GB RAM ಮತ್ತು 16GB ಆಂತರಿಕ ಸ್ಟೋರೇಜ್ ನೊಂದಿಗೆ ಬರಲಿದೆ. ಮೈಕ್ರೋSD ಕಾರ್ಡ್ ಬಳಸುವ ಮೂಲಕ ಇದರ ಸ್ಟೋರೇಜ್ ಅನ್ನು 128GB ವರೆಗೆ ವಿಸ್ತರಿಸಬಹುದಾಗಿದೆ. 2300mAh ಸಾಮರ್ಥ್ಯದ ಬ್ಯಾಟರಿ ಹೊಂದಿರುವ P95 ಸ್ಮಾರ್ಟ್ಫೋನ್ ಆಂಡ್ರಾಯ್ಡ್ ನುಗಾಟ್ 7.1.2 ಆಪರೇಟಿಂಗ್ ಸಿಸ್ಟಮ್ ಹೊಂದಿದೆ. ಅಷ್ಟೇ ಅಲ್ಲದೆ ಈ ಸ್ಮಾರ್ಟಫೋನ್ ನಲ್ಲಿ ಸ್ಪ್ಲಿಟ್ ಸ್ಕ್ರೀನ್ ಮತ್ತು ಬಂಡಲ್ಡ್ ನೋಟಿಫಿಕೇಶನ್ ಮೊದಲಾದ ಫೀಚರ್ಗಳಿವೆ.

ಇನ್ನು ಇದರ ಕ್ಯಾಮೆರಾ ಕುರಿತು ಹೇಳುವುದಾದರೆ, P95 ನಲ್ಲಿದೆ 8MP ರೇರ್ ಕ್ಯಾಮೆರಾ LED ಫ್ಲ್ಯಾಶ್ ಸಹಿತ ಮತ್ತು 5MP ಫ್ರಂಟ್ ಕ್ಯಾಮೆರಾ. ಇದರ ಝೀರೋ ಶಟರ್ ಲ್ಯಾಗ್ ಫೀಚರ್ ಮೂಲಕ ಬಳಕೆದಾರರು ಯಾವುದೇ ವಿಳಂಬವಿಲ್ಲದೆ ಫೋಟೋ ಸೆರೆಹಿಡಿಯಬಹುದಾಗಿದೆ. ಇದರ ಪ್ರೊಫೆಶನಲ್ ಮೋಡ್ ನಿಂದ ಎಕ್ಸ್ಪೋಶರ್ ಅನ್ನು ನಿಯಂತ್ರಿಸಬಹುದು ಮತ್ತು ರೆಡ್ ಐ ರಿಡಕ್ಷನ್ ಕೂಡ ಮಾಡಬಹುದು. ಇನ್ನು ಇದರ ಆಟೋ-ಸೀನ್ ಡಿಟೆಕ್ಶನ್ ಮೋಡ್ ನಲ್ಲಿ ಫೋನ್ ನ ಕ್ಯಾಮೆರಾ ಹಿನ್ನಲೆಗೆ ಮತ್ತು ಲೈವ್ ಫೀಲ್ಟರ್ಗಳಿಗೆ ತಕ್ಕಂತೆ ತನ್ನಿಂತಾನೇ ಅಗತ್ಯವಾದ ಸೆಟ್ಟಿಂಗ್ ಗಳನ್ನು ಮಾಡಿಕೊಳ್ಳುತ್ತದೆ. ಅಲ್ಲದೆ ಇದರಲ್ಲಿ ಸೆಪಿಯಾ, ಮೋನೋ, ಆಕ್ವಾ ಮೊದಲಾದ ಮೋಡ್ಗಳಿವೆ.

P95 ಸ್ಮಾರ್ಟ್ಫೋನ್ ದಿ ಟ್ರಸ್ಟೆಡ್ ಫೇಸ್ ರೆಕಗ್ನಿಶನ್ ಮತ್ತು ದಿ ಟ್ರಸ್ಟೆಡ್ ವಾಯ್ಸ್ ನಂತಹ ಸ್ಮಾರ್ಟ್ ಲಾಕ್ ಫೀಚರ್ಗಳನ್ನು ಹೊಂದಿದೆ. ಈ ಫೀಚರ್ಗಳ ಮೂಲಕ ಬಳಕೆದಾರರು ತಮ್ಮ ಪೋನ್ ನತ್ತ ಒಂದು ದೃಷ್ಟಿ ಹರಿಸುವ ಮೂಲಕ ಅಥವಾ ಅದರೊಂದಿಗೆ ಮಾತನಾಡುವ ಮೂಲಕ ಅದನ್ನು ಅನ್ಲಾಕ್ ಮಾಡಬಹುದು. ಈ ಸ್ಮಾರ್ಟ್ ಲಾಕ್ ಫೀಚರ್ ವಿಶ್ವಾಸಾರ್ಹ ಲೊಕೇಶನ್ಗಳಾದ ಕಾರ್, ಮನೆ ಮತ್ತು ಬ್ಲೂಟೂತ್ ಸಾಧನಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತದೆ ಮತ್ತು ಬಳಕೆದಾರರಿಗೆ ಅನುಕೂಲವಾಗುವಂತೆ ಫೋನ್ ಅನ್ನು ಅನ್ಲಾಕ್ ಮಾಡುತ್ತದೆ. ಇನ್ನು ಇದರ 'ಆನ್ ಬಾಡಿ ಡಿಟೆಕ್ಶನ್' ಫೀಚರ್ ಮೂಲಕ ಈ ಫೋನ್ ಅದು ತನ್ನ ಬಳಕೆದಾರರ ಕೈ ಯಲ್ಲಿ ಇರುವಷ್ಟು ಸಮಯ ಅನ್ಲಾಕ್ ಆಗಿರುತ್ತದೆ ಮತ್ತು ಅದನ್ನು ಕೈಯಿಂದ ಕೆಳಗೆ ಇರಿಸಿದ ಕೂಡಲೇ ಲಾಕ್ ಆಗುತ್ತದೆ.

ಕಳೆದ ತಿಂಗಳು 'ಆರ್ಬೋ ಹಬ್' ಅನ್ನು ಲಾಂಚ್ ಮಾಡುವ ಮೂಲಕ ಪ್ಯಾನಸೋನಿಕ್ ಸಂಸ್ಥೆಯು ಕೃತಕ ಬುದ್ಧಿಮತ್ತೆ ಮತ್ತು ಮೆಶೀನ್ ಲರ್ನಿಂಗ್ ಕ್ಷೇತ್ರಕ್ಕೆ ಕಾಲಿರಿಸಿದೆ.'ಆರ್ಬೋ ಹಬ್' ಒಂದು ಎಐ ಸಾಮರ್ಥ್ಯದ ಹಬ್ ಆಗಿದ್ದು ಪ್ಯಾನಸೋನಿಕ್ ಸ್ಮಾರ್ಟ್ಫೋನ್ ಬಳಕೆದಾರರಿಗೆ ಹಲವು ಆಪ್ ಮತ್ತು ಸರ್ವೀಸ್ ಗಳನ್ನು ಒಂದೇ ಪ್ಲ್ಯಾಟ್ಫಾರ್ಮ್ ಮೂಲಕ ಆಕ್ಸೆಸ್ ಮಾಡುವ ಅವಕಾಶ ನೀಡುತ್ತದೆ.

ಬಳಕೆದಾರರ ಎಲ್ಲಾ ಅಗತ್ಯಗಳಿಗೆ 'ಆರ್ಬೋ ಹಬ್' ಒಂದು ಗೋ-ಟು ಆಪ್ ಆಗಿದ್ದು, ಬಳಕೆದಾರರ ನಿರ್ದಿಷ್ಟ ಅಗತ್ಯಗಳು, ಆಸಕ್ತಿಗಳಿಗೆ ಹೊಂದಿಕೊಂಡು ಎಲ್ಲಾ ಅಗತ್ಯ ಸೇವೆಗಳನ್ನು ಒಂದೇ ಪ್ಲ್ಯಾಟ್ಫಾರ್ಮ ನಲ್ಲಿ ನೀಡುತ್ತದೆ. ಈ ಮೂಲಕ ಅದು ಸ್ಮಾರ್ಟ್ಫೋನ್ ನಲ್ಲಿ ಹಲವು ಆಪ್ಗಳನ್ನು ತೆಗೆದು ಹಾಕಿ ಅದರಿಂದುಂಟಾಗುವ ಗೊಂದಲವನ್ನು ಕಡಿಮೆಮಾಡಬಹುದು.

ಪ್ಯಾನಸೋನಿಕ್ ಸಂಸ್ಥೆಯು ತನ್ನ ಬಳಕೆದಾರರಿಗೆ ಹಲವು ಪ್ಲ್ಯಾಟ್ಫಾರ್ಮ್ ಗಳನ್ನು ನೀಡುವ ಸಲುವಾಗಿ ಓಲಾ, ಆಕ್ಯುವೆದರ್, ನ್ಯೂಸ್ ಪಾಯಿಂಟ್ , ಮೊಬಿಕ್ವಿಕ್ , ಗೇಮ್ಝಾಪ್ ಮೊದಲಾದವರೊಂದಿಗೆ ಕೈಜೋಡಿಸಿದೆ.

ಆರ್ಬೋ ಹಬ್ ಅನ್ನು ಸೆಪ್ಟಂಬರ್ 2017ರಲ್ಲಿ ಲಾಂಚ್ ಆದ ಎಲ್ಯೂಗಾ ರೇ 700 ನ ಬಳಕೆದಾರರಿಗೆ ಮೊದಲಿಗೆ ಓವರ್ ದಿ ಏರ್(FOTA) ಮೂಲಕ ಪ್ರಸ್ತುತ ಪಡಿಸಲಿದೆ. ಪ್ಯಾನಸೋನಿಕ್ ಮುಂದಿನ ದಿನಗಳಲ್ಲಿ ಪ್ಯಾನಸೋನಿಕ್ P85 NXT ಮತ್ತು ಎಲ್ಯೂಗಾ ರೇ 710 ಎಂಬ ಎರಡು ಸ್ಮಾರ್ಟ್ಫೋನ್ ಗಳನ್ನು ಲಾಂಚ್ ಮಾಡಲಿದ್ದು, ಅವುಗಳು 'ಆರ್ಬೋ ಹಬ್' ನೊಂದಿಗೆ ಬರಲಿದೆ.

Best Mobiles in India

English summary
Panasonic has announced the P95 smartphones in India. The P95 is powered by a Qualcomm Snapdragon processor. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X