Home
Apps

'ಕಿಂಬೋ' ಆಪ್‌ಗೆ ಮತ್ತೆ ಕಂಟಕ ತಂದಿತು ಗೂಗಲ್!..ಪತಂಜಲಿ ಆಕ್ರೋಶ!!

By Bhaskar N J

ವಾಟ್ಸ್‌ಆಪ್‌ಗೆ ಸೆಡ್ಡು ಹೊಡೆಯುವ ಉದ್ದೇಶದಿಂದ ಮತ್ತೆ ಪ್ಲೇ ಸ್ಟೋರ್‌ಗೆ ಕಾಲಿಟ್ಟಿದ್ದ ಪತಂಜಲಿ ಕಿಂಬೋ ಆಪ್‌ಗೆ ಗೂಗಲ್ ಕಂಟಕವಾಗಿ ನಿಂತಿದೆ. ಮೇ ತಿಂಗಳಲ್ಲಿ ಬಿಡುಗಡೆಗೊಳಿಸಿ ಕೇವಲ 24 ಘಂಟೆಯೊಳಗೆ ವಾಪಾಸ್ ಆಗಿದ್ದ 'ಕಿಂಬೋ' ಆಪ್ ಹಳೆಯ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಂಡು ಬಿಡುಗಡಯಾದರೂ' ಮತ್ತೆ ಪ್ಲೇಸ್ಟೋರ್‌ನಿಂದ ಮಾಯವಾಗಿದೆ!

ಹೌದು, ಯೋಗ ಗುರು ಬಾಬಾ ರಾಮ್ ದೇವ್ ಮಾಲೀಕತ್ವದ ಪತಂಜಲಿ ಸಂಸ್ಥೆಯ ಸ್ವದೇಶಿ ಮೆಸೇಜಿಂಗ್ ಫ್ಲ್ಯಾಟ್ ಫಾರ್ಮ್ ಇದೇ ತಿಂಗಳ ಅಂದರೆ ಅಗಸ್ಟ್ 27 ರಂದು ಮತ್ತೆ ಬಿಡುಗಡೆಗೊಳ್ಳುವ ಬಗ್ಗೆ ಪ್ರಕಟಣೆ ಮಾಡಲಾಗಿತ್ತು. ಅದರ ಫಲವಾಗಿ ಪತಂಜಲಿ ಸಂಸ್ಥೆಯ ಮೆಸೇಂಜಿಂಗ್ ಆಪ್ ಕಿಂಬೋ ಪ್ರಾಯೋಗಿಕ ಆವೃತ್ತಿಯು ಗುರುವಾರ ಪ್ಲೇ ಸ್ಟೇರ್‌ಗೆ ಬಂದಿತ್ತು.

'ಕಿಂಬೋ' ಆಪ್‌ಗೆ ಮತ್ತೆ ಕಂಟಕ ತಂದಿತು ಗೂಗಲ್!..ಪತಂಜಲಿ ಆಕ್ರೋಶ!!

ಆದರೆ, ಗುರುವಾರ ಪ್ಲೇಸ್ಟೋರ್ ಅನ್ನು ಪ್ರವೇಶಿಸಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ವೇಳೆಯಲ್ಲೇ ಕಿಂಬೊ ಮತ್ತೆ ಗೂಗಲ್‌ ಪ್ಲೇಸ್ಟೋರ್‌ನಿಂದ ಮಾಯವಾಗಿದೆ.! ಇದು ಸ್ವದೇಶಿ ಸಂಸ್ಥೆ ವಿರುದ್ಧ ವಿದೇಶಿ ಕಂಪನಿಗಳು ನಡೆಸಿರುವ ಹುನ್ನಾರ ಎಂದು ಪತಂಜಲಿ ಆಕ್ರೋಶಿಸಿದೆ. ಹಾಗಾದರೆ, ಏನಿದು 'ಕಿಂಬೋ' ಆಪ್‌ ವರದಿ? ಗೂಗಲ್ ಏಕೆ ಕಂಟಕವಾಗಿದೆ ಎಂಬುದನ್ನು ಮುಂದೆ ತಿಳಿಯಿರಿ.

ಆ.27ರಂದು ಕಿಂಬೋ ಅಧಿಕೃತ ಬಿಡುಗಡೆ!

ಆ.27ರಂದು ಕಿಂಬೋ ಅಧಿಕೃತ ಬಿಡುಗಡೆ!

72 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಬದಲ್ಲಿ ದೇಶದ ಜನತೆಗೆ ತಮ್ಮ ಅಧಿಕೃತ ಟ್ವೀಟರ್ ಅಕೌಂಟ್ ಮೂಲಕ ಶುಭಕೋರುವ ಸಂದರ್ಭದಲ್ಲಿ ಪತಂಜಲಿ ಸಂಸ್ಥೆಯ ಕೋಫೌಂಡರ್ ಆಗಿರುವ ಯೋಗಪೀತ್ ಹರಿದ್ವಾರ್ ಅವರು ಹೊಸ ಕಿಂಬೋ ಆಪ್ ಇನ್ನಷ್ಟು ವೈಶಿಷ್ಟ್ಯತೆಗಳೊಂದಿಗೆ ಅಗಸ್ಟ್ 27 ನೇ ತಾರೀಖು ಬಿಡುಗಡೆಗೊಳ್ಳಲಿದೆ ಎಂಬುದಾಗಿ ತಿಳಿಸಿದ್ದಾರೆ.

ಪ್ರಾಯೋಗಿಕ ಆವೃತ್ತಿ ಎಂಟ್ರಿ.

ಪ್ರಾಯೋಗಿಕ ಆವೃತ್ತಿ ಎಂಟ್ರಿ.

ದೇಸಿ ವಾಟ್ಸ್ಆಪ್ ಎಂದೇ ಗುರುಸಲಾಗಿದ್ದ ಪ್ರಾಯೋಗಿಕ ಹಂತದ(ಬೀಟಾ ಆವೃತ್ತಿ) ಕಿಂಬೊ ಇದೇ ಗುರುವಾರ ಪ್ಲೇ ಸ್ಟೇರ್‌ಗೆ ಎಂಟ್ರಿ ನೀಡಿತ್ತು. ಪ್ಲೇ ಸ್ಟೋರ್‌ನಲ್ಲಿ ಕಿಂಬೋ ಆಪ್ ಕಾಣಿಸಿಕೊಂಡ ಕೆಲವೇ ಗಂಟೆಗಳಲ್ಲಿ ಆಪ್ ಡೌನ್‌ಲೋಡ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದಾದ ನಂತರ ಮತ್ತೆ ಕಿಂಬೋ ಆಪ್ ಪ್ಲೇ ಸ್ಟೋರ್‌ನಿಂದ ಮಾಯವಾಗಿದೆ.

ಗೂಗಲ್ ಮೇಲೆ ಪತಂಜಲಿ ಕಿಡಿ!

ಗೂಗಲ್ ಮೇಲೆ ಪತಂಜಲಿ ಕಿಡಿ!

ಗೂಗಲ್‌ ಪ್ಲೇ ಸ್ಟೋರ್‌ನಿಂದ ಕಿಂಬೊ ಮತ್ತೆ ಕಣ್ಮರೆಯಾಗಿರುವುದಕ್ಕೆ ಬಾಬಾ ರಾಮದೇವ್ ಅವರ ಕಂಪನಿಯು ಅಸಮಾಧಾನ ವ್ಯಕ್ತಪಡಿಸಿದೆ.ಇದು ಸ್ವದೇಶಿ ಸಂಸ್ಥೆ ವಿರುದ್ಧ ವಿದೇಶಿ ಕಂಪನಿಗಳು ನಡೆಸಿರುವ ಹುನ್ನಾರ. ಬಳಕೆದಾರರೇ, ನಿಮಗಾಗಿರುವ ಅನಾನುಕೂಲಕ್ಕೆ ವಿಷಾದಿಸುತ್ತೇವೆ ಎಂದು ಕಂಪೆನಿ ಆಯುರ್ವೇದ್ ವಕ್ತಾರ ಎಸ್‌.ಕೆ.ತಿಜರಾವಾಲಾ ಟ್ವೀಟ್ ಮಾಡಿದ್ದಾರೆ.

ವಿಶ್ವಾಸದಲ್ಲಿ ಪತಂಜಲಿ!

ವಿಶ್ವಾಸದಲ್ಲಿ ಪತಂಜಲಿ!

ಕಿಂಬೋ ಆಪ್ ಅನ್ನು ಪ್ಲೇ ಸ್ಟೋರ್‌ನಿಂದ ಮತ್ತೆ ತೆಗೆಯಲಾಗಿದೆ. ಪ್ಲೇ ಸ್ಟೋರ್‌ನಿಂದ ಕಿಂಬೊವನ್ನು ತೆಗೆದುಹಾಕಿದ್ದು ಏಕೆ ಅನ್ನುವುದು ಇನ್ನು ತಿಳಿದುಬಂದಿಲ್ಲ. ನಾವು ಆ ಕಂಪನಿ ಜತೆ ಮಾತುಕತೆ ನಡೆಸಿದ್ದೇವೆ. ನಮ್ಮ ಇಮೇಲ್‌ಗೆ ಪ್ರತಿಕ್ರಿಯೆ ಬಂದಿಲ್ಲ,ಆದರೆ, ಸದ್ಯದಲ್ಲೇ ಕಿಂಬೋ ಆಪ್‌ ಮರಳಿ ಪ್ಲೇ ಸ್ಟೋರ್‌ಗೆ ಬರಲಿದೆ ಎಂದು ಎಸ್‌.ಕೆ.ತಿಜರಾವಾಲಾ ಅವರು ಹೇಳಿದ್ದಾರೆ.

ಕಿಂಬೋ ಅಂದರೇನು?

ಕಿಂಬೋ ಅಂದರೇನು?

ಭಾರತದ ಮಾರುಕಟ್ಟೆಗೆ ಸ್ವದೇಶಿ ಕಂಪೆನಿ ಆಪ್ ಆಗಿ ಬಿಡುಗಡೆಯಾಗುತ್ತಿರುವ ಕಿಂಬೋ ಆಪ್ ಅರ್ಥ ತಿಳಿದುಬಂದಿದೆ. ಕಿಂಬೋ ಎಂಬುದು ಸಂಸ್ಕೃತ ಪದವಾಗಿದ್ದು, ಇದರ ಅರ್ಥ 'ಏನು ನಡೆಯುತ್ತಿದೆ' ಮತ್ತು 'ಏನು ಸಮಾಚಾರ' ಎಂಬುದಾಗಿದೆ. ವಾಟ್ಸ್‌ಆಪ್ ಪದದ ಸಂಸ್ಕೃತ ಭಾಷಾಂತರವನ್ನು ಕಿಂಬೋ ಎಂದು ಕರೆಯಬಹುದಾಗಿದೆ.

ಫೇಕ್ ಆಪ್‌ಗಳ ಬಗ್ಗೆ ಎಚ್ಚರ!

ಫೇಕ್ ಆಪ್‌ಗಳ ಬಗ್ಗೆ ಎಚ್ಚರ!

ಕಿಂಬೋ ಚಿಹ್ನೆಯನ್ನೇ ಒಳಗೊಂಡ ಹಲವು ಫೇಕ್‌ಆಪ್‌ಗಳು ಹುಟ್ಟಿಕೊಂಡಿರುವುದು ನಿಮಗೆಲ್ಲ ತಿಳಿದಿರುವ ಸಂಗತಿಯೇ ಆಗಿದೆ. ಕಿಂಬೋ ನಮ್ಮ ಅಧಿಕೃತ ಆಪ್ ಆಗಿದ್ದು, ಬೇರೆ ಯಾವುದೇ ಆಪ್‌ಗಳು ತಮ್ಮ ಸಂಸ್ಥೆಗೆ ಸೇರಿರುವುದಲ್ಲ ಮತ್ತು ಅದನ್ನು ಮರುಳಾಗಿ ಯಾರೂ ಕೂಡ ಇನ್‌ಸ್ಟಾಲ್ ಮಾಡಬಾರದು ಎಂದು ಪತಂಜಲಿ ಸಂಸ್ಥೆ ಸೂಚನೆ ನೀಡಿದೆ.

Best Mobiles in India

English summary
Patanjali's messaging app Kimbho was taken down yet again, one day after it went live on Independence Day. The app was launched as. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+