ಗೂಗಲ್ ಪೋಷಕರಿಗೆ ನೀಡಿದೆ ಮಕ್ಕಳ ಸ್ಮಾರ್ಟ್‌ಫೋನ್ ಲಾಕ್ ಮಾಡುವ ಫೀಚರ್..!
ಇತ್ತೀಚೆಗಿನ ಮಕ್ಕಳ ಆಟಪಾಠ ಬಿಟ್ಟು ಮೊಬೈಲ್ ಹಿಡಿದು ಕುಳಿತು ಬಿಡುತ್ತಾರೆ. ಏನು ಮಾಡಿದರೂ ಬಿಡುವುದಿಲ್ಲ. ಪೋಷಕರಿಗೆ ಇದೊಂದು ತಲೆನೋವಿನ ಸಮಸ್ಯೆಯಾಗಿ ಬಿಟ್ಟಿದೆ. ತಮ್ಮ ಮಕ್ಕಳನ್ನು ಮೊಬೈಲ್ ಹುಚ್ಚಿನಿಂದ ಬಿಡಿಸುವುದು ಹೇಗೆ ಎಂದು ಹೆಚ್ಚಿನ ಪೋಷಕರು ಚಿಂತಿತರಾಗಿದ್ದಾರೆ. ಯಾವಾಗಲೂ ಮಕ್ಕಳು ಏನು ಮಾಡುತ್ತಿದ್ದಾರೆ , ಮೊಬೈಲ್ ನಲ್ಲಿ ಏನು ನೋಡುತ್ತಿದ್ದಾರೆ ಎಂಬುದರ ಬಗ್ಗೆ ಕಣ್ಣಿಡಲು ಅಸಾಧ್ಯವಾಗುತ್ತದೆ. ಹಾಗಂತ ಮೊಬೈಲ್ ಕೊಡದೇ ಇದ್ದರೂ ಮಕ್ಕಳು ಕೇಳುವುದಿಲ್ಲ.

ಆದರೆ ಇದೀಗ ಹದಿಹರೆಯದ ಮಕ್ಕಳ ಮೊಬೈಲ್ ಬಳಕೆಯಲ್ಲಿ ಕಡಿವಾಣ ಹಾಕಲು ಪೋಷಕರಿಗೆ ಅವಕಾಶ ಸಿಗಲಿದೆ. ಗೂಗಲ್ ನ ಫ್ಯಾಮಿಲಿ ಲಿಂಕ್ ಆಯ್ಕೆಯು ಚಿಕ್ಕ ಮಕ್ಕಳಿಗೆ ಸ್ಕ್ರೀನ್ ಟೈಮ್ ಕಂಟ್ರೋಲ್ ಮತ್ತು ಸ್ಮಾರ್ಟ್ ಡಿವೈಸ್ ಬಳಕೆಯನ್ನು ಕಂಟ್ರೋಲ್ ಮಾಡಲು ಅವಕಾಶ ನೀಡಿದಂತೆ ಇದೀಗ ಹದಿಹರೆಯದ ಮಕ್ಕಳಿಗೂ ಬಳಕೆ ಮಾಡಲು ಅವಕಾಶ ನೀಡುತ್ತದೆ.ಫ್ಯಾಮಿಲಿ ಲಿಂಕ್ ಆಯ್ಕೆಯನ್ನು ಅಪ್ ಡೇಟ್ ಮಾಡಿರುವ ಗೂಗಲ್ , ತಮ್ಮದೇ ಸೇಮ್ ಗೂಗಲ್ ಅಕೌಂಟ್ ಮೂಲಕ ಪೋಷಕರಿಗೆ ಹದಿಹರೆಯದ ಮಕ್ಕಳ ಸ್ಮಾರ್ಟ್ ಫೋನ್ ಬಳಕೆಯ ವಿಚಾರದಲ್ಲಿ ಕೆಲವು ಲಾಕ್ ಮಾಡುವ ಅವಕಾಶವನ್ನು ನೀಡುತ್ತದೆ.
ಹದಿಹರೆಯದ ಮಕ್ಕಳು ಸ್ಮಾರ್ಟ್ ಡಿವೈಸ್ ನ್ನು ಆಕ್ಸಿಸ್ ಮಾಡಲು ಪೇರೆಂಟ್ಸ್ ಲಾಕ್ ಮಾಡಿದ್ದಾಗಲೂ ಅವಕಾಶವಿರುತ್ತದೆ ಆದರೆ ಅದು ಪೋಷಕರಿಗೆ ಅಲರ್ಟ್ ನ್ನು ನೀಡುತ್ತದೆ.

ಗೂಗಲ್ ಬ್ಲಾಗ್ ಸ್ಟೇಟ್‌ಮೆಂಟ್
"ಫ್ಯಾಮಿಲಿ ಲಿಂಕ್ ಆಯ್ಕೆಯು 13 ವರ್ಷದ ಒಳಗಿನ ಮಕ್ಕಳಿಗಾಗಿ ಬಿಡುಗಡೆಗೊಳಿಸಲಾಗಿತ್ತು. ಆದರೆ ಪೋಷಕರು ತಮ್ಮ 13 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೂ ಇದನ್ನು ಬಳಸಲು ಇಚ್ಛಿಸಿದ್ದರು. ಹಾಗಾಗಿ ಇದೀಗ ಆ ಅವಕಾಶವನ್ನು ಫ್ಯಾಮಿಲಿ ಲಿಂಕ್ ನಲ್ಲಿ ನೀಡಲಾಗಿದೆ. ಈ ವಾರದಿಂದ ಪೋಷಕರು ತಮ್ಮ ಹದಿಹರೆಯದ ಮಕ್ಕಳು ಏನು ಮಾಡುತ್ತಾರೆ ಎಂಬುದನ್ನು ಸೇಮ್ ಗೂಗಲ್ ಅಕೌಂಟ್ ನ್ನು ಫ್ಯಾಮಿಲಿ ಲಿಂಕ್ ನಲ್ಲಿ ಬಳಸುವ ಮೂಲಕ ಒಂದು ಕಣ್ಣಿಟ್ಟಿರಲು ಸಾಧ್ಯವಾಗುತ್ತದೆ." ಎಂದು ಬ್ಲಾಗ್ ನಲ್ಲಿ ತಿಳಿಸಿದ್ದಾರೆ ಗೂಗಲ್ ನ ಕಿಡ್ಸ್ ಮತ್ತು ಫ್ಯಾಮಿಲೀಸ್ ನ ಡೈರೆಕ್ಟರ್ ಆಗಿರುವ ಪೌಲೋ ಗೋಲ್ಗರ್.

ಗೂಗಲ್ ಅಸಿಸ್ಟೆಂಟ್ ಮೂಲಕ ಕಂಟ್ರೋಲ್:
ಪೋಷಕರು ಡಿವೈಸ್ ನ ಪಾಸ್ ವರ್ಡ್ ಬದಲಾಯಿಸುವ ಅಗತ್ಯವಿಲ್ಲ ಬದಲಾಗಿ ಡಿವೈಸ್ ತನ್ನಿಂದ ತಾನೆ ಬದಲಾಯಿಸುವಂತೆ ಮಾಡಲು ಅವಕಾಶವಿರುತ್ತದೆ. ಅದಕ್ಕಾಗಿ ಹದಿಹರೆಯದ ಮಕ್ಕಳು ಫ್ಯಾಮಿಲಿ ಲಿಂಕ್ ವೈಶಿಷ್ಟ್ಯತೆಯ ಮೂಲಕ ಡಿವೈಸ್ ಬಳಸುತ್ತಿದ್ದರೂ ಸರಿ. ಅಂದರೆ ಪೋಷಕರು ಗೂಗಲ್ ಅಸಿಸ್ಟೆಂಟ್ ನ್ನು ಬಳಸಿ ಡಿವೈಸ್ ನ್ನು ಲಾಕ್ ಮಾಡಬಹುದು. ಅವರು ಕೇವಲ "ಹೇ ಗೂಗಲ್ ಲಾಕ್ XXX ಡಿವೈಸ್" ಎಂದು ಹೇಳಬೇಕಾಗುತ್ತದೆ. ನಂತರ ಕೆಲವು ನಿಮಿಷಗಳಲ್ಲಿ ಅವರು ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್ ನಲ್ಲಿ ಏನು ಮಾಡುತ್ತಿದ್ದಾರೋ ಅದನ್ನು ನಿಲ್ಲಿಸುತ್ತದೆ. ಲಾಕ್ ಆಗುತ್ತದೆ. ಗೂಗಲ್ ಅಸಿಸ್ಟೆಂಟ್ ಸುಮಾರು 6 ವಿಭಿನ್ನ ವಾಯ್ಸ್ ಗಳನ್ನು ರೆಕಗ್ನೈಸ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ವಿಶ್ವದಾದ್ಯಂತ ಫೀಚರ್ ಲಭ್ಯ
ಇಂದಿನಿಂದಲೇ ಈ ವೈಶಿಷ್ಟ್ಯವು ಲಭ್ಯವಾಗುತ್ತಿದ್ದು ಎಲ್ಲಾ ದೇಶಗಳಿಗೂ ಕೆಲವೇ ದಿನಗಳಲ್ಲಿ ವಿಸ್ತರಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ವಿಶ್ವದ ಎಲ್ಲಾ ದೇಶಗಳಲ್ಲೂ ಮತ್ತು ಹೆಚ್ಚಿನ ಡಿವೈಸ್ ಗಳಲ್ಲಿ ಮತ್ತು ಕುಟುಂಬಗಳಲ್ಲಿ ಇದು ನೆರವಿಗೆ ಬರುತ್ತಿದೆ ಎಂಬ ನಿರೀಕ್ಷೆಯನ್ನು ಗೂಗಲ್ ಇಟ್ಟುಕೊಂಡಿದೆ. ಈ ಅಪ್ ಡೇಟ್ ನ ಪ್ರಮುಖ ಉದ್ದೇಶ ಕೇವಲ 13 ವರ್ಷದ ಮಕ್ಕಳನ್ನು ಕಂಟ್ರೋಲ್ ಮಾಡುವುದು ಸ್ಮಾರ್ಟ್ ಡಿವೈಸ್ ನ್ನು ಅವರು ಹೇಗೆ ಬಳಸುತ್ತಾರೆ ಎಂಬುದರ ಟ್ರ್ಯಾಕ್ ಇಡುವುದು ಮಾತ್ರವಲ್ಲ ಬದಲಾಗಿ ಅತಿಯಾಗಿ ಬಳಕೆ ಮಾಡುವುದರ ಬಗ್ಗೆ ಎಚ್ಚರಿಕೆ ನೀಡುವುದೂ ಕೂಡ ಆಗಿದೆ. ಈ ಅಪ್ ಡೇಟ್ ಮೂಲಕ ಫ್ಯಾಮಿಲಿ ಲಿಂಕ್ ಕ್ರೋಮ್ ಬುಕ್ಸ್ ನಲ್ಲೂ ಕೂಡ ಕೆಲಸ ಮಾಡುತ್ತದೆ.

ಮೊಬೈಲ್‌ಗೆ ಮಾತ್ರ ಸೀಮಿತವಲ್ಲ
ಕೇವಲ ಮೊಬೈಲ್ ಡಿವೈಸ್ ಗಳಿಗೆ ಇದು ಸೀಮಿತವಾಗಿಲ್ಲ. ಬದಲಾಗಿ ಕ್ರೋಮ್ ಬುಕ್ ಗಳಲ್ಲೂ ಕೂಡ ಮಕ್ಕಳಿಗಾಗಿ ಮತ್ತು ಹದಿಹರೆಯದವರಿಗಾಗಿ ಫ್ಯಾಮಿಲಿ ಲಿಂಕ್ ವೈಶಿಷ್ಟ್ಯತೆಯನ್ನು ಫೋಷಕರು ಬಳಕೆ ಮಾಡಬಹುದು. ಹೌದು ತಮ್ಮ ಡಿವೈಸ್ ನಲ್ಲಿ ವೆಬ್ ಸೈಟ್ ರಿಸ್ಟ್ರಿಕ್ಷನ್ ಮತ್ತು ಅಕೌಂಟ್ ಸೆಟ್ಟಿಂಗ್ಸ್ ಗಳನ್ನು ತಮ್ಮ ಮಕ್ಕಳಿಗಾಗಿ ಪೋಷಕರು ಮಾಡಲು ಅವಕಾಶವಿರುತ್ತದೆ. ಸ್ಕ್ರೀನ್ ಟೈಮ್ ಲಿಮಿಟ್ ಮತ್ತು ಆಪ್ ಗಳನ್ನ ಮ್ಯಾನೇಜ್ ಮಾಡಲು ಕ್ರೋಮ್ ಬುಕ್ ಬಳಕೆ ಮಾಡಬಹುದು. ಒಟ್ಟಾರೆ ಮಕ್ಕಳ ಮೊಬೈಲ್ ಹುಚ್ಚಿಗೆ ಇದರಿಂದ ಅಲ್ಪಮಟ್ಟಿಗಾದರೂ ಕಡಿವಾಣ ಹಾಕಲು ಪೋಷಕರು ಪ್ರಯತ್ನಿಸಬಹುದು.


Click it and Unblock the Notifications








