Home
Apps

ಕ್ಷಿಪ್ರ ಪಾವತಿಗಾಗಿ ಬರಲಿದೆ ಗೂಗಲ್ ನ ಹೊಸ 'ಪೇ ವಿತ್ ಗೂಗಲ್'!

ಗೂಗಲ್ ಕ್ಷಿಪ್ರ ಹಣ ಪಾವತಿಗಾಗಿ ಇ-ವಾಲೆಟ್ ಮಾದರಿಯಲ್ಲಿ 'ಪೇ ವಿತ್ ಗೂಗಲ್' ಎಂಬ ಹೊಸ ಫೀಚರ್ ಬಿಡುಗಡೆ ಮಾಡಲಿದೆ.

By Tejaswini P G

ಗೂಗಲ್ ಲಾಂಚ್ ಮಾಡಲಿದೆ ನೂತನ ಫೀಚರ್ 'ಪೇ ವಿತ್ ಗೂಗಲ್'. ಈ ಹೊಸ ಫೀಚರ್ ಇ-ವಾಲೆಟ್ ನಂತೆ ಕಾರ್ಯನಿರ್ವಹಿಲಿದ್ದು ಕ್ಷಿಪ್ರ ಹಣ ಪಾವತಿಗೆ ಅನುವು ಮಾಡಿಕೊಡುತ್ತದೆ. ಹಣ ಪಾವತಿಸುವ ಸಂದರ್ಭದಲ್ಲಿ ನೀವು ಮೊದಲೇ ಸೆಟ್ ಮಾಡಿರುವ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಪಾವತಿಸಬಹುದು.

ಕ್ಷಿಪ್ರ ಪಾವತಿಗಾಗಿ ಬರಲಿದೆ ಗೂಗಲ್ ನ ಹೊಸ 'ಪೇ ವಿತ್ ಗೂಗಲ್'!

ನೀವು ಆನ್ಲೈನ್ ನಲ್ಲಿ ಆಹಾರ, ಬಟ್ಟೆ , ಮೂವಿ ಟಿಕೆಟ್ ಇತ್ಯಾದಿಗಳಿಗೆ ಹಣ ಪಾವತಿಸುವಾಗ ಅಥವಾ ಇತರರಿಗೆ ಹಣ ಕಳುಹಿಸುವಾಗ ಪ್ರತೀ ಬಾರಿಯೂ ಒಂದು ಫಾರ್ಮ್ ನಲ್ಲಿ ನಿಮ್ಮ ಕಾರ್ಡ್ ನ ಮಾಹಿತಿಯನ್ನು ತುಂಬಬೇಕಾಗುತ್ತದೆ.ಇಂತಹ ಸಂದರ್ಭಗಳಲ್ಲಿ ಪೇ ವಿತ್ ಗೂಗಲ್ ನಿಮ್ಮ ಸಹಾಯಕ್ಕೆ ಬರಲಿದೆ. ಆನ್ಲೈನ್ ಖರೀದಿಯ ವೇಳೆ ಹಣ ಪಾವತಿಸುವಾಗ 'ಪೇ ವಿತ್ ಗೂಗಲ್' ಆಯ್ಕೆ ಬಳಸಿದರೆ ಪ್ರತೀ ಬಾರಿ ಕಾರ್ಡ್ ಮಾಹಿತಿ ತುಂಬುವ ಕೆಲಸ ತಪ್ಪುತ್ತದೆ.

ಪಾಲಿ ಭಟ್, ವಿಪಿ ಆಫ್ ಪ್ರಾಡಕ್ಟ್ ಮ್ಯಾನೇಜ್ಮೆಂಟ್, ಪೇಯ್ಮೆಂಟ್ಸ್ ಇವರು ಅಧಿಕೃತ ಬ್ಲಾಗ್ ಒಂದರಲ್ಲಿ ಪೇ ವಿತ್ ಗೂಗಲ್ ಬಳಸಿ ಜನರು ಆಪ್ ಅಥವಾ ಅನ್ಲೈನ್ ನಲ್ಲಿ ಅವರು ತಮ್ಮ ಗೂಗಲ್ ಖಾತೆಯಲ್ಲಿ ಗೂಗಲ್ ಪ್ಲೇ, ಯೂಟ್ಯೂಬ್ ಅಥವಾ ಕ್ರೋಮ್ ಮೂಲಕ ಸೇವ್ ಮಾಡಿರುವ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಹಣ ಪಾವತಿಸಬಹುದು ಎಂದು ತಿಳಿಸಿದ್ದಾರೆ.

'ಪೇ ವಿತ್ ಗೂಗಲ್' ಮೂಲಕ ಹಣ ಪಾವತಿಸಲು ನೀವು ಈಗಾಗಲೇ ಸೇವ್ ಮಾಡಿರುವ ಕಾರ್ಡ್ ಗಳ ಪೈಕಿ ನಿಮ್ಮ ಆದ್ಯತೆಯ ಕಾರ್ಡ್ ಅನ್ನು ಆಯ್ಕೆ ಮಾಡಿ CVV ಕೋಡ್ ಅಥವಾ ಸೆಕ್ಯೂರಿಟಿ ಕೋಡ್ ನಮೂದಿಸುವ ಮೂಲಕ ಪಾವತಿಯನ್ನು ದೃಢೀಕರಿಸಬೇಕು.

ಗೂಗಲ್ ಪೇಯ್ಮೆಂಟ್ API ಅನ್ನು ಡೆವಲಪರ್ಗಳಿಗೆ ಮೇ 2017 ರಲ್ಲಿ ನಡೆದ ಗೂಗಲ್ I/O ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಫೀಚರ್ ಬಳಸಿ ಹಣ ಪಾವತಿಸುವವರಿಗೆ ಯಾವುದೇ ಟ್ರ್ಯಾನ್ಸ್ಯಾಕ್ಷನ್ ಫೀ ವಿಧಿಸುವುದಿಲ್ಲ ಎಂದು ಗೂಗಲ್ ತಿಳಿಸಿದೆ. 'ಪೇ ವಿತ್ ಗೂಗಲ್' ಫೀಚರ್ ಗೂಗಲ್ ಅಸಿಸ್ಟೆಂಟ್ ಜೊತೆಗೂ ಕೆಲಸ ಮಾಡಲಿದ್ದು ಬಳಕೆದಾರರು ವಾಯ್ಸ್ ಕಮಾಂಡ್ ಮೂಲಕ ಹಣ ಪಾವತಿಸಬಹುದು.

ನೀವು ಗೂಗಲ್ ಗೆ ವಾಯ್ಸ್ ಕಮಾಂಡ್ ಮೂಲಕ ನಿಮಗೆ ಬೇಕಾದವರಿಗೆ ಇಂತಿಷ್ಟು ಹಣ ಪಾವತಿಸುವಂತೆ ಅದೇಶ ನೀಡಿದರಾಯಿತು, ಗೂಗಲ್ ನಿಮ್ಮ ಬಳಿ ದೃಢೀಕರಣವನ್ನು ಕೇಳುತ್ತದೆ. ನೀವು ಪಾವತಿಯನ್ನು ದೃಢೀಕರಿಸುತ್ತಿದ್ದಂತೆ ನೀವು ಹೇಳಿದ ಮೊತ್ತ ತಕ್ಷಣ ನೀವು ಹೇಳಿದ ವ್ಯಕ್ತಿಗೆ ವರ್ಗಾಯಿಸಲ್ಪಡುತ್ತದೆ.

ಸಧ್ಯಕ್ಕೆ ಈ ಫೀಚರ್ ಭಾರತದಲ್ಲಿ ಲಭ್ಯವಾಗಲಿದೆಯೇ ಎಂಬುದರ ಕುರಿತು ಯಾವುದೇ ಮಾಹಿತಿಯಿಲ್ಲ.ಇತ್ತೀಚೆಗಷ್ಟೇ ಗೂಗಲ್ ಭಾರತದಲ್ಲಿ ಡಿಜಿಟಲ್ ಪಾವತಿಯನ್ನು ಮುಂಚೂಣಿಗೆ ತರುವ ಸಲುವಾಗಿ ತೇಜ್ ಆಪ್ ಅನ್ನು ಬಿಡುಗಡೆ ಮಾಡಿತ್ತು.UPI ಪಾವತಿ ಆಧಾರಿತ ಆಪ್ ಇದಾಗಿದ್ದು, ಕ್ಯಾಶ್ ಮೋಡ್ ಎಂಬ ಫೀಚರ್ ಇದರಲ್ಲಿದೆ. ಕ್ಯಾಶ್ ಮೋಡ್ ಫೀಚರ್ 'ನಿಯರ್ ಬೈ' ಮೋಡ್ ನಂತೆಯೇ ಕಾರ್ಯನಿರ್ವಹಿಸುತ್ತದೆ.

Best Mobiles in India

English summary
Google has announced the launch of the Pay with Google feature that will let users enable faster checkouts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+